• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Mannat House: ಈ ಒಂದೇ ಕಾರಣಕ್ಕೆ ಶಾರುಖ್ ಖಾನ್​ಗೆ ‘ಮನ್ನತ್’ ಬಂಗಲೆಯ ಡಿಸೈನ್ ಬಗ್ಗೆ ಹೆಚ್ಚು ಕಾಳಜಿಯಂತೆ

Mannat House: ಈ ಒಂದೇ ಕಾರಣಕ್ಕೆ ಶಾರುಖ್ ಖಾನ್​ಗೆ ‘ಮನ್ನತ್’ ಬಂಗಲೆಯ ಡಿಸೈನ್ ಬಗ್ಗೆ ಹೆಚ್ಚು ಕಾಳಜಿಯಂತೆ

ಶಾರುಖ್ ಖಾನ್

ಶಾರುಖ್ ಖಾನ್

ನಟ ಶಾರುಖ್ ಅವರು ತಮ್ಮ ಮುಂಬೈನಲ್ಲಿರುವ ‘ಮನ್ನತ್’ ಬಂಗಲೆಯ 'ವಿನ್ಯಾಸಕ್ಕೆ ಅಡ್ಡಿಪಡಿಸಲು' ಅನುಮತಿಸಲಾಗುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಮಂಗಳವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟ ‘ನನ್ನ ಮನೆಯ ಮಹಿಳೆ’ ಎಂದು ತಮ್ಮ ಪತ್ನಿಯ ಬಗ್ಗೆ ಹೇಳುತ್ತಾ, ಶಾರುಖ್ ಅವರು ಮನೆಯ ಒಳಾಂಗಣವನ್ನು ಸ್ವತಃ ತಮ್ಮ ಹೆಂಡತಿ ಗೌರಿ ಅವರೇ ಅಲಂಕರಿಸಿದ್ದು ಎಂದು ಅವರನ್ನು ಹಾಡಿ ಹೊಗಳಿದ್ದಾರೆ.

ಮುಂದೆ ಓದಿ ...
  • Share this:

ಯಾರಿಗಾದರೂ ತಾವು ವಾಸ ಮಾಡುತ್ತಿರುವ ಮನೆಯೆಂದರೆ (Home) ಅಪಾರವಾದ ಪ್ರೀತಿ (Love) ಇದ್ದೇ ಇರುತ್ತದೆ ಮತ್ತು ಆ ಮನೆಯೊಂದಿಗೆ ಅವರು ಭಾವನಾತ್ಮಕವಾದ ಸಂಬಂಧವನ್ನು (Emotional relationship) ಹೊಂದಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ನಮ್ಮ ಬಾಲಿವುಡ್ ನ (Bollywood) ದೊಡ್ಡ ದೊಡ್ಡ ನಟರು (Actors) ವಾಸ ಮಾಡುತ್ತಿರುವ ಭವ್ಯವಾದ ಬಂಗಲೆಗಳ ಬಗ್ಗೆ ಕೇಳಬೇಕೆ? ಅವರ ಬಂಗಲೆಗಳು (Bungalow) ನೋಡಲು ತುಂಬಾನೇ ಚೆನ್ನಾಗಿರುತ್ತವೆ ಮತ್ತು ಮನೆಯ ಒಳಗೂ ಸಹ ಅನೇಕ ಅಲಂಕಾರಿಕ ವಸ್ತುಗಳಿಂದ (Ornamental material) ಮನೆಯನ್ನು ವಿಭಿನ್ನ (Different) ರೀತಿಯಲ್ಲಿ ಇರಿಸಿಕೊಂಡಿರುವುದನ್ನು ನಾವು ನೋಡಬಹುದು.


ಶಾರುಖ್ ಖಾನ್ ಅವರ ‘ಮನ್ನತ್’ ಬಂಗಲೆ
ಅರೇ.. ಈಗೇಕೆ ಈ ನಟರ ಬಂಗಲೆಗಳ ಬಗ್ಗೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಆಶ್ಚರ್ಯವಾಗಬಹುದು. ಏಕೆಂದರೆ ನಟ ಶಾರುಖ್ ಖಾನ್ ಸಹ ಅವರು ವಾಸ ಮಾಡುವ ‘ಮನ್ನತ್’ ಬಂಗಲೆಯ ಬಗ್ಗೆ ತುಂಬಾನೇ ಪ್ರೀತಿ ಇಟ್ಟುಕೊಂಡಿರುವುದು ಅವರ ಒಂದು ಮಾತಿನಿಂದ ತಿಳಿದು ಬಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಹೆಂಡತಿ ಗೌರಿ ಅವರೇ ಅಲಂಕರಿಸಿದ ಮನೆ
ನಟ ಶಾರುಖ್ ಅವರು ತಮ್ಮ ಮುಂಬೈನಲ್ಲಿರುವ ‘ಮನ್ನತ್’ ಬಂಗಲೆಯ 'ವಿನ್ಯಾಸಕ್ಕೆ ಅಡ್ಡಿಪಡಿಸಲು' ಅನುಮತಿಸಲಾಗುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಮಂಗಳವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟ ‘ನನ್ನ ಮನೆಯ ಮಹಿಳೆ’ ಎಂದು ತಮ್ಮ ಪತ್ನಿಯ ಬಗ್ಗೆ ಹೇಳುತ್ತಾ, ಶಾರುಖ್ ಅವರು ಮನೆಯ ಒಳಾಂಗಣವನ್ನು ಸ್ವತಃ ತಮ್ಮ ಹೆಂಡತಿ ಗೌರಿ ಅವರೇ ಅಲಂಕರಿಸಿದ್ದು ಎಂದು ಅವರನ್ನು ಹಾಡಿ ಹೊಗಳಿದ್ದಾರೆ.


ಶಾರುಖ್ ಖಾನ್​ ಅವರ ಮನ್ನತ್ ಬಂಗಲೆ


ಹೆಂಡತಿ ಬಗ್ಗೆ ಇವರು ಹೇಳಿದ್ದೇನು?
ಶಾರುಖ್ ಅವರು ತಮ್ಮ ಹೆಂಡತಿ ಗೌರಿಯನ್ನು 'ಅದ್ಭುತ ಡಿಸೈನರ್' ಎಂದು ಕರೆದರು. ಅವರು ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ನ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಅದರಲ್ಲಿ ಅವರು ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.


ಇದನ್ನೂ ಓದಿ:  Ibbani: 'ನನ್ನಮ್ಮ ಸೂಪರ್‌ ಸ್ಟಾರ್' ಖ್ಯಾತಿಯ ಇಬ್ಬನಿಯಿಂದ ಕೂದಲು ದಾನ! ವಯಸ್ಸು ಚಿಕ್ಕದಾದರೂ ಮನಸ್ಸು ದೊಡ್ಡದು


ಈ ಸಂದರ್ಭದಲ್ಲಿ ಮಾತನಾಡಿದ ಶಾರುಖ್ ಅವರು "ನನ್ನ ಮನೆಗಾಗಿ ಖರೀದಿಸಿದ ಹೆಚ್ಚಿನ ವಸ್ತುಗಳನ್ನು ಮನೆಯ ಮಹಿಳೆ ಎಂದರೆ ನನ್ನ ಹೆಂಡತಿ ಗೌರಿಯೇ ಖರೀದಿಸುತ್ತಾರೆ. ಅವಳು ಸ್ವತಃ ಅದ್ಭುತ ಡಿಸೈನರ್ ಆಗಿರುವುದರಿಂದ, ಮನೆಯಲ್ಲಿನ ವಿನ್ಯಾಸದಲ್ಲಿ ಬದಲಾವಣೆ ಮಾಡಬೇಕೆಂದರೆ ನನಗೆ ಅನುಮತಿಯಿಲ್ಲ, ಆದರೆ ನನಗೆ ಈ ತಂತ್ರಜ್ಞಾನದ ತಿಳುವಳಿಕೆ ಇರುವುದರಿಂದ ನಾನು ಮನೆಯಲ್ಲಿ ಬೇಕಾಗುವ ಅತ್ಯುತ್ತಮವಾದ ತಂತ್ರಜ್ಞಾನವನ್ನು ಹೊಂದಿಸುವುದು ನನ್ನ ಕೆಲಸವಾಗಿದೆ" ಎಂದು ಹೇಳಿದರು.


ನಟ ಶಾರುಖ್ ಅವರು "ನಾನು ಹೋಗಿ ಯಾವುದೇ ಸುಂದರವಾದ ಟಿವಿಯನ್ನು ಖರೀದಿಸಿ ಮನೆಗೆ ತಂದರೆ, ನಮ್ಮ ಮನೆಯಲ್ಲಿ ಯಾರೂ ಅದನ್ನು ಪ್ರಶ್ನಿಸುವುದಿಲ್ಲ ಮತ್ತು ಅದನ್ನು ನನಗೆ ಬೇಕಾದ ಯಾವುದೇ ಕೋಣೆಯಲ್ಲಿ ಅಥವಾ ನಾನು ಬಯಸುವ ಯಾವುದೇ ಸ್ಥಳದಲ್ಲಿಯೂ ಇರಿಸಿಕೊಳ್ಳಬಹುದು ಮತ್ತು ಇದು ಸತ್ಯವಾಗಿದೆ" ಎಂದು ಹೇಳಿದರು.


ರೊಮ್ಯಾಂಟಿಕ್ ಡ್ಯಾನ್ಸ್ ಸ್ಟೈಲ್ ಅನ್ನು ಪ್ರದರ್ಶಿಸಿದ ಶಾರುಖ್
ಈ ಕಾರ್ಯಕ್ರಮದಲ್ಲಿ, ಶಾರುಖ್ ತಮ್ಮ ಚಿತ್ರಗಳಲ್ಲಿನ ಅತ್ಯಂತ ಜನಪ್ರಿಯವಾದ ರೊಮ್ಯಾಂಟಿಕ್ ಡ್ಯಾನ್ಸ್ ಸ್ಟೈಲ್ ಅನ್ನು ಸಹ ಎಲ್ಲರ ಮುಂದೆ ತೋರಿಸಿದರು. ಎರಡೂ ಬದಿಯಲ್ಲಿ ತಮ್ಮ ತೋಳುಗಳನ್ನು ಚಾಚಿ ಶಾರುಖ್ ತಮ್ಮ ರೊಮ್ಯಾಂಟಿಕ್ ಸ್ಟೆಪ್ ತೋರಿಸಿದರು. ಈ ಈವೆಂಟ್ ನಲ್ಲಿ ನಟನ ಹಲವಾರು ವೀಡಿಯೋಗಳನ್ನು ಆನ್‌ಲೈನ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಶಾರುಖ್ ಬಿಳಿ ಶರ್ಟ್ ನೊಂದಿಗೆ ಕಪ್ಪು ಸೂಟ್ ಅನ್ನು ಧರಿಸಿದ್ದಾರೆ ಮತ್ತು ಕಪ್ಪು ಸನ್‌ಗ್ಲಾಸ್ ಅನ್ನು ಸಹ ಧರಿಸಿರುವುದನ್ನು ನೋಡಬಹುದಾಗಿದೆ.


ಇದನ್ನೂ ಓದಿ:  Milana Nagaraj - Krishna: ತೆರೆ ಮೇಲೆ ಮತ್ತೆ ಒಂದಾದ ಆದಿ, ನಿಧಿಮಾ - ಲವ್​ ಬರ್ಡ್ಸ್​ ಆಗ್ತಿದ್ದಾರೆ ಲವ್ ಮಾಕ್ಟೇಲ್​ ಜೋಡಿ!


ಏತನ್ಮಧ್ಯೆ, ಚಲನಚಿತ್ರ ನಿರ್ಮಾಪಕ ರಾಜ್ ಕುಮಾರ್ ಹಿರಾನಿ ಅವರೊಂದಿಗಿನ ಅವರ ಮೊದಲ ಸಹಯೋಗ ಸೇರಿದಂತೆ ಹಲವಾರು ಯೋಜನೆಗಳೊಂದಿಗೆ ಶಾರುಖ್ ದೊಡ್ಡ ಪರದೆಗೆ ಮರಳಲಿದ್ದಾರೆ. ನಟಿ ತಾಪ್ಸಿ ಪನ್ನು ಅವರೊಂದಿಗೆ ‘ಡಂಕಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟೇ ಅಲ್ಲದೆ ಶಾರುಖ್ ‘ಪಠಾಣ್’ ಚಿತ್ರವನ್ನು ಸಹ ಹೊಂದಿದ್ದಾರೆ. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ನಟ ಜಾನ್ ಅಬ್ರಹಾಂ ಸಹ ನಟಿಸಿದ್ದಾರೆ ಮತ್ತು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಇದು ಜನವರಿ 25, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Published by:Ashwini Prabhu
First published: