Bollywood Stars: ಈ ಬಾಲಿವುಡ್ ಸ್ಟಾರ್ಸ್ ಸಖತ್ ಬ್ಯುಸಿನೆಸ್ ಕೂಡಾ ನಡೆಸ್ತಿದ್ದಾರೆ, ಆದಾಯ ಕೋಟಿಗಳಲ್ಲಿದೆ !

ಕೆಲವು ಬಾಲಿವುಡ್ ತಾರೆಯರು ಪ್ರತ್ಯೇಕ ಉದ್ಯಮಗಳನ್ನು ನಡೆಸುತ್ತಿದ್ದು, ಅದರಿಂದ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಅವರಲ್ಲಿ ಕೆಲವರ ಮಾಹಿತಿ ಈ ಕೆಳಗಿದೆ.

ಶಾರೂಖ್​​ ಖಾನ್​-ಅನುಷ್ಕಾ ಶರ್ಮಾ

ಶಾರೂಖ್​​ ಖಾನ್​-ಅನುಷ್ಕಾ ಶರ್ಮಾ

  • Share this:

ಹಲವಾರು ಬಾಲಿವುಡ್ ತಾರೆಗಳಿಗೆ ನಟನೆ ಮೂಲ ಕಸುಬಾದರೆ, ಉದ್ಯಮ ಉಪ ಕಸುಬಾಗಿದೆ! ಹೌದು, ಅದರಿಂದ ಅವರು ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ. ಫ್ಯಾಶನ್ ಲೇಬಲ್ ನಿಂದ ಹಿಡಿದು ರೆಸ್ಟೋರೆಂಟ್ ಉದ್ದಿಮೆಯವರೆಗೆ ಎಲ್ಲದರಲ್ಲೂ ಆ ತಾರೆಯರು ಸೈ ಎನಿಸಿಕೊಂಡಿದ್ದಾರೆ.


ಬಾಲಿವುಡ್ ತಾರೆಯರು ತಮ್ಮ ನಟನಾ ಕೌಶಲದ ಮೂಲಕ ದೇಶ ವಿದೇಶಗಳಲ್ಲಿ ಜನಪ್ರಿಯತೆ ಪಡೆದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಂತ ಅವರು ಕೇವಲ ನಟನೆಯಲ್ಲಷ್ಟೇ ತೊಡಗಿಕೊಂಡಿಲ್ಲ. ಹೌದು, ಕೆಲವು ಬಾಲಿವುಡ್ ತಾರೆಯರು ಪ್ರತ್ಯೇಕ ಉದ್ಯಮಗಳನ್ನು ನಡೆಸುತ್ತಿದ್ದು, ಅದರಿಂದ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಅವರಲ್ಲಿ ಕೆಲವರ ಮಾಹಿತಿ ಈ ಕೆಳಗಿದೆ.


ಶಾರುಖ್​ ಖಾನ್


ಶಾರುಕ್ ಖಾನ್ ಕೇವಲ ಒಬ್ಬ ಪ್ರತಿಭಾವಂತ ನಟ ಮಾತ್ರವಲ್ಲ, ಯಶಸ್ವಿ ಉದ್ಯಮಿ ಕೂಡ. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪ್ರಾಂಚೈಸ್‍ನ ಕೋಲ್ಕತ್ತಾ ನೈಟ್ಸ್ ರೈಡರ್ಸ್ ತಂಡದ ಸಹ ಮಾಲೀಕರಾಗಿದ್ದಾರೆ.2008ರಲ್ಲಿ , ತಮ್ಮ ಜೊತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ತಾರೆ ಜೂಹಿ ಚಾವ್ಲಾ ಅವರೊಂದಿಗೆ ಐಪಿಎಲ್‍ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸ್ಥಾಪಿಸಿದ್ದರು. ಈ ತಂಡ ಐಪಿಎಲ್‍ನ ಅತ್ಯಂತ ಶ್ರೀಮಂತ ತಂಡಗಳಲ್ಲಿ ಒಂದು. ಅವರು ರೆಡ್ ಚಿಲ್ಲೀಸ್ ಎಂಟರ್‍ಟೈನ್‍ಮೆಂಟ್ ಎಂಬ ಸಿನಿಮಾ ನಿರ್ಮಾಣ ಕಂಪೆನಿಯ ಸಹ ಅಧ್ಯಕ್ಷ ಕೂಡ ಹೌದು.


ಇದನ್ನೂ ಓದಿ:Bannerghatta Biological Park: ಅಬ್ಬಬ್ಬಾ..! ಬನ್ನೇರುಘಟ್ಟ ಪಾರ್ಕ್​ನಲ್ಲಿ ಎಷ್ಟೊಂದು ವೆರೈಟಿಯ ಅಪರೂಪದ ಹಾವುಗಳು

ಶಿಲ್ಪಾ ಶೆಟ್ಟಿ


ಶಿಲ್ಪಾ ಶೆಟ್ಟಿ ತಮ್ಮ ಪತಿ ರಾಜ್ ಕುಂದ್ರಾ ಅವರೊಂದಿಗೆ ಹಲವಾರು ಉದ್ದಿಮೆಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು, ಯುರೋಪಿಯನ್ ನವೋದಯ ವಾಸ್ತುಶಿಲ್ಪ ಮತ್ತು ಭಾರತೀಯ ರಾಜವಂಶದಿಂದ ಪ್ರೇರಿತವಾದ ಮುಂಬೈನ “ಮೊನಾರ್ಕಿ ಕ್ಲಬ್”ನ ಪ್ರೊಪ್ರೈಟರ್ ಕೂಡ ಆಗಿದ್ದಾರೆ. ಮುಂಬೈನ ಆಯೋಸಿಸ್ ಸ್ಪಾ ಮತ್ತು ಸಲೋನ್ ಚೇನ್‍ನ ಸಹ ಮಾಲೀಕರಾಗಿದ್ದಾರೆ ಶಿಲ್ಪಾ. ಐಪಿಲ್‍ನ ರಾಯಲ್ ರಾಜಸ್ಥಾನ್ ತಂಡದ ಮಾಲಿಕತ್ವವನ್ನು ಶಿಲ್ಪಾ ಮತ್ತು ಅವರ ಪತಿ ರಾಜ್ ಕುಂದ್ರಾ ಹೊಂದಿದ್ದರು. ಆದರೆ 2018ರಲ್ಲಿ ಆ ತಂಡ ಬೆಟ್ಟಿಂಗ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಸುಪ್ರಿಂ ಕೋರ್ಟ್ ಗಮನಕ್ಕೆ ಬಂದಾಗ, ಅವರು ಆ ತಂಡವನ್ನು ಮಾರಬೇಕಾಗಿ ಬಂತು.


ಅನುಷ್ಕಾ ಶರ್ಮಾ


ಅನುಷ್ಕಾ ಶರ್ಮಾ ಕೆಲವು ವರ್ಷಗಳ ಹಿಂದೆ ನುಶ್ ಎಂಬ ವಸ್ತ್ರ ಬ್ರ್ಯಾಂಡ್ ಅನ್ನು ಆರಂಭಿಸಿದರು. ತಮ್ಮ ಸಹೋದರನ ಜೊತೆ ಸೇರಿ ಅವರು ಹೊಸ ಸಿನಿಮಾ ನಿರ್ಮಾಣ ಕಂಪೆನಿಯೊಂದನ್ನು ಕೂಡ ಆರಂಭಿಸಿದ್ದು, ಅದರಡಿಯಲ್ಲಿ ‘ಎನ್‍ಹೆಚ್10’, ‘ಪಿಲೌರಿ’, ಮತ್ತು ‘ಪರಿ’ ಎಂಬ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವರ ನಿರ್ಮಾಣ ಸಂಸ್ಥೆ ‘ಪಾತಾಳಲೋಕ’ ಎಂಬ ವೆಬ್ ಸರಣಿಯನ್ನು ಕೂಡ ನಿರ್ಮಿಸಿದೆ.


ದೀಪಿಕಾ ಪಡುಕೋಣೆ


ಬಾಲಿವುಡ್‍ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ದೀಪಿಕಾ ಪಡುಕೋಣೆ, ತಮ್ಮ ವಸ್ತ್ರ ಬ್ರಾಂಡ್‍ನಿಂದಲೂ ಹೇರಳ ಆದಾಯ ಗಳಿಸುತ್ತಿದ್ದಾರೆ.ಅವರು ಮಿಂತ್ರಾದ ಸಹಯೋಗದಲ್ಲಿ 2015ರಲ್ಲಿ ಈ ಉದ್ಯಮವನ್ನು ಆರಂಭಿಸಿದರು.2013ರಲ್ಲಿ ದೀಪಿಕಾ ಮತ್ತು ವ್ಯಾನ್ ಹ್ಯೂಸನ್ ಬ್ರ್ಯಾಂಡ್ ಜಂಟಿಯಾಗಿ ಮಹಿಳೆಯರಿಗಾಗಿ ಹೊಸ ಸಂಗ್ರಹವನ್ನು ಪರಿಚಯಿಸಿತ್ತು.


ಇದನ್ನೂ ಓದಿ:Raj Kundra: ರಾಜ್ ಕುಂದ್ರಾ ಮುಂಚೆ ಮಾಡಿದ್ದ ಅಶ್ಲೀಲ ಟ್ವೀಟ್​​ಗಳಿಗೆ ಈಗ ಹೊಸ ಅರ್ಥ !

ಸಲ್ಮಾನ್ ಖಾನ್


ಸಲ್ಮಾನ್ ಖಾನ್ ನಟ ಮಾತ್ರವಲ್ಲ ಯಶಸ್ವಿ ಉದ್ಯಮಿ ಕೂಡ. ಸಿನಿಮಾ ನಿರ್ಮಾಣ, ಸ್ಫರ್ಧಾತ್ಮಕ ಅಥ್ಲೆಟಿಕ್ಸ್, ಜಾಹೀರಾತುಗಳು ಮತ್ತು ಬ್ರಾಂಡೆಡ್ ಬಟ್ಟೆಗಳ ವಾಣಿಜ್ಯ ಉದ್ದಿಮೆಯಲ್ಲಿ ಅವರು ತೊಡಗಿಕೊಂಡಿದ್ದಾರೆ. ಅವರ ಬಟ್ಟೆ ಬ್ರಾಂಡ್ ‘ಬೀಯಿಂಗ ಹ್ಯೂಮನ್’ ದೇಶದಾದ್ಯಂತ ಹಲವು ಶಾಖೆಗಳನ್ನು ಹೊಂದಿದ್ದು ಜನಪ್ರಿಯವಾಗಿದೆ.ಮಂದನಾ ರಿಟೇಲ್ ವೆಂಚರ್ಸ್ ಬೀಯಿಂಗ್ ಹ್ಯೂಮನ್ ಬ್ರಾಂಡ್‍ಗೆ ಪರವಾನಗಿ ನೀಡಿದೆ.


ಪ್ರಿಯಾಂಕಾ ಚೋಪ್ರಾ


ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್‍ನಲ್ಲಿ ಸೋನಾ ಎಂಬ ಭಾರತೀಯ ರೆಸ್ಟೊರೆಂಟ್ ಹೊಂದಿದ್ದಾರೆ. ಅವರು ಅದನ್ನು ‘ಪ್ರೀತಿಯ ಕಾರ್ಮಿಕ’ ಎಂದು ವರ್ಣಿಸಿದ್ದಾರೆ. 2021ರಲ್ಲಿ ಬಾನ್ ವೀವ್ ಎಂಬ ಸ್ಪಾಕ್ರ್ಲಿಂಗ್ ವಾಟರ್ ಬ್ರಾಂಡ್ ಜೊತೆ ಕೈಜೋಡಿಸಿದ್ದಾರೆ.
ಹೃತಿಕ್ ರೋಶನ್
ಹೃತಿಕ್ ರೋಶನ್ ಅವರ ಹೆಚ್‍ಆರ್ ಎಕ್ಸ್ ಬ್ರಾಂಡ್, ಮಿಂತ್ರಾ ಆನ್‍ಲೈನ್ ಪೋರ್ಟಲ್‍ನಲ್ಲಿ ಈ ವರೆಗೆ ಭರ್ಜರಿ ಮಾರಾಟ ಕಂಡಿದೆ. 2013ರಲ್ಲಿ ಆರಂಭವಾದ ಅವರ ಈ ಬ್ರಾಂಡ್ ಆನ್‍ಲೈನ್‍ನಲ್ಲಿ ಮಾತ್ರವಲ್ಲ ಹೊರಗೂ ಲಭ್ಯವಿದೆ. ಅವರು ಮುಂಬೈನ ಸೆಂಟರ್ ಕಲ್ಟ್ ಎಂಬ ಹೆಸರಿನ ಜಿಮ್‍ಗೆ ಮಾಲೀಕರು ಕೂಡ.ಬೆಂಗಳೂರು ಮೂಲದ ಫಿಟ್‍ನೆಟಸ್ ಜಿಮ್ ಕ್ಯುರೇಫಿಯಲ್ಲೂ ಅವರು ಸಮಾನ ಪಾಲುದಾರದಾಗಿದ್ದಾರೆ.

Published by:Latha CG
First published: