• Home
 • »
 • News
 • »
 • entertainment
 • »
 • Pathaan Movie: ಕಪಿಲ್ ಶರ್ಮಾ ಶೋ, ಬಿಗ್‌ಬಾಸ್​​ನಲ್ಲಿ ಪಠಾಣ್ ಪ್ರಚಾರ ಬೇಡ ಅಂದಿದ್ದೇಕೆ ಶಾರುಖ್?

Pathaan Movie: ಕಪಿಲ್ ಶರ್ಮಾ ಶೋ, ಬಿಗ್‌ಬಾಸ್​​ನಲ್ಲಿ ಪಠಾಣ್ ಪ್ರಚಾರ ಬೇಡ ಅಂದಿದ್ದೇಕೆ ಶಾರುಖ್?

ಪಠಾಣ್

ಪಠಾಣ್

ಈ ಪಠಾಣ್ ಚಿತ್ರವನ್ನು ಅಷ್ಟಾಗಿ ಶಾರುಖ್ ಆಗಲಿ ಚಿತ್ರತಂಡದವರಾಗಲಿ ಹೆಚ್ಚು ಪ್ರಚಾರ ಮಾಡುತ್ತಿಲ್ಲ. ರಿಯಾಲಿಟಿ ಶೋಗಳಿಗೆ ಚಿತ್ರತಂಡ ಬರುತ್ತಿಲ್ಲ, ಚಿತ್ರದ ಬಗ್ಗೆ ಮಾಧ್ಯಮದಲ್ಲಿ ಯಾವುದೇ ಸಂದರ್ಶನಗಳೂ ಬರುತ್ತಿಲ್ಲ.

 • Trending Desk
 • 3-MIN READ
 • Last Updated :
 • Bangalore, India
 • Share this:

ಸಾಮಾನ್ಯವಾಗಿ ನಮಗೆಲ್ಲಾ ಗೊತ್ತಿರುವ ಹಾಗೆ ಈ ಹಿಂದಿಯಲ್ಲಿ ಪ್ರಸಾರವಾಗುವ ಕಪಿಲ್ ಶರ್ಮಾ (Kapil Sharma) ಅವರ ‘ದಿ ಕಪಿಲ್ ಶರ್ಮಾ ಶೋ’ ಸಖತ್ ಫೇಮಸ್. ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ನಡೆಸಿಕೊಡುವ ಬಿಗ್‌ಬಾಸ್ (Bigg Boss) ರಿಯಾಲಿಟಿ ಶೋ ಕೂಡಾ ಜನರ ನೆಚ್ಚಿನ ಶೋ. ಹೊಸ ಹೊಸ ಸಿನಿಮಾಗಳನ್ನು ಮಾಡಿ ಇನ್ನೇನು ಬಿಡುಗಡೆಯಾಗಲಿದೆ ಎನ್ನುವಾಗ ಪ್ರಚಾರ ಮಾಡುವುದಕ್ಕೆ ಚಿತ್ರತಂಡದವರು ನಟ ನಟಿಯರ ಜೊತೆಗೆ ಈ ಶೋಗಳಿಗೆ ಬರುತ್ತಾರೆ. ಇದರಿಂದ ಈ ಶೋಗಳಿಗೂ ಸಹ ಒಂದು ತಾರಾ ಮೆರುಗು ಸಿಗುತ್ತದೆ. ಚಿತ್ರತಂಡದವರಿಗೂ ಸಹ ಚಿತ್ರವನ್ನು ಉತ್ತಮ ಮಟ್ಟದಲ್ಲಿ ಪ್ರಚಾರ ಮಾಡುವುದಕ್ಕೆ ಒಂದು ವೇದಿಕೆ ಸಿಕ್ಕಂತಾಗುತ್ತದೆ.


ಹೀಗೆ ಚಿತ್ರ ಪ್ರಚಾರಕ್ಕೆ ಬರುವುದಕ್ಕೆ ಒಲ್ಲೆ ಅಂದ್ರಂತೆ ಈ ಬಾಲಿವುಡ್​ನ ಜನಪ್ರಿಯ ನಟ. ಹೌದು. ಬಾಲಿವುಡ್ ನಲ್ಲಿ ಬಾದ್ ಶಾ ಅಂತಾನೆ ಖ್ಯಾತಿ ಪಡೆದಿರುವ ಶಾರುಖ್ ಖಾನ್ ತಮ್ಮ ಪಠಾಣ್ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ.
ಪಠಾಣ್ ಚಿತ್ರದ ಬಿಡುಗಡೆಯ ದಿನಾಂಕ ಇನ್ನೇನು ಹತ್ತಿರದಲ್ಲಿದೆ. ಅಭಿಮಾನಿಗಳು ಶಾರುಖ್ ಅವರನ್ನ ಮತ್ತೆ ದೊಡ್ಡ ಪರದೆಯ ಮೇಲೆ ನೋಡಲು ತುಂಬಾನೇ ಉತ್ಸುಕರಾಗಿದ್ದಾರೆ.


ಶಾರುಖ್ ಅವರ ಪಠಾಣ್ ಚಿತ್ರದ ಪ್ರಚಾರ ಅಷ್ಟಾಗಿ ನಡೆಯುತ್ತಿಲ್ಲ


ನೀವು ಈ ಚಿತ್ರದ ಬಗ್ಗೆ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ, ನಿಮಗೆ ಅರ್ಥವಾಗುತ್ತದೆ. ಈ ಪಠಾಣ್ ಚಿತ್ರವನ್ನು ಅಷ್ಟಾಗಿ ಶಾರುಖ್ ಆಗಲಿ ಚಿತ್ರತಂಡದವರಾಗಲಿ ಹೆಚ್ಚು ಪ್ರಚಾರ ಮಾಡುತ್ತಿಲ್ಲ.


ರಿಯಾಲಿಟಿ ಶೋಗಳಿಗೆ ಚಿತ್ರತಂಡ ಬರುತ್ತಿಲ್ಲ, ಚಿತ್ರದ ಬಗ್ಗೆ ಮಾಧ್ಯಮದಲ್ಲಿ ಯಾವುದೇ ಸಂದರ್ಶನಗಳೂ ಬರುತ್ತಿಲ್ಲ.


ಶಾರುಖ್ ಅವರಿಗೆ ಈ ಪ್ರಚಾರ ತಂತ್ರಗಳು ಇಷ್ಟವಿಲ್ಲವಂತೆ


ವರದಿಗಳ ಪ್ರಕಾರ, ಶಾರುಖ್ ಅವರು ಈ ಎಲ್ಲಾ ಪ್ರಚಾರ ತಂತ್ರಗಳು ಅಷ್ಟೊಂದು ಇಷ್ಟವಿಲ್ಲವಂತೆ. ನಟಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಸಹ ನಟಿಸಿರುವ ತಮ್ಮ ಪಠಾಣ್ ಚಿತ್ರದ ಪ್ರಚಾರಕ್ಕಾಗಿ ಅವರು ಸಾಮಾನ್ಯ ಮಾರ್ಕೆಟಿಂಗ್ ತಂತ್ರಗಳನ್ನು ಬಳಸುತ್ತಿಲ್ಲ.
ನಾಲ್ಕು ವರ್ಷಗಳ ನಂತರ ಶಾರುಖ್ ಬ್ಯಾಕ್ ಟು ಬ್ಯಾಕ್


ಶಾರುಖ್ ಖಾನ್ ಮಾಧ್ಯಮ ಸಂದರ್ಶನಗಳನ್ನು ಸಹ ಕೊಡುತ್ತೊಲ್ಲ. ಇದರಿಂದಾಗಿ ಈ ಚಿತ್ರದ ಬಗ್ಗೆ ಯಾವುದೇ ಪ್ರಚಾರ ನಡೆಯುತ್ತಿಲ್ಲ.


ಈಗ ಸುದ್ದಿ ಮಾಧ್ಯಮದ ವರದಿಯೊಂದರ ಪ್ರಕಾರ, ಪಠಾಣ್ ಚಿತ್ರದ ಪ್ರಚಾರಕ್ಕಾಗಿ ಶಾರುಖ್ ಅವರು ಸಲ್ಮಾನ್ ಖಾನ್ ಅವರ ಬಿಗ್‌ಬಾಸ್ 16 ಕ್ಕೆ ಹಾಜರಾಗುವುದಿಲ್ಲ ಎಂದು ಹತ್ತಿರದ ಮೂಲವೊಂದು ಬಹಿರಂಗಪಡಿಸಿದೆ.


ಇದನ್ನೂ ಓದಿ: Pathaan: ಪಠಾಣ್ ಹೀರೋ ಶಾರುಖ್ ಖಾನ್ ಲುಕ್ ನೋಡಿ ನಿರ್ದೇಶಕರೇ ಫಿದಾ


ಶಾರುಖ್ ಈ ಶೋಗೆ ಹೋಗುವುದಿಲ್ಲ. ಅವರು ತಮ್ಮ ಪ್ರೇಕ್ಷಕರನ್ನು ನೇರವಾಗಿ ತಲುಪಲು ಬಯಸುತ್ತಾರೆ ಎಂದು ಮೂಲವೊಂದು ತಿಳಿಸಿದೆ.


ಬಿಗ್‌ಬಾಸ್ ಸೀಸನ್ 16 ಮಾತ್ರವಲ್ಲದೆ, ಕಪಿಲ್ ಶರ್ಮಾ ಅವರ ಶೋ ‘ದಿ ಕಪಿಲ್ ಶರ್ಮಾ ಶೋ’ ಅನ್ನು ಸಹ ಅವರು ತಿರಸ್ಕರಿಸಿದ್ದಾರೆ. "ಚಿತ್ರವು ತನ್ನ ಆ ವೇಗವನ್ನು ಪಡೆದುಕೊಂಡಿದೆ. ಈ ಬಾರಿ ಮಾಧ್ಯಮದ ಆಕರ್ಷಣೆಯನ್ನು ತಪ್ಪಿಸುತ್ತಿರುವ ಶಾರುಖ್ ಯಾವುದೇ ಮಾಧ್ಯಮ ಪ್ರಚಾರವಿಲ್ಲದೆ ಚಿತ್ರ ಬಿಡುಗಡೆಗೆ ಮುಂದಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೇಷರಂ ರಂಗ್ ಹಾಡು ಬಿಡುಗಡೆಯಾದ ನಂತರ, ಚಿತ್ರ ಮತ್ತು ಹಾಡಿನಿಂದಾಗಿ ಉದ್ಭವಿಸಿದ ಎಲ್ಲಾ ವಿವಾದಗಳಿಂದ ಅಪಾರ ಗಮನವನ್ನು ಈಗಾಗಲೇ ಸೆಳೆದಿದೆ. ಈ ಸಿನಿಮಾ ಜನವರಿ 25, 2023 ರಂದು ಬುಧವಾರ ಬಿಡುಗಡೆಯಾಗಲಿದೆ.

Published by:Divya D
First published: