Indian Sign Language Dictionaryಯಲ್ಲಿ ಬಾಲಿವುಡ್‌ ನಟ ಶಾರುಖ್ ಖಾನ್‌ ಹೆಸರು ಸೇರ್ಪಡೆ..!

ಭಾರತೀಯ ಸಾಂಕೇತಿಕ ಭಾಷೆಯ ನಿಘಂಟಿನಲ್ಲಿ (Indian Sign Language Dictionary) ಕಾಣಬಹುದಾಗಿದೆ. ಹೌದು, ಈ ನಿಘಂಟಿನಲ್ಲಿ ಶಾರುಖ್ ಖಾನ್ ಹೆಸರು ಸೇರ್ಪಡೆಯಾಗಿದೆ. ಈ ನಿಘಂಟನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರು ಲೋಕಾರ್ಪಣೆ ಮಾಡಿದ್ದಾರೆ.

ಬಾಲಿವುಡ್‌ ನಟ ಶಾರುಖ್ ಖಾನ್‌

ಬಾಲಿವುಡ್‌ ನಟ ಶಾರುಖ್ ಖಾನ್‌

  • Share this:
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಈಗಲೂ ಸಹ ಟಾಪ್‌ ನಟರಲ್ಲಿ ಒಬ್ಬರು. ಈ ಹಿನ್ನೆಲೆ ಇವರ ಹೆಸರನ್ನುಇನ್ನು ಮುಂದೆ ಭಾರತೀಯ ಸಾಂಕೇತಿಕ ಭಾಷೆಯ ನಿಘಂಟಿನಲ್ಲಿ (Indian Sign Language Dictionary) ಕಾಣಬಹುದಾಗಿದೆ. ಹೌದು, ಈ ನಿಘಂಟಿನಲ್ಲಿ ಶಾರುಖ್ ಖಾನ್ ಹೆಸರು ಸೇರ್ಪಡೆಯಾಗಿದೆ. ಈ ನಿಘಂಟನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರು ಲೋಕಾರ್ಪಣೆ ಮಾಡಿದ್ದಾರೆ. ಇದು ಕಿಂಗ್ ಖಾನ್​ ಶಾರುಖ್  ಅವರ ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸಿದೆ. ಹಾಗಾದ್ರೆ ಶಾರುಖ್ ಖಾನ್‌ ಅವರನ್ನು ಯಾವ ಸಂಕೇತದಿಂದ ಗುರುತಿಸುವುದು ಗೊತ್ತಾ..? ಅವರ ಅಭಿಮಾನಿಗಳು ಆತನ ಹೆಸರನ್ನು ನಿಮ್ಮ ಬಲಗೈ ಬೆರಳುಗಳನ್ನು ಬಂದೂಕಿನಂತೆ ಹಿಡಿದು ಎರಡು ಸಂಖ್ಯೆ ತೋರಿಸುವ ಚಿಹ್ನೆ ಬಳಸಿ ಹೇಳಬಹುದಾಗಿದೆ.

ಎಸ್‍ಆರ್‌ಕೆ ಹೆಸರಿನ ಜತೆಗೆ ಕಾರ್‌ ಪೂಲಿಂಗ್, ಡೆಫ್‍ಲಿಂಪಿಕ್ಸ್, ಆನ್‍ಲೈನ್ ಬ್ಯಾಂಕಿಂಗ್, ಶಹೀದ್ ಭಗತ್ ಸಿಂಗ್ ಇವು ಇತ್ತೀಚೆಗೆ ಸೇರಿಸಿದ ಹೆಸರುಗಳಾಗಿವೆ. ಭಾರತೀಯ ಸಂಕೇತ ಭಾಷೆ ಮತ್ತು ತರಬೇತಿ ಕೇಂದ್ರ (ಐಎಸ್‍ಎಲ್‍ಆರ್‌ಟಿಸಿ) ಡಿವಿಡಿ ರೂಪದಲ್ಲಿ ಹೊಸ ದೃಶ್ಯ ನಿಘಂಟನ್ನು ಅಭಿವೃದ್ಧಿಪಡಿಸಿದೆ ಮತ್ತು ಬಿಡುಗಡೆ ಮಾಡಿದೆ.

There are nearly 10000 words in the ISL dictionary and one of them is, believe it or not, Shah Rukh Khan! The dictionary is developed and released by the Indian Sign Language Research and Training Centre in DVD form.ಶಾರುಖ್ ಖಾನ್ ಅವರ ಅಭಿಮಾನಿಗಳು ಟ್ವಿಟರ್‌ನಲ್ಲಿ ಈ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಸೆಪ್ಟೆಂಬರ್ 23 ಅನ್ನು ಅಂತಾರಾಷ್ಟ್ರೀಯ ಸಾಂಕೇತಿಕ ಭಾಷೆಯ ದಿನವನ್ನಾಗಿ ಆಚರಿಸಲಾಗುತ್ತದೆ. ವರದಿಯ ಪ್ರಕಾರ, ಸಲ್ಮಾನ್ ಖಾನ್, ಅಮಿತಾಭ್​ ಬಚ್ಚನ್, ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ ಅವರು ನಿಘಂಟಿನ ಹಿಂದಿನ ಆವೃತ್ತಿಗಳಲ್ಲಿ ಕಾಣಿಸಿಕೊಂಡ ತಾರೆಯರು.

ಇದನ್ನೂ ಓದಿ:  ಶಾರುಖ್​ ಖಾನ್-ನಯನತಾರಾ ಜತೆ ತೆರೆ ಹಂಚಿಕೊಳ್ಳಲಿರುವ ಕಿಚ್ಚ ಸುದೀಪ್​..!

ಈ ಮಧ್ಯೆ, ನಿರ್ದೇಶಕ ರಾಜ್ ಕುಮಾರ್ ಹಿರಾನಿ ಹಾಗೂ ನಟ ಶಾರುಖ್ ಖಾನ್ ಕೈ ಜೋಡಿಸುತ್ತಿದ್ದು, ಹೊಸ ಸಿನಿಮಾಕ್ಕೆ ಸಜ್ಜಾಗುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಇವರಿಬ್ಬರು ಒಟ್ಟಾಗಿ ಇದೇ ಮೊದಲು ಕೆಲಸ ಮಾಡುತ್ತಿದ್ದು, ಜನರಲ್ಲಿ ಕುತೂಹಲ, ಭರವಸೆ ಹೆಚ್ಚಿಸಿದೆ. ರಾಜ್ ಕುಮಾರ್ ಹಿರಾನಿ, ಕನಿಕಾ ಧಿಲ್ಲೋನ್ ಮತ್ತು ಅಭಿಜಾತ್ ಜೋಶಿ ಬರೆದಿರುವ ಈ ಮನರಂಜನೆಯ ಹಾಸ್ಯ ಚಿತ್ರವು ವಲಸೆಯ ಹಿನ್ನೆಲೆಯನ್ನು ಆಧರಿಸಿ ನಿರ್ಮಿಸುತ್ತಿದ್ದಾರೆ ಮತ್ತು ಇದು ಹಿರಾನಿಯ ವಿಶಿಷ್ಟ ಶೈಲಿಯ ಕಥೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.

ಇದನ್ನೂ ಓದಿ: Abram Birthday: ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಟಾರ್ ಕಿಡ್​: ಈಗಾಗಲೇ ಅಪ್ಪ ಶಾರುಖ್ ಖಾನ್​​ ಜತೆ ತೆರೆ ಹಂಚಿಕೊಂಡಿರುವ ಅಬ್ರಾಂ..!

ಶಾರುಖ್ ಇತ್ತೀಚೆಗೆ ಬೇರೊಂದು ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗುತ್ತಿದ್ದು, ಪ್ರಚಾರದ ಮೂಲಕ ಒಟಿಟಿಯಲ್ಲಿ ಸುದ್ದಿಯಲ್ಲಿದ್ದಾರೆ. ಎಸ್‍ಆರ್‌ಕೆ ಲಯನ್ ಸಿನಿಮಾದ ಶೂಟಿಂಗ್‍ನಲ್ಲಿ ಮಗ್ನರಾಗಿದ್ದಾರೆ. ಈ ಚಿತ್ರವು ಕೆಲವು ದಿನಗಳ ಹಿಂದೆ ಪುಣೆಯಲ್ಲಿ ಆರಂಭವಾಯಿತು ಮತ್ತು ನಯನತಾರಾ ಕೂಡ ಕಾಣಿಸಿಕೊಂಡಿದ್ದಾರೆ. ಅದರ ಹೊರತಾಗಿ ನಟ ಸಿದ್ಧಾರ್ಥ್ ಆನಂದ್ ನಿರ್ದೇಶನದ ಸಿನಿಮಾ ಪಠಾಣ್‌ನಲ್ಲಿಯೂ ಎಸ್‍ಆರ್‌ಕೆ ಕಮಾಲ್ ಮಾಡಲು ಹೊರಟಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.
Published by:Anitha E
First published: