• Home
 • »
 • News
 • »
 • entertainment
 • »
 • Shah Rukh Khan: ಪಠಾಣ್​ ಚಿತ್ರಕ್ಕಾಗಿ ಶಾರುಖ್‌ ಬಾಡಿ ಟ್ರಾನ್ಸ್ ಫಾರ್ಮೆಷನ್​! ಯಾವ ರೀತಿ ವರ್ಕೌಟ್​ ಮಾಡಿದ್ರು ಬಾಲಿವುಡ್​​ ಬಾದ್​ ಷಾ?

Shah Rukh Khan: ಪಠಾಣ್​ ಚಿತ್ರಕ್ಕಾಗಿ ಶಾರುಖ್‌ ಬಾಡಿ ಟ್ರಾನ್ಸ್ ಫಾರ್ಮೆಷನ್​! ಯಾವ ರೀತಿ ವರ್ಕೌಟ್​ ಮಾಡಿದ್ರು ಬಾಲಿವುಡ್​​ ಬಾದ್​ ಷಾ?

ಶಾರುಖ್​ ಖಾನ್​

ಶಾರುಖ್​ ಖಾನ್​

ನಟ ಶಾರುಖ್ ತಮ್ಮ 'ಪಠಾಣ್' ಮೈಕಟ್ಟಿಗಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ ಎಂದು ಪ್ರಶಾಂತ್‌ ಸಾವಂತ್‌ ಹೇಳಿದ್ದಾರೆ. ಈ ಹಿಂದೆ ಸಾಕಷ್ಟು ಸರ್ಕ್ಯೂಟ್ ತರಬೇತಿ ಮತ್ತು ಕಾರ್ಡಿಯೋ ವರ್ಕ್‌ಔಟ್‌ಗಳನ್ನು ಮಾಡುತ್ತಿದ್ದರು ಎಂದು ಫಿಟ್‌ನೆಸ್‌ ಟ್ರೇನರ್‌ ಹೇಳಿದ್ದಾರೆ.

 • Trending Desk
 • 3-MIN READ
 • Last Updated :
 • Karnataka, India
 • Share this:

ಪಠಾಣ್​ ಚಿತ್ರದ ಬೇಷರಂಗ್‌ ರಂಗ್‌ (Besharang Rang) ಸಿನಿಮಾ ಹಾಡು ಸಾಕಷ್ಟು ವಿವಾದ ಸೃಷ್ಟಿಸಿದ್ದು ಮಾತ್ರವಲ್ಲ, ಬದಲಾಗಿ ಹಲವಾರು ಜನರ ಮೆಚ್ಚಿಗೆ ಪಾತ್ರವಾಗಿದೆ.  ಅದರಲ್ಲೂ ಬರೀ ಹಾಡು ಮಾತ್ರವಲ್ಲ, ದೀಪಿಕಾ ಪಡುಕೋಣೆ (Deepika Padukone) ಹಾಗೂ ನಟ ಶಾರುಖ್‌ ಖಾನ್‌  (Shah Rukh Khan) ಫಿಟ್‌ ನೆಸ್‌ಗೆ (Fitness) ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲೂ ಸಖತ್‌ ಹಾಟ್‌ ಆಗಿ ಕಾಣುವ ಶಾರುಖ್‌ ಖಾನ್‌ ಅವರ ಕಟ್ಟುಮಸ್ತಾದ ಬಾಡಿ ಬಗ್ಗೆ ಜನರು ಈಗಲೂ ಮಾತನಾಡಿಕೊಳ್ಳುತ್ತಿದ್ದಾರೆ. ಪಠಾಣ್‌ (Pathaan) ಚಿತ್ರದ ಟ್ರೇಲರ್‌ ಹಾಗೂ ಹಾಡುಗಳು ಬಿಡುಗಡೆಯಾಗುವ ಮೊದಲೇ ಜನರು ಶಾರುಖ್‌ ಖಾನ್‌ ಲುಕ್‌ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.


ಅದಕ್ಕೆ ಕಾರಣ ಶಾರುಖ್‌, ಬೇಶರಂ ರಂಗ್‌ ಹಾಡಿನ ಚಿತ್ರೀಕರಣದಲ್ಲಿದ್ದಾಗ ಸ್ಪೇನ್‌ ನಿಂದ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದರು. ಅದು ಸಾಕಷ್ಟು ವೈರಲ್‌ ಆಗಿತ್ತು.
ಹೆಮ್ಮೆ ಪಡ್ತಾರೆ ಎಸ್‌ಆರ್‌ಕೆ ಫಿಟ್‌ನೆಸ್‌ ಟ್ರೇನರ್‌


ಆದ್ರೆ ನಿಮಗೂ ತಿಳಿದಿರೋ ಹಾಗೆ ಇಂಥದ್ದೊಂದು ಸಿಕ್ಸ್‌ಪ್ಯಾಕ್‌ ಬಾಡಿ ಮಾಡಿಕೊಳ್ಳೋದು ಅಂದರೆ ಸುಲಭವೇನಲ್ಲ. ಅಲ್ಲದೇ ಶಾರುಖ್‌ ಖಾನ್‌ ಗೆ ಈಗ ವಯಸ್ಸು 57.ಹಾಗಾಗಿ, ಈ ವಯಸ್ಸಲ್ಲಿ ಸಾಕಷ್ಟು ಶ್ರಮ ಹಾಕಿದ್ದಾರೆ ಅನ್ನೋದಂತೂ ಸತ್ಯ. ಇನ್ನು ಅವರ ಈ ಬಾಡಿ ಟ್ರಾನ್ಸ್ಫಾರ್ಮೇಷನ್ ಗೆ ಬಗ್ಗೆ ಅವರ ಫಿಟ್‌ನೆಸ್‌ ಟ್ರೇನರ್‌ ಹೆಮ್ಮೆ ಪಡುತ್ತಾರೆ.


ಈ ಬಗ್ಗೆ ಮಾತನಾಡಿರುವ ಶಾರುಖ್‌ ಖಾನ್‌ ಫಿಟ್‌ ನೆಸ್‌ ತರಬೇತುದಾರ ಪ್ರಶಾಂತ್‌ ಸಾವಂತ್‌, ಎಸ್‌ಆರ್‌ಕೆ ಪಟ್ಟ ಶ್ರಮದ ಬಗ್ಗೆ ವಿವರಿಸ್ತಾರೆ.


2 ವರ್ಷ ಶ್ರಮ ಪಟ್ಟಿದ್ದಾರೆ ಶಾರುಖ್!‌


ಶಾರುಖ್ ತಮ್ಮ 'ಪಠಾಣ್' ಮೈಕಟ್ಟಿಗಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ ಎಂದು ಪ್ರಶಾಂತ್‌ ಸಾವಂತ್‌ ಹೇಳಿದ್ದಾರೆ. ಅವರು ಭಾರ ಎತ್ತಲು ಪ್ರಾರಂಭಿಸಿದರು. ಈ ಹಿಂದೆ ಸಾಕಷ್ಟು ಸರ್ಕ್ಯೂಟ್ ತರಬೇತಿ ಮತ್ತು ಕಾರ್ಡಿಯೋ ವರ್ಕ್‌ಔಟ್‌ಗಳನ್ನು ಮಾಡುತ್ತಿದ್ದರು. ನಂತರ ಅವರು ಹೆಚ್ಚು ಶಕ್ತಿ ತರಬೇತಿಯನ್ನು ಅಳವಡಿಸಿಕೊಂಡಿದ್ದಾರೆ. ಅದು ಅವರಿಗೆ ಕಟ್ಟುಮಸ್ತಾದ ದೇಹವನ್ನು ಹುರಿಗೊಳಿಸಲು ಸಹಾಯ ಮಾಡಿತು.


ನಾವು ಪರದೆಯ ಮೇಲೆ ನೋಡುತ್ತಿರುವ ಟೋನ್ ಮೈಕ್ ಅನ್ನು ಪಡೆಯಲು ಶಾರುಖ್‌ ಖಾನ್‌ ಗೆ ಎರಡು ವರ್ಷಗಳು ಬೇಕಾಯಿತು ಎಂದು ಹೇಳಿದ್ದಾರೆ. ಅಲ್ಲದೇ ತೆರೆಯ ಮೇಲಿನ ಅವರ ಪಠಾಣ್‌ ಲುಕ್‌ ಬಗ್ಗೆ ನನಗೆ ನಿಜವಾಗಿಯೂ ಹೆಮ್ಮೆ ಇದೆ ಎಂಬುದಾಗಿ ಪ್ರಶಾಂತ್‌ ಹೇಳುತ್ತಾರೆ.


ಇನ್ನು ಇದಕ್ಕೆ ಹಿನ್ನಡೆಯಾಗುವ ಗಾಯಗಳ ಹೊರತಾಗಿಯೂ, ಡೆಡ್‌ಲಿಫ್ಟ್‌ಗಳು, ಪುಲ್-ಅಪ್‌ಗಳನ್ನು ಎಳೆಯುವ, ಕೋರ್ ಮತ್ತು ಕಾಲುಗಳ ಮೇಲೆ ಕೆಲಸ ಮಾಡುವ ಮೂಲಕ ಅವರು ಇನ್ನಷ್ಟು ಸ್ಟ್ರಾಂಗ್‌ ಆದರು. ಹಾಗಾಗಿ ನಟನ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಆಹಾರ ಸೇವನೆಯಲ್ಲೂ ಶಿಸ್ತು


ಫಿಟ್‌ ನೆಸ್‌ ಬೇಕು ಅಂದ್ರೆ ಬರೀ ವ್ಯಾಯಾಮದಲ್ಲಿ ಮಾತ್ರವಲ್ಲ ಬದಲಾಗಿ ಆಹಾರ ಕ್ರಮದಲ್ಲೂ ಶಿಸ್ತು ಇರಬೇಕು. ಅದನ್ನು ಶಾರುಖ್‌ ಅಳವಡಿಸಿಕೊಂಡಿದ್ದರು.


ಇನ್ನು ಶಾರುಖ್‌ ಅವರ ಆಹಾರ ಕ್ರಮವನ್ನು ಪ್ರಶಾಂತ್‌ ಸಾವಂತ್‌ ಬಹಿರಂಗಪಡಿಸಿದರು. ಶಾರುಖ್‌, ಮೊಟ್ಟೆಯ ಬಿಳಿಭಾಗ ಮತ್ತು ಮಸೂರ ಸೇರಿದಂತೆ ಪ್ರೋಟೀನ್‌ಗೆ ಹೆಚ್ಚಿನ ಒತ್ತು ನೀಡುವ ಮೂಲಕ ಕ್ಯಾಲೋರಿ ಸೇವನೆಯನ್ನು ಹೆಚ್ಚಿಸಿದ್ದಾರೆ.


"ಆಹಾರದಲ್ಲಿ ಎಲ್ಲವನ್ನೂ ಯೋಜಿಸಲಾಗಿದೆ ಮತ್ತು ಕಾರ್ಬೋಹೈಡ್ರೇಟ್‌ಗಳು, ಕೊಬ್ಬು ಮತ್ತು ಪ್ರೋಟೀನ್‌ ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಅಳೆದು ಅವರು ಸೇವಿಸುತ್ತಿದ್ದರು" ಎಂದು ಪ್ರಶಾಂತ್‌ ಹೇಳಿದರು.


ಇನ್ನು, ಶಾರುಖ್‌ ಖಾನ್‌ ಹಾಗೂ ದೀಪಿಕಾ ಪಡುಕೋಣೆ ಕೆಮೆಸ್ಟ್ರಿ ಹೊಂದಿರುವ ಆಕ್ಷನ್‌ ಮೂವಿ 'ಪಠಾನ್' ಜನವರಿ 25 ಎಂದು ಬಿಡುಗಡೆಯಾಗಲಿದೆ. ಯಶ್‌ರಾಜ್‌ ಫಿಲ್ಮ್‌ ನಿರ್ಮಾಣದ ಈ ಚಿತ್ರಕ್ಕೆ ಸಿದ್ಧಾರ್ಥ್‌ ಆನಂದ ಆಕ್ಷನ್‌ ಕಟ್‌ ಹೇಳಿದ್ದು, ಮುಖ್ಯಪಾತ್ರದಲ್ಲಿ ನಟ ಜಾನ್‌ ಅಬ್ರಹಾಂ ಕೂಡ ನಟಿಸಿದ್ದಾರೆ.

Published by:ಪಾವನ ಎಚ್ ಎಸ್
First published: