ಡಿಡಿ ಚಾನೆಲ್​ನಲ್ಲಿ ಶಾರುಖ್ ಖಾನ್ ಸರ್ಕಸ್ ಪ್ರಾರಂಭ

ಹಳೆಯ ಶಾರುಖ್ ಖಾನ್ ಝಲಕ್ ಈ ಸೀರಿಯಲ್ ಮೂಲಕ ನೋಡಬಹುದು. ಅಲ್ಲದೆ ಇದೇ ಧಾರಾವಾಹಿಯಲ್ಲಿ ರೇಣುಕಾ ಶಹಾನೆ ಮತ್ತು ನಟ-ನಿರ್ದೇಶಕ ಅಶುತೋಷ್ ಗೋವಾರಿಕರ್ ಸಹ ಅಭಿನಯಿಸಿರುವುದು ವಿಶೇಷ.

news18-kannada
Updated:March 29, 2020, 7:55 PM IST
ಡಿಡಿ ಚಾನೆಲ್​ನಲ್ಲಿ ಶಾರುಖ್ ಖಾನ್ ಸರ್ಕಸ್ ಪ್ರಾರಂಭ
ಶಾರುಖ್ ಖಾನ್
  • Share this:
ಕೊರೋನಾ ವೈರಸ್​ ಆತಂಕ ದೇಶದೆಲ್ಲೆಡೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 21 ದಿನಗಳ ಕಾಲ ಲಾಕ್​ಡೌನ್​ ಘೋಷಿಸಿದೆ. ಇನ್ನೂ ದಿನಗಳ ಕಾಲ ಭಾರತೀಯರೆಲ್ಲರೂ ಮನೆಯೊಳಗೇ ಬಂಧಿಯಾಗಬೇಕಾಗಿದೆ. ಹೀಗಿದ್ದಾಗ ಸಮಯ ಕಳೆಯುವುದು ಹೇಗೆಂಬುದೇ ದೊಡ್ಡ ತಲೆನೋವು.

ಅದಕ್ಕಾಗಿ ದೂರದರ್ಶನ ವಾಹಿನಿ ಇಂದಿನಿಂದ 'ರಾಮಾಯಣ' ಮಹಾಭಾರತ ಧಾರಾವಾಹಿಯನ್ನು ಮರುಪ್ರಸಾರ ಮಾಡುತ್ತಿದೆ. ಅದರೊಂದಿಗೆ ಶಾರುಖ್ ಖಾನ್ ಅಭಿನಯದ ಮೊದಲ ಧಾರಾವಾಹಿ ಸರ್ಕಸ್​ ಅನ್ನು ರಿ ಟೆಲಿಕಾಸ್ಟ್ ಪ್ರಾರಂಭಿಸಿದೆ.

ಜೀಜ್ ಮಿರ್ಜಾ ಅವರ 1989ರ ಪ್ರಸಿದ್ದ ಟಿವಿ ಸರಣಿ "ಸರ್ಕಸ್" ಅನ್ನು ಭಾನುವಾರದಿಂದ ಮರುಪ್ರಸಾರ ಮಾಡಲು ಆರಂಭಿಸಿದೆ. ರಾತ್ರಿ 8 ರಿಂದ ಡಿಡಿ ನ್ಯಾಷನಲ್‌ನಲ್ಲಿ ಈ ಧಾರಾವಾಹಿಯನ್ನು ಪ್ರಸಾರವಾಗಲಿದ್ದು, ಹಳೆಯ ಶಾರುಖ್ ಖಾನ್ ಝಲಕ್ ಈ ಸೀರಿಯಲ್ ಮೂಲಕ ನೋಡಬಹುದು. ಅಲ್ಲದೆ ಇದೇ ಧಾರಾವಾಹಿಯಲ್ಲಿ ರೇಣುಕಾ ಶಹಾನೆ ಮತ್ತು ನಟ-ನಿರ್ದೇಶಕ ಅಶುತೋಷ್ ಗೋವಾರಿಕರ್ ಸಹ ಅಭಿನಯಿಸಿರುವುದು ವಿಶೇಷ.

First published:March 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading