• Home
  • »
  • News
  • »
  • entertainment
  • »
  • AbRam Khan: ಕ್ರೀಡೆಯಲ್ಲಿ ಗೋಲ್ಡ್ ಮೆಡಲ್ ಗೆದ್ದ ಶಾರುಖ್ ಮಗ ಅಬ್ರಾಮ್!

AbRam Khan: ಕ್ರೀಡೆಯಲ್ಲಿ ಗೋಲ್ಡ್ ಮೆಡಲ್ ಗೆದ್ದ ಶಾರುಖ್ ಮಗ ಅಬ್ರಾಮ್!

ಕೆಲವು ನಟರ ಮಕ್ಕಳು ಅವರಿಗೆ ಇಷ್ಟವಿರುವ ಕ್ರೀಡೆಗಳಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಕಿರಿಯ ಮಗ ಅಬ್ರಾಮ್ ಟೇಕ್ವಾಂಡೋ ಕ್ರೀಡೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಅಂತ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. 

ಕೆಲವು ನಟರ ಮಕ್ಕಳು ಅವರಿಗೆ ಇಷ್ಟವಿರುವ ಕ್ರೀಡೆಗಳಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಕಿರಿಯ ಮಗ ಅಬ್ರಾಮ್ ಟೇಕ್ವಾಂಡೋ ಕ್ರೀಡೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಅಂತ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. 

ಕೆಲವು ನಟರ ಮಕ್ಕಳು ಅವರಿಗೆ ಇಷ್ಟವಿರುವ ಕ್ರೀಡೆಗಳಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಕಿರಿಯ ಮಗ ಅಬ್ರಾಮ್ ಟೇಕ್ವಾಂಡೋ ಕ್ರೀಡೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಅಂತ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. 

  • Share this:

ಮೊದಲೆಲ್ಲಾ ಶಿಕ್ಷಕರ (Teachers) ಮಕ್ಕಳು ಶಿಕ್ಷಕರಾಗುತ್ತಾರೆ, ಡಾಕ್ಟರ್ ಮಕ್ಕಳು ಓದಿ ಡಾಕ್ಟರ್ (Doctor) ಆಗುತ್ತಾರೆ ಮತ್ತು ಸಿನೆಮಾ ನಟರ ಮಕ್ಕಳು ನಟನೆಯ ತರಬೇತಿ ಪಡೆದು ಅವರ ತಂದೆಯ ನೆರವಿನಿಂದ ಸಿನೆಮಾ ರಂಗಕ್ಕೆ (Film Industry) ಬರುತ್ತಾರೆ ಅಂತ ಹೇಳುತ್ತಿದ್ದರು. ಆದರೆ ಈಗ ಅದು ನಿಧಾನವಾಗಿ ಬದಲಾಗುತ್ತಿದೆ. ಈಗ ಅನೇಕ ಡಾಕ್ಟರ್ ಮಕ್ಕಳು ಇಂಜಿನಿಯರಿಂಗ್ (Engineering) ವ್ಯಾಸಂಗ ಮಾಡಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಸಿನೆಮಾ ನಟರ ಮಕ್ಕಳು ಸಹ ನಟನೆ ತರಬೇತಿ (Training) ಪಡೆಯುವ ಬದಲು ಕ್ರೀಡೆಗಳಲ್ಲಿ (Sports) ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.


ಈಗಾಗಲೇ ಕೆಲವು ನಟರ ಮಕ್ಕಳು ಅವರಿಗೆ ಇಷ್ಟವಿರುವ ಕ್ರೀಡೆಗಳಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಕಿರಿಯ ಮಗ ಅಬ್ರಾಮ್ ಟೇಕ್ವಾಂಡೋ ಕ್ರೀಡೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಅಂತ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.


ಶಾರುಖ್ ಮಗ ಪಂದ್ಯ ಗೆದ್ದು ಚಿನ್ನದ ಪದಕ ಪಡೆದ


ಹೌದು. ಇತ್ತೀಚಿಗೆ ಶಾರುಖ್ ಮತ್ತು ಗೌರಿ ಅವರ ಕಿರಿಯ ಮಗ ಅಬ್ರಾಮ್ ಖಾನ್ ಟೇಕ್ವಾಂಡೋ ಪಂದ್ಯವನ್ನು ಗೆದ್ದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಮುಂಬೈನಲ್ಲಿ ನಡೆದ ಸ್ಪರ್ಧೆಯಲ್ಲಿ ಅಬ್ರಾಮ್ ಅವರನ್ನು ಹುರಿದುಂಬಿಸಲು ಆರ್ಯನ್ ಮತ್ತು ಸುಹಾನಾ ಖಾನ್ ಸೇರಿದಂತೆ ಖಾನ್ ಕುಟುಂಬವು ಒಂದು ಪಂದ್ಯವನ್ನು ನೋಡಲು ಬಂದಿದ್ದರು.
ಇದನ್ನೂ ಓದಿ: Kantara-Rishab Shetty: ನಾನು ನನ್ನ ಮಗಳು! ರಾಧ್ಯ ಜೊತೆ ಫೋಟೋ ಹಂಚಿಕೊಂಡ ರಿಷಬ್
ಕಪ್ಪು ಪ್ಯಾಂಟ್ ಮತ್ತು ಅದಕ್ಕೆ ಮ್ಯಾಚಿಂಗ್ ಆಗುವಂತಹ ಒಂದು ಕ್ಯಾಪ್ ಅನ್ನು ಜೋಡಿಯಾಗಿ ಮರೂನ್ ಶರ್ಟ್ ಧರಿಸಿ ಸಖತ್ ಕೂಲ್ ಆಗಿ ಕಾಣುತ್ತಿದ್ದ ಸೂಪರ್ ಸ್ಟಾರ್ ಶಾರುಖ್ ಅವರನ್ನು ವಿಜೇತರಿಗೆ ಪದಕಗಳನ್ನು ನೀಡಲು ವೇದಿಕೆಗೆ ಕರೆಸಲಾಯಿತು.


ತಂದೆ ಕೈಯಿಂದ ಚಿನ್ನದ ಪದಕ ಪಡೆದ ಅಬ್ರಾಮ್
ಅವರು ತಮ್ಮ ಮಗ ಅಬ್ರಾಮ್ ಗೆ ಚಿನ್ನದ ಪದಕವನ್ನು ನೀಡಿದರು. ಪದಕವನ್ನು ಸ್ವೀಕರಿಸಿದ ನಂತರ, ಅಬ್ರಾಮ್ ತನ್ನ ತಂದೆ ಕೆನ್ನೆಗೆ ಸಿಹಿ ಮುತ್ತು ನೀಡಿದರು. ಈ ಕಾರ್ಯಕ್ರಮದಲ್ಲಿ ಗೌರಿ ಮತ್ತು ಸುಹಾನಾ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದರೆ, ಆರ್ಯನ್ ಖಾನ್ ಕಪ್ಪು ಸ್ವೆಟ್ ಶರ್ಟ್ ಮತ್ತು ಆಲಿವ್ ಹಸಿರು ಪ್ಯಾಂಟ್ ನಲ್ಲಿ ಕಾಣಿಸಿಕೊಂಡರು.
ಇದರ ನಂತರ ಆರ್ಯನ್ ಖಾನ್ ಮತ್ತು ಸುಹಾನಾ ಖಾನ್ ಅವರು ಟೇಕ್ವಾಂಡೊ ತರಬೇತುದಾರನೊಂದಿಗೆ ಫೋಟೋಗೆ ಪೋಸ್ ನೀಡಿದರು, ಅವರು ಚಿಕ್ಕವರಿದ್ದಾಗ ಅವರಿಗೂ ಸಹ ಟೇಕ್ವಾಂಡೋ ಹೇಳಿಕೊಟ್ಟ ತರಬೇತುದಾರರು ಇವರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:  Kantara-Sapthami Gowda: ನನಗಾಗಿ ಒಂದು ಲವ್ ಸ್ಟೋರಿ ಬರೆಯಿರಿ ಎಂದ ಕಾಂತಾರ ಚೆಲುವೆ! ಲೀಲಾ ಹೀಗ್ಯಾಕೆ ಹೇಳಿದ್ರು?


ಶಾರುಖ್ ಕುಟುಂಬದ ಹೊರತಾಗಿ, ಅಲ್ಲಿ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮಗ ತೈಮೂರ್, ಕರಿಷ್ಮಾ ಕಪೂರ್ ಮತ್ತು ಅವರ ಮಗ ಕಿಯಾನ್ ರಾಜ್ ಕಪೂರ್ ಮತ್ತು ನಿಖಿಲ್ ದ್ವಿವೇದಿ ಅವರೊಂದಿಗೆ ಮಗ ಶಿವನ್ ಈ ಟೇಕ್ವಾಂಡೋ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡರು.


ಶಾರುಖ್ ಅವರ ಮೂರು ಚಿತ್ರಗಳು ಮುಂದಿನ ವರ್ಷ ಬಿಡುಗಡೆಯಾಗಲಿವೆ..
ಇನ್ನೂ ಕೆಲಸದ ವಿಷಯಕ್ಕೆ ಬಂದರೆ, ನಟ ಶಾರುಖ್ ಖಾನ್ ಅವರು ನಟಿ ದೀಪಿಕಾ ಪಡುಕೋಣೆ ಮತ್ತು ನಟ ಜಾನ್ ಅಬ್ರಹಾಂ ಅವರೊಂದಿಗೆ ತಮ್ಮ ಮುಂಬರುವ ಪಠಾನ್, ನಟಿ ನಯನತಾರಾ ಅವರೊಂದಿಗೆ ಜವಾನ್ ಮತ್ತು ರಾಜ್ ಕುಮಾರ್ ಹಿರಾನಿ ಅವರ ಡಂಕಿ ಚಿತ್ರಗಳಲ್ಲಿ ನಿರತರಾಗಿದ್ದಾರೆ ಅಂತ ಹೇಳಬಹುದು. ಶಾರುಖ್ ಅವರ ಈ ಎಲ್ಲಾ ಚಿತ್ರಗಳು ಮುಂದಿನ ವರ್ಷ ಬಿಡುಗಡೆಯಾಗಲಿವೆ.

Published by:Ashwini Prabhu
First published: