ಇತ್ತೀಚೆಗೆ ಒಬ್ಬ ವಯಸ್ಸಾದ ಅಜ್ಜಿ ತನಗೆ ಯಾರು ಇಷ್ಟ ಅಂತ ಕೇಳಿದರೆ, ತನಗೆ ನಟ ಶಾರುಖ್ (Shah Rukh Khan) ತುಂಬಾನೇ ಇಷ್ಟ ಅಂತ ಹೇಳಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral) ಆಗಿತ್ತು. ಇದಕ್ಕೆ ಸ್ವತಃ ಶಾರುಖ್ ಖಾನ್ ಭಾವನಾತ್ಮಕವಾಗಿ ಪ್ರತಿಕ್ರಿಯೆಯನ್ನು (Reaction) ಸಹ ನೀಡಿದ್ದರು. ಶಾರುಖ್ ಗುಜುರಾತಿ ಭಾಷೆಯಲ್ಲಿ ಆ ಅಜ್ಜಿಗೆ ‘ನಾನು ನಿಮ್ಮನ್ನು ತುಂಬಾನೇ ಪ್ರೀತಿಸುತ್ತೇನೆ ಅಜ್ಜಿ’ ಅಂತ ಹೇಳಿ ನೆಟ್ಟಿಗರ ಹೃದಯ ಗೆದ್ದಿದ್ರು ಶಾರುಖ್. ಬ್ಯುಸಿ ಶೆಡ್ಯೂಲ್ ಇದ್ದರೂ ಸಹ ಶಾರುಖ್ ಮಾತ್ರ ಅಭಿಮಾನಿಗಳ ಜೊತೆ ಮಾತನಾಡುತ್ತಾರೆ.
ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಹ ಅವರ ಬಗ್ಗೆ ಯಾವುದಾದರೂ ಪೋಸ್ಟ್ ಅನ್ನು ಶಾರುಖ್ ಅವರು ಹಂಚಿಕೊಂಡರೆ, ಅದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡುತ್ತಾರೆ.
ಶಾರುಖ್ ಖಾನ್ ಈಗ ಎರಡು ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಚಿತ್ರೀಕರಣಗಳಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಮತ್ತು ವೈರಲ್ ಆದ ಹೊಸ ವೀಡಿಯೋವನ್ನು ನೋಡಿ ಅದಕ್ಕೆ ಪ್ರತಿಕ್ರಿಯೆ ಸಹ ನೀಡಿದ್ದಾರೆ ನೋಡಿ.
ಶಾರುಖ್ ಅಭಿನಯದ ಪಠಾಣ್ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ ದೆಹಲಿ ಪ್ರೊಫೆಸರ್‌ಗಳು
ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ತಮ್ಮ ಸ್ಮ್ಯಾಶ್ ಹಿಟ್ ಪಠಾಣ್ ಚಿತ್ರದ ‘ಜೂಮೆ ಜೋ ಪಠಾಣ್’ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೀಡಿಯೋ ನೋಡಿ ಖುದ್ದು ಕಿಂಗ್ ಖಾನ್ ಅವರೇ ಪ್ರತಿಕ್ರಿಯಿಸಿದ್ದಾರೆ.
ಈ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ವೈರಲ್ ವೀಡಿಯೋದ ವಿಷಯಕ್ಕೆ ಬಂದರೆ ಜೀಸಸ್ ಮತ್ತು ಮೇರಿ ಕಾಲೇಜಿನ ವಾಣಿಜ್ಯ ವಿಭಾಗ, ದೆಹಲಿ ವಿಶ್ವವಿದ್ಯಾಲಯವು ಇದನ್ನು ಹಂಚಿಕೊಂಡಿದೆ.
ಶಾರುಖ್, ದೆಹಲಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದು ಈ ವೀಡಿಯೋಗೆ "ನಮಗೆ ಪಾಠ ಹೇಳಿಕೊಡುವ ಮತ್ತು ನಮ್ಮೊಂದಿಗೆ ಮೋಜು ಮಾಡುವ ಶಿಕ್ಷಕರು ಮತ್ತು ಪ್ರಾಧ್ಯಾಪಕರನ್ನು ಪಡೆದಿರುವುದು ನಮ್ಮ ಅದೃಷ್ಟ. ಅವರೆಲ್ಲರೂ ಶೈಕ್ಷಣಿಕವಾಗಿ ರಾಕ್‌ಸ್ಟಾರ್‌ಗಳು" ಎಂದು ಹೇಳಿದ್ದಾರೆ.
ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳಿಸಿದೆ ಈ ವೀಡಿಯೋ
ಈ ವೀಡಿಯೋವನ್ನು ಫೆಬ್ರುವರಿ 12 ರಂದು ಹಂಚಿಕೊಳ್ಳಲಾಗಿದ್ದು, ಇದುವರೆಗೂ ಈ ಕ್ಲಿಪ್ ಒಂದೂವರೆ ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ ಮತ್ತು 800ಕ್ಕೂ ಹೆಚ್ಚು ಕಾಮೆಂಟ್ ಗಳನ್ನು ಪಡೆದಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಮತ್ತು ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ಪಠಾಣ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅವರೊಂದಿಗೆ ಶಾರುಖ್ ಖಾನ್ ನಟಿಸಿದ್ದಾರೆ.
ಇದನ್ನೂ ಓದಿ: Mrunal Thakur: ಮೃಣಾಲ್ಗೆ ಮದುವೆ ಪ್ರಪೋಸಲ್! ನಟಿ ಕೊಟ್ಟ ಉತ್ತರ ವೈರಲ್
ಈ ಚಿತ್ರವು ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ಇನ್ನೂ ಅನೇಕ ಸಿನೆಮಾ ಮಂದಿರಗಳಲ್ಲಿ ಜೋರಾಗಿಯೇ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಕೂಡ ನಟಿಸಿದ್ದಾರೆ. ಸಲ್ಮಾನ್ ಖಾನ್ ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ತಮ್ಮ ಕೊನೆಯ ಚಿತ್ರ ಪಠಾಣ್ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ನಯನತಾರಾ ಮತ್ತು ವಿಜಯ್ ಸೇತುಪತಿ ಅವರೊಂದಿಗೆ ಅಟ್ಲೀ ಅವರ ಜವಾನ್ ಚಿತ್ರದಲ್ಲಿ ನಟ ಕಾಣಿಸಿಕೊಳ್ಳಲಿದ್ದಾರೆ.
ರಾಜ್ ಕುಮಾರ್ ಹಿರಾನಿ ಅವರ ಡಂಕಿ ಚಿತ್ರದಲ್ಲಿ ಶಾರುಖ್ ಖಾನ್ ನಟಿಸಲಿದ್ದು, ತಾಪ್ಸಿ ಪನ್ನು ಸಹ ನಟಿಸಿದ್ದಾರೆ, ಈ ಚಿತ್ರ ಇದೇ ವರ್ಷ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ