• Home
 • »
 • News
 • »
 • entertainment
 • »
 • Shah Rukh Khan: ಪಠಾಣ್​ ಚಿತ್ರ ಬಿಡುಗಡೆಯಾದ ನಂತರ ಶಾರುಖ್ ಏನ್ ಮಾಡ್ತಾರೆ? ಬಾಲಿವುಡ್ ಬಾದ್ ಷಾ ಹೇಳಿದ್ದೇನು?

Shah Rukh Khan: ಪಠಾಣ್​ ಚಿತ್ರ ಬಿಡುಗಡೆಯಾದ ನಂತರ ಶಾರುಖ್ ಏನ್ ಮಾಡ್ತಾರೆ? ಬಾಲಿವುಡ್ ಬಾದ್ ಷಾ ಹೇಳಿದ್ದೇನು?

ನಟ ಶಾರುಖ್​ ಖಾನ್​ ಫ್ಯಾಮಿಲಿ

ನಟ ಶಾರುಖ್​ ಖಾನ್​ ಫ್ಯಾಮಿಲಿ

ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಶಾರುಖ್ ಖಾನ್ ಅವರು "ನಾನು ನಾಳೆ ನನ್ನ ಮಕ್ಕಳೊಂದಿಗೆ ಕುಳಿತುಕೊಂಡು ಸಮಯ ಕಳೆಯುತ್ತೇನೆ" ಅಂತ ಹೇಳಿದ್ದಾರೆ.

 • News18 Kannada
 • 2-MIN READ
 • Last Updated :
 • Karnataka, India
 • Share this:

ಪ್ರತಿಯೊಬ್ಬ ಶಾರುಖ್ ಖಾನ್ (Shah Rukh Khan) ಅಭಿಮಾನಿ ಕಾಯುತ್ತಿದ್ದ ಕ್ಷಣ ಇದೀಗ ಬಂದಾಗಿದೆ ಅಂತ ಹೇಳಬಹುದು. ಏಕೆಂದರೆ ನಾಳೆ, ಜನವರಿ 25 ರಂದು, ಕಿಂಗ್ ಖಾನ್ ನಾಲ್ಕು ವರ್ಷಗಳ ನಂತರ ಪಠಾಣ್ (Pathaan) ಚಿತ್ರದ ಮೂಲಕ ದೊಡ್ಡ ಪರದೆಗೆ ಮತ್ತೊಮ್ಮೆ ಮರಳುತ್ತಿರುವುದನ್ನು ನೋಡಲು ಅವರ ಅಭಿಮಾನಿಗಳು (Fans) ತುಂಬಾನೇ ಕಾತುರತೆಯಿಂದ ಕಾಯುತ್ತಿದ್ದಾರೆ ಅಂತ ಹೇಳಬಹುದು.


ನಟ ಶಾರುಖ್​ ಖಾನ್​ ಫ್ಯಾಮಿಲಿ


ಮುಂಗಡವಾಗಿ ಟಿಕೆಟ್ ಗಳನ್ನು ಬುಕಿಂಗ್ ಮಾಡುವಲ್ಲಿ ಚಲನಚಿತ್ರ ಪ್ರೇಕ್ಷಕರ ಉತ್ಸಾಹಭರಿತ ಪ್ರತಿಕ್ರಿಯೆಯನ್ನು ಗಮನಿಸಿದರೆ, ಶಾರುಖ್ ಖಾನ್ ಅಭಿನಯದ "ಪಠಾನ್" ಬಾಕ್ಸ್ ಆಫೀಸ್ ನಲ್ಲಿ 45 ರಿಂದ 50 ಕೋಟಿ ರೂಪಾಯಿಗಳ ನಡುವೆ ಗಳಿಕೆಯಂತೂ ಗ್ಯಾರೆಂಟಿ ಮಾಡುತ್ತದೆ ಅಂತ ಚಿತ್ರೋದ್ಯಮದಲ್ಲಿರುವ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


4 ವರ್ಷಗಳ ನಂತರ ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಾರುಖ್


2018 ರಲ್ಲಿ ಬಿಡುಗಡೆಯಾದ ಝೀರೋ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಶಾರುಖ್, ಇದೀಗ 4 ವರ್ಷಗಳ ನಂತರ ಮತ್ತೊಮ್ಮೆ ದೊಡ್ಡ ಪರದೆಗೆ ಮರಳುತ್ತಿದ್ದಾರೆ.


ಯಶ್ ರಾಜ್ ಫಿಲ್ಮ್ಸ್ ನ ಈ ಚಿತ್ರವು ಗಣರಾಜ್ಯೋತ್ಸವಕ್ಕೆ ಒಂದು ದಿನ ಮುಂಚಿತವಾಗಿ ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ, ಇದು ಹಿಂದಿ ಚಿತ್ರಕ್ಕೆ ಐದು ದಿನಗಳ ವಿಸ್ತೃತ ಆರಂಭಿಕ ವಾರಾಂತ್ಯವನ್ನು ನೀಡುತ್ತದೆ.


ಶಾರುಖ್ ಅಭಿನಯದ ಈ ಚಿತ್ರವು ಭಾರತದಾದ್ಯಂತ 5,000 ಪರದೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.


ಯಾರೆಲ್ಲಾ ಇದ್ದಾರೆ ಈ ಪಠಾನ್ ಚಿತ್ರದಲ್ಲಿ ಗೊತ್ತೇ?


ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ಮತ್ತೊಬ್ಬ ನಟ ಜಾನ್ ಅಬ್ರಹಾಂ ಸಹ ಪ್ರಮುಖ ಪಾತ್ರಗಳಲ್ಲಿದ್ದಾರೆ.


ಇಡೀ ಎಸ್ ಆರ್ ಕೆ ಅಭಿಮಾನಿ ಬಳಗಕ್ಕೆ ಅವರು ನಾಳೆ ಏನು ಮಾಡುತ್ತಿದ್ದಾರೆಂದು ತಿಳಿದಿದ್ದರೂ, ಆ ವ್ಯಕ್ತಿಯು ಸ್ವತಃ ಯಾವ ಯೋಜನೆಗಳನ್ನು ಹೊಂದಿದ್ದಾರೇ ಅಂತ ತಿಳಿದುಕೊಳ್ಳಬೇಕು ಅನ್ನೋ ಕುತೂಹಲ ಇದ್ದೇ ಇರುತ್ತದೆ. ಹೌದು.. ನಟ ಶಾರುಖ್ ಇತ್ತೀಚೆಗೆ ನಡೆದ #ASKSRK ಚಾಟ್ ನಲ್ಲಿ ಅನೇಕ ಮಂದಿಯ ಪ್ರಶ್ನೆಗಳಿಗೆ ಉತ್ತರಿಸಿದರು.


ಈ ಸಂದರ್ಭದಲ್ಲಿ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಶಾರುಖ್ ಅವರನ್ನು ಕುರಿತು "ಶಾರುಖ್ ಅವರೇ ನಾಳೆ ನಿಮ್ಮ ಚಲನಚಿತ್ರ ಬಿಡುಗಡೆ ಆಗುತ್ತದೆ, ನೀವು ಅದನ್ನು ನೋಡುತ್ತೀರೊ ಅಥವಾ ಬಾಕ್ಸ್ ಆಫೀಸ್ ನಲ್ಲಿ ನಿಮ್ಮ ಚಿತ್ರ ಎಷ್ಟು ಗಳಿಕೆ ಮಾಡುತ್ತಿದೆ ಅಂತ ನೋಡುತ್ತೀರೊ" ಅಂತ ಕೇಳಿದರು.


ಅಭಿಮಾನಿ ಕೇಳಿದ ಪ್ರಶ್ನೆಗೆ ಶಾರುಖ್ ಏನಂತ ಉತ್ತರಿಸಿದರು ನೋಡಿ..


ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಶಾರುಖ್ ಖಾನ್ ಅವರು "ನಾನು ನಾಳೆ ನನ್ನ ಮಕ್ಕಳೊಂದಿಗೆ ಕುಳಿತುಕೊಂಡು ಸಮಯ ಕಳೆಯುತ್ತೇನೆ" ಅಂತ ವಿನಮ್ರವಾಗಿ ಹೇಳಿದರು.


ಶಾರುಖ್ ಖಾನ್ ಅವರು ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಖಾನ್ ಎಂಬ ಮೂವರು ಮಕ್ಕಳ ತಂದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.


2018 ರಲ್ಲಿ ತೆರೆಕಂಡ 'ಝೀರೋ' ಚಿತ್ರದ ನಂತರ ಎಸ್ ಆರ್ ಕೆ ಅವರ ಮೊದಲ ಚಿತ್ರ ಇದಾಗಿದ್ದು, ಈ ಹಿಂದೆ ಅವರು ಲಾಲ್ ಸಿಂಗ್ ಚಡ್ಡಾ ಮತ್ತು ಬ್ರಹ್ಮಾಸ್ತ್ರ ಎಂಬ ಚಲನ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


ಏತನ್ಮಧ್ಯೆ, ಪಠಾನ್ ಚಿತ್ರದ ಮುಂಗಡ ಬುಕಿಂಗ್ ಸಿದ್ಧಾರ್ಥ್ ಅವರ ಹಿಂದಿನ ಚಿತ್ರ ವಾರ್ ನ ಮುಂಗಡ ಬುಕಿಂಗ್ ಅನ್ನು ಮೀರಿದೆ ಎಂದು ವರದಿಗಳು ತಿಳಿಸಿವೆ.


ನೋಡಿ ಶಾರುಖ್ ಅಭಿನಯದ ‘ಪಠಾನ್’ ಚಿತ್ರದ ಅಬ್ಬರ ಹೇಗಿದೆಯಂತ..


ಪ್ರಖ್ಯಾತ ಮೂರು ಸಿನೆಮಾ ಮಳಿಗೆಗಳು ಸೇರಿದಂತೆ ಸೋಮವಾರ ಮಧ್ಯರಾತ್ರಿಯವರೆಗೆ ಪಠಾನ್ ಚಿತ್ರದ 4.19 ಲಕ್ಷ ಟಿಕೆಟ್ ಗಳನ್ನು ಮಾರಾಟ ವಾಗಿದೆ ಎಂದು ಪಿಂಕ್ ವಿಲ್ಲಾ ವರದಿ ತಿಳಿಸಿದೆ. ಮೂರು ಸಿನೆಮಾ ಮಳಿಗೆಗಳಲ್ಲಿ ಪಿವಿಆರ್, ಐನಾಕ್ಸ್ ಮತ್ತು ಸಿನೆಪೊಲಿಸ್ ಸಹ ಸೇರಿವೆ ಅಂತ ಹೇಳಬಹುದು.


ಇದರೊಂದಿಗೆ ಪಠಾನ್ ಚಿತ್ರ ಈ ಹಿಂದೆ ಹೃತಿಕ್ ರೋಷನ್ ಅವರ ವಾರ್ ಚಿತ್ರ ಮಲ್ಟಿಪ್ಲೆಕ್ಸ್ ಗಳಲ್ಲಿ 4.10 ಲಕ್ಷ ಟಿಕೆಟ್ ಗಳು ಮಾರಾಟವಾಗಿ ದಾಖಲೆ ನಿರ್ಮಿಸಿದ್ದನ್ನು ಹಿಂದಿಕ್ಕಿದೆ.


ಆರಂಭಿಕ ವಾರಾಂತ್ಯದಲ್ಲಿ, ಚಿತ್ರವು ಈಗಾಗಲೇ ಮೂರು ಸಿನೆಮಾ ಮಳಿಗೆಗಳಲ್ಲಿ 7.75 ಲಕ್ಷ ಟಿಕೆಟ್ ಗಳನ್ನು ಮಾರಾಟ ಮಾಡಿದೆ ಎಂದು ವರದಿ ತಿಳಿಸಿದೆ. ಚಿತ್ರವು ಮಂಗಳವಾರ 10 ಲಕ್ಷ ಟಿಕೆಟ್ ಮಾರಾಟವನ್ನು ದಾಟುವ ನಿರೀಕ್ಷೆಯಿದೆ.

Published by:ಪಾವನ ಎಚ್ ಎಸ್
First published: