ಶಾರುಖ್​-ಗೌರಿ ಮದುವೆ ರಹಸ್ಯ: ಕಿಂಗ್​ ಖಾನ್​ ಹೇಳಿಕೆ ವೈರಲ್​!

news18
Updated:July 17, 2018, 1:46 PM IST
ಶಾರುಖ್​-ಗೌರಿ ಮದುವೆ ರಹಸ್ಯ: ಕಿಂಗ್​ ಖಾನ್​ ಹೇಳಿಕೆ ವೈರಲ್​!
news18
Updated: July 17, 2018, 1:46 PM IST
ನ್ಯೂಸ್​ 18 ಕನ್ನಡ

ಬಿ-ಟೌನ್​ನ ರೊಮ್ಯಾಂಟಿಕ್​ ಜೋಡಿ ಕಿಂಗ್​ ಖಾನ್​ ಶಾರುಖ್​ ಹಾಗೂ ಗೌರಿ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಈ ಜೋಡಿಯ ಕುರಿತು ಯಾವುದೇ ಒಂದು ಸಣ್ಣ ವಿಷಯವಾದರೂ ಅದು ವೈರಲ್​ ಆಗೋದು ಸಹಜ. ಅದರಲ್ಲೂ ಅವರ ವೈವಾಹಿಕ ಜೀವನ ಹಾಗೂ ಅದರ ರಹಸ್ಯಗಳ ಕುರಿತಾದ ವಿಷಯಗಳು ಸಿಕ್ಕರೆ ಅಭಿಮಾನಿಗಳು ಸುಮ್ಮನೆ ಬಿಡುತ್ತಾರಾ?

ಹೌದು ಶಾರುಖ್​-ಗೌರಿ ಲವ್​ ಸ್ಟೋರಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ 6 ವರ್ಷಗಳ ಪ್ರೀತಿಯ ಸಂಬಂಧ ವಿವಾಹ ಬಂಧವಾಗಿತ್ತು. ಆದರೆ ಆಗಷ್ಟೆ ಬಾಲಿವುಡ್​ನಲ್ಲಿ ನೆಲೆ ಕಂಡುಕೊಳ್ಳುತ್ತಿದ್ದ ನಟ ಶಾರುಖ್​ ತುಂಬಾ ಬೇಗ ವಿವಾಹವಾಗಿದ್ದರು. ಆಗಿನ್ನೂ ಅವರು ಕಿರುತೆರೆಯಲ್ಲಿ ಅಭಿನಯಿಸುತ್ತಿದ್ದ ನಟ. ಆದರೂ ಇವರಿಗೆ ವಿವಾಹದ ಕುರಿತಾಗಿ ಯಾವುದೇ ಪಶ್ಚಾತಾಪವಿಲ್ಲ. ಆದರೆ ಅವರು ಇಷ್ಟು ಬೇಗ ಮದುವೆ ಆಗಲು ಕಾರಣವೇನು ಅನ್ನೋ  ಪ್ರಶ್ನೆಗೆ ಎಷ್ಟೋ ಅಭಿಮಾನಿಗಳಿಗೆ ಇಲ್ಲಿಯವರೆಗೂ ಉತ್ತರ ಸಿಕ್ಕಿರಲಿಲ್ಲ.

ಆದರೆ ಅಭಿಮಾನಿಯೊಬ್ಬರು ಕೇಳಿರುವ ಈ ಪ್ರಶ್ನೆಗೆ ಶಾರುಖ್​ ಈಗ ಉತ್ತರ ನೀಡಿದ್ದಾರೆ. ಪ್ರೀತಿ- ಅದೃಷ್ಟ ಯಾವಾಗ ಬೇಕಾದರೂ ಬರುತ್ತದೆ. ಗೌರಿ ಜೊತೆಗೆ ಈ ಎರಡೂ ನನಗೆ ಬಹಳ ಬೇಗ ಸಿಕ್ಕಿತು ಎಂದು ಶಾರುಖ್​ ನೀಡಿರುವ ಉತ್ತರ ಈಗ ಅಂತರ್ಜಾಲದಲ್ಲಿ ಫುಲ್​ ವೈರಲ್​ ಆಗಿದೆ.

ಅಭಿಮಾನಿಯೊಬ್ಬರ ಪ್ರಶ್ನೆಗೆ ಶಾರುಖ್​ ನೀಡಿರುವ ಉತ್ತರ ಅವರ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿದೆ
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ