ಬಣ್ಣ ಹಚ್ಚಲು ಸಿದ್ಧರಾದ ಕಿಂಗ್​ ಖಾನ್​ ಪುತ್ರಿ; ಸಿನೆಮಾ ಯಾವುದು ಗೊತ್ತಾ?

ವಿಭಿನ್ನ ಪಾತ್ರಗಳ ಮೂಲಕ ಬಾಲಿವುಡ್​ನಲ್ಲಿ ಹೆಸರು ಮಾಡಿದ ಶಾರುಖ್​ ಖಾನ್​ ತಮ್ಮ ಮಗ ಆರ್ಯನ್​ ಹಾಗೂ ಮಗಳು ಸುಹಾನಾ ಖಾನ್​ ಅವರನ್ನು ಅದ್ಧೂರಿಯಾಗಿ ಚಿತ್ರರಂಗಕ್ಕೆ ಪರಿಚರಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಇವರಿಬ್ಬರು ಸಿಂಪಲ್​ ಆಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

news18india
Updated:August 7, 2019, 7:42 PM IST
ಬಣ್ಣ ಹಚ್ಚಲು ಸಿದ್ಧರಾದ ಕಿಂಗ್​ ಖಾನ್​ ಪುತ್ರಿ; ಸಿನೆಮಾ ಯಾವುದು ಗೊತ್ತಾ?
ಸಾರಾ ಖಾನ್
  • Share this:
ಬಾಲಿವುಡ್​​ ಕಿಂಗ್​ ಖಾನ್​ ಶಾರುಖ್​ ಪುತ್ರಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೆ ದಿವಂಗತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​, ಸೈಫ್​ ಅಲಿಖಾನ್​ ಪುತ್ರಿ ಸಾರಾ ಅಲಿಖಾನ್​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆ ಸರದಿಯಲ್ಲಿ ಶಾರುಖ್​ ಖಾನ್​ ಕ್ಯೂಟ್​ ಪುತ್ರಿ ಸುಹಾನ ಖಾನ್ ಕೂಡ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ. ಹಾಗಿದ್ದರೆ, ಸುಹಾನ ಖಾನ್​ ನಟಿಸುತ್ತಿರುವ ಸಿನೆಮಾ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ

ಸಾಮಾಜಿಕ ತಾಣದಲ್ಲಿ ತನ್ನ ಅಪ್ಪನ ಜೊತೆ ಗುರುತಿಸಿಕೊಂಡಿರುವ ಸುಹಾನ ಖಾನ್​ ಆಗಾಗ ಚಿತ್ರರಂಗಕ್ಕೆ ಬರುವ ಮುನ್ಸೂಚನೆ ನೀಡುತ್ತಿದ್ದರು. ಇದೀಗ ಅಧಿಕೃತವಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಹಾಗಂತ ಅವರು ಯಾವುದೇ ದೊಡ್ಡ ಸಿನೆಮಾದಲ್ಲಿ ನಟಿಸುತ್ತಿಲ್ಲ. ಬದಲಾಗಿ ತಮ್ಮ ಕ್ಲಾಸ್​ಮೇಟ್​​ ಥಿಯೋ ಗಿಮೆನೋ ನಿರ್ದೇನದ ‘ದಿ ಗ್ರೇ ಪಾರ್ಟ್​ ಆಫ್​​ ಬ್ಲೂ‘ ಶಾರ್ಟ್​ ಮೂವಿಯಲ್ಲಿ ನಡಿಸುತ್ತಿದ್ದಾರೆ. ಈ ಚಿತ್ರದ ಮೊದಲ ಲುಕ್​ ಅನ್ನು ಗಿಮೆನೊ ತಮ್ಮ ಇನ್​ಸ್ಟಾಗ್ರಾಂ​ನಲ್ಲಿ ಹಾಕಿದ್ದಾರೆ.

  View this post on Instagram
 
#thegreypartofblue art by @olsdavis

A post shared by Theo Gimeno (@theodoregimeno) on

ವಿಭಿನ್ನ ಪಾತ್ರಗಳ ಮೂಲಕ ಬಾಲಿವುಡ್​ನಲ್ಲಿ ಹೆಸರು ಮಾಡಿದ ಶಾರುಖ್​ ಖಾನ್​ ತಮ್ಮ ಮಗ ಆರ್ಯನ್​ ಹಾಗೂ ಮಗಳು ಸುಹಾನಾ ಖಾನ್​ ಅವರನ್ನು ಅದ್ಧೂರಿಯಾಗಿ ಚಿತ್ರರಂಗಕ್ಕೆ ಪರಿಚರಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಇವರಿಬ್ಬರು ಸಿಂಪಲ್​ ಆಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

ಶಾರುಖ್​ ಪುತ್ರ ಆರ್ಯನ್​ ಕಳೆದ ಕೆಲ ದಿನಗಳ ಹಿಂದೆ ತೆರೆಗೆ ಬಂದಿರುವ ‘ದಿ ಲಯನ್​ ಕಿಂಗ್​‘ ಚಿತ್ರದ ಹಿಂದಿ ಅವತರಣಿಕೆಗೆ ಧ್ವನಿ ನೀಡುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.
First published: August 7, 2019, 7:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading