Rocking Star Yash: ಕೆಜಿಎಫ್ ಬಳಿಕ ಬಂಗಾರವಾಯ್ತು ರಾಕಿ ಭಾಯ್ ಭವಿಷ್ಯ! ದೇಶದ ನಂ.1 ನಟ ಅಂತ ಬಾಲಿವುಡ್​ನಿಂದಲೇ ಗುಣಗಾನ!

ನಿರೂಪಕ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಚಾಟ್ ಶೋನಲ್ಲಿ ರಾಕಿಂಗ್​​ ಸ್ಟಾರ್​ ಹೆಸರು ಸದ್ದು ಮಾಡಿದೆ. ಬಾಲಿವುಡ್​ ನಟ ಶಾಹಿದ್ ಕಪೂರ್ ಕನ್ನಡ ಚಿತ್ರರಂಗದ ರಾಕಿ ಭಾಯ್ ಯಶ್ ಅವರ ಗುಣಗಾನ ಮಾಡಿದ್ದಾರೆ. ​

ಶಾಹಿದ್ ಕಪೂರ್, ಯಶ್​

ಶಾಹಿದ್ ಕಪೂರ್, ಯಶ್​

  • Share this:
ಶಾಹಿದ್ ಕಪೂರ್ (Shahid Kapoor) ಇತ್ತೀಚೆಗೆ ಕರಣ್ ಜೋಹರ್ (Karna johar) ಅವರ ಸೆಲೆಬ್ರಿಟಿ ಚಾಟ್ ಶೋ 'ಕಾಫಿ ವಿತ್ ಕರಣ್ 7'ರಲ್ಲಿ (Coffee With Karan) ಭಾಗವಹಿಸಿದ್ರು. ಬಾಲಿವುಡ್​ ನಟ ಶಾಹಿದ್ ಕಪೂರ್ ಕನ್ನಡ ಚಿತ್ರರಂಗದ ರಾಕಿ ಭಾಯ್ ಯಶ್ (Yash) ಅವರ ಗುಣಗಾನ ಮಾಡಿದ್ದಾರೆ. ​ಕಾಫಿ ವಿತ್ ಕರಣ್ ಶೋನಲ್ಲಿ ವಿವಿಧ ಚಿತ್ರರಂಗದ ಸೆಲೆಬ್ರಿಟಿಗಳು ಬಂದು ಕರಣ್​ ಅವರೊಂದಿಗೆ ವಿವಿಧ ವಿಚಾರವಾಗಿ ಮಾತನಾಡುತ್ತಾರೆ. ಶಾಹಿದ್​ ಕಪೂರ ಭಾರತ ಚಿತ್ರರಂಗ ನಂ 1 ನಟ ಯಶ್​ ಎಂದು ಹೇಳಿದ್ದಾರೆ. ಶೋನ ಕೆಲವು ಕ್ಲಿಪ್​ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ರಾಕಿಂಗ್ ಸ್ಟಾರ್ ಯಶ್​ ನಂಬರ್​ ಒನ್​ ನಟ

ಕಬೀರ್ ಸಿಂಗ್ ನಟಿ ಕಿಯಾರಾ ಅಡ್ವಾಣಿ ಹಾಗೂ ಶಾಹಿದ್​ ಕಪೂರ್ ಇಬ್ಬರು ಕಾಫಿ ವಿತ್​​ ಕರಣ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಕಾರ್ಯಕ್ರಮದಲ್ಲಿ ಶಾಹಿದ್  ಅವರಿಗೆ ಬಾಲಿವುಡ್‌ನಲ್ಲಿ ನಂಬರ್ ಒನ್ ನಟ, ನಟಿ ಯಾರು ಎಂದು ಕರಣ್​ ಜೋಹರ್​ ಕೇಳಿದರು. ಇದಕ್ಕೆ ಉತ್ತರಿಸಿದ ಶಾಹಿದ್​, ಕಿಯಾರಾ ಅವರನ್ನು ಟಾಪ್ ನಟಿಯ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ನಂಬರ್​ ಒನ್ ನಟ ಯಾರು ಎಂದು ಕೇಳಿದ್ದಾರೆ. ರಾಕಿ ಭಾಯ್ ('ಕೆಜಿಎಫ್' ಸ್ಟಾರ್ ಯಶ್) ಇದೀಗ ಚಿತ್ರರಂಗದಲ್ಲಿ ನಂ 1 ನಟ ಎಂದು ಶಾಹಿದ್​ ಹೇಳಿದ್ದಾರೆ. ನಿರೂಪಕ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಚಾಟ್ ಶೋನಲ್ಲಿ ರಾಕಿಂಗ್​​ ಸ್ಟಾರ್​ ಹೆಸರು ಸದ್ದು ಮಾಡಿದೆ. ಬಾಲಿವುಡ್​ ನಟ ಶಾಹಿದ್ ಕಪೂರ್ ಕನ್ನಡ ಚಿತ್ರರಂಗದ ರಾಕಿ ಭಾಯ್ ಯಶ್ ಅವರ ಗುಣಗಾನ ಮಾಡಿದ್ದಾರೆ. ​ಶಾಹಿದ್​​ ಅವರು ರಾಕಿಂಗ್​ ಸ್ಟಾರ್​ ಯಶ್​ ನಂಬರ್​ ಒನ್​ ನಟ ಎಂದು ಹೇಳಿರೋ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.  ಕೆಜಿಎಫ್​ 2 ಬಳಿಕ ರಾಕಿಂಗ್ ಸ್ಟಾರ್​ ಯಶ್​ ಅವರ ಭವಿಷ್ಯವೇ ಬದಲಾಗಿದೆ. ಕನ್ನಡ ನಟ ಬಾಲಿವುಡ್​ ಮಟ್ಟದಲ್ಲಿ ಮಿಂಚಿದ್ದಾರೆ.  ಬಾಲಿವುಡ್​ ನಟ ಕನ್ನಡ ಚಿತ್ರರಂಗದ ಮತ್ತು ಯಶ್ ಹೆಸರು ಉಲ್ಲೇಖಿಸಿರುವುದು ಹೆಮ್ಮೆಯ ವಿಷಯ. ಈ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತ ಅಷ್ಟೇ ಅಲ್ಲ ದೇಶ-ವಿದೇಶದಲ್ಲೂ ಸೌತ್​ ಸಿನಿಮಾಗಳ ಭಾರೀ ಸದ್ದು ಮಾಡ್ತಿದೆ. ಕನ್ನಡ, ತೆಲುಗು, ತಮಿಳಿನಲ್ಲಿ ಅತ್ಯುತ್ತಮ ಚಿತ್ರಗಳು ಬಿಡುಗಡೇ ಭಾರತದಾದ್ಯಂತ ಸೂಪರ್​ ಸಕ್ಸಸ್​ ಕಂಡಿದೆ. ಕನ್ನಡದ ಕೆಜಿಎಫ್ 2 (KGF Chapter 2), ‘777 ಚಾರ್ಲಿ’ ಹವಾ ಎಲ್ಲೆಡೆ ಹಬ್ಬಿದೆ. ಇದೀಗ ಬಾಲಿವುಡ್​​ ನಟರಿಗಿಂತ ಹೆಚ್ಚಾಗಿ ಸೌತ್​ ನಟರ ಸೌಂಡ್​ ಜೋರಾಗಿದೆ. ಇತ್ತ ಭಾರತದ ಎಲ್ಲಾ ಸ್ಟಾರ್ಸ್​​ಗಳಿಗೆ ರ್ಯಾಂಕಿಂಗ್ ನೀಡಲಾಗಿದೆ. ಈ ಪಟ್ಟಿಯಲ್ಲಿ ರಾಕಿಂಗ್​ ಸ್ಟಾರ್​ ಯಶ್​ 5 ನೇ ಸ್ಥಾನ ಪಡೆದುಕೊಂಡಿರೋದು ಹೆಮ್ಮೆಯ ವಿಚಾರವಾಗಿದೆ.

ಇದನ್ನೂ ಓದಿ: Puneeth Rajkumar: ಇದಪ್ಪಾ ಪವರ್ ಸ್ಟಾರ್ ಪವರ್; ಇವ್ರಿಂದ ‘ಲಕ್ಕಿಮ್ಯಾನ್’ಗೆ ಸಿಕ್ಕಾಪಟ್ಟೆ ಲಕ್​

ದಾಖಲೆ ಬರೆದ ರಾಕಿಂಗ್ ಸ್ಟಾರ್ 

ಕನ್ನಡ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ತೀರಾ ಕಡಿಮೆ. ಯಶ್​ ಅಭಿನಯದ ಕೆಜಿಎಫ್​ ಹಾಗೂ ಕೆಜಿಎಫ್​​ 2 ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಟಾಪ್ 10 ಪಟ್ಟಿಯಲ್ಲಿ ಕನ್ನಡ ಚಿತ್ರರಂಗದಿಂದ ಸ್ಥಾನ ಪಡೆದ ಏಕೈಕ ನಟ ಎಂಬ ಹೆಗ್ಗಳಿಕೆ ರಾಕಿಂಗ್ ಸ್ಟಾರ್​ಗೆ ಸಿಕ್ಕಿದೆ.
Published by:Pavana HS
First published: