ರೋಹಿತ್​ಗೋಸ್ಕರ ಐಪಿಎಲ್​​ನಲ್ಲಿ ಲೈವ್​​ ಡ್ಯಾನ್ಸ್​ ಮಾಡುವೆ ಎಂದ ಶಾರುಖ್

1993 ರಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಅಭಿನಯದ ಬಾಝಿಗರ್ ಸಿನಿಮಾ ತೆರೆಕಂಡು ಇಂದಿಗೆ 25 ವರ್ಷಗಳಾಗಿವೆ. ಈ ಸಂತಸದ ಸುದ್ದಿಯನ್ನು ಕಿಂಗ್ ಖಾನ್ ತಮ್ಮ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ | Shah Rukh Khan promises to perform live for Rohit Sharma in the IPL

Vinay Bhat | news18
Updated:November 13, 2018, 3:34 PM IST
ರೋಹಿತ್​ಗೋಸ್ಕರ ಐಪಿಎಲ್​​ನಲ್ಲಿ ಲೈವ್​​ ಡ್ಯಾನ್ಸ್​ ಮಾಡುವೆ ಎಂದ ಶಾರುಖ್
ರೋಹಿತ್ ಶರ್ಮಾ- ಶಾರುಖ್ ಖಾನ್
  • News18
  • Last Updated: November 13, 2018, 3:34 PM IST
  • Share this:
ನ್ಯೂಸ್ 18 ಕನ್ನಡ

ಮುಂಬೈ (ನ. 13): ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್​​​​) ಆರಂಭಕ್ಕೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿವೆ. ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಮನೆ ಮಾಡಿದ್ದು, ಜೊತೆಗೆ ಶಾರುಖ್ ಅಭಿಮಾನಿಗಳಿಗೂ ಸಂತಸದ ಸುದ್ದಿಯೊಂದು ಸಿಕ್ಕಿದೆ.

ಇದನ್ನೂ ಓದಿ: ಸದ್ಯದಲ್ಲೇ ಶುರುವಾಗಲಿದೆ ವನಿತೆಯರ 'ಐಪಿಎಲ್' ಟೂರ್ನಿ..!

1993 ರಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಅಭಿನಯದ 'ಬಾಝಿಗರ್' ಸಿನಿಮಾ ತೆರೆಕಂಡು ಇಂದಿಗೆ 25 ವರ್ಷಗಳಾಗಿವೆ. ಈ ಸಂತಸದ ಸುದ್ದಿಯನ್ನು ಕಿಂಗ್ ಖಾನ್ ತಮ್ಮ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಇದಕ್ಕೆ ಟೀಂ ಇಂಡಿಯಾದ ಉಪ-ನಾಯಕ ರೋಹಿತ್ ಶರ್ಮಾ ಅವರು 'ಇದು ನನ್ನ ನೆಚ್ಚಿನ ಚಿತ್ರ' ಎಂದು ಕಮೆಂಟ್ ಮಾಡಿದ್ದಾರೆ.

  ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಅವರ ಕಮೆಂಟ್​ಗೆ ರೀ ಟ್ವೀಟ್ ಮಾಡಿರುವ ಬಾಲಿವುಡ್ ಬಾದ್​ಷಾ ಅವರು 'ಮುಂದಿನ ಐಪಿಎಲ್​ನಲ್ಲಿ ಬಾಝಿಗರ್ ಚಿತ್ರದ ಕಾಲಿ ಕಾಲಿ ಆಂಖೆ... ಹಾಡಿಗೆ ನಿಮಗಾಗಿ ಲೈವ್ ಡ್ಯಾನ್ಸ್​ ಮಾಡುವೆ' ಎಂದು ರೋಹಿತ್​ ಶರ್ಮಾಗೆ ತಿಳಿಸಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್​​​ನಲ್ಲಿ ಶಾರುಖ್​​ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ನೃತ್ಯವನ್ನು ಮೈದಾನದಲ್ಲಿ ಲೈವ್​​ನಲ್ಲೇ ವೀಕ್ಷಿಸಬಹುದು.

 ಶಾರುಖ್ ಖಾನ್​ರನ್ನು ಸ್ಟಾರ್​ ಪಟ್ಟಕ್ಕೇರಿಸಿದ ಈ ಸಿನಿಮಾ 90ರ ದಶಕದಲ್ಲಿ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರದಲ್ಲಿ ಕಿಂಗ್​ ಖಾನ್​ಗೆ ನಾಯಕಿರಾಗಿ ಕಾಜೋಲ್ ಮತ್ತು ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದರು.

First published:November 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading