ಕಿಂಗ್ಖಾನ್ ಶಾರುಖ್ ಮಗಳು ಸುಹಾನಾ ಖಾನ್ ಮತ್ತೆ ಚರ್ಚೆಯಲ್ಲಿದ್ದಾರೆ. ಈಕೆ ಸಿನಿಮಾಗಳಿಂದ ದೂರ ಇದ್ದರೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ತಮ್ಮ ಫೋಟೋ ಹಾಗೂ ವಿಡಿಯೋಗಳಿಂದಾಗಿ ಸುಹಾನಾ ಸದ್ದು ಮಾಡುತ್ತಿರುತ್ತಾರೆ.
ಸುಹಾನಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುತ್ತಾರೆ. ಅಲ್ಲದೆ ಈಕೆ ಸ್ಟಾರ್ ಕಿಡ್ ಎನ್ನುವ ಕಾರಣ ಒಂದು ಕಡೆಯಾದರೆ, ಇವರು ಸಿನಿಮಾಗೆ ಬರುವ ಮುನ್ನವೇ ಇವರಿಗೆ ಅಭಿಮಾನಿಗಳು ಸಿಕ್ಕಾಪಟ್ಟೆ ಇದ್ದಾರೆ. ಇದರಿಂದಲೇ ಸಾಮಾಜಿಕ ಜಾಲತಾಣದಲ್ಲಿ ಇವರ ಫ್ಯಾನ್ ಪೇಜ್ ಕೊಂಚ ಹೆಚ್ಚಾಗಿಯೇ ಇವೆ.
![Shahrukh Khan daughter Suhana Khans mirror selfie with her friends goes viral on social-media]()
ಸ್ನೇಹಿತೆಯರೊಂದಿಗೆ ಶಾರುಖ್ ಖಾನ್ ಮಗಳು ಸುಹಾನಾ ಖಾನ್
ಸುಹಾನಾ ಸಿನಿಮಾಗೆ ಬರುವ ಸೂಚನೆಯನ್ನು ಅವರ ವಿಡಿಯೋ ಹಾಗೂ ಪೋಟೋಗಳೇ ನೀಡುತ್ತವೆ. ಆದರೆ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಮಾತ್ರ ಅಧಿಕೃತ ಸುದ್ದಿ ಎಲ್ಲೂ ಹೊರ ಬರುತ್ತಿಲ್ಲ. ಆದರೆ ಸುಹಾನಾ ಹಂಚಿಕೊಳ್ಳುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ.
![Shahrukh Khan daughter Suhana Khans mirror selfie with her friends goes viral on social-media]()
ಸ್ನೇಹಿತೆಯರೊಂದಿಗೆ ಶಾರುಖ್ ಖಾನ್ ಮಗಳು ಸುಹಾನಾ ಖಾನ್
ಈ ಹಿಂದೆ ಸುಹಾನಾ ಹಂಚಿಕೊಂಡಿದ್ದ ಅವರ ಕೆಲವು ಚಿತ್ರಗಳು ಧೂಳೆಬ್ಬಿಸಿದ್ದವು. ಈಗಲೂ ಸಹ ಸುಹಾನಾರ ಸೆಲ್ಫಿ ಫೋಟೋ ಸಖತ್ ವೈರಲ್ ಆಗುತ್ತಿವೆ. ಕನ್ನಡಿ ಮುಂದೆ ತನ್ನ ಸ್ನೇಹಿತೆಯರೊಂದಿಗೆ ತೆಗೆದುಕೊಂಡಿರುವ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸೆಲ್ಫಿಯಲ್ಲಿ ಸುಹಾನಾ ಹಾಟಾಗಿ ಕಾಣಿಸುತ್ತಿದ್ದು, ಕಪ್ಪು ಬಣ್ಣದ ಔಟ್ಫಿಟ್ನಲ್ಲಿದ್ದಾರೆ. ಅಲ್ಲದೆ ಸಿಕ್ಕಾಪಟ್ಟೆ ಮಸ್ತಿ ಮೂಡ್ನಲ್ಲಿದ್ದಾರೆ. ಇವರ ಈ ಚಿತ್ರ ಈಗ ವೈರಲ್ ಆಗುತ್ತಿದೆ. ಅಲ್ಲೆ ಇತ್ತೀಚೆಗೆ ಸುಹಾನಾರ ಈ ವಿಡಿಯೋ ಸಹ ವೈರಲ್ ಆಗಿತ್ತು. ಸದ್ಯ ಸುಹಾನಾ ನ್ಯೂಯಾರ್ಕ್ನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
Bigg Boss: ಎರಡನೇ ಬಾರಿಗೆ ಸಪ್ತಪದಿ ತುಳಿದ ಬಿಗ್ಬಾಸ್ ಖ್ಯಾತಿಯ ನಟಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ