ಬಾಲಿವುಡ್ ಡ್ರಗ್ಸ್ ಪ್ರಕರಣ(Bollywood Drug case) ತಣ್ಣಗಾಗಿದ್ದರೂ ಬಾಲಿವುಡ್ ಬಾದ್ಷಾ ಶಾರುಖ್ ಖಾನ್(Shah Rukh Khan) ಕುಟುಂಬ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ.. ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ(Drugs Party) ಮಾಡುವಾಗ ಶಾರುಖಾನ್ ಮಗ ಸಿಕ್ಕಿಬಿದ್ದ ಹಿನ್ನೆಲೆ ಅದು ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು.. ಮಗ ಡ್ರಗ್ಸ್ ಪಾರ್ಟಿ ವಿಚಾರದಲ್ಲಿ ಸಿಕ್ಕಿಬಿದ್ದ ವಿಷಯ ತಿಳಿದ ಬಳಿಕ ಶಾರುಖಾನ್ ಮಾಧ್ಯಮಗಳ ಮುಂದೆ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ ಸೋಶಿಯಲ್ ಮೀಡಿಯಾ(Social Media) ದಿಂದ ಸಿಕ್ಕಾಪಟ್ಟೆ ದೂರವೇ ಉಳಿದಿದ್ದರು..ಅದೇಷ್ಟು ಸಾಧ್ಯವೋ ಅಷ್ಟು ಸಾಮಾಜಿಕ ಜಾಲತಾಣದಿಂದ ಅಂತರ ಕಾಯ್ದುಕೊಂಡಿದ್ದ ಶಾರುಖಾನ್ ಈಗ ಮತ್ತೆ ಸೋಶಿಯಲ್ ಮೀಡಿಯಾ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ..
ಹಲವು ತಿಂಗಳುಗಳ ಬಳಿಕ ಇನ್ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡ ಶಾರುಖ್
ಐಷಾರಾಮಿ ಹಡಗಿನಲ್ಲಿನ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ತಮ್ಮ ಪುತ್ರ ಜಾಮೀನಿನ ನಂತರ ಹೊರಗಡೆ ಬಂದ ಬಳಿಕವೂ ಶಾರುಖ್ ಖಾನ್ ಅಷ್ಟಾಗಿ ಸೋಶಿಯಲ್ ಮೀಡಿಯಾ ಮುಂದೆ ಆಗಲಿ ಅಥವಾ ಮೀಡಿಯಾಗಳ ಮುಂದೆ ಆಗಲಿ ಕಾಣಿಸಿಕೊಂಡಿರಲಿಲ್ಲ.. ಆದರೆ ಇದೇ ಮೊದಲ ಬಾರಿಗೆ ಹಲವಾರು ತಿಂಗಳ ಬಳಿಕ. ಶಾರುಖ್ ಖಾನ್ ಇನ್ಸ್ಟಾಗ್ರಾಮ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಟಿವಿ ಜಾಹೀರಾತಿಗೆ ಸಂಬಂಧಿಸಿದ ವಿಡಿಯೋ ಹಂಚಿಕೊಂಡ ಶಾರುಖ್
ಮಗ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ ಬಳಿಕ ಶಾರುಖಾನ್ ಅವರನ್ನು ಹಲವಾರು ಜಾಹೀರಾತುಗಳಿಂದ ಕೈಬಿಡಬೇಕು ಎಂಬ ಕೂಗು ಕೇಳಿ ಬಂದಿತ್ತು.. ಅದರಂತೆ ಶಾರುಖ್ ಖಾನ್ ನಟಿಸಿದ್ದ ಹಲವಾರು ಜಾಹೀರಾತುಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.. ಆದ್ರೆ ಈಗ ಮತ್ತೆ ಶಾರುಖ್ ಟಿವಿ ಜಾಹೀರಾತು ಮೂಲಕ ತಮ್ಮ ಸೋಶಿಯಲ್ ಮೀಡಿಯಾಗೆ ಭರ್ಜರಿಯಾಗಿ ವಾಪಸಾಗಿದ್ದಾರೆ.ಅದು ಟಿವಿ ಜಾಹೀರಾತು ಒಂದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶಾರುಖಾನ್ ಹಂಚಿಕೊಂಡಿದ್ದಾರೆ..
ಈ ವಿಡಿಯೋಗೆ ಅಭಿಮಾನಿಗಳು ಸಿಕ್ಕಾಪಟ್ಟೆ ಕಮೆಂಟ್ ಮಾಡುತ್ತಿದ್ದು ಕಿಂಗ್ ಇಸ್ ಬ್ಯಾಕ್ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷ ಅಂದ್ರೆ ಈ ಜಾಹೀರಾತಿನಲ್ಲಿ ಶಾರುಖ್ ಅವರ ಜೊತೆಗೆ ಅವರ ಪತ್ನಿ ಗೌರಿ ಖಾನ್ ಕೂಡ ಕಾಣಿಸಿಕೊಂಡಿರುವುದು ಅಭಿಮಾನಿಗಳ ಸಂತಸವನ್ನ ಮತ್ತಷ್ಟು ಹೆಚ್ಚಿಸಿದೆ ಹೀಗಾಗಿ ಹೃದಯದ ಎಮೋಜಿ ಹಾಕುವ ಮೂಲಕ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ.
ಬರೋಬ್ಬರಿ ನಾಲ್ಕು ತಿಂಗಳುಗಳ ಕಾಲ ಅಭಿಮಾನಿಗಳಿಂದ ಶಾರುಖಾನ್ ಅಂತರ ಕಾಯ್ದುಕೊಂಡಿದ್ದರು.. ಎಲ್ಲಿಯೂ ಸಹ ಶಾರುಖಾನ್ ಕುರಿತು ಅಷ್ಟಾಗಿ ಸುದ್ದಿ ಇರಲಿಲ್ಲ.. ಹೀಗಾಗಿ ಶಾರುಖ್ ಅವರನ್ನೂ ಮತ್ತೆ ಸಾಮಾಜಿಕ ಜಾಲತಾಣಗಳಿಗೆ ಕರೆತಂದು ಮತ್ತೆ ಎಂದಿನಂತೆ ಮಾಡಲು ಅವರ ಅಭಿಮಾನಿಗಳು ವರ್ಷದ ಆರಂಭದಲ್ಲಿ #WeMissYouSRK ಎಂದು ಟ್ವಿಟರ್ನಲ್ಲಿ ಟ್ರೆಂಡ್ ಮಾಡಿದ್ರು . . ಎಸ್ಆರ್ಕೆ ಅವರ ಹಳೆಯ ಫೋಟೋಗಳು, ವೀಡಿಯೊಗಳು ಮತ್ತು ಉತ್ತಮ ನೆನಪುಗಳನ್ನು ಟ್ವೀಟ್ ಮಾಡಿ ಶಾರುಖ್ ಖಾನ್ ಅವರನ್ನ ನಾವೆಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ತೋರಿಸುವ ಕೆಲಸವನ್ನು ಅಭಿಮಾನಿಗಳು ಮಾಡಿದ್ದರು.
ಇನ್ನು ಕಳೆದ ಮೂರು ವರ್ಷಗಳ ಹಿಂದೆ ಜೀರೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು, ಅದರ ಸೋಲಿನ ಬಳಿಕ ಯಾವ ಸಿನಿಮಾ ಕೂಡ ತೆರೆ ಕಂಡಿರಲಿಲ್ಲ. ಈಗ ಮತ್ತೆ ಸಿನಿಮಾಗಳತ್ತ ಮುಖಮಾಡಿರುವ ಶಾರುಖ್ ಖಾನ್ ಜನವರಿ 26ಕ್ಕೆ ಹೊಸ ಸಿನಿಮಾ ಘೋಷಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.. ಇನ್ನು 'ಲಯನ್' 'ಪಠಾಣ್' ಸಿನಿಮಾಗಳ ಚಿತ್ರೀಕರಣಕ್ಕೆ ಮರಳಿದ್ದರು.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ