Shah Rukh Khan: ಶಾರುಖ್ ಅಭಿಮಾನಿಗಳಿಗೆ ಸಿಗ್ತು ಭರ್ಜರಿ ಗಿಫ್ಟ್, ಕನ್ನಡ ಕಡೆಗಣಿಸಿದ ಕಿಂಗ್​ ಖಾನ್

ಶಾರುಖ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 30 ವರ್ಷ ಆದ ಹಿನ್ನಲೆ ಅವರ ಮುಂದಿನ ಚಿತ್ರವಾದ ‘ಪಠಾಣ್‘ ಸಿನಿಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ.

ಪಠಾಣ್ ಪೋಸ್ಟರ್

ಪಠಾಣ್ ಪೋಸ್ಟರ್

  • Share this:
'ಬಾಲಿವುಡ್‌ನ (Bollywood) ಬಾದ್‌ಶಾ' ಎಂದು ಕರೆಯಲ್ಪಡುವ ಶಾರುಖ್ ಖಾನ್ (Shah Rukh Khan). ಇಂದು ಅವರು ಭಾರತೀಯ ಸಿನಿಮಾ ಜರ್ನಿಯಲ್ಲಿ 30 ವರ್ಷಗಳ ಸುದೀರ್ಘ ಪಯಣವನ್ನು ಮುಗಿಸಿದ್ದಾರೆ. ಶಾರುಖ್ ಖಾನ್ ಅವರ ಮೊದಲ ಚಿತ್ರ 'ದೀವಾನಾ' 25 ಜೂನ್ 1992 ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ರಿಷಿ ಕಪೂರ್ ಮುಖ್ಯ ನಾಯಕನಾಗಿದ್ದರೂ, ಹೆಚ್ಚು ಚರ್ಚಿಸಲ್ಪಟ್ಟ ಚೊಚ್ಚಲ ನಟ ಶಾರುಖ್ ಖಾನ್. ಮೊದಲ ಚಿತ್ರದಲ್ಲೇ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದರು. ಇದಾದ ಬಳಿಕ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಕೊಟ್ಯಾಂತರ ಅಭಿಮಾನಿಗಳನ್ನು ಪಡೆದರು. ಅವರು ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 30 ವರ್ಷ ಆದ ಹಿನ್ನಲೆ ಅವರ ಮುಂದಿನ ಚಿತ್ರವಾದ ‘ಪಠಾಣ್‘ (Pathaan) ಸಿನಿಮಾದ ಪೋಸ್ಟರ್ (Poster) ಒಂದನ್ನು ಬಿಡುಗಡೆ ಮಾಡಿದ್ದಾರೆ.

ಪಠಾಣ್ ಚಿತ್ರದ ಪೋಸ್ಟರ್ ಹಂಚಿಕೊಂಡ ಶಾರುಖ್:

ಹೌದು, ಶಾರುಖ್ ಖಾನ್ ಬಾಲಿವುಡ್ ಚಿತ್ರರಂಗದಲ್ಲಿ 30 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ನೀಡಿದ್ದಾರೆ. ಅವರು ತಮ್ಮ ಮುಂಬರುವ ಚಿತ್ರ 'ಪಠಾಣ್' ಚಿತ್ರದ ಹೊಸ ಪೋಸ್ಟರ್​ನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಶಾರುಖ್ ಶಾರುಖ್ ಶರ್ಟ್ ಮತ್ತು ಜೀನ್ಸ್ ಧರಿಸಿದ್ದಾರೆ. ಒಂದು ಕೈಯಲ್ಲಿ ಬಂದೂಕು ಹಿಡಿದಿರುವ ಅವರ ಉದ್ದನೆಯ ಕೂದಲು ಗಮನ ಸೆಳೆಯುತ್ತಿದೆ.

ಇದಲ್ಲದೇ ವಿಡಿಯೋವಂದನ್ನು ಸಹ ಹಂಚಿಕೊಂಡಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಿಸಿದ್ದಾರೆ. ಈ ವೇಳೆ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿರುವ ಅವರು, ‘30 ವರ್ಷಗಳು ಹೆಚ್ಚು. ಏಕೆಂದರೆ ನಿಮ್ಮ ಪ್ರೀತಿ ಮತ್ತು ನಗು ಅಪರಿಮಿತವಾಗಿದೆ. ಇಲ್ಲಿಯೂ 'ಪಠಾಣ್' ಮುಂದುವರೆಯುತ್ತದೆ. ಜನವರಿ 25, 2023 ರಂದು YRF 50 ಜೊತೆಗೆ ಪಠಾಣ್ ಅನ್ನು ಆಚರಿಸಿ. ಚಿತ್ರವು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಈ ವರ್ಷ ಯಶ್ ರಾಜ್ ಫಿಲ್ಮ್ಸ್ 50 ವರ್ಷಗಳನ್ನು ಪೂರೈಸಲಿದೆ‘ ಎಂದು ಬರೆದುಕೊಂಡಿದ್ದಾರೆ.

'ಪಠಾಣ್' ಚಿತ್ರದಲ್ಲಿ ಸಲ್ಮಾನ್ ಖಾನ್:

ಹೌದು, ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಅವರ ಈ ವಿಡಿಯೋವನ್ನು ಶಾರುಖ್ ಖಾನ್ ಕೂಡ ಟ್ಯಾಗ್ ಮಾಡಿದ್ದಾರೆ. ಸಿದ್ಧಾರ್ಥ್ ಆನಂದ್ 'ಪಠಾಣ್' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಸಲ್ಮಾನ್ ಖಾನ್ ಅವರ ವಿಶೇಷ ಅತಿಥಿ ಪಾತ್ರವನ್ನು ಸಹ ಹೊಂದಿದೆ ಎಂದು ವರದಿಯಾಗಿದೆ. ಅದೇ ರೀತಿ ಸಲ್ಮಾನ್ ಅಭಿನಯದ ಟೈಗರ್ 3 ಚಿತ್ರದಲ್ಲಿ ಶಾರುಖ್ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳೂ ಇವೆ.

ಇದನ್ನೂ ಓದಿ: Shah Rukh Khan: ಬಾದ್​ಶಾ ಬಾಲಿವುಡ್​ಗೆ ಕಾಲಿಟ್ಟು 30 ವರ್ಷ, ಹೇಗಿದೆ ನೋಡಿ ಕಿಂಗ್​ ಖಾನ್ ಸಿನಿ ಜರ್ನಿ

ಕನ್ನಡ ಕಡೆಗಣಿಸಿದ ಶಾರೂಖ್:

ಹೌದು, ಪಠಾಣ್ ಚಿತ್ರವನ್ನು ಕೇವಲ ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಶಾರುಖ್ ಖಾನ್ ತಿಳಿಸಿದ್ದಾರೆ. ಇದು ಕನ್ನಡಿಗರಿಗೆ ಬೇಸರ ತರಿಸಿದೆ. ಇಷ್ಟು ದೊಡ್ಡ ಮಟ್ಟದ ಮಾರ್ಎಟ್ ಇದ್ದರೂ ಸಹ ಏಕೆ ಕನ್ನಡದಲ್ಲಿ ಬಿಡುಗಡೆ ಮಾಡುತ್ತಿಲ್ಲ ಎಂದು ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಟ್ವಿಟರ್​ ನಲ್ಲಿ  #NoKannadaNoBusiness ಎಂಬ ಹ್ಯಾಷ್​ಟ್ಯಾಗ್ ಟ್ರೆಂಡ್​ ಆಗುತ್ತಿದೆ.
Published by:shrikrishna bhat
First published: