ಕೋವಿಡ್-19 (Covid-19) ಸಾಂಕ್ರಾಮಿಕ ರೋಗದ (Disease) ಹಾವಳಿ ಶುರುವಾದಾಗಿಂದಲೂ ಸಿನಿ ಪ್ರೇಕ್ಷಕರು ಸಿನಿಮಾ ಥಿಯೇಟರ್ ಗಳ ಕಡೆಗೆ ಹೆಚ್ಚಾಗಿ ಹೋಗದೆ ತಮ್ಮ ಮನೆಯಲ್ಲಿಯೇ ಕೂತು ಈ ಒಟಿಟಿ (OTT) ಪ್ಲಾಟ್ಫಾರ್ಮ್ ಗಳಲ್ಲಿ ಪ್ರಸಾರವಾಗುವ ಅಥವಾ ಬಿಡುಗಡೆಯಾಗುವ ವೆಬ್ ಸಿರೀಸ್ (Web Series), ವೆಬ್ ಶೋ ಮತ್ತು ಎಲ್ಲಾ ಭಾಷೆಯ ಚಿತ್ರಗಳನ್ನು ನೋಡುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಈ ಒಟಿಟಿ ಮಾಧ್ಯಮಗಳು ಅನೇಕ ಜನ ಸಿನಿ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದುಕೊಂಡಿದೆ ಅಂತ ಹೇಳಿದರೆ ಸುಳ್ಳಲ್ಲ.
ಈಗಂತೂ ಈ ಒಟಿಟಿ ಮಾಧ್ಯಮಗಳಲ್ಲಿ ಅನೇಕ ರೀತಿಯ ವೆಬ್ ಸಿರೀಸ್, ವೆಬ್ ಶೋ ಮತ್ತು ಚಿತ್ರಗಳು ಸಹ ಬಿಡುಗಡೆಯಾಗುತ್ತಿರುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ.
‘ಪಂಚಾಯತ್’ ವೆಬ್ ಸಿರೀಸ್ ನ 2ನೇ ಸೀಸನ್ ನಿಂದ ಹಿಡಿದು ‘ಫೋರ್ ಶಾಟ್ಸ್ ಪ್ಲೀಸ್’ ನಾಲ್ಕನೇ ಸೀಸನ್ ವರೆಗೂ ಅನೇಕ ರೀತಿಯ ವೆಬ್ ಸಿರೀಸ್ ಗಳು ನಮ್ಮನ್ನು ಈ ವರ್ಷ ಒಟಿಟಿ ಪ್ಲಾಟ್ಫಾರ್ಮ್ ಗಳಲ್ಲಿ ತುಂಬಾನೇ ರಂಜಿಸಿವೆ ಅಂತ ಹೇಳಬಹುದು.
ಇವಷ್ಟೆ ಅಲ್ಲದೆ, ಇನ್ನೂ ಕೆಲವು ಅದ್ಭುತ ಮತ್ತು ಆಕರ್ಷಕ ವೆಬ್ ಸಿರೀಸ್ ಮತ್ತು ವೆಬ್ ಶೋ ಗಳನ್ನು ಸಹ ನೋಡಲು ಸಿಕ್ಕಿವೆ ಅಂತ ಹೇಳಬಹುದು.
2023 ರ ಹೊಸ ವರ್ಷದಲ್ಲಿ ಯಾವೆಲ್ಲಾ ವೆಬ್ ಸಿರೀಸ್ ಗಳು ಸಿನಿ ಪ್ರೇಕ್ಷಕರನ್ನು ಮನರಂಜಿಸಲಿವೆ?
ಹಾಗಾದರೆ ಇನ್ನೂ 2023 ರ ಹೊಸ ವರ್ಷದಲ್ಲಿ ಯಾವೆಲ್ಲಾ ವೆಬ್ ಸಿರೀಸ್ ಗಳು ಮತ್ತು ವೆಬ್ ಶೋ ಗಳು ನಮಗಾಗಿ ಕಾದಿವೆ ಮತ್ತು ಬರಲಿವೆ ಅಂತ ತಿಳಿದುಕೊಳ್ಳೋಣ.
ಮೊದಲಿಗೆ, ಶಾಹಿದ್ ಕಪೂರ್, ರಾಜ್ ಮತ್ತು ಡಿಕೆ ಅವರ ‘ಫರ್ಜಿ’ ಚಿತ್ರದ ಮೂಲಕ ಒಟಿಟಿಯಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಅವರ ಅಭಿಮಾನಿಗಳು ಈಗಾಗಲೇ ಈ ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
1. ಫರ್ಜಿ
ರಾಜ್ ಮತ್ತು ಡಿಕೆ ಅವರ ಬಹು ನಿರೀಕ್ಷಿತ ವೆಬ್ ಸಿರೀಸ್ ಫರ್ಜಿಯ ಪಾತ್ರವರ್ಗದಲ್ಲಿ ಶಾಹಿದ್ ಕಪೂರ್ ಅವರ ಜೊತೆಯಲ್ಲಿ ನಟ ವಿಜಯ್ ಸೇತುಪತಿ, ನಟಿ ರಾಶಿ ಖನ್ನಾ ಮತ್ತು ಕೆಕೆ ಮೆನನ್ ಸಹ ಇದ್ದಾರೆ. ಇದು ಒಂದು ಕ್ರೈಮ್ ಥ್ರಿಲ್ಲರ್ ಆಗಿದೆ. ಅಜ್ಜನ ಪ್ರಿಂಟಿಂಗ್ ಪ್ರೆಸ್ ನಿಂದ ಕೆಲಸ ಮಾಡುವ ಸಾಮಾನ್ಯ ವ್ಯಕ್ತಿಯ ಸುತ್ತ ಇದರ ಕಥೆ ಸುತ್ತುತ್ತದೆ. ಅವನು ಏನಾದರೂ ಮಾಡಿ ಬೇಗನೆ ಹಣವನ್ನು ಸಂಪಾದಿಸಿ ಶ್ರೀಮಂತನಾಗಬೇಕೆಂದು ಅಂದುಕೊಂಡಿರುತ್ತಾನೆ.
ಆದರೆ ಅವನನ್ನು ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿ ತಡೆಯಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸುತ್ತಾನೆ. ಕಥೆಯು ತುಂಬಾನೇ ವೇಗವಾಗಿದ್ದು, ನೋಡುಗರಲ್ಲಿ ಕುತೂಹಲ ಮೂಡಿಸುವಂತಿದೆ ಎಂದು ಹೇಳಲಾಗುತ್ತಿದೆ.
ಇದು 2023 ರ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದನ್ನು ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ನೋಡಬಹುದು.
2. ‘ಶಾರ್ಕ್ ಟ್ಯಾಂಕ್ ಇಂಡಿಯಾ’ ಸೀಸನ್ 2
‘ಶಾರ್ಕ್ ಟ್ಯಾಂಕ್ ಇಂಡಿಯಾ’ ದ ಸೀಸನ್ 1 ಅಂತೂ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಯಿತು ಅಂತ ಹೇಳಬಹುದು. ಈಗ ಇದರ ತಯಾರಕರು ಈಗ ‘ಶಾರ್ಕ್ ಟ್ಯಾಂಕ್ ಇಂಡಿಯಾ’ ದ ಸೀಸನ್ 2 ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದ್ದಾರೆ ಅಂತ ಹೇಳಬಹುದು.
ಸೀಸನ್ 1 ಅಮೇರಿಕನ್ ಪ್ರತಿರೂಪದಿಂದ ಪ್ರೇರಿತವಾಗಿ, ಐವರು ಹೂಡಿಕೆದಾರರು ಅಥವಾ 'ಶಾರ್ಕ್ ಗಳು ಷೇರುಗಳನ್ನು ಖರೀದಿಸಲು ವ್ಯವಹಾರಗಳನ್ನು ಹುಡುಕುವುದನ್ನು ಒಳಗೊಂಡಿತ್ತು.
ಯುವ ಪೀಳಿಗೆಯು ಹೆಚ್ಚೆಚ್ಚು ಉದ್ಯಮಶೀಲವಾಗುತ್ತಿರುವುದರಿಂದ, ಈ ಶೋ ದೊಡ್ಡ ಅಭಿಮಾನಿ ಬಳಗವನ್ನು ತನ್ನೆಡೆಗೆ ಸೆಳೆದಿದೆ ಅಂತ ಹೇಳಬಹುದು.
‘ಶಾರ್ಕ್ ಟ್ಯಾಂಕ್ ಇಂಡಿಯಾ’ ಸೀಸನ್ 2 ಇಂದು ಎಂದರೆ ಜನವರಿ 2ನೇ ತಾರೀಕಿಗೆ ಪ್ರಾರಂಭವಾಗುತ್ತದೆ. ಉದ್ಯಮಿಗಳಾದ ನಮಿತಾ ಥಾಪರ್, ಪೆಯುಶ್ ಬನ್ಸಾಲ್, ವಿನೀತಾ ಸಿಂಗ್, ಅಮನ್ ಗುಪ್ತಾ, ಅನುಪಮ್ ಮಿತ್ತಲ್ ಮತ್ತು ಅಮಿತ್ ಜೈನ್ ಈ ಬಾರಿ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದು, ಸೋನಿಲಿವ್ ನಲ್ಲಿ ಇದು ಪ್ರಸಾರವಾಗಲಿದೆ.
3. ‘ಮಿರ್ಜಾಪುರ್’ ಸೀಸನ್ 3
ಒಟಿಟಿಯಲ್ಲಿ ಭಾರಿ ಹಿಟ್ ಆದ ಶೋಗಳ ಪಟ್ಟಿಯಲ್ಲಿ ಒಂದಾದ ‘ಮಿರ್ಜಾಪುರ್’ ನ ಕೊನೆಯ ಸೀಸನ್ 2020 ರ ಡಿಸೆಂಬರ್ ನಲ್ಲಿ ಪ್ರಥಮ ಪ್ರದರ್ಶನ ಕಂಡಿತ್ತು.
ಒಂದಲ್ಲ, ಎರಡಲ್ಲ ಮೂರು ವರ್ಷಗಳ ದೀರ್ಘ ಸಮಯದವರೆಗೆ ಕಾದ ನಂತರ ಪ್ರೇಕ್ಷಕರು ಈಗ ‘ಮಿರ್ಜಾಪುರ್’ ನ ಸೀಸನ್ 3 ಅನ್ನು ‘ಯಾವಾಗಪ್ಪಾ ಬಿಡುಗಡೆ ಮಾಡುತ್ತಾರೆ’ ಅಂತ ಕಾತುರದಿಂದ ಕಾಯುತ್ತಿದ್ದಾರೆ. ಬಿಡುಗಡೆಯ ದಿನಾಂಕ ಇನ್ನೂ ಹೊರಬಂದಿಲ್ಲವಾದರೂ, ಅಲಿ ಫಜಲ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಸೀಸನ್ 3 ಚಿತ್ರೀಕರಣವನ್ನು ಮುಗಿಸಿರುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: OTT Star Heroines: 2022ರಲ್ಲಿ ಒಟಿಟಿಯಲ್ಲಿ ಮಿಂಚಿದ ಬಾಲಿವುಡ್ ಬ್ಯೂಟೀಸ್ ಇವರು
4. ‘ದಿ ಫ್ಯಾಮಿಲಿ ಮ್ಯಾನ್’ ಸೀಸನ್ 3
ಮನೋಜ್ ಬಾಜಪೇಯಿ ಅಭಿನಯದ ಸಿರೀಸ್ ನ ಹಿಂದಿನ ಕಂತು ವಿಭಿನ್ನವಾದ ರೀತಿಯಲ್ಲಿ ಕೊನೆಗೊಂಡಿತ್ತು. ಸೀಸನ್ 3 ರಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ . ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ, ಆದರೆ ಈ ಸೀಸನ್ 2023 ರಲ್ಲಿ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಯಿದೆ.
5. ಗನ್ಸ್ ಆಂಡ್ ಗುಲಾಬ್ಸ್
ಗನ್ಸ್ ಮತ್ತು ಗುಲಾಬ್ಸ್ ಒಂದು ವೆಬ್ ಸಿರೀಸ್ ಆಗಿದ್ದು, ಇದು ಹಾಸ್ಯ ಮತ್ತು ಥ್ರಿಲ್ಲರ್ ಎರಡನ್ನೂ ಸಹ ಒಳಗೊಂಡಿದೆ ಅಂತ ಹೇಳಬಹುದು. ನಟ ರಾಜ್ಕುಮಾರ್ ರಾವ್, ದುಲ್ಕರ್ ಸಲ್ಮಾನ್, ಆದರ್ಶ್ ಗೌರವ್, ಟಿಜೆ ಭಾನು ಮತ್ತು ಗುಲ್ಶನ್ ದೇವಯ್ಯ ಈ ಸಿರೀಸ್ ನಲ್ಲಿ ನಟಿಸಿದ್ದಾರೆ. ಇದು ಫೆಬ್ರವರಿ 2023 ರಲ್ಲಿ ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
6. ಸೂಪ್
ಸೂಪ್ ನ ರಹಸ್ಯಮಯವಾದ ಟೀಸರ್ ಸೆಪ್ಟೆಂಬರ್ ನಲ್ಲಿ ಅನಾವರಣಗೊಂಡಿತ್ತು. ಕಾಮಿಡಿ-ಕ್ರೈಮ್ ಕಥೆಯುಳ್ಳ ಸಿರೀಸ್ ನಲ್ಲಿ ಮನೋಜ್ ಬಾಜಪೇಯಿ, ಕೊಂಕಣಾ ಸೆನ್ಶರ್ಮಾ, ನಾಸರ್, ಸಯಾಜಿ ಶಿಂಧೆ ಮತ್ತು ಲಾಲ್ ನಟಿಸಿದ್ದಾರೆ. ಇದನ್ನು ಪ್ರೇಕ್ಷಕರು ನೆಟ್ಫ್ಲಿಕ್ಸ್ ನಲ್ಲಿ ನೋಡಬಹುದಾಗಿದೆ.
7. ‘ರಾಕೆಟ್ ಬಾಯ್ಸ್’ ಸೀಸನ್ 2
ರಾಕೆಟ್ ಬಾಯ್ಸ್ ನ ಮೊದಲ ಸೀಸನ್ ಫೆಬ್ರವರಿ 2022 ರಲ್ಲಿ ಬಂದಾಗ, ಅದರ ಕಥಾವಸ್ತು ಮತ್ತು ನಟರ ಅದ್ಭುತ ಅಭಿನಯಕ್ಕಾಗಿ ಪಾಸಿಟಿವ್ ವಿಮರ್ಶೆಗಳನ್ನು ಗಳಿಸಿತ್ತು. ಡಾ. ಹೋಮಿ ಜಹಾಂಗೀರ್ ಬಾಬಾ ಪಾತ್ರದಲ್ಲಿ ಜಿಮ್ ಸರ್ಭ್ ಮತ್ತು ಡಾ. ವಿಕ್ರಮ್ ಸಾರಾಭಾಯಿ ಪಾತ್ರದಲ್ಲಿ ಇಶ್ವಾಕ್ ಸಿಂಗ್ ಮತ್ತು ಉಳಿದ ಪಾತ್ರವರ್ಗವು ನೋಡುಗರ ಮನಗೆದ್ದಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ