ಚಲನಚಿತ್ರೋದ್ಯಮದಲ್ಲಿರುವ ನಟ-ನಟಿಯರ (Actor-Actress) ಮನೆಗಳನ್ನ ಮತ್ತು ಅವರ ಸ್ಟೈಲಿಶ್ ಕಾರುಗಳನ್ನ ನೋಡುವುದಕ್ಕೆ ಯಾವ ಅಭಿಮಾನಿಗೆ ಕುತೂಹಲ ಇರುವುದಿಲ್ಲ ಹೇಳಿ? ಅದರಲ್ಲೂ ಈ ಬಾಲಿವುಡ್ (Bollywood) ನಟ ಮತ್ತು ನಟಿಯರ ಬಂಗಲೆಗಳು, ಕಾರುಗಳು ಮತ್ತು ಅವರು ಧರಿಸುವ ಬಟ್ಟೆಗಳು ಎಲ್ಲವೂ ತುಂಬಾನೇ ಸ್ಟೈಲಿಶ್ ಆಗಿ ಇರುತ್ತವೆ. ಬಾಲಿವುಡ್ ನಟ ಶಾಹಿದ್ ಕಪೂರ್ (Shahid Kapoor) ಸಮುದ್ರಕ್ಕೆ ಮುಖ ಮಾಡಿರುವ ಒಂದು ಐಷಾರಾಮಿ ಫ್ಲ್ಯಾಟ್ ವೊಂದನ್ನು ಖರೀದಿಸಿದ್ದಾರೆ.
ನಟ ಶಾಹಿದ್ ಖರೀದಿಸಿದ ಮನೆಯ ಬೆಲೆ 58 ಕೋಟಿ ರೂಪಾಯಿಯಂತೆ..
ನಟ ಶಾಹಿದ್ ಕಪೂರ್ ಮತ್ತುಪತ್ನಿ ಮೀರಾ ರಜಪೂತ್ ಅವರು ಹೊಸ ‘ಸೀ ಫೇಸಿಂಗ್ ಫ್ಲ್ಯಾಟ್ ಖರೀದಿಸಿದ್ದಾರೆ. ಇದೀಗ ನಟ ತನ್ನ ಹೊಚ್ಚ ಹೊಸ ಬಾಂದ್ರಾ ವರ್ಲಿಯಲ್ಲಿರುವ ಫ್ಲ್ಯಾಟ್ ಗೆ ಸ್ಥಳಾಂತರಗೊಂಡಿದ್ದಾರೆ.
ಅದನ್ನು ಅವರು 58 ಕೋಟಿ ರೂಪಾಯಿಗಳಲ್ಲಿ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಶಾಹಿದ್ ಮತ್ತು ಮೀರಾ ಕಳೆದ ವರ್ಷ 2022 ರಲ್ಲಿ ಈ ಹೊಸ ಫ್ಲ್ಯಾಟ್ ಗೆ ಸ್ಥಳಾಂತರಗೊಂಡರು ಮತ್ತು ಅವರು ತಮ್ಮ ಭವ್ಯವಾದ ಮನೆಯ ಬಗ್ಗೆ ಮಾಹಿತಿಯನ್ನು ನೀಡುವ ಅನೇಕ ಅದ್ಭುತ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಶಾಹಿದ್ ಕಪೂರ್ ತಮ್ಮ ಹೊಸ ಬಾಂದ್ರಾ ವರ್ಲಿ ಸೀ ಫೇಸಿಂಗ್ ಫ್ಲ್ಯಾಟ್ ನ ಕಿಟಕಿಯ ಬಳಿ ನಿಂತು ಹೊರಗೆ ನೋಡಿದರೆ ಹೇಗೆ ಕಾಣುತ್ತದೆ ಅಂತ ಅದರ ಒಂದು ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ ಅವರ ಅಭಿಮಾನಿಗಳಿಗೆ ಮತ್ತು ಫಾಲೋವರ್ ಗಳಿಗೆ ಶುಭ ಹಾರೈಸಿದರು. ನಟ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
ತಮ್ಮ ಫ್ಲ್ಯಾಟ್ ನ ಫೋಟೋವನ್ನ ಹಂಚಿಕೊಂಡಿರುವ ಮೀರಾ ರಜಪೂತ್
ಮೀರಾ ರಜಪೂತ್ ತನ್ನ ಫಾಲೋವರ್ ಗಳನ್ನು ವಿಸ್ಮಯಗೊಳಿಸುವ ಸ್ವಾಂಕಿ ಅಪಾರ್ಟ್ಮೆಂಟ್ ನ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ.
ಮೀರಾ ತನ್ನ ಹೊಸ ಮನೆಗೆ ಬಂದಿದ್ದಕ್ಕೆ ತುಂಬಾನೇ ಸಂತೋಷವಾಗಿ ಕಾಣುತ್ತಿದ್ದು, ಮನೆಯ ಇಂಟೀರಿಯರ್ ಡಿಸೈನರ್ ಅಂಕುರ್ ಖೋಸ್ಲಾ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
ತಮ್ಮ ಬೆಡ್ ರೂಂ ನಲ್ಲಿರುವ ವಾರ್ಡ್ರೋಬ್ ನ ಫೋಟೋ ಹಂಚಿಕೊಂಡ ನಟ..
ಶಾಹಿದ್ ಕಪೂರ್ ತಮ್ಮ ಮಲಗುವ ಕೋಣೆಯ ವಾರ್ಡ್ರೋಬ್ ನ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದು ಬಟ್ಟೆಗಳಿಂದ ತುಂಬಿದೆ. ಹೌದು, ಇಂಟೀರಿಯರ್ ಡಿಸೈನರ್ ಅಂಕುರ್ ಖೋಸ್ಲಾ ಕೂಡ ನೀವು ಮನೆಯಲ್ಲಿ ಕಣ್ಣಾಮುಚ್ಚಾಲೆ ಆಡಬಹುದು ಎಂದು ಉಲ್ಲೇಖಿಸಿದ್ದಾರೆ, ಏಕೆಂದರೆ ಅವರ ಮನೆಯಲ್ಲಿ ಅಷ್ಟೊಂದು ಸ್ಥಳವಿದೆಯಂತೆ.
ಅಡುಗೆ ಮನೆ ನೋಡಿ ಹೇಗಿದೆ?
ಮೀರಾ ರಜಪೂತ್ ತನ್ನ ಮೊದಲ ಚುಲ್ಹಾ ರಸಂ ಮಾಡುವ ಅಡುಗೆ ಮನೆಯ ಫೋಟೋವನ್ನು ಹಂಚಿಕೊಂಡಿದ್ದಾರೆ ನೋಡಿ. ಅವರ ಮನೆಯಲ್ಲಿರುವ ಅಡುಗೆಮನೆ ತುಂಬಾನೇ ಸುಂದರವಾಗಿದೆ ಅಂತ ಹೇಳಬಹುದು.
ನಟ ಶಾಹಿದ್ ಅವರ ಹೊಸ ಫ್ಲ್ಯಾಟ್ ಅಂತೂ ಅದ್ಭುತವಾಗಿದೆ..
ಮೀರಾ ರಜಪೂತ್ ಮತ್ತು ಶಾಹಿದ್ ಕಪೂರ್ ಹೊಸ ಬಾಂದ್ರಾ ವರ್ಲಿ ಸಮುದ್ರದ ಕಡೆಗೆ ಮುಖ ಮಾಡಿರುವ ಫ್ಲ್ಯಾಟ್ ಅಂತೂ ತುಂಬಾನೇ ಅದ್ಭುತವಾಗಿದೆ ಮತ್ತು ಅವರ ಮನೆಯಲ್ಲಿರುವ ಎಲ್ಲಾ ಕೋಣೆಗಳು ಅದ್ಭುತವಾಗಿವೆ. ಅವರ ಹಿಂದೆ ಇರುವ ಆ ಲಿವಿಂಗ್ ಏರಿಯಾದ ಭವ್ಯವಾದ ಪರದೆಯನ್ನು ನೋಡಿ ಹೇಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಅವರ ಹೊಸ ನಿವಾಸವು ಎಷ್ಟೋ ಜನರ ಕನಸು ಅಂತಾನೆ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ