ಚಿತ್ರರಂಗದಲ್ಲಿರುವ ಹಿರಿಯ ನಟರ ಮಕ್ಕಳು (Senior Actors Children) ಸಹ ಮುಂದೆ ದೊಡ್ಡವರಾಗಿ ಚಿತ್ರೋದ್ಯಮಕ್ಕೆ (Film Industry) ಎಂಟ್ರಿ ಕೊಟ್ಟ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ ಅಂತ ಹೇಳಬಹುದು. ಹಿಂದೆನಿಂದಲೂ, ಅನೇಕ ಹಿರಿಯ ನಟರ ಮಕ್ಕಳು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಕೆಲವರು ತಮ್ಮ ತಂದೆಯಷ್ಟೇ ಜನಪ್ರಿಯರಾಗಿದ್ದಾರೆ. ಇನ್ನೂ ಕೆಲವರು ತಮ್ಮ ತಂದೆಯ ಜನಪ್ರಿಯತೆಯನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುವಲ್ಲಿ ವಿಫಲರಾಗಿದ್ದನ್ನು ನಾವು ನೋಡಬಹುದು.
ಈಗ ಮತ್ತೊಬ್ಬ ದೊಡ್ಡ ನಟನ ಮಗ ಸಹ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ನೋಡಿ. ಬಾಲಿವುಡ್ ನಲ್ಲಿ ಬಾದ್ ಶಾ ಅಂತಾನೆ ಖ್ಯಾತಿ ಪಡೆದಿರುವಂತಹ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಈಗ ಮನರಂಜನಾ ಜಗತ್ತಿಗೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಶಾರುಖ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನೊಂದಿಗೆ ತಮ್ಮ ಮೊದಲ ಸಿನಿಮಾ ಬಗ್ಗೆ ಆರ್ಯನ್ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಅಪ್ಡೇಟ್ ಗಳನ್ನು ಹಂಚಿಕೊಂಡಿದ್ದಾರೆ.
ಅವರು ತಮ್ಮ ಮೊದಲ ಯೋಜನೆಯ ಬರವಣಿಗೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಬಹಿರಂಗಪಡಿಸಿದರು. "ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್" ಎಂದು ಬರೆದಿರುವ ಸ್ಕ್ರಿಪ್ಟ್ ಮತ್ತು ಕ್ಲಾಪ್ಬೋರ್ಡ್ ಅನ್ನು ತೋರಿಸುವ ಒಂದು ಫೋಟೋವನ್ನು ಆರ್ಯನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ನಿರ್ದೇಶಕನಾಗಿ ಆರ್ಯನ್ ಚಿತ್ರರಂಗಕ್ಕೆ ಪ್ರವೇಶಿಸಲು ಸಜ್ಜಾಗಿದ್ದಾರೆಯೇ?
ಆರ್ಯನ್ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪ್ರವೇಶಿಸಲು ಸಜ್ಜಾಗಿರುವಂತೆ ತೋರುತ್ತದೆ. ಏಕೆಂದರೆ ಅವರು ತಮ್ಮ ಪೋಸ್ಟ್ ನ ಶೀರ್ಷಿಕೆಯಲ್ಲಿ "ಬರವಣಿಗೆ ಕೆಲಸ ಮುಗಿದಿದೆ... ಆಕ್ಷನ್ (ಕ್ಯಾಮೆರಾ ಎಮೋಟಿಕಾನ್) ಎಂದು ಹೇಳಲು ಇನ್ನೂ ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ” ಎಂದು ಬರೆದು ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ, ಅವರ ಪೋಷಕರಾದ ಶಾರುಖ್ ಮತ್ತು ಗೌರಿ ಖಾನ್ ಇಬ್ಬರು ಕಾಮೆಂಟ್ ವಿಭಾಗದಲ್ಲಿ ಅವರನ್ನು ಹುರಿದುಂಬಿಸಿದರು.
View this post on Instagram
ತಂದೆ ಶಾರುಖ್ ಖಾನ್ ತಮ್ಮ ಮಗನ ಪೋಸ್ಟ್ ನೋಡಿ "ವಾವ್, ಯೋಜಿಸುವುದು, ನಂಬುವುದು, ಕನಸು ಈಗ ನನಸಾಗುತ್ತಿದೆ. ಈಗ ಧೈರ್ಯ ಮಾಡಿ ಮುಂದಕ್ಕೆ ಕೆಲಸ ಶುರು ಮಾಡುವುದು, ಮೊದಲನೆಯದಕ್ಕೆ ನಿನಗೆ ಶುಭವಾಗಲಿ ಎಂದು ಹಾರೈಸುತ್ತೇನೆ. ಇದು ಯಾವಾಗಲೂ ವಿಶೇಷವಾಗಿರುತ್ತದೆ" ಎಂದು ಹೇಳಿದ್ದಾರೆ.
ಆದರೆ ಈ ಸಂಭಾಷಣೆ ಅಲ್ಲಿಗೆ ಮುಗಿಯಲಿಲ್ಲ. ಶಾರುಖ್ ಖಾನ್ ಅವರ ಕಾಮೆಂಟ್ ಗೆ ಉತ್ತರಿಸಿದ ಆರ್ಯನ್ ಖಾನ್, "ಧನ್ಯವಾದಗಳು! ಸೆಟ್ ನಲ್ಲಿ ನಿಮ್ಮ ಅನಿರೀಕ್ಷಿತ ಭೇಟಿಗಳಿಗಾಗಿ ಎದುರು ನೋಡುತ್ತಿದ್ದೇನೆ" ಎಂದು ಹೇಳಿದರು.
ಇದಕ್ಕೆ ಶಾರುಖ್ ತುಂಬಾನೇ ಬುದ್ದಿವಂತಿಕೆಯಿಂದ ಉತ್ತರ ನೀಡಿ "ಹಾಗಾದರೆ ಮಧ್ಯಾಹ್ನದ ಪಾಳಿಗಳನ್ನು ಇಟ್ಟುಕೊಳ್ಳುವುದು ಉತ್ತಮ, ಬೆಳಗಿನ ಜಾವ ಬೇಡ" ಎಂದು ಬರೆದಿದ್ದಾರೆ.
"ನಿನ್ನ ಕೆಲಸವನ್ನು ಪರದೆಯ ಮೇಲೆ ನೋಡಲು ಇನ್ನೂ ಕಾಯಲು ಸಾಧ್ಯವಿಲ್ಲ" ಎಂದು ತಾಯಿ ಗೌರಿ ಖಾನ್ ಕಾಮೆಂಟ್ ಮಾಡಿದ್ದಾರೆ.
ಆರ್ಯನ್ ನ ಪೋಸ್ಟ್ ಗೆ ಯಾರೆಲ್ಲಾ ಕಾಮೆಂಟ್ ಮಾಡಿದ್ದಾರೆ ಗೊತ್ತೇ?
ಶಾರುಖ್ ಖಾನ್ ಮತ್ತು ಗೌರಿ ಖಾನ್ ಅಷ್ಟೇ ಅಲ್ಲದೆ ಚಿತ್ರರಂಗದ ಸ್ನೇಹಿತರು ಸಹ ಆರ್ಯನ್ ಅವರ ಪೋಸ್ಟ್ ಗೆ ಕಾಮೆಂಟ್ ಮಾಡಿದರು. "ಆರ್ಯನ್ ಕೆಲಸವನ್ನು ನೋಡಲು ಇನ್ನೂ ಕಾಯಲು ಸಾಧ್ಯವಿಲ್ಲ" ಎಂದು ಮಹೀಪ್ ಕಪೂರ್ ಬರೆದಿದ್ದಾರೆ.
ಶನಾಯಾ ಕಪೂರ್ "ವಾವ್” ಎಂದು ಬರೆದಿದ್ದಾರೆ. ಭಾವನಾ ಪಾಂಡೆ "ಅಭಿನಂದನೆಗಳು”ಎಂದು ಬರೆದಿದ್ದಾರೆ. ಸಿಕಂದರ್ ಖೇರ್ ಕಾಮೆಂಟ್ ವಿಭಾಗದಲ್ಲಿ ಹಾರ್ಟ್ ಎಮೋಟಿಕಾನ್ ಅನ್ನು ಹಾಕಿದ್ದಾರೆ.
ಆರ್ಯನ್ ಖಾನ್ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವುದಿಲ್ಲ, ಆದರೆ ಅವರು ಹಾಗೆ ಮಾಡಿದಾಗಲೆಲ್ಲಾ ಅದು ತುಂಬಾನೇ ವಿಶೇಷವಾಗಿರುತ್ತದೆ.
ಕೆಲವು ತಿಂಗಳ ಹಿಂದೆ, ಅವರು ಫೋಟೋಶೂಟ್ ನ ಡ್ಯಾಶಿಂಗ್ ಫೋಟೋಗಳನ್ನು ಹಂಚಿಕೊಂಡರು. ಅವರು ಪೋಸ್ಟ್ ಅನ್ನು ಹಂಚಿಕೊಂಡ ಸ್ವಲ್ಪ ಸಮಯದ ನಂತರ, ಅವರ ಕಾಮೆಂಟ್ ವಿಭಾಗವು ಕಾಮೆಂಟ್ ಗಳಿಂದ ತುಂಬಿತ್ತು. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಅನ್ನು ನಟ ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಸ್ಥಾಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ