• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Shah Rukh Khan: ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್​ ಖಾನ್​! ನಟನ ವರ್ತನೆ ಕಂಡು ಫ್ಯಾನ್ಸ್​ ಶಾಕ್!

Shah Rukh Khan: ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್​ ಖಾನ್​! ನಟನ ವರ್ತನೆ ಕಂಡು ಫ್ಯಾನ್ಸ್​ ಶಾಕ್!

ಅಭಿಮಾನಿಯನ್ನು ತಳ್ಳಿದ ಶಾರುಖ್​ ಖಾನ್​

ಅಭಿಮಾನಿಯನ್ನು ತಳ್ಳಿದ ಶಾರುಖ್​ ಖಾನ್​

ಅನುಮತಿ ಇಲ್ಲದೆ ಸೆಲ್ಫಿ ತೆಗೆದುಕೊಳ್ಳಲು ಹೋದ ಅಭಿಮಾನಿಯನ್ನು ನಟ ಶಾರುಖ್ ಖಾನ್​ ದೂರ ತಳ್ಳಿದ್ದಾರೆ.

  • Share this:

ಪಠಾಣ್​ (Pathaan Movie) ಸಿನಿಮಾ ಮೂಲಕ ಬಾಲಿವುಡ್ ಕಿಂಗ್ ನಾನೇ ಎನ್ನುವುದನ್ನು ನಟ ಶಾರುಖ್​ ಖಾನ್ (Shah Rukh Khan) ಮತ್ತೆ ಸಾಭೀತು ಪಡಿಸಿದ್ದಾರೆ. ದೇಶದಲ್ಲಿ ಮಾತ್ರವಲ್ಲ ವಿಶ್ವದ ಹಲವೆಡೆ ಶಾರುಖ್ ಖಾನ್​ಗೆ ಅಭಿಮಾನಿಗಳಿದ್ದಾರೆ. ಕಿಂಗ್ ಖಾನ್ ಎಲ್ಲಿ ಹೋದ್ರು ನೆಚ್ಚಿನ ನಟನನ್ನು ನೋಡಲು ಮುಗಿಬೀಳ್ತಾರೆ. ಇದ್ರಿಂದ ಒಮ್ಮೊಮ್ಮೆ ನಟರಿಗೆ ಕಿರಿಕಿರಿ ಕೂಡ ಆಗುತ್ತೆ. ವಿಮಾನ ನಿಲ್ದಾಣದಲ್ಲಿ (Airport) ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯನ್ನು ದೂರ ತಳ್ಳಿದ್ದಾರೆ. ಕಿಂಗ್ ಖಾನ್​ ವರ್ತನೆ ಕಂಡು ಅಭಿಮಾನಿ (Fan) ಸೇರಿದಂತೆ ನೆರೆದಿದ್ದ ಜನರೆಲ್ಲಾ ಶಾಕ್ ಆಗಿದ್ದಾರೆ.  


ಅಭಿಮಾನಿಗೆ ಶಾಕ್ ಕೊಟ್ಟ ಶಾರುಖ್ ಖಾನ್​


ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಶಾರುಖ್​ ಅಭಿಮಾನಿಗಳತ್ತ ಕೈ ಬೀಸಿದ್ರು. ಬ್ಲ್ಯಾಕ್ ಡ್ರೆಸ್ ಧರಿಸಿದ್ದ ಶಾರುಖ್, ಯಾಕೋ ಈ ಬಾರಿ ತಾಳ್ಮೆ ಕಳೆದುಕೊಂಡವರಂತೆ ಕಾಣ್ತಿದ್ರು. ಶಾರುಖ್​ ವಿಮಾನ ನಿಲ್ದಾಣದ ಹೊರಗೆ ಬರ್ತಿದ್ದಂತೆ ಅಭಿಮಾನಿಗಳು ಶಾರುಖ್, ಶಾರುಖ್ ಎಂದು ಕೂಗುತ್ತಿದ್ದರು. ಪಕ್ಕದಲ್ಲೇ ಇದ್ದ ಅಭಿಮಾನಿ ಫೋನ್ ತೆಗೆದುಕೊಂಡು ಸೆಲ್ಫಿ ಕ್ಲಿಕಿಸಲು ಹೋಗಿದ್ದಾರೆ. ಈ ವೇಳೆ ಶಾರುಖ್ ಕೋಪಗೊಂಡಿದ್ದಾರೆ.
ಅಭಿಮಾನಿಯನ್ನು ತಳ್ಳಿದ ಶಾರುಖ್ ಖಾನ್​


ಅನುಮತಿ ಇಲ್ಲದೆ ಸೆಲ್ಫಿ ತೆಗೆದುಕೊಳ್ಳಲು ಹೋದ ಅಭಿಮಾನಿಯನ್ನು ಶಾರುಖ್ ತನ್ನ ಕೈಯಿಂದಲೇ ದೂರ ತಳ್ಳಿದ್ದಾರೆ. ಅಭಿಮಾನಿ ಕಡೆ ತಿರುಗಿಯೂ ನೋಡದ ಶಾರುಖ್​, ಬೇಗ ಬೇಗ ನಡೆದುಕೊಂಡು ಹೋಗಿ ಕಾರ್ ಹತ್ತಿದ್ರು. ಶಾರುಖ್ ವರ್ತನೆಯನ್ನು ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ.
ಕ್ಯಾಮೆರಾಗಳಿಂದ ದೂರ ಉಳಿದಿದ್ಯಾಕೆ ಕಿಂಗ್ ಖಾನ್


ಶಾರುಖ್ ಕೆಲ ದಿನಗಳಿಂದ ಕ್ಯಾಮೆರಾಗಳಿಂದ ದೂರ ಉಳಿದಿದ್ದಾರೆ. ಶಾರುಖ್ ಇನ್ನು ಮುಂದೆ ರೆಡ್ ಕಾರ್ಪೆಟ್ ಈವೆಂಟ್‌ಗಳಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಪಾಪರಾಜಿಗಳಿಗೆ ಪೋಸ್ ನೀಡುವುದಿಲ್ಲವಂತೆ. ಕಳೆದ ತಿಂಗಳು ನಡೆದ ಎನ್‌ಎಂಎಸಿಸಿ ಸಮಾರಂಭದಲ್ಲೂ ಸಹ, ನಟ ರೆಡ್ ಕಾರ್ಪೆಟ್ ಫೋಟೋ ಬಿಟ್ಟು ನೇರವಾಗಿ ಕಾರ್ಯಕ್ರಮಕ್ಕೆ ತೆರಳಿದರು. ಆದರೆ ಅವರ ಕುಟುಂಬ ಸದಸ್ಯರಾದ ಗೌರಿ ಖಾನ್, ಸುಹಾನಾ ಖಾನ್ ಮತ್ತು ಆರ್ಯನ್ ಖಾನ್ ಅವರು ಕ್ಯಾಮೆರಾಗಳಿಗೆ ಪೋಸ್ ನೀಡಿದರು.


ಇದನ್ನೂ ಓದಿ: ಮಹಿಳೆಯರ ದೇಹ ಅಮೂಲ್ಯವಾದದ್ದು ಎಂದ ಸಲ್ಮಾನ್ ಖಾನ್! ಸ್ಟಾರ್ ನಟ ಹೇಳಿದ್ದಿಷ್ಟು


ಜವಾನ್​ ಸಿನಿಮಾಗಾಗಿ ಭರ್ಜರಿ ತಯಾರಿ


ಶಾರುಖ್ ಖಾನ್​ ತಮ್ಮ ಮುಂದಿನ ಸಿನಿಮಾ ಜವಾನ್​ಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.    ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಜೊತೆಗೆ ನಯನತಾರಾ ನಟಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ದೀಪಿಕಾ ಪಡುಕೋಣೆ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ದಳಪತಿ ವಿಜಯ್ ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ವದಂತಿ ಇದೆ. ಜವಾನ್ ಸಿನಿಮಾ ಜೂನ್ 2 ರಂದು ಬಿಡುಗಡೆಯಾಗಲಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಅವರ ಮಗನೇ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ವಿಷಯ ಕೇಳಿ ಕಿಂಗ್ ಖಾನ್ ಫ್ಯಾನ್ಸ್ ಖುಷ್ ಆಗಿದ್ದಾರೆ. ಆರ್ಯನ್ ಖಾನ್ ತಂದೆ ಶಾರುಖ್ ಖಾನ್ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾನೆ. ಬಾಲಿವುಡ್ ಕಿಂಗ್ ಖಾನ್ ಜೊತೆ ಸಿನಿಮಾ ಮಾಡಲು ಖ್ಯಾತ ನಿರ್ದೇಶಕರು ಸಾಲು ಸಾಲು ನಿಂತಿದ್ದಾರೆ. ಹಾಗಿರುವಾಗ ಆರ್ಯನ್​ಗೆ ಅವಕಾಶ ಸಿಗುತ್ತಾ ಅಂತ ಕೇಳ್ತಿದ್ದೀರಾ? ಹೌದು. ಅಂತೂ ಇಂತೂ ಆರ್ಯನ್​ಗೆ ನಿರ್ದೇಶನದ ಅವಕಾಶ ಸಿಕ್ಕಿದೆ.

First published: