ಶಾರುಖ್ ನಡವಳಿಕೆಗೆ ಫಿದಾ ಆದ ಫ್ಯಾನ್ಸ್​; ಪೊಲೀಸರೊಂದಿಗೆ ಕಿಂಗ್​ ಖಾನ್​ ವರ್ತಿಸಿದ ವಿಡಿಯೋ ವೈರಲ್​

Shah Rukh Khan,: ಇಂತಹ ಒಂದು ವಿನಯತೆಯನ್ನು ಶಾರುಖ್ ಹೊಂದಿರುವುದರಿಂದಲೇ ಬಾಲಿವುಡ್​​ನಲ್ಲಿ ಮತ್ತು ಪ್ರಪಂಚದಾದ್ಯಂತ ಅಭಿಮಾನಿಗಳ ಹೃದಯದಲ್ಲಿ ಇವತ್ತಿಗೂ ತನ್ನ ಛಾಪನ್ನು ಅಳಿಸದಂತೆ ಮೂಡಿಸಿದ್ದಾರೆ. ಅಂತರ್ಜಾಲದಲ್ಲಿ ಹಿರಿಯ ನಟ ದಿಲೀಪ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದ ಸಂದೇಶಗಳು ಹರಿದಾಡುತ್ತಿದ್ದು, ಶಾರುಖ್ ಈ ಒಂದು ವಿಡಿಯೋ ಅನೇಕ ಅಭಿಮಾನಿಗಳಲ್ಲಿ ಒಂದು ಕಿರುನಗೆಯನ್ನು ತಂದಿದೆ ಎಂದರೆ ತಪ್ಪಾಗಲಾರದು.

ಶಾರುಖ್ ಖಾನ್

ಶಾರುಖ್ ಖಾನ್

  • Share this:
ಬಾಲಿವುಡ್ ಬಾದ್ಶಾ ಎಂದೇ ಖ್ಯಾತಿ ಪಡೆದ ಶಾರುಖ್ ಖಾನ್ ಇತ್ತೀಚೆಗೆ ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ಅವರು ತೀರಿಕೊಂಡಾಗ ಬಾಂದ್ರಾ ವೆಸ್ಟ್​​ನಲ್ಲಿರುವಂತಹ ಮನೆಗೆ ಹೋಗಿ ಕುಟುಂಬದ ಸದಸ್ಯರನ್ನು ಸಮಾಧಾನ ಪಡಿಸಿ ಬಂದಿದ್ದರು. ಆದರೆ ದಿಲೀಪ್ ಕುಮಾರ್ ಅವರ ಮನೆಗೆ ಹೋಗುವ ಮುನ್ನ ಅಲ್ಲೇ ಗೇಟ್ ಹತ್ತಿರ ನಿಂತಂತಹ ಪೊಲೀಸನ್ನು ಕಿಂಗ್ ಖಾನ್ ನಮಸ್ಕರಿಸಿ ಒಳಗೆ ಹೋಗಿರುವಂತಹ ಒಂದು ಸನ್ನಿವೇಶದ ವಿಡಿಯೋ ತುಣುಕಿಗೆ ಈಗ ಶಾರುಖ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.


ಇಂತಹ ಒಂದು ವಿನಯತೆಯನ್ನು ಶಾರುಖ್ ಹೊಂದಿರುವುದರಿಂದಲೇ ಬಾಲಿವುಡ್​​ನಲ್ಲಿ ಮತ್ತು ಪ್ರಪಂಚದಾದ್ಯಂತ ಅಭಿಮಾನಿಗಳ ಹೃದಯದಲ್ಲಿ ಇವತ್ತಿಗೂ ತನ್ನ ಛಾಪನ್ನು ಅಳಿಸದಂತೆ ಮೂಡಿಸಿದ್ದಾರೆ. ಅಂತರ್ಜಾಲದಲ್ಲಿ ಹಿರಿಯ ನಟ ದಿಲೀಪ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದ ಸಂದೇಶಗಳು ಹರಿದಾಡುತ್ತಿದ್ದು, ಶಾರುಖ್ ಈ ಒಂದು ವಿಡಿಯೋ ಅನೇಕ ಅಭಿಮಾನಿಗಳಲ್ಲಿ ಒಂದು ಕಿರುನಗೆಯನ್ನು ತಂದಿದೆ ಎಂದರೆ ತಪ್ಪಾಗಲಾರದು.


ಟ್ವಿಟ್ಟರ್​​​​ನಲ್ಲಿ ಫಿಲಂಫೇರ್ ಶೇರ್ ಮಾಡಿದ ವಿಡಿಯೋದಲ್ಲಿ ಕಿಂಗ್ ಖಾನ್ ತಮ್ಮ ಕಾರಿನಿಂದ ಇಳಿದು ಸರಸರನೇ ದಿಲೀಪ್ ಕುಮಾರ್ ಅವರ ಮನೆಯೊಳಗೆ ಹೋಗುವ ಮುಂಚೆ ಅಲ್ಲೇ ಗೇಟ್ ಹತ್ತಿರ ನಿಂತಿದ್ದಂತಹ ಪೊಲೀಸ್​​ಗೆ ನಮಸ್ಕಾರ ಮಾಡಿ ಗೌರವ ಸೂಚಿಸಿ ಒಳಗೆ ಹೋಗಿದ್ದಾರೆ.
ಶಾರುಖ್ ಖಾನ್
ಈ ವಿಡಿಯೋದಲ್ಲಿ 0:21 ಸಮಯಕ್ಕೆ ಶಾರುಖ್ ಪೊಲೀಸನಿಗೆ ನಮಸ್ಕರಿಸಿ ಒಳಗೆ ಹೋಗಿರುವಂತಹ ತುಣುಕನ್ನು ನೋಡಿದ್ದೇವೆ. ಅಂತಹ ಉತ್ತಮ ನಡುವಳಿಕೆಯನ್ನು ಹೊಂದಿರುವ ಶಾರುಖ್ ಇಷ್ಟು ವರ್ಷಗಳ ನಂತರವೂ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದು ವಿಡಿಯೋಗೆ ಪ್ರತಿಕ್ರಿಯಿಸಿ ಅಭಿಮಾನಿಯೊಬ್ಬರು ತಮ್ಮ ಟ್ವಿಟ್ಟರ್ ಅಕೌಂಟ್​​ನಲ್ಲಿ ಬರೆದಿದ್ದಾರೆ.


ಎಷ್ಟೋ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಶಾರುಖ್ ನಡವಳಿಕೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಅಭಿಮಾನಿಯೂ ಸಹ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು "ಪೊಲೀಸ್ ಶಾರುಖ್​​ರನ್ನು ನೋಡಿ ನಮಸ್ಕರಿಸಿದಾಗ ತಕ್ಷಣವೇ ಶಾರುಖ್ ಸಹ ನಿಂತು ಅವರಿಗೆ ನಮಸ್ಕರಿಸಿದ್ದು ನಿಜಕ್ಕೂ ತುಂಬಾ ಒಳ್ಳೆ ನಡುವಳಿಕೆ" ಎಂದು ಬರೆದಿದ್ದಾರೆ.

ಹಿರಿಯ ನಟ ದಿಲೀಪ್ ಕುಮಾರ್ ತೀರಿಕೊಂಡಾಗ ಶಾರುಖ್ ಅವರ ಮನೆಗೆ ಹೋಗಿ ಸಾಯಿರಾ ಭಾನು ಮತ್ತು ಅವರ ಕುಟುಂಬದವರನ್ನು ಸಮಾಧಾನ ಪಡಿಸಿ ಬಂದಿದ್ದರು. ಕೇತನ್ ಮೆಹತಾ ಅವರ ಕಚೇರಿಯಲ್ಲಿ ಒಮ್ಮೆ ದಿಲೀಪ್ ಕುಮಾರ್ ಅವರ ಭಾವಚಿತ್ರವಿದ್ದು, ಅದನ್ನು ನೋಡಿದ ನಂತರ ನಾನು ಅವರಂತೆಯೇ ಕಾಣುತ್ತೇನೆ ಅಥವಾ ಅವರು ನನ್ನಂತೆಯೇ ಕಾಣುತ್ತಾರೆ ನೋಡಲು ಎಂದು ಶಾರುಖ್ ತಾವು ಫಿಲಂಫೇರ್​​ಗೆ ನೀಡಿದ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅವರ ತಾಯಿಯು ಸಹ ದಿಲೀಪ್ ಕುಮಾರ್ ಅವರನ್ನು ತುಂಬಾ ಇಷ್ಟ ಪಡುತ್ತಿದ್ದರು ಎಂದು ಕಿಂಗ್ ಖಾನ್ ಹೇಳಿದ್ದರು. ದಿಲೀಪ್ ಕುಮಾರ್ ಮತ್ತು ಸಾಯಿರಾ ಭಾನು ದಂಪತಿಗಳಿಬ್ಬರು ನನ್ನನ್ನು ತಮ್ಮ ಸ್ವಂತ ಮಗನಂತೆಯೇ ಭಾವಿಸುತ್ತಿದ್ದರು ಎಂದು ಶಾರುಖ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.


First published: