ಶೂಟಿಂಗ್​ ವೇಳೆ ಗಾಯ ಮಾಡಿಕೊಂಡ ಶಾಹಿದ್​ ಕಪೂರ್​; ಜೆರ್ಸಿ ಚಿತ್ರೀಕರಣದಲ್ಲಿ ಅವಘಡ

ತೆಲುಗಿನ ‘ಜೆರ್ಸಿ’ ಸಿನಿಮಾವನ್ನು ಹಿಂದಿಗೆ ರಿಮೇಕ್‍ ಆಗುತ್ತಿದೆ. ಬಾಲಿವುಡ್​ ಪರದೆಯ ಮೇಲೆ ಈ ಸಿನಿಮಾ ಮೂಡಿ ಬರುತ್ತಿದೆ. ಹಿಂದಿ ಭಾಷೆಯಲ್ಲಿ ಮೂಡಿ ಬರುತ್ತಿರುವ ‘ಜೆರ್ಸಿ‘ ಸಿನಿಮಾದಲ್ಲಿ ನಾಯಕನಾಗಿ ಶಾಹಿದ್​ ಕಪೂರ್​ ಅಭಿನಯಿಸುತ್ತಿದ್ದಾರೆ. ಹಾಗಾಗಿ ಚಿತ್ರಿಕರಣದಲ್ಲಿ ಶಾಹಿದ್​ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾಗ ಶಾಹಿದ್ ಅವರ ಮುಖಕ್ಕೆ ಗಂಭೀರವಾಗಿ ಗಾಯವಾಗಿದೆ.

news18-kannada
Updated:January 12, 2020, 11:35 AM IST
ಶೂಟಿಂಗ್​ ವೇಳೆ ಗಾಯ ಮಾಡಿಕೊಂಡ ಶಾಹಿದ್​ ಕಪೂರ್​; ಜೆರ್ಸಿ ಚಿತ್ರೀಕರಣದಲ್ಲಿ ಅವಘಡ
ಶಾಹಿದ್ ಕಪೂರ್
  • Share this:
ಬಾಲಿವುಡ್ ನಟ ಶಾಹಿದ್ ಕಪೂರ್​​ ‘ಜೆರ್ಸಿ‘ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದ  ಶೂಟಿಂಗ್ ವೇಳೆ ಗಂಭೀರವಾಗಿ ಗಾಯ ಮಾಡಿಕೊಂಡಿದ್ದಾರೆ.

ತೆಲುಗಿನ ‘ಜೆರ್ಸಿ’ ಸಿನಿಮಾ ಹಿಂದಿಗೆ ರಿಮೇಕ್‍ ಆಗುತ್ತಿದೆ. ಬಾಲಿವುಡ್​ ಪರದೆಯ ಮೇಲೆ ಈ ಸಿನಿಮಾ ಮೂಡಿ ಬರುತ್ತಿದೆ. ಹಿಂದಿ ಭಾಷೆಯಲ್ಲಿ ಮೂಡಿ ಬರುತ್ತಿರುವ ‘ಜೆರ್ಸಿ‘ ಸಿನಿಮಾದಲ್ಲಿ ನಾಯಕನಾಗಿ ಶಾಹಿದ್​ ಕಪೂರ್​ ಅಭಿನಯಿಸುತ್ತಿದ್ದಾರೆ. ಹಾಗಾಗಿ ಚಿತ್ರಿಕರಣದಲ್ಲಿ ಶಾಹಿದ್​ ಬ್ಯುಸಿಯಾಗಿದ್ದಾರೆ.

ಈ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾಗ ಶಾಹಿದ್ ಅವರ ಮುಖಕ್ಕೆ ಗಂಭೀರವಾಗಿ ಗಾಯವಾಗಿದೆ. ತಕ್ಷಣ ಶಾಹಿದ್​ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ವಿಷಯ ತಿಳಿದ ಶಾಹಿದ್ ಪತ್ನಿ ಮೀರಾ ರಜ್‍ಪುತ್ ಕೂಡಲೇ ಚಂಢೀಗಢ್‍ಗೆ ಬಂದಿದ್ದಾರೆ.

ಜೆರ್ಸಿ ಸಿನಿಮಾದಲ್ಲಿ ಕ್ರಿಕೆಟರ್​ ಪಾತ್ರದಲ್ಲಿ ಶಾಹಿದ್​ ಕಪೂರ್​ ನಟಿಸುತ್ತಿದ್ದಾರೆ. ಚಿತ್ರದ ಸೀನ್‍ವೊಂದರಲ್ಲಿ ಶಾಹಿದ್ ಕ್ರಿಕೆಟ್ ಆಡಬೇಕಿತ್ತು. ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಅವರ ಮುಖಕ್ಕೆ ಬಡಿದಿದೆ.  ಚೆಂಡು ತಾಗಿದ ರಭಸಕ್ಕೆ ಶಾಹಿದ್ ಅವರ ತುಟಿಯ ಕೆಳಭಾಗ ಗಾಯವಾಗಿದ್ದು, ತುಂಬಾ ರಕ್ತ ಸೋರಿದೆ.

ಮಾಹಿತಿಗಳ ಪ್ರಕಾರ ಶಾಹಿದ್ ಅವರ ಆರೋಗ್ಯದ ಸ್ಥಿತಿ ಈಗ ಸುಧಾರಿಸುತ್ತಿದೆ. ಗಾಯ ವಾಸಿಯಾಗಲು ಕೆಲವು ದಿನಗಳು ಬೇಕಾಗಿದೆ. ಹಾಗಾಗಿ ಶಾಹಿದ್ ಚಿತ್ರೀಕರಣಕ್ಕೆ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಗಾಯ ವಾಸಿಯಾದ ನಂತರ ಚಿತ್ರೀಕರಣಕಕ್ಕೆ ವಾಪಾಸ್ಸು ಆಗಲಿದ್ದಾರೆ.

ಇದನ್ನೂ ಓದಿ: Bigg boss kannada 7: ಬಿಗ್​ ಬಾಸ್​ ಮನೆ ಒಳಗೆ ರೀ-ಎಂಟ್ರಿ ನೀಡಿದ ಸ್ಪರ್ಧಿ!; ಯಾರು ಗೊತ್ತಾ?
First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ