ಬಾಲಿವುಡ್ ನಟರ ಹೆಂಡತಿಯರು ಅಂದ್ರೆ ಕೇಳಬೇಕೆ? ಅವರು ಧರಿಸುವ ಹೊಸ ಮಾದರಿಯ ಫ್ಯಾಷನ್ ಬಟ್ಟೆಗಳು, ಅವರ ಸ್ಟೈಲ್ ಎಲ್ಲವೂ ನೋಡುಗರ ಗಮನಸೆಳೆಯುತ್ತೆ. ಅದರಲ್ಲೂ ಬಾಲಿವುಡ್ ನ ಬಾದ್ ಶಾ ಅಂತಾನೆ ಖ್ಯಾತಿ ಪಡೆದಿರುವ ಶಾರುಖ್ ಖಾನ್ (Shah Rukh Khan) ಅವರ ಪತ್ನಿ ಗೌರಿ ಖಾನ್ (Gouri Khan) ಅವರು ಅಪರೂಪದಲ್ಲಿ ಅಪರೂಪಕ್ಕೆ ಸುದ್ದಿಯಲ್ಲಿರುತ್ತಾರೆ. ಈಗ ಅವರು ಸುದ್ದಿಯಲ್ಲಿರುವುದು ಅವರು ಹಾಕಿರುವ ಫ್ಯಾಷನ್ ಬಟ್ಟೆಯಿಂದ.
ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ವಿಭಿನ್ನವಾದ ಫ್ಯಾಷನ್ ಪ್ರಜ್ಞೆಗೆ ಹೆಸರುವಾಸಿ
ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ತಮ್ಮ ವಿಭಿನ್ನವಾದ ಫ್ಯಾಷನ್ ಪ್ರಜ್ಞೆಗೆ ಹೆಸರುವಾಸಿಯಾಗಿದ್ದಾರೆ. ಗೌರಿ ಅವರ ಫ್ಯಾಷನ್ ಹೇಳಿಕೆಗಳನ್ನು ಆಗಾಗ್ಗೆ ಅವರ ಇನ್ಸ್ಟಾಗ್ರಾಮ್ ನ ಪೋಸ್ಟ್ ಗಳಲ್ಲಿ ನಾವು ನೋಡಬಹುದು. ಗೌರಿಗೆ ಫ್ಯಾಷನ್ ಬಗ್ಗೆ ತುಂಬಾನೇ ತಿಳಿದಿದೆ, ಆದ್ದರಿಂದಲೇ ಫ್ಯಾಷನ್ ಅನ್ನು ತುಂಬಾನೇ ಅತ್ಯಂತ ಸಮತೋಲನ ಮತ್ತು ಸೊಬಗಿನಿಂದ ಕನಿಷ್ಠವಾಗಿಡುವುದು ಹೇಗೆಂದು ಅವರಿಗೆ ತಿಳಿದಿದೆ.
ಗೌರಿ ತನ್ನ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ತನ್ನ ಫ್ಯಾಶನ್ ಡೈರಿಗಳಿಂದ ತುಣುಕುಗಳೊಂದಿಗೆ ನಿಯಮಿತವಾಗಿ ಫ್ಯಾಷನ್ ಫೋಟೋಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿದ್ದಾರೆ. ತನ್ನ ಮಗ ಆರ್ಯನ್ ಖಾನ್ ತನ್ನ ಫ್ಯಾಶನ್ ಗುರು ಎಂದು ಪ್ರಸಿದ್ಧ ಚಾಟ್ ಶೋ ‘ಕಾಫಿ ವಿತ್ ಕರಣ್’ ನ ಒಂದು ಸಂಚಿಕೆಯಲ್ಲಿ ಅವರು ಹೇಳಿದ್ದನ್ನು ಉಲ್ಲೇಖಿಸಲಾಗಿದೆ.
ಗೌರಿ ಬುಧವಾರ ತೆಗೆಸಿಕೊಂಡ ಫೋಟೋ ಹೇಗಿದೆ ಗೊತ್ತೇ?
ಗೌರಿ ಖಾನ್ ಬುಧವಾರ ಮುಂಬೈನಲ್ಲಿ ಮಾಧ್ಯಮ ಮಿತ್ರರ ಕ್ಯಾಮೆರಾ ಕಣ್ಣುಗಳಿಗೆ ಸೆರೆಸಿಕ್ಕಿದ್ದು, ಎಂದಿನ ತಮ್ಮ ಸ್ಟೈಲಿಶ್ ಮೆರುಗಿನಿಂದ ಮಿಂಚಿದ್ದಾರೆ. ಗೌರಿ ಖಾನ್ ತಮ್ಮ ಬೆರಗುಗೊಳಿಸುವ ಸೂಟ್ ನಲ್ಲಿ ವೃತ್ತಿಪರ ಕರ್ತವ್ಯಗಳನ್ನು ನಿಭಾಯಿಸಲು ಹೋಗುವಂತಿದೆ. ಗೌರಿ ಕಪ್ಪು ಹತ್ತಿಯ ಟಾಪ್ ನಲ್ಲಿ ನೆಕ್ಲೈನ್ ಹೊಂದಿರುವ ಲೇಡಿ ಬಾಸ್ ನಂತೆ ಕಾಣುತ್ತಿದ್ದಾರೆ. ಅವರು ತಮ್ಮ ಕಪ್ಪು ಟಾಪ್ ನ ಮೇಲೆ ಬಿಳಿ ಸೂಟ್ ಅನ್ನು ಧರಿಸಿದ್ದರು. ಅದಕ್ಕೆ ಬದಿಗಳಲ್ಲಿ ಬೆಳ್ಳಿಯ ಗುಂಡಿಗಳು ಇರುವುದನ್ನು ನಾವು ನೋಡಬಹುದು.
ಬಿಳಿ ಮತ್ತು ಕಪ್ಪು ಸ್ನೀಕರ್ಸ್ ನಲ್ಲಿ, ಗೌರಿ ತುಂಬಾನೇ ಸ್ಟೈಲಿಸ್ ಆಗಿ ಕಾಣುತ್ತಿದ್ದರು ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಔಪಚಾರಿಕ ಮತ್ತು ಕ್ಯಾಶುಯಲ್ ಫ್ಯಾಷನ್ ಲುಕ್ ಇರುವ ಉಡುಪನ್ನು ಧರಿಸಿದ್ದು, ನಮಗೂ ಫ್ಯಾಶನ್ ಜ್ಞಾನವನ್ನು ನೀಡಿದ್ದಾರೆ.
ಹೊಸ ಲುಕ್ ನಲ್ಲಿ ಮೋಡಿ ಮಾಡಿದ ಗೌರಿ ಖಾನ್..
ಗೌರಿ ತನ್ನ ನೋಟವನ್ನು ಮತ್ತಷ್ಟು ಟಿಂಟೆಡ್ ಶೇಡ್ ಗಳಲ್ಲಿ ಸ್ಟೇಟ್ಮೆಂಟ್ ಬ್ಲ್ಯಾಕ್ ಫ್ರೇಮ್ ಗಳೊಂದಿಗೆ ಅಲಂಕರಿಸಿದ್ದರು. ಇದು ಅವರೆ ಲುಕ್ ಗೆ ಸಂಪೂರ್ಣವಾಗಿ ಔಪಚಾರಿಕ ನೋಟವನ್ನು ನೀಡಿದೆ. ಡಿಸೈನರ್ ತನ್ನ ಕಾರನ್ನು ಹತ್ತುವ ಮೊದಲು ಕ್ಯಾಮೆರಾಗಳಿಗೆ ಪೋಸ್ ನೀಡಲು ಹೊರ ಬಂದರು. ಗೌರಿ ತನ್ನ ಕೂದಲನ್ನು ಒಂದು ಬನ್ ರೀತಿಯಲ್ಲಿ ಕಟ್ಟಿದ್ದರು. ವರಂಡಾದ ಮಧ್ಯದಲ್ಲಿ ನಿಂತು ಛಾಯಾಗ್ರಾಹಕರಿಗೆ ಪೋಸ್ ನೀಡಿದರು. ಕನಿಷ್ಠ ಮೇಕಪ್ ನಲ್ಲಿ, ಗೌರಿ ಲುಕ್ ತುಂಬಾನೇ ಗ್ರ್ಯಾಂಡ್ ಆಗಿತ್ತು. ಅವರ ಐ-ಲೈನರ್ ಹಚ್ಚಿಕೊಂಡ ಕಣ್ಣುಗಳು, ತೆಳುವಾಗಿ ಮೇಕಪ್ ಮಾಡಿಕೊಂಡ ಕೆನ್ನೆ ಮತ್ತು ತುಟಿಯ ಲಿಪ್ಸ್ಟಿಕ್ ಅಲಂಕಾರ ಯಾರನ್ನೂ ಬೆರುಗುಗೊಳಿಸುವಂತಿತ್ತು ಹಾಗೂ ಶಾರುಖ್ ಪತ್ನಿ ವಿಭಿನ್ನವಾಗಿಯೇ ನೆರೆದವರನ್ನು ಆಶ್ಚರ್ಯಕ್ಕೊಳಪಡಿಸಿರು.
ಇನ್ನೂ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪ್ರೇಮಕಥೆಯಂತೂ ಎಲ್ಲರಿಗೂ ಗೊತ್ತಿರುವಂತದ್ದೆ ಎಂದು ಹೇಳಬಹುದು. 1991 ರಲ್ಲಿ ಮದುವೆಯಾಗುವ ಮೊದಲು ಈ ದಂಪತಿಗಳು ಆರು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದರು. ಈ ದಂಪತಿಗಳಿಗೆ ಪುತ್ರರಾದ ಆರ್ಯನ್ ಮತ್ತು ಅಬ್ರಾಮ್ ಮತ್ತು ಮಗಳು ಸುಹಾನಾ ಎಂಬ ಮೂವರು ಮಕ್ಕಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ