ಸೈನ್ಸ್​ ಫಿಕ್ಷನ್​ ಸಿನಿಮಾದಲ್ಲಿ ಹೃತಿಕ್​ ಜಾಗಕ್ಕೆ ಶಾರುಖ್​ ಖಾನ್​..!

ShahRukhs New Movie: ನಟ ಶಾರುಖ್​ ಖಾನ್​ ಬಾಲಿವುಡ್​ನಲ್ಲಿ ಅಭಿನಯಿಸಿದ ಕೊನೆಯ ಚಿತ್ರ ಝೀರೊ. ಆನಂದ್​ ಎಲ್​ ರಾಯ್​ ಅವರ ಈ ಸಿನಿಮಾ ಬಾಕ್ಸಾಫಿಸ್​ನಲ್ಲಿ ನೆಲ ಕಚ್ಚಿತ್ತು. 

Anitha E | news18
Updated:August 7, 2019, 4:51 PM IST
ಸೈನ್ಸ್​ ಫಿಕ್ಷನ್​ ಸಿನಿಮಾದಲ್ಲಿ ಹೃತಿಕ್​ ಜಾಗಕ್ಕೆ ಶಾರುಖ್​ ಖಾನ್​..!
ನಟ ಶಾರುಖ್​ ಹಾಗೂ ಹೃತಿಕ್​ ರೋಷನ್​
  • News18
  • Last Updated: August 7, 2019, 4:51 PM IST
  • Share this:
ಬಾಲಿವುಡ್​ ಕಿಂಗ್ ಖಾನ್​ ಶಾರುಖ್​ ಅಭಿನಯದ ಕಡೆಯ ಸಿನಿಮಾ 'ಝೋರೊ' ಬಾಕ್ಸಾಫಿಸ್​ನಲ್ಲಿ ಸದ್ದಿಲ್ಲದೆ ಹೋಗಿತ್ತು. ಇದಾದ ನಂತರ ಶಾರುಖ್​ ತಮ್ಮ ಮುಂದಿನ ಸಿನಿಮಾ ಬಗ್ಗೆ ಯಾವುದೇ ಪ್ರಕಟಣೆ ಮಾಡಿಲ್ಲ.

ಆದರೆ ಸದ್ಯ ಬಿ-ಟೌನ್​ ಅಂಗಳದಲ್ಲಿ ಕಿಂಗ್​ ಖಾನ್​ ಅಭಿನಯಿಸಲಿರುವ ಹೊಸ ಚಿತ್ರದ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಹೌದು, ಪಿಂಕ್​ ವಿಲ್ಲ ಮಾಡಿರುವ ವರದಿ ಪ್ರಕಾರ ನಿರ್ದೇಶಕ ಎಸ್​. ಶಂಕರ್​ ಅವರ ಅಂಡರ್​ ವಾಟರ್​ ಸೈನ್ಸ್​ ಫಿಕ್ಷನ್​ ಸಿನಿಮಾದಲ್ಲಿ ಶಾರುಖ್​ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿಯದ್ದೇ ಗದ್ದಲ.

zero
'ಝೀರೊ' ಚಿತ್ರದಲ್ಲಿ ಶಾರುಖ್​ ಹಾಗೂ ಸಲ್ಮಾನ್​


ಈ ಸಿನಿಮಾದಲ್ಲಿ ಹೃತಿಕ್​ ರೋಷನ್​ ಅನ್ನು ತೆಗೆದುಕೊಳ್ಳಲಾಗಿದ್ದು, ಅವರಿಗೆ ಡೇಟ್ಸ್​ ಸಮಸ್ಯೆಯಾಗಿರುವ ಕಾರಣಕ್ಕೆ ಈಗ ಶಾರುಖ್​ ಅವರನ್ನು ಸಂಪರ್ಕಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆಯಂತೆ.

ಇದನ್ನೂ ಓದಿ: ಲಾಸ್​ ಎಂಜಲಿಸ್​ನಲ್ಲಿ ಪ್ರಿಯಾಂಕಾ - ನಿಕ್​ರ ಹೊಸ ಮನೆ: ಬಂಗಲೆಯ ಬೆಲೆ ಕೇಳಿದ್ರೆ ದಂಗಾಗುತ್ತೀರಾ​..!

ಇನ್ನು ಹೃತಿಕ್​ ತಮ್ಮ ಡೇಟ್ಸ್ ಅನ್ನು ಬೇರೆ ಸಿನಿಮಾಗೆ ಕೊಟ್ಟಿದ್ದು, ನಿರ್ದೇಶಕ ಶಂಕರ್​ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇನ್ನು ಶಾರುಖ್​ ಜತೆ ಮಾತುಕತೆ ಇನ್ನು ಆರಂಭಿಕ ಹಂತದಲ್ಲೇ ಇದ್ದು, ಇನ್ನೂ ಯಾವುದೇ ನಿರ್ಧಾರವಾಗಿಲ್ಲವಂತೆ.

ಹೃತಿಕ್​ ರೋಷನ್​  ಫರಾ ಖಾನ್​ ನಿರ್ದೇಶನದ 'ಸತ್ತೆ ಪೆ ಸತ್ತಾ' ಸಿನಿಮಾದ ರಿಮೇಕ್​ನಲ್ಲಿ ಅಭಿನಯಿಸುತ್ತಿದ್ದಾರೆ. ಈ ಕಾರಣದಿಂದ ಈಗ ಅವಕಾಶ ಕಿಂಗ್​ ಖಾನ್​ ಬಾಗಿಲು ತಟ್ಟುತ್ತಿದೆ. ಇನ್ನು ಇದೇ ಮೊದಲ ಬಾರಿಗೆ ಶಾರುಖ್​ ಹಾಗೂ ಶಂಕರ್​ ಜೊತೆಯಾಗಿ ಕೆಲಸ ಮಾಡಲಿದ್ದಾರೆ.​ಇದನ್ನೂ ಓದಿ: Comali Movie: ರಜಿನಿಯನ್ನು ಕೆಣಕಿದ್ರೆ ಕಮಲ್ ತಗೋತಾರೆ ಕ್ಲಾಸ್ : ಕೋಮಾಲಿ ತಂಡಕ್ಕೆ ಬಿಸಿ ಮುಟ್ಟಿಸಿದ ಉಳಗ ನಾಯಕನ್​

ಎಸ್​. ಶಂಕರ್​ ಅವರೇ ತಮಿಳಿನಲ್ಲಿ ನಿರ್ದೇಶಿಸಿದ್ದ 'ಇಂಡಿಯನ್​' ಸಿನಿಮಾದ ಸೀಕ್ವೆಲ್​ 'ಇಂಡಿಯನ್​ 2' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಕಮಲ್​ ಹಾಸನ್​ ಅವರೇ ಅಭಿನಯಿಸುತ್ತಿದ್ದಾರೆ.

Shriya Saran: ಜೋರು ಮಳೆಯಲ್ಲಿ ಬಳ್ಳಿಯಂತಹ ನಡುವನ್ನು ಬಳುಕಿಸಿದ ಶ್ರೇಯಾ...!

First published: August 7, 2019, 4:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading