Bollywood: ಒಟ್ಟಿಗೆ ಕಾಣಿಸಿಕೊಂಡ ರಿತೇಶ್​ ಹಾಗೂ ಶಾಹಿದ್​ ದಂಪತಿಗಳು, ಪಾಪರಾಜಿಗಳ ಫೋಟೋಗೆ ಪೋಸ್​ ಕೊಟ್ಟ ಸ್ಟಾರ್ಸ್

Shahid Kapoor Mira Rajput and Riteish Deshmukh and Genelia: ಶಾಹಿದ್, ಮೀರಾ, ರಿತೇಶ್ ಮತ್ತು ಜೆನಿಲಿಯಾ ಮುಂಬೈನ ವರ್ಲಿ ಯ ರೆಸ್ಟೋರೆಂಟ್‌ನ ಹೊರಗೆ ಕಾಣಿಸಿಕೊಂಡಿದ್ದಾರೆ. ಶಾಹಿದ್ ತನ್ನ ಬೂದು-ನೀಲಿ ಟೀ-ಶರ್ಟ್ ಮತ್ತು ನೀಲಿ ಡೆನಿಮ್ ಪ್ಯಾಂಟ್‌ಗಳಲ್ಲಿ ಸೂಪರ್ ಕ್ಯಾಶುಯಲ್ ಆಗಿ ಕಾಣಿಸಿಕೊಂಡಿದ್ದಾರೆ.

ರಿತೇಶ್​, ಜೆನಿಲಿಯಾ ಶಾಹಿದ್​

ರಿತೇಶ್​, ಜೆನಿಲಿಯಾ ಶಾಹಿದ್​

  • Share this:
ಶಾಹಿದ್ ಕಪೂರ್, (Shahid Kapoor) ಮೀರಾ ರಜಪೂತ್,(Mira Rajput)  ರಿತೇಶ್ ದೇಶ್ಮುಖ್ (Ritesh Deshmukh) ಮತ್ತು ಜೆನಿಲಿಯಾ ಡಿಸೋಜಾ (Genelia) ಸದ್ಯ ಟ್ರೆಂಡಿಂಗ್​ನಲ್ಲಿದ್ದಾರೆ. ಅದಕ್ಕೆ ಕಾರಣ ಈ ಜೋಡಿಗಳು ಒಟ್ಟಿಗೆ ಕಾಣಿಸಿಕೊಂಡಿದ್ದು.  ಶಾಹಿದ್-ಮೀರಾ ಮತ್ತು ಜೆನಿಲಿಯಾ-ರಿತೇಶ್ ಬಿ ಟೌನ್​ನ ಅತ್ಯಂತ ಜನಪ್ರಿಯ ತಾರಾ ಜೋಡಿಗಳು ಎನ್ನುವ ಕುರಿತು ಯಾವುದೇ ಅನುಮಾನವಿಲ್ಲ. ಇದೀಗ ಮುಂಬೈನ ರೆಸ್ಟೋರೆಂಟ್‌ನ ಹೊರಗೆ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದು, ಪಾಪರಾಜಿಗಳು ಇವರನ್ನು  ಒಟ್ಟಿಗೆ ಕ್ಲಿಕ್ ಮಾಡಿದ್ದು, ಫೋಟೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ಒಟ್ಟಿಗೆ ಕಾಣಿಸಿಕೊಂಡ ಜೋಡಿಗಳು

ಶಾಹಿದ್, ಮೀರಾ, ರಿತೇಶ್ ಮತ್ತು ಜೆನಿಲಿಯಾ ಮುಂಬೈನ ವರ್ಲಿ ಯ ರೆಸ್ಟೋರೆಂಟ್‌ನ ಹೊರಗೆ ಕಾಣಿಸಿಕೊಂಡಿದ್ದಾರೆ. ಶಾಹಿದ್ ತನ್ನ ಬೂದು-ನೀಲಿ ಟೀ-ಶರ್ಟ್ ಮತ್ತು ನೀಲಿ ಡೆನಿಮ್ ಪ್ಯಾಂಟ್‌ಗಳಲ್ಲಿ ಸೂಪರ್ ಕ್ಯಾಶುಯಲ್ ಆಗಿ ಕಾಣಿಸಿಕೊಂಡಿದ್ದಾರೆ. ಮೀರಾ ರಜಪೂತ್ ಸುಂದರವಾದ ಫ್ಲವರ್ ಪ್ರಿಂಟ್‌ ಡ್ರೆಸ್​ನಲ್ಲಿ ಚೆಂದವಾಗಿ ಕಾಣಿಸಿದ್ದರು.

ರಿತೇಶ್ ಮತ್ತು ಜೆನಿಲಿಯಾ ಅವರ ಲುಕ್ ಬಗ್ಗೆ ಮಾತನಾಡುವುದಾದರೆ, ರಿತೇಶ್​ ತಿಳಿ ನೀಲಿ ಕುರ್ತಾ ಮತ್ತು ಬಿಳಿ ಪೈಜಾಮಾವನ್ನು ಧರಿಸಿ ಎಥ್ನಿಕ್ ವೇರ್  ಆರಿಸಿಕೊಂಡರು. ಅಲ್ಲದೇ, ಮೇಲೆ ಬೂದು ಬಣ್ಣದ ಜಾಕೆಟ್ ಕೂಡ ಧರಿಸಿದ್ದರು. ಮತ್ತೊಂದೆಡೆ, ಜೆನಿಲಿಯಾ ಕಪ್ಪು ಮತ್ತು ಬಿಳಿ ಬಟ್ಟೆಯನ್ನು ಧರಿಸಿ ಸುಂದರವಾಗಿ ಕಾಣುತ್ತಿದ್ದರು.

ಒಟ್ಟಿಗೆ ಆಗಾಗ ಹೊರಗೆ ಹೋಗುತ್ತಾರೆ ಮೀರಾ - ಶಾಹಿದ್​

ಶಾಹಿದ್ ಮತ್ತು ಮೀರಾ ಆಗಾಗ್ಗೆ ಮುಂಬೈನಲ್ಲಿ ಒಟ್ಟಿಗೆ  ಹೊರಗೆ ಹೋಗುತ್ತಾರೆ. ಕಳೆದ ತಿಂಗಳು, ಶಾಹಿದ್ ಮತ್ತು ಮೀರಾ ತಮ್ಮ ಏಳನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹಂಚಿಕೊಂಡಿದ್ದರು. ಶಾಹಿದ್ ಅವರು ಮೀರಾ ಅವರೊಂದಿಗೆ ಸೆಲ್ಫಿ ಹಂಚಿಕೊಂಡಿದ್ದು, 7 ಡೌನ್ ಬೇಬಿ. 7ನೇ ವಾರ್ಷಿಕೋತ್ಸವದ ಶುಭಾಶಯಗಳು. ಈ 7 ವರ್ಷದ ಕಠಿಣ ಹಾದಿಯನ್ನು ಸಾಧಿಸಿದ್ದೀಯಾ ಎಂದು ವಿಶ್​ ಮಾಡಿದ್ದಾರೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್, ಹೂ ಮಳೆ ಸುರಿಸಿದ ಅಭಿಮಾನಿಗಳು

ಶಾಹಿದ್ ಕೊನೆಯದಾಗಿ ಮೃಣಾಲ್ ಠಾಕೂರ್ ಜೊತೆ ಗೌತಮ್ ತಿನ್ನನೂರ್ ಅವರ ಸಿನಿಮಾ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಮೊದಲ ಬಾರಿ ಓಟಿಟಿಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದು, ಆ ಪ್ರಾಜೆಕ್ಟ್​ ಬಗ್ಗೆ ಆಗಲಿ ಅಥವಾ ಟೈಟಲ್​ ಬಗ್ಗೆ ಆಗಲಿ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಶಾಹಿದ್ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಜೊತೆ ಆಕ್ಷನ್​ ಸಿನಿಮಾವೊಂದನ್ನು ಸಹ ಮಾಡಲಿದ್ದಾರೆ ಎನ್ನಲಾಗುತ್ತಿದೆ.




ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಮದುವೆಯಾಗಿ 7 ವರ್ಷಗಳಾಗಿವೆ. ಹಿರಿಯ ಮಗಳು ಮೀಶಾಗೆ 6 ವರ್ಷವಾದರೆ, ಮಗ ಝೇನ್ 3 ವರ್ಷದ ಮಗು. ಇಬ್ಬರೂ ಸಾಕಷ್ಟು ಬಾರಿ ಪರಸ್ಪರ ಪ್ರಶಂಸೆ ಮಾಡಿದ್ದಾರೆ. ಶಾಹಿದ್ ಕಪೂರ್ ಹಲವು ಸಂದರ್ಶನಗಳಲ್ಲಿ ತಮ್ಮ ಪತ್ನಿಯ ಬಗ್ಗೆ ಪ್ರೀತಿ ಮತ್ತು ಅಭಿಮಾನದ ಮಾತುಗಳನ್ನ ಹೇಳಿದ್ದಿದೆ. ಚಿತ್ರರಂಗದ ಜೊತೆ ಆಕೆಗೆ ನಂಟಿಲ್ಲದೇ ಹೋದರೂ ಯಾವತ್ತೂ ಮುಜುಗರಕ್ಕೊಳಗಾದ ಪ್ರಸಂಗ ಬಂದಿಲ್ಲ ಎನ್ನುತ್ತಾರೆ ಶಾಹಿದ್.

ಇದನ್ನೂ ಓದಿ: ಹಿರಿಯ ನಟ ಮಿಥಿಲೇಶ್ ಚತುರ್ವೇದಿ ನಿಧನ, ಸಿನಿತಾರೆಯರಿಂದ ಸಂತಾಪ

“ಆಕೆಗೆ ಅವಳದ್ದೇ ವ್ಯಕ್ತಿತ್ವ ಇದೆ. ಇದು ನನಗೆ ಮದುವೆಯ ದಿನವೇ ಗೊತ್ತಾಯಿತು. ಅಂದು ಮದುವೆ ಕಾರ್ಯಕ್ರಮಗಳನ್ನ ಮುಗಿಸಿ ಫೋಟೋಗಳಿಗೆಂದು ಹೊರಗೆ ಹೋದಾಗ ನಾವು ಪರಸ್ಪರ ನೋಡುತ್ತಾ ಇದ್ದದ್ದು ನೆನಪಿಗೆ ಬರುತ್ತದೆ. ಆಕೆಯಲ್ಲಿ ಸ್ವಂತಿಕೆ ಇರುವುದು ಆ ಕ್ಷಣವೇ ನನಗೆ ಗೊತ್ತಾಯಿತು. ನಂತರ ನಾವು ಮುಂಬೈಗೆ ಬಂದು ಸ್ನೇಹಿತರ ಜೊತೆ ಸಣ್ಣ ಗೆಟ್-ಟುಗೆದರ್ ಆಯೋಜಿಸಿದ್ದೆವು. ಚಿತ್ರರಂಗದಿಂದಲೂ ಕೆಲ ಜನರು ಬಂದಿದ್ದರು. ಆ ಸಂದರ್ಭದಲ್ಲೂ ಮೀರಾ ಮುಜುಗರಕ್ಕೊಳಗಾಗದೇ ತನ್ನತನವನ್ನು ತೋರಿದ್ದಳು.
Published by:Sandhya M
First published: