ಬಾಲಿವುಡ್ ನಲ್ಲಿ ಮಾಸ್ ಕಮ್ ಲವರ್ ಬಾಯ್ ಎನಿಸಿಕೊಂಡಿರುವ ಶಾಹಿದ್ ಕಪೂರ್ (Shahid Kapoor) ಅವರ ಅಭಿನಯದ ಜರ್ಸಿ ಚಿತ್ರ ಸದ್ಯ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. 2019 ರ ತೆಲುಗಿನ ಜೆರ್ಸಿ ಚಿತ್ರದ ರಿಮೇಕ್ ಚಿತ್ರವಾದರೂ ಬಾಲಿವುಡ್ (jersey in Bollywood) ಈ ಚಿತ್ರ ಹಲ್ ಚಲ್ ಎಬ್ಬಿಸಿದೆ ಎಂದರೆ ತಪ್ಪಾಗಲಾರದು. ಇನ್ನು ಚಿತ್ರದ ಚಿತ್ರೀಕರಣದ ವೇಳೆ ಆದ ಕಹಿ ಘಟನೆಯೊಂದನ್ನು(bitter incident) ಶಾಹಿದ್ ತಮ್ಮ ಇನ್ ಸ್ಟಾಗಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಜರ್ಸಿ ಚಿತ್ರೀಕರಣದ ವೇಳೆ ತನ್ನ ತುಟಿಗೆ (( busted his lip)) ಪೆಟ್ಟು ಬಿದ್ದು 25 ಹೋಲಿಗೆ (25 stitches ) ಹಾಕಿರುವ ವಿಚಾರವನ್ನು ಬಹಿರಂಗೊಡಿಸಿದ್ದಾರೆ. ಆ ಸಮಯದಲ್ಲಿ ನಾನು ಹೆಲ್ಮೆಟ್ (helmet)ಧರಿಸಿರದೇ, ಇದಿದ್ದು ಘಟನೆ ಕಾರಣವಾಯಿತು ಎಂದು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ.
ಇದನ್ನು ಓದಿ:Mira-Shahid Kiss- ಮೀರಾ ತುಟಿಗೆ ತುಟಿ ಸೇರಿಸಿದ ಶಾಹಿದ್ ಕಪೂರ್; ವಿಡಿಯೋ ವೈರಲ್
ಎರಡು ತಿಂಗಳ ಕಾಲ ಶೂಟಿಂಗ್ ಗೆ ಅಡ್ಡಿ
ಜರ್ಸಿ ಕುರಿತು ಮಾತನಾಡಲು ಇನ್ ಸ್ಟಾಗ್ರಾಮ್ ಲೈವ್ ಗೆ ಬಂದಿದ್ದ ಶಾಹಿದ್ ಕಪೂರ್ ಗೆ ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಓರ್ವ ಅಭಿಮಾನಿ ಚೆಂಡಿನೊಂದಿಗೆ ತರಬೇತಿಯ ಅನುಭವದ ಬಗ್ಗೆ ಕೇಳಿದಾಗ ಶಾಹಿದ ನಡೆದ ಕಹಿ ಘಟನೆಯ ಬಗ್ಗೆ ಬಹಿರಂಗಪಡಿಸಿದರು.
ಅಭ್ಯಾಸ ನಡೆಸುತ್ತಿದ್ದಾಗ ತುಟಿಗೆ ಗಾಯವಾಗಿದ್ದು, ತನ್ನ ಜೀವನದ 'ಮೂರ್ಖತನದ ವಿಷಯ' ಎಂದು ಪರಿಗಣಿಸಿದ ಶಾಹಿದ್, "(ಬಾಲ್) ನನ್ನ ಕೆಳತುಟಿಗೆ ಬಿದ್ದು ಪೆಟ್ಟಾದ ಕಾರಣ ವಾಸ್ತವವಾಗಿ ಎರಡು ತಿಂಗಳ ಕಾಲ ಶೂಟಿಂಗ್ ನಿಲ್ಲಿಸಬೇಕಾಯಿತು.
ಅಲ್ಲದೇ ಪೆಟ್ಟಾದ ತುಟಿಗೆ 25 ಹೋಲಿಗೆಗಳನ್ನು ಹಾಕಲಾಗಿದೆ. ನನ್ನ ತುಟಿಯು ಸಾಮಾನ್ಯ ಭಾವನೆ ಹೊಂದಲು ಮೂರು ತಿಂಗಳುಗಳನ್ನು ತೆಗೆದುಕೊಂಡಿತು, ಹೋಲಿಗೆ ಹಾಕಿರುವ ಜಾಗ ಇನ್ನೂ ಸಾಮಾನ್ಯವಾಗಿದೆ ಎಂದು ಅನಿಸುತ್ತಿಲ್ಲ, ನನ್ನ ತುಟಿಯಲ್ಲಿ ಒಂದು ಭಾಗ ಸತ್ತಂತೆ ನನಗೆ ಅನಿಸುತ್ತದೆ. ಚಿತ್ರಕ್ಕಾಗಿ ನನ್ನ ರಕ್ತವನ್ನೇ ಹರಿಸಿದ್ದೇನೆ ಎಂದು ಶಾಹಿದ್ ಹೇಳಿಕೊಂಡಿದ್ದಾರೆ.
ತೆಲುಗು ಚಿತ್ರ ರಿಮೇಕ್ ನಲ್ಲಿ ಮತ್ತೆ ಅಬ್ಬರಿಸಿದ ಶಾಹಿದ್
ಕಬೀರ್ ಸಿಂಗ್ ನಂತರ ಶಾಹಿದ್ ಅವರ ಎರಡನೇ ತೆಲುಗು ರಿಮೇಕ್ ಚಿತ್ರ ಜರ್ಸಿ ಯಾಗಿದೆ. ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ಆಗಿದ್ದ ಕಬೀರ್ ಸಿಂಗ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ₹250 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಟ್ರೇಲರ್ ಬಿಡುಗಡೆಯ ಸಂದರ್ಭದಲ್ಲಿ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡುತ್ತಾ, ಶಾಹಿದ್ ತನ್ನ ವೃತ್ತಿಜೀವನದಲ್ಲಿ ಅಂತಹ ಯಶಸ್ಸನ್ನು ಸಂಭವಿಸಿರಲಿಲ್ಲ ಎಂದು ಒಪ್ಪಿಕೊಂಡರು. ಇಂಡಸ್ಟ್ರಿಯಲ್ಲಿ 15-16 ವರ್ಷ ಕಳೆದಿರುವ ನನಗೆ ಇಷ್ಟು ದೊಡ್ಡ ಮೊತ್ತ ಸಿಕ್ಕಿರಲಿಲ್ಲ. ಹಾಗಾಗಿ, ಅಂತಿಮವಾಗಿ ಅದು ಸಂಭವಿಸಿದಾಗ, ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈವರೆಗೆ ನನ್ನ ಯಾವ ಚಿತ್ರ ಒಮ್ಮೆಯೂ 100 ಕೋಟಿ ಸಿನಿಮಾ ಮಾಡಲಾಗಿರಲಿಲ್ಲ. ನನ್ನ ಬಗ್ಗೆ ನನಗೇ ಅನುಮಾನ ಮೂಡುತ್ತಿರುವ ಹೊತ್ತಿನಲ್ಲಿ 'ಕಬೀರ್ ಸಿಂಗ್' ಸಿನಿಮಾ 200 ಕೋಟಿ ಕ್ಲಬ್ ಸೇರಿತು. ನಾನಂತೂ ಹುಚ್ಚನಂತಾಗಿದ್ದೆ, ಭಿಕ್ಷುಕನಂತೆ ಅಲೆದಾಡಲು ಪ್ರಾರಂಭಿಸಿದೆ. ಮಾನಸಿಕವಾಗಿ ಬಹಳ ಗೊಂದಲದ ಸ್ಥಿತಿ ತಲುಪಿದ್ದೆ'' ಎಂದಿದ್ದಾರೆ. 2003 ರಲ್ಲಿ ನಾಯಕ ನಟನಾಗಿ ಶಾಹಿದ್ ತೆರೆಯ ಮೇಲೆ ಬಂದಾಗ ಶಾಹಿದ್ನನ್ನು ಶಾರುಖ್ ಖಾನ್ಗೆ ಹೋಲಿಸಲಾಗಿತ್ತು. ಮೊದ ಮೊದಲ ಎಲ್ಲಾವು ಸೂಪರ್ ಆಗಿತ್ತು, ಇವ್ರ ಜೊತೆ ನಟಿಸಿದ ಕರೀನಾ ಕಪೂರ್ ಸಹ ಸ್ಟಾರ್ ಆದರೆ, ಆದರೆ ಶಾಹಿದ್ ಗೆ ಮಧ್ಯೆ ಅದೃಷ್ಟ ಕೈಕೊಟ್ಟಿತ್ತು ಎಂದರೆ ತಪ್ಪಾಗಲಾರದು.
ಟ್ರೈಲರ್ ಗೆ ಫಿದಾ
ಜರ್ಸಿಚಿತ್ರದ ಟ್ರೈಲರ್ ಗೆ ಭಾರಿ ಜನಪ್ರಿಯತೆ ಸಿಕ್ಕಿದೆ. ಜರ್ಸಿ ಚಿತ್ರವನ್ನು ಗೌತಮ್ ತಿನ್ನಾನುರಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಶಾಹೀದ್ ಕಪೂರ್ ಒಬ್ಬ ಕ್ರಿಕೆಟರ್ ಆಗಿ ನಟಿಸಲಿದ್ದಾರೆ ಮತ್ತು ಚಿತ್ರದಲ್ಲಿ ಮೃಣಾಲ ಠಾಕೂರ್,ಪಂಕಜ್ ಕಪೂರ್ ಕೂಡ ನಟಿಸಲಿದ್ದಾರೆ. ಚಿತ್ರವನ್ನು 31 ಡಿಸೆಂಬರ್ 2021 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರ ತಂಡವು ಹೇಳಿದೆ. .ಕಬೀರ್ ಸಿಂಗ್ ಚಿತ್ರದ ನಂತರ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಜರ್ಸಿ ಚಿತ್ರಕ್ಕೆ ಶಾಹಿದ್ ಜೊತೆ ಸಂಭಾವನೆ 33 ಕೋಟಿ ರೂ ಗೆ ಒಪ್ಪಂದವಾಗಿತ್ತಂತೆ ಆದರೆ ಕೊರೊನಾದಿಂದಾಗಿ ತಮ್ಮ ಸಂಭಾನೆಯಲ್ಲಿ 8 ಕೋಟಿ ಕಡಿತವಾಗಿರುವ ವಿಚಾರ ತಿಳಿದು, ಶಾಕ್ ಆದರೂ ಕೂಲ್ ಆಗಿ ಸ್ವೀಕರಿಸಿದ್ದಾರಂತೆ.
ಇದನ್ನು ಓದಿ:Kabir Singh Box Office Collection: ಐದನೇ ದಿನಕ್ಕೆ ನೂರು ಕೋಟಿಯ ಕ್ಲಬ್ ಸೇರಿದ 'ಕಬೀರ್ ಸಿಂಗ್'..!
ನಿರ್ಮಾಪಕರ ಆರ್ಥಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು, ಚಿತ್ರೀಕರಣಕ್ಕೆ ಸಾಥ್ ನೀಡಿದ್ದಾರೆ. ಅಲ್ಲದೇ ಅನಗತ್ಯ ವಸ್ತು/ಪ್ರಾಪರ್ಟಿ ಖರ್ಚು ಮಾಡದೇ, ವೆಚ್ಚವನ್ನು ಕಡಿತಗೊಳಿಸಬೇಕೆಂದು ನಿರ್ದೇಶಕರಿಗೆ ಹೇಳಿದ್ದಾರಂತೆ. ನಟ ನಾನಿ ಹಾಗೂ ಶ್ರದ್ಧಾ ಶ್ರೀನಾಥ್ ಅಭಿನಯದ ತೆಲುಗಿನ ಜೆರ್ಸಿ ಸಿನಿಮಾ ತನ್ನ ವೃತ್ತಿ ಜೀವನಕ್ಕೆ ತುಂಬಾ ಹತ್ತಿರವಾಗಿದೆ, ಹೃದಯಕ್ಕೆ ತುಂಬಾ ಹತ್ತಿರವಾದ ಸಿನಿಮಾ ಈ ಸಿನಿಮಾದಲ್ಲಿ ನಾನಿ ನನ್ನನ್ನು 5-6 ಬಾರಿ ಕಣ್ಣೀರು ಹಾಕುವಂತೆ ಮಾಡಿದ್ದಾರೆ ಎಂದು ಶಾಹಿದ್ ಹೇಳಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ