Shah Rukh Khan: ನಯನತಾರಾ ಮದುವೆಗೆ ಬಂದು ಶಾರುಖ್ ಖಾನ್ ಟ್ರೋಲ್, ಇಷ್ಟ್​ ಬೇಗ ಕೊರೊನಾ ಹೋಯ್ತಾ ಎಂದ ನೆಟ್ಟಿಗರು

Nayanthara Wedding: ಕರಣ್ ಜೋಹರ್ ಬರ್ತ್​ ಡೇ ಪಾರ್ಟಿಯ ನಂತರ ಬಾಲಿವುಡ್​ನಲ್ಲಿ ಸುಮಾರು ಜನರಿಗೆ ಕೊರೊನಾ ಆಗಿದ್ದು.  ಅದರಲ್ಲಿ ನಟ ಶಾರುಖ್ ಕೂಡ ಒಬ್ಬರು.

ನಟ ಶಾರುಖ್ ಖಾನ್

ನಟ ಶಾರುಖ್ ಖಾನ್

  • Share this:
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Nayanthara - Vignesh Shivan) ಮೊನ್ನೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸಂಭ್ರಮದಲ್ಲಿರುವ ಈ ನವ ಜೋಡಿಗೆ ಅಭಿಮಾನಿಗಳಿಂದ ಹಾಗೂ ಗಣ್ಯರಿಂದ ಶುಭಾಷಯಗಳು ಹರಿದುಬರುತ್ತಿವೆ. ಇನ್ನು ಮದುವೆಗೆ ಸಹ ಭಾರತೀಯ ಚಿತ್ರರಂಗದ ಅನೇಕ ಸಲೆಬ್ರಿಟಿಗಳು ಬಂದಿದ್ದರು. ರಜನಿಕಾಂತ್, ಬೋನಿ ಕಪೂರ್ ಹಾಗೂ ಬಾಲಿವುಡ್ ಬಾದ್​ ಶಾ ಶಾರುಖ್ ಖಾನ್ ಕೂಡ ಬಂದಿದ್ದರು. ಆದರೆ ಶಾರುಖ್ ಮದುವೆಗೆ ಬಂದಿದ್ದು ಈಗ ಟ್ರೋಲ್ ಆಗಿದೆ. ಅರೇ, ಮದುವೆ ಬಂದ್ರೆ ಏನ್ ಟ್ರೋಲ್ ಅಂತೀರಾ? ಈ ಸ್ಟೋರಿ ಓದಿ.

ಕೊರೊನಾ ಬಂದು ಇಷ್ಟು ಬೇಗ ಹೋಗ್ಬಿಡ್ತಾ ಎಂದು ಪ್ರಶ್ನೆ? 

ಕಳೆದ ಕೆಲ ದಿನಗಳ ಹಿಂದೆ ಶಾರುಖ್ ಖಾನ್​ ಕೋವಿಡ್​ ಸೋಂಕಿಗೆ ಗುರಿಯಾಗಿದ್ದರು. ಕರಣ್ ಜೋಹರ್ ಬರ್ತ್​  ಡೇ ಪಾರ್ಟಿಯ ನಂತರ ಬಾಲಿವುಡ್​ನಲ್ಲಿ ಸುಮಾರು ಜನರಿಗೆ ಕೊರೊನಾ ಆಗಿದ್ದು.  ಅದರಲ್ಲಿ ನಟ ಶಾರುಖ್ ಕೂಡ ಒಬ್ಬರು. ಕೊರೊನಾದಿಂದ ಗುಣಮುಖರಾದ ನಂತರ ಶಾರುಖ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರ ಮದುವೆಗೆ ಬಂದಿದ್ದರು. ಆದರೆ ಇದು ಈಗ ಟ್ರೋಲ್ ಆಗುತ್ತಿದೆ.

ಶಾರುಖ್ ಅವರನ್ನು ಮದುವೆಯಲ್ಲಿ ನೋಡಿ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದು, ಇತ್ತೀಚೆಗಷ್ಟೇ ಶಾರುಖ್ ಖಾನ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಇಷ್ಟು ಬೇಗ ಅವರು ಗುಣಮುಖರಾದ್ರಾ?, ಎರಡು ದಿನಗಳಲ್ಲಿ ಅವರಿಗೆ ಕೋವಿಡ್-19 ಪಾಸಿಟಿವ್ ಬಂದು, ಆರಾಮ್ ಆಗಿಬಿಟ್ರಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಕೋವಿಡ್ ಅಲ್ಲ, ಅಸಿಡಿಟಿ ಆಗಿತ್ತು ಅನ್ಸುತ್ತೆ ಎಂದು ಗೇಲಿ ಮಾಡಿದ್ದಾರೆ. ಅಲ್ಲದೇ, ಇವರಿಗೆಲ್ಲಾ ಎರಡೇ ದಿನಗಳಲ್ಲಿ ಕೋವಿಡ್ ಮಾಯ ಆಗಿ ಬಿಡುತ್ತದೆ. 3 ದಿನಗಳಲ್ಲಿ ಹೇಗೆ ಕೋವಿಡ್‌ನಿಂದ ಶಾರುಖ್ ಖಾನ್ ಹುಷಾರಾದ್ರು ಎಂದು ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.

ಕರಣ್ ಜೋಹರ ಪಾರ್ಟಿಗೆ ಹೋದವರಿಗೆ ಬಂದಿತ್ತು ಕೊರೊನಾ 

ಕರಣ್ ಜೋಹರ್ ಗ್ರ್ಯಾಂಡ್​​ ಪಾರ್ಟಿ ಬಹಳ ಸುದ್ದಿಯಾಗಿತ್ತು. ಯಾರೊಬ್ಬರೂ ಸಹ ಮಿಸ್ ಮಾಡದೆಯೇ ಅವರ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿಯು ಎಲ್ಲರೂ ಭಾಗವಹಿಸಿದ್ದರು. ಈಗ ಭಾಗವಹಿಸಿದ್ದ ಸುಮಾರು 50 ರಿಂದ 55 ಜನಕ್ಕೆ ಕೊರೊನಾ ಪಾಸಿಟಿವ್ ಬಂದಿತ್ತು ಎಂದು ಸಹ ವರದಿಯಾಗಿ ಸುದ್ದಿಯಾಗಿತ್ತು.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾರ್ಲಿಂಗ್ ಕೃಷ್ಣ, ದಿಲ್ ಪಸಂದ್ ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್

ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ಯಶ್ ರಾಜ್ ಫಿಲ್ಮ್ಸ್ ಸ್ಟುಡಿಯೋದಲ್ಲಿ ಕರಣ್ ಜೋಹರ್ ತಮ್ಮ 50 ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಹೃತಿಕ್ ರೋಷನ್, ಶಾರುಖ್ ಖಾನ್, ಕತ್ರಿನಾ ಕೈಫ್, ಕಿಯಾರಾ ಅಡ್ವಾಣಿ, ಜಾನ್ವಿ ಕಪೂರ್, ಮಲೈಕಾ ಅರೋರಾ, ಕರೀನಾ ಕಪೂರ್ ಖಾನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಆ ಪಾರ್ಟಿ ಬಾಲಿವುಡ್​ನ ಅತಿ ದೊಡ್ಡ ಪಾರ್ಟಿ ಎಂದು ಹೆಸರು ಪಡೆದಿದೆ.  ಆದರೆ ಅದ್ಧೂರಿ ಆಚರಣೆಗೆ ಭಾರಿ ಬೆಲೆ ತೆತ್ತ ಬೇಕಾಗಿ ಬಂದಿದೆ. ಇತ್ತೀಚಿನ ವರದಿಯೊಂದರ ಪ್ರಕಾರ ಈ ಪಾರ್ಟಿಯಲ್ಲಿ ಭಾಗವಹಿಸಿದ್ದ ಸುಮಾರು 50 ರಿಂದ 55 ಜನಕ್ಕೆ ಕೊರೊನಾ ಸೋಂಕು ತಗುಲಿತ್ತು ಎಂದು ವರದಿಯಾಗಿತ್ತು.

ಬಾಲಿವುಡ್ನ  ಹಲವಾರು ಜನರು ಪಾರ್ಟಿಯ ನಂತರ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ, ಆದರೆ ಈ ಬಗ್ಗೆ ಯಾರೂ ಕೂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಮೂಲಗಳ ಪ್ರಕಾರ ಕಾರ್ತಿಕ್ ಆರ್ಯನ್​ಗೆ ಕೊರೊನಾ ಸೋಂಕು ತಗುಲಿತ್ತು. ಅವರು ಕರಣ್ ಪಾರ್ಟಿಯಲ್ಲಿ ಭಾಗವಹಿಸಿರಲಿಲ್ಲ, ಆದರೆ ಭಾಗವಹಿಸಿದ್ದ ನಟಿಯರಿಂದ ಈ ಸೋಂಕು ತಗುಲಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಇಳಕಲ್ ಸೀರೆಯಲ್ಲಿ ಕನ್ನಡತಿ ಸುಂದರಿಯರು ಮಿಂಚಿಂಗ್, ಇದು ಬೆಸ್ಟ್ ಸೀರಿಯಲ್ ಅಂದ್ರು ಫ್ಯಾನ್ಸ್

ಈ ವಿಚಾರವಾಗಿ ಕರಣ್ ಜೋಹರ್ ಆಗಲಿ ಅಥವಾ ಪಾರ್ಟಿಯಲ್ಲಿ ಭಾಗವಹಿಸಿರುವ ನಟ, ನಟಿಯರು ಮತ್ತು ಸೋಂಕು ತಗುಲಿರುವವರು ಕೂಡ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ.
Published by:Sandhya M
First published: