NMACC: ನೀತಾ ಅಂಬಾನಿ ಅಂದು ಕಂಡ ಕನಸು ಇದೀಗ ನನಸಾಗಿದೆ; ಶಾರುಖ್ ಖಾನ್ ಮೆಚ್ಚುಗೆಯ ಮಾತು

ಶಾರುಖ್‌ ಖಾನ್

ಶಾರುಖ್‌ ಖಾನ್

“ನೀತಾ ಮುಕೇಶ್ ಅಂಬಾನಿಯವರು ಇಂತಹ ಅದ್ಙುತ ಕಲಾಕೇಂದ್ರ ನಿರ್ಮಿಸಲು ಹಲವು ವರ್ಷಗಳ ಕನಸು ಕಂಡಿದ್ದಾರೆ. ಇದೀಗ ಅವರ ಕನಸು ನನಸಾಗಿದೆ" ಅಂತ ನಟ ಶಾರುಖ್ ಖಾನ್ ಮೆಚ್ಚುಗೆಯ ಮಾತನ್ನಾಡಿದ್ದಾರೆ.

  • News18 Kannada
  • 3-MIN READ
  • Last Updated :
  • Mumbai, India
  • Share this:

ಮುಂಬೈ: ದೇಶದ ವಾಣಿಜ್ಯನಗರಿ ಮುಂಬೈನಲ್ಲಿ (Mumbai) ಭವ್ಯವಾಗಿ ತಲೆಯೆತ್ತಿರುವ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (Nita Mukesh Ambani Cultural Centre) ಬಗ್ಗೆ ಗಣ್ಯಾತಿಗಣ್ಯರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಬಾಲಿವುಡ್‌ ಖ್ಯಾತ ನಟ, ಕಿಂಗ್ ಖಾನ್ ಶಾರುಖ್ ಖಾನ್ (King Khan Shah Rukh Khan) ಅವರು ನೀತಾ ಮುಕೇಶ್ ಅಂಬಾನಿ ಅವರ ದೂರದೃಷ್ಟಿ ಬಗ್ಗೆ ಶ್ಲಾಘಿಸಿದ್ದಾರೆ. , “ನೀತಾ ಮುಕೇಶ್ ಅಂಬಾನಿಯವರು ಇಂತಹ ಅದ್ಙುತ ಕಲಾಕೇಂದ್ರ ನಿರ್ಮಿಸಲು ಹಲವು ವರ್ಷಗಳ ಕನಸು ಕಂಡಿದ್ದಾರೆ. ನಾನು ಅದರ ಬಗ್ಗೆ ತಿಳಿದಿದ್ದೇನೆ, 10 ರಿಂದ 12 ವರ್ಷಗಳ ಹಿಂದೆ ನಾವು ಇದರ ಬಗ್ಗೆ ಚರ್ಚಿಸಿದ್ದೇವೆ, ಈ ಬಗ್ಗೆ ಅವರು ನನ್ನೊಂದಿಗೆ ಮಾತನ್ನಾಡಿದ್ದರು. ಅವರು ಅಂದೇ ಇದರ ನೀಲನಕ್ಷೆಯನ್ನು ತೋರಿಸಿದ್ದರು. ಇದೀಗ ಅವರ ಕನಸು ನನಸಾಗಿದೆ ಅಂತ ಮೆಚ್ಚುಗೆಯ ಮಾತನ್ನಾಡಿದ್ದಾರೆ.


ನೀತಾ ಅಂಬಾನಿ ಬಗ್ಗೆ ಶಾರುಖ್ ಮೆಚ್ಚುಗೆ ಮಾತು


ನೀತಾ ಅಂಬಾನಿ ಕಾರ್ಯಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಮೆಚ್ಚುಗೆಯ ಮಾತನ್ನಾಡಿದ್ದಾರೆ. ನೀತಾ ಅಂಬಾನಿ ಅವರು ಸ್ವತಃ ಕಲೆಯನ್ನು ಅನುಸರಿಸುವ ವ್ಯಕ್ತಿ. ನಾವೆಲ್ಲರೂ ಕಲೆಯನ್ನು ಅನುಸರಿಸುತ್ತೇವೆ, ಆದರೆ ನಾವು ಕಲೆಗೆ ಅನುಕೂಲವಾಗುವಂತಹ ಯಾವುದನ್ನೂ ರಚಿಸುವುದಿಲ್ಲ. ಆದರೆ ನೀತಾ ಅಂಬಾನಿ ಈ ರೀತಿಯ ವ್ಯಕ್ತಿಯಲ್ಲ. ಕಲೆಗಾಗಿ ಏನಾದರೂ ಮಾಡಬೇಕು ಎನ್ನುವ ತುಡಿತ ಅವರಲ್ಲಿತ್ತು. ಇದೀಗ ಅದು ನನಸಾಗುತ್ತಿದೆ ಅಂತ ಸಂತಸ ವ್ಯಕ್ತಪಡಿಸಿದ್ದಾರೆ.




“ನೀತಾ ಅಂಬಾನಿ ಅದ್ಭುತ ವೇದಿಕೆ ನಿರ್ಮಿಸಿದ್ದಾರೆ”


ನಾನೂ ಒಬ್ಬ ಕಲಾವಿದ. ನಮ್ಮಲ್ಲಿ ಅನೇಕ ಕಲಾವಿದರು ಇದ್ದಾರೆ. ಆದರೆ ನೀತಾ ಅಂಬಾನಿ ಅವರು ಸಮಯ ತೆಗೆದುಕೊಂಡಿದ್ದಾರೆ. ತಮ್ಮ ಸಂಪತ್ತಿನಲ್ಲಿ ಸಂಪನ್ಮೂಲವನ್ನು ಒದಗಿಸಿ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಂತರ ಅತ್ಯದ್ಭುತ ವೇದಿಕೆ ನಿರ್ಮಿಸಿದ್ದಾರೆ ಅಂತ ಶಾರುಖ್ ಖಾನ್ ಶ್ಲಾಘಿಸಿದ್ದಾರೆ.


ಇದನ್ನೂ ಓದಿ: Nita Mukesh Ambani Cultural Centre: ಆಧುನಿಕ ಭಾರತದ ಅಮೃತ ಕಾಲಕ್ಕೆ ಕೊಡುಗೆ ನೀಡುವುದು ಉದ್ದೇಶ -ನೀತಾ ಮುಕೇಶ್ ಅಂಬಾನಿ ಮನದಾಳ


ಕಲಾಸಾಧಕರು ಕಲೆಗೆ ಕೊಡುಗೆ ನೀಡಬೇಕು


ಸಚಿನ್ ತೆಂಡೂಲ್ಕರ್ ಅವರು ಮಕ್ಕಳಿಗೆ ಕ್ರಿಕೆಟ್ ಆಡುವುದು ಹೇಗೆಂದು ಹೇಳಿಕೊಡುತ್ತಿದ್ದರಂತೆ ಕಲಾರಾಧಕರು ಇಂತಹ ಕೆಲಸ ಮಾಡಬೇಕು. ಇಂತಹ ಕೆಲಸಗಳನ್ನು ಕಲಾಭಿಮಾನಿಗಳು, ಕಲಾ ಸಾಧಕರು ಮಾಡದಿದ್ದರೆ ಬೇರೆ ಯಾರು ಮಾಡುತ್ತಾರೆ? ನಾವು ಅದನ್ನು ಉದ್ಯಮಿಗಳು ಮಾತ್ರ ಮಾಡಲಿ ಅಂತ ಸುಮ್ಮನೆ ಕೂರಬಾರದು ಅಂತ ಅಭಿಪ್ರಾಯಪಟ್ಟಿದ್ದಾರೆ.


ಆಧುನಿಕ ಭಾರತದ ಅಮೃತ ಕಾಲಕ್ಕೆ ಕೊಡುಗೆ ನೀಡುವುದು ಉದ್ದೇಶ -ನೀತಾ ಮುಕೇಶ್ ಅಂಬಾನಿ


ಇನ್ನು ಈ ಬಗ್ಗೆ ಮಾತನಾಡಿದ ನೀತಾ ಅಂಬಾನಿ (Nita Ambani), "ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ನಮ್ಮ ರಾಷ್ಟ್ರಕ್ಕೆ ಒಂದು ಗೌರವವಾಗಿದೆ, ಸಾಂಸ್ಕೃತಿಕ ಕೇಂದ್ರವು ಭಾರತೀಯ ಕಲೆಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿದೆ. ನಮ್ಮ ಸ್ಥಳಗಳು ಪ್ರತಿಭಾವಂತರನ್ನು ಪೋಷಿಸುತ್ತವೆ ಮತ್ತು ಪ್ರೇರೇಪಿಸುತ್ತವೆ, ಭಾರತ ಮತ್ತು ಪ್ರಪಂಚದಾದ್ಯಂತದ ಸಮುದಾಯಗಳನ್ನು ಒಟ್ಟುಗೂಡಿಸುತ್ತವೆ" ಎಂದು ಭರವಸೆಯ ಮಾತನ್ನಾಡಿದರು.


ಇದನ್ನೂ ಓದಿ: Nita Mukesh Ambani Cultural Centre: ಹಲವು ವಿಶೇಷತೆಗಳನ್ನು ಒಳಗೊಂಡಿದೆ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್, ನೀವೂ ಭೇಟಿ ನೀಡಬಹುದು!


ನಮ್ಮ ಕನಸು ನನಸಾಗಿದೆ


ಮುಖೇಶ್ ಅಂಬಾನಿ ಮತ್ತು ನನ್ನ ಪಾಲಿಗೆ ಎನ್‌ಎಂಎಸಿಸಿ ಕನಸು ನನಸಾಗಿದೆ. ಭಾರತವು ವಿಶ್ವ ದರ್ಜೆಯ ಸಾಂಸ್ಕೃತಿಕ ಕೇಂದ್ರವನ್ನು ಹೊಂದಬೇಕು ಎಂಬ ಕನಸನ್ನು ಬಹಳ ಹಿಂದಿನಿಂದಲೂ ನಾವು ಬೆಳೆಸಿಕೊಂಡಿದ್ದೇವೆ. ನಮ್ಮ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು ಮತ್ತು ಆಚರಿಸಲು ನಾವು ಜಾಗವನ್ನು ರಚಿಸಲು ಉತ್ಸುಕರಾಗಿದ್ದೇವೆ ಅಂತ ಹೇಳಿದ್ರು.

top videos
    First published: