Shah Rukh Khan: ಶಾರುಖ್ ಖಾನ್ ಮನೆಯ 25 ಲಕ್ಷದ ನೇಮ್ ಪ್ಲೇಟ್‌ ನಾಪತ್ತೆ! 'ಮನ್ನತ್' ಬೋರ್ಡ್ ಕಳೆದೇ ಹೋಯ್ತಾ?

Bollywood: ಶಾರುಖ್ ಮನೆ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಮನ್ನತ್ ಮನೆಯಲ್ಲಿರುವ ಟಿವಿ ರೇಟ್ ಬಗ್ಗೆ ಸುದ್ದಿ ಹರಿದಾಡಿತ್ತು, ನಂತರ ಈ ನೇಮ್​ ಪ್ಲೇಟ್​ 25 ಲಕ್ಷ ಬೆಲೆಬಾಳುತ್ತದೆ ಎನ್ನಲಾಗುತ್ತಿದೆ.

ಮನ್ನತ್

ಮನ್ನತ್

  • Share this:
ಬಾಲಿವುಡ್ ಸೂಪರ್‌ಸ್ಟಾರ್ (Bollywood Super Star) ಶಾರುಖ್ ಖಾನ್ (Shah Rukh Khan) ಅವರ ಮನೆ 'ಮನ್ನತ್' (Mannat) ಅವರ ಅಭಿಮಾನಿಗಳಿಗೆ ಹಾಟ್‌ಸ್ಪಾಟ್‌ಗಿಂತ ಕಡಿಮೆಯಲ್ಲ ಎನ್ನಬಹುದು. ಅಭಿಮಾನಿಗಳು (Fans)  ಮುಂಬೈನಲ್ಲಿರುವ ಅವರ ಬೆಲೆಬಾಳುವ ಮನೆಯ ಹೊರಗೆ ತಮ್ಮ ಫೋಟೋಗಳನ್ನು ಕ್ಲಿಕ್ ಮಾಡಿಕೊಂಡು ಖುಷಿ ಪಡುತ್ತಾರೆ. ಅದೊಂದು ರೀತಿ ಸಾಮಾನ್ಯ ಎನ್ನುವಂತಾಗಿದೆ. ಆ ಮನೆ ಯಾವಾಗಲೂ ಸುದ್ದಿಯಲ್ಲಿರುವ ಮನೆ ಎನ್ನಬಹುದು. ಆದರೆ ಇದೀಗ ವಿಭಿನ್ನ ವಿಚಾರಕ್ಕೆ ಆ ಮನೆ ಸದ್ದು ಮಾಡುತ್ತಿದೆ. ಅದು ನೇಮ್​ ಪ್ಲೇಟ್​ ವಿಚಾರವಾಗಿ.  

ಹೌದು, ಕೆಲವು ವಾರಗಳ ಹಿಂದೆ, ಈ ಜನಪ್ರಿಯ ಬಂಗಲೆಯ ಗೇಟ್‌ನಲ್ಲಿ ಲಕ್ಷಾಂತರ ಮೌಲ್ಯದ ಹೊಸ ಅಲಂಕಾರಿಕ ನಾಮ ಫಲಕವನ್ನು ವರ್ಷಗಳ ನಂತರ ಹಾಕಿರುವುದನ್ನು ಅಭಿಮಾನಿಗಳು ಗಮನಿಸಿದ್ದರು. ನಂತರ ಶಾರುಖ್ ಖಾನ್ ಅವರ ಬಾಂದ್ರಾ ಮನೆ 'ಮನ್ನತ್' ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿತ್ತು.

ನಿಜಕ್ಕೂ ನೇಮ್​ ಪ್ಲೇಟ್​ ಕಾಣೆಯಾಗಿದಿಯಾ?

ಹಲವಾರು ಅಭಿಮಾನಿಗಳು ಸ್ಥಳದಿಂದ ಚಿತ್ರಗಳು ಮತ್ತು ಸೆಲ್ಫಿಗಳನ್ನು ಹಂಚಿಕೊಂಡಿದ್ದಾರೆ, ಇದರಿಂದಾಗಿ ಹಲವಾರು ಜನರು ಇದರ ಬಗ್ಗೆ ಮಾತನಾಡುವಂತಾಗಿತ್ತು. ಒಂದರ್ಥದಲ್ಲಿ ಇದು ಟ್ರೆಂಡಿಂಗ್ ಟಾಪಿಕ್ ಎನ್ನಬಹುದು.  ಆದರೆ, ಇತ್ತೀಚಿಗೆ ಒಂದು ಬೆಳವಣಿಗೆಯಾಗಿದ್ದು, ಕೆಲವು ಅಭಿಮಾನಿಗಳು ಈ ದುಬಾರಿ ನಾಮಫಲಕವು ಗೇಟ್‌ನಿಂದ ಕಾಣೆಯಾಗಿರುವುದನ್ನ ಗಮನಿಸಿದ್ದಾರೆ.

ಈ ಹಿಂದೆ ಈ ರೀತಿಯ ಘಟನೆಗಳು ಆಗಿರಲಿಲ್ಲ ಎಂಬುದು ಅಭಿಮಾನಿಗಳ ವಾದ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಹಲವಾರು ಅಭಿಮಾನಿಗಳು ಶಾರುಖ್ ಖಾನ್ ಅವರ ನಿವಾಸದ ಹೊರಗೆ ಫೋಟೋಗಳಲ್ಲು ತೆಗೆದುಕೊಳ್ಳಲು ಬಂದಿದ್ದರು. ಆದರೆ, ಆ ಸಮಯದಲ್ಲಿ ನಾಮಫಲಕ ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿದೆ.

ಮೇ 12 ರಂದು, ಅಭಿಮಾನಿಯೊಬ್ಬರು ಮನ್ನತ್ ಹೊರಗಿನಿಂದ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ ಮತ್ತು "ನಾನು ಇಂದು ನನ್ನ ಜೀವನದಲ್ಲಿ ಮೊದಲ ಬಾರಿಗೆ #ಮನ್ನತ್‌ಗೆ ಹೋಗಿದ್ದೆ ಮತ್ತು ಯಾವುದೇ ನಾಮಫಲಕವನ್ನು ನಾನು ನೋಡಲಿಲ್ಲ. ಸ್ವಲ್ಪ ಕೆಲಸ ಪ್ರಗತಿಯಲ್ಲಿದೆ ಎಂದು ನಾನು ಭಾವಿಸಿದೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ: ಮಿಥುನ ರಾಶಿ ಧಾರಾವಾಹಿ ಚೆಲುವೆಯ ರಿಯಲ್ ಲೈಫ್​ ಸ್ಟೋರಿ ಇದು

ಅದೇ ಸಮಯದ ಮತ್ತೊಂದು ಟ್ವೀಟ್‌ನಲ್ಲಿ ಇದೇ ರೀತಿಯ ಶೀರ್ಷಿಕೆಯೊಂದಿಗೆ ಮನೆಯ ಮುಂಭಾಗದ ಚಿತ್ರವೊಂದು ಹರಿದಾಡುತ್ತಿದೆ. ಗುರುವಾರದವರೆಗೆ, ಮನ್ನತ್‌ನ ಅಭಿಮಾನಿಗಳು ಹಂಚಿಕೊಂಡ ಹಲವಾರು ಫೋಟೋಗಳಲ್ಲಿ ಈ  ನಾಮಫಲಕವು ಇನ್ನೂ ಇರಲಿಲ್ಲ. ಹಲವಾರು ಅಭಿಮಾನಿಗಳು ನಂಬರ್ ಪ್ಲೇಟ್ ಕಳವಾಗಿದೆಯೇ ಎಂದು ಪ್ರಶ್ನಿಸಿದರು, ಆದರೆ ಇತರರು ಶಾರುಖ್ ಅವರ ಮನೆಯ ಭದ್ರತಾ ಪರಿಸ್ಥಿತಿಯನ್ನು ಗಮನಿಸಿದರೆ ಇದು ಅಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಿಪೇರಿಗಾಗಿ ನಾಮಫಲಕ ತೆರವು?

ಇನ್ನೂ ಕೆಲವರು ಇದು ಗೌರಿ ಖಾನ್ ಅವರ ಕೆಲವು ವಿನ್ಯಾಸದ ಪ್ರಯೋಗದ ಭಾಗವಾಗಿದೆಯೇ ಎಂದು ಸಹ ಅನುಮಾನ ವ್ಯಕ್ತಪಡಿಸಿದ್ದಾರೆ. ಮೇ 11 ರಂದು ಅಭಿಮಾನಿಯೊಬ್ಬರು ಮಾಡಿದ ಟ್ವೀಟ್ ನಲ್ಲಿ, "ಆಜ್ #ಮನ್ನತ್ ಸೆ ನೇಮ್ ಪ್ಲೇಟ್ ಗಯಾಬ್ ಹೈ ಮತ್ಲಾಬ್ ಫುಲ್ ಆನ್ ಎಕ್ಸಪಿರಿಮೆಂಟ್​ ಚಲ್ ರಹಾ ಹೈ @ಗೌರಿಖಾನ್ (ಇಂದು ಮನ್ನತ್ ಎಂಬ ಹೆಸರಿನ ಫಲಕವು ಇಲ್ಲ, ಅಂದರೆ ಪ್ರಯೋಗ ಆರಂಭವಾಗಿದೆ)" ಎಂದು ಬರೆದಿದ್ದಾರೆ.  ಆದರೆ, ನಾಮಫಲಕ ಸರಳವಾಗಿ ದುರಸ್ತಿಯಾಗುತ್ತಿರುವ ಕಾರಣ ಯಾವುದೇ ನಿಗೂಢತೆ ಇಲ್ಲದಿರಬಹುದು. ಹಿಂದೂಸ್ತಾನ್ ಟೈಮ್ಸ್ ಸಿಟಿಯ ವರದಿಯ ಪ್ರಕಾರ, "ಇದನ್ನು ರಿಪೇರಿಗಾಗಿ ತೆಗೆದುಹಾಕಲಾಗಿದೆ. ಇದು ಮನೆಯೊಳಗೆ, ವಾಸ್ತವವಾಗಿ ತೋಟದಲ್ಲಿದೆ, ಮತ್ತು ಅದನ್ನು ದುರಸ್ತಿ ಮಾಡಿದ ನಂತರ ಮತ್ತೆ ಹಾಕಲಾಗುತ್ತದೆ.

ಇದನ್ನೂ ಓದಿ: ಇಂದು ಸ್ಯಾಂಡಲ್​ವುಡ್​ ಕ್ರೇಜಿಸ್ಟಾರ್​ ಜನ್ಮದಿನ - 'ಬೋಪಣ್ಣ'ಗೆ ಭರ್ಜರಿ ಬರ್ತ್ ಡೇ ಗಿಫ್ಟ್

ಶಾರುಖ್ ಮನೆ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಮನ್ನತ್ ಮನೆಯಲ್ಲಿರುವ ಟಿವಿ ರೇಟ್ ಬಗ್ಗೆ ಸುದ್ದಿ ಹರಿದಾಡಿತ್ತು, ನಂತರ ಈ ನೇಮ್​ ಪ್ಲೇಟ್​ 25 ಲಕ್ಷ ಬೆಲೆಬಾಳುತ್ತದೆ ಎನ್ನಲಾಗುತ್ತಿದೆ.
Published by:Sandhya M
First published: