• Home
  • »
  • News
  • »
  • entertainment
  • »
  • Pathaan: ಶಾರುಖ್​ ಖಾನ್​ ತನ್ನ ಮಗಳ ಜೊತೆ ಪಠಾಣ್​ ಸಿನಿಮಾ ನೋಡಲಿ; ಮಧ್ಯಪ್ರದೇಶ ಸ್ಪೀಕರ್​ ಚಾಲೆಂಜ್​!

Pathaan: ಶಾರುಖ್​ ಖಾನ್​ ತನ್ನ ಮಗಳ ಜೊತೆ ಪಠಾಣ್​ ಸಿನಿಮಾ ನೋಡಲಿ; ಮಧ್ಯಪ್ರದೇಶ ಸ್ಪೀಕರ್​ ಚಾಲೆಂಜ್​!

ಶಾರುಖ್​ ಖಾನ್​, ಸ್ಪೀಕರ್ ಗಿರೀಶ್ ಗೌತಮ್

ಶಾರುಖ್​ ಖಾನ್​, ಸ್ಪೀಕರ್ ಗಿರೀಶ್ ಗೌತಮ್

ಸ್ಪೀಕರ್ ಗಿರೀಶ್ ಗೌತಮ್ ಸಿನಿಮಾ ವಿರುದ್ಧವಾಗಿ ಮಾತನಾಡಿದ್ದಾರೆ. ಪಠಾಣ್​ ಚಿತ್ರದಲ್ಲಿ ಯಾವುದೇ ಕೆಟ್ಟ ಸೀನ್​ ಇಲ್ಲವಾದ್ರೆ, ಶಾರುಖ್ ಈ ಚಿತ್ರವನ್ನು ತನ್ನ ಮಗಳೊಂದಿಗೆ ನೋಡಲಿ ಎಂದಿದ್ದಾರೆ.

  • Share this:

ಶಾರುಖ್ ಖಾನ್ (Shah Rukh Khan) ಹಾಗೂ ದೀಪಿಕಾ ಪಡುಕೋಣೆ (Deepika padukone) ಅಭಿನಯದ ಬಹುನಿರೀಕ್ಷಿತ ಚಿತ್ರ ಪಠಾಣ್ (Pathaan) ಸಿನಿಮಾ ರಿಲೀಸ್​ಗೂ ಮುನ್ನವೇ ಭಾರೀ ವಿವಾದ ಸೃಷ್ಟಿಸಿದೆ. ಪಠಾಣ್​ ಚಿತ್ರಕ್ಕೆ ದೇಶದ ಹಲವೆಡೆ ಬಾಯ್ಕಾಟ್​ ಬಿಸಿ ತಟ್ಟಿದೆ. ಇದೀಗ ಪಠಾಣ್ ಚಿತ್ರದ ಬಗ್ಗೆ ಮಧ್ಯಪ್ರದೇಶದ (Madhya Pradesh) ವಿಧಾನಸಭೆಯ ಸ್ಪೀಕರ್ ಗಿರೀಶ್ ಗೌತಮ್ (Girish Gautam) ಸಿನಿಮಾ ಬಗ್ಗೆ ಮಾತಾಡಿದ್ದು, ಈ ಚಿತ್ರದಲ್ಲಿ ಯಾವುದೇ ಅಶ್ಲೀಲತೆ ಇಲ್ಲದಿದ್ರೆ ಶಾರೂಖ್​ ಅವರ ಮಗಳ ಜೊತೆ ಕೂತು ಚಿತ್ರ ನೋಡಲಿ ಎಂದು ಸವಾಲ್​ ಹಾಕಿದ್ದಾರೆ. 


ಸ್ಪೀಕರ್ ಗಿರೀಶ್ ಗೌತಮ್ ಸಿನಿಮಾ ವಿರುದ್ಧವಾಗಿ ಮಾತನಾಡಿದ್ದಾರೆ. ಪಠಾಣ್​ ಚಿತ್ರದಲ್ಲಿ ಯಾವುದೇ ಕೆಟ್ಟ ಸೀನ್​ ಇಲ್ಲವಾದ್ರೆ, ಶಾರುಖ್ ಈ ಚಿತ್ರವನ್ನು ತನ್ನ ಮಗಳೊಂದಿಗೆ ನೋಡಲಿ. ಬಳಿಕ ತಾನು ಮಗಳೊಂದಿಗೆ ಚಿತ್ರ ನೋಡಿದೆ ಎಂದು ಫೋಟೋ ಅಪ್​ ಲೋಡ್​ ಮಾಡ್ಬೇಕು ಎಂದು ಸ್ಪೀಕರ್ ಚಾಲೆಂಜ್​ ಹಾಕಿದ್ದಾರೆ.




ಸಿನಿಮಾ ಬಗ್ಗೆ ಸ್ಪೀಕರ್ ಗಿರೀಶ್ ಗೌತಮ್ ಕಿಡಿ


ನಿಮಗೆ ಅನಿಸಿದ್ದನ್ನು ನೀವು ಮಾಡುತ್ತೀರಾ. ಪ್ರವಾದಿ ಮುಹಮ್ಮದ್ ಅವರ ಕುರಿತು ಅಂತಹ ಒಂದು ಚಲನಚಿತ್ರವನ್ನು ಮಾಡಿ, ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬಿಡುಗಡೆ ಮಾಡಿ. ಪ್ರಪಂಚದಾದ್ಯಂತ ರಕ್ತಪಾತವಾಗುತ್ತದೆ ಮಾಡ್ತಾರೆ ಎಂದು ಸ್ಪೀಕರ್ ಗಿರೀಶ್ ಗೌತಮ್ ಹೇಳಿದ್ದಾರೆ.


ಥಿಯೇಟರ್‌ಗಳಲ್ಲಿ “ಪಠಾಣ್ ಅನ್ನು ನಿಷೇಧಿಸುವ ಬೇಡಿಕೆಗಳ ಹೆಚ್ಚಾಗಿದೆ. ಈ ವಿಚಾರವನ್ನು ಆಡಳಿತಾರೂಢ ಬಿಜೆಪಿಯು ವಿಧಾನಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ. ಗಿರೀಶ್ ಗೌತಮ್, ಯಾವುದೇ ಸಮುದಾಯವನ್ನು ಸ್ಪಷ್ಟವಾಗಿ ಹೆಸರಿಸದೆ, “ಸನಾತನಿಗಳು” (ಹಿಂದೂಗಳು) ಜೊತೆಗೆ ಹಲವು ಸಂಗತಿಗಳನ್ನು ಹೋಲಿಕೆ ಮಾಡಿದ್ದಾರೆ.


ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದಲ್ಲಿ ಕೇಸರಿ ಬಿಕಿನಿ ಹಾಕಿದ್ದ ವಿವಾದವು ಇದೀಗ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಈ ಹಿಂದೆ ಕೇವಲ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಾಯ್ಕಾಟ್ ಮಾತುಗಳನ್ನು ಆಡಿದ್ದರು. ಇದೀಗ ನೇರವಾಗಿ ರಾಜಕೀಯ ವ್ಯಕ್ತಿಗಳೇ ಅಖಾಡಕ್ಕೆ ಇಳಿದು ಪರ ವಿರೋಧದ ಮಾತುಗಳನ್ನು ಆಡುತ್ತಿದ್ದಾರೆ. ಅದರಲ್ಲೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಈ ಹಿಂದಿನ ವಿಡಿಯೋವೊಂದನ್ನು ಪೋಸ್ಟ್ ಮಾಡುವ ಮೂಲಕ ವಿವಾದದಲ್ಲಿ ಸುಖಾಸುಮ್ಮನೆ ಸಚಿವೆಯನ್ನು ಎಳೆತಂದಿದ್ದಾರೆ.


ಬಿಜೆಪಿ ಕಾರ್ಯಕರ್ತರ ಭಾರೀ ವಿರೋಧ


ಮಧ್ಯಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ಎಚ್ಚರಿಕೆ ನಂತರ ಈಗ ಉತ್ತರ ಪ್ರದೇಶದ ಬಿಜೆಪಿ ಕಾರ್ಯಕರ್ತರು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಈ 'ಪಠಾಣ್' ಚಿತ್ರ 'ಸನಾತನ ಸಂಸ್ಕೃತಿ'ಯನ್ನು ಅವಮಾನಿಸಿದೆ ಎಂದು ಆರೋಪಿಸಿ ಸಿನಿಮಾ ಬಹಿಷ್ಕರಿಸುವಂತೆ ಒತ್ತಾಯಿಸುತ್ತಿದ್ದಾರೆ.


ಇದನ್ನೂ ಓದಿ: Deepika Padukone: ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ತೊಟ್ಟ ಬಿಕಿನಿ ಬೆಲೆ ಎಷ್ಟು? ಕೇಳಿದ್ರೆ ನೀವೂ ಕೂಡ ಶಾಕ್ ಆಗ್ತೀರಾ!


ಸಿನಿಮಾ ಬ್ಯಾನ್​ಗೆ ಹೆಚ್ಚಿದ ಒತ್ತಡ


ಬಿಜೆಪಿ ಮುಖಂಡ ರಾಜೇಶ್ ಕೇಸರವಾಣಿ ಮಾತನಾಡಿ, ಸಿನಿಮಾದ ಬೇಷರಂ ಹಾಡಿನಲ್ಲಿ ಕೇಸರಿ ಬಣ್ಣವನ್ನು ಅಸಭ್ಯವಾಗಿ ತೋರಿಸಲಾಗಿದ್ದು, ಹಿಂದೂ ಸಮಾಜ ಮತ್ತು ಸನಾತನ ಸಂಸ್ಕೃತಿಗೆ ಅವಮಾನವಾಗಿದೆ. ಹೀಗಾಗಿ ನಾವು ಕಳವಳ ವ್ಯಕ್ತಪಡಿಸಿದ್ದೇವೆ. ರಾಜ್ಯ ಸರ್ಕಾರವು ಉತ್ತರ ಪ್ರದೇಶದಲ್ಲಿ ಚಲನಚಿತ್ರವನ್ನು ನಿಷೇಧಿಸಬೇಕು ಮತ್ತು ನಿರ್ಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶದ ಕೆಲ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.


ಬಿಜೆಪಿಯ ಹಲವು ಮುಖಂಡರು ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಿಕಿನಿ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದರು. ಶಾರುಖ್ ಖಾನ್ ಮತ್ತು ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Published by:ಪಾವನ ಎಚ್ ಎಸ್
First published: