Shah Rukh Khan, Salman Khan: ಶಾರುಖ್ ಖಾನ್ ತಂದೂರಿ ಚಿಕನ್ ಮಾತ್ರ ತಿಂತಾರಂತೆ, ಆದ್ರೆ ಸಲ್ಮಾನ್ ಭಕ್ಷ್ಯ ಭೋಜನ ಪ್ರಿಯ..!

ಶಾರುಖ್ ಖಾನ್ ಒಂದು ಬಾರಿ ಬಡಿಸಿದ ತಂದೂರಿ ಚಿಕನ್ ಮಾತ್ರ ತಿನ್ನುತ್ತಾರೆ. ಆದರೆ ಸಲ್ಮಾನ್ ಅದಕ್ಕೆ ವಿರುದ್ಧ ಎಂಬುದನ್ನು ಅವರಿಬ್ಬರು ಒಪ್ಪಿಕೊಂಡರು. ಸಲ್ಮಾನ್ ಖಾನ್ , ಬಿರಿಯಾನಿಯಿಂದ ಚೋಲೇ ಬಟುರೇವರೆಗೆ ಪ್ರತಿಯೊಂದನ್ನೂ ತಿನ್ನುತ್ತಾರೆ.

ಸಲ್ಮಾನ್​ ಖಾನ್​.

ಸಲ್ಮಾನ್​ ಖಾನ್​.

  • Share this:
ಡಿಸ್ಕವರಿ ಪ್ಲಸ್‍ನ ಅಡುಗೆ ಕಾರ್ಯಕ್ರಮ ಸ್ಟಾರ್ ವರ್ಸಸ್ ಫುಡ್ ಸೀಸನ್ 2ನಲ್ಲಿ ಈ ಬಾರಿ ಅತಿಥಿಯಾಗಿ ಕಾಣಿಸಿಕೊಳ್ಳಲಿರುವವರು ಬಾಲಿವುಡ್ ನಟ ಅನಿಲ್ ಕಪೂರ್. ಅವರಿಗೆ ಅಡುಗೆ ಮನೆಯಲ್ಲಿ ಪ್ರಯೋಗಿಸಬಲ್ಲ ಹೊಸ ಟ್ರಿಕ್‍ಗಳನ್ನು ಕಲಿಯಲು ಆಸಕ್ತಿ ಇರುವಂತೆ ಕಂಡರೂ, ಮಜವಾದ ಸಂಗತಿ ಎಂದರೆ ಅವರ ಕೈಯಲ್ಲಿ ಒಲೆಯನ್ನು ಕೂಡ ಉರಿಸಲು ಸಾಧ್ಯವಾಗದಿರುವುದು. ಆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಬಂದಿದ್ದ, ಫರಾ ಖಾನ್, ಅರ್ಬಾಜ್ ಖಾನ್ ಮತ್ತು ಮಾಹೀಪ್ ಕಪೂರ್‌ಗೆ ಅವರು ಲ್ಯಾಂಬ್ ಕರಿ ರೈಸ್, ಗೂಚಿ ಪಾಸ್ತಾ ಮತ್ತು ಬರ್ಗರ್‌ಗಳನ್ನು ತಯಾರಿಸಿ ಉಣ ಬಡಿಸಿದರು. ಒಲೆ ಹಚ್ಚಲು ಬಾರದವರು ಅಷ್ಟೆಲ್ಲಾ ಖಾದ್ಯಗಳನ್ನು ತಯಾರಿಸಿದ್ದು ಹೇಗಂತೀರಾ..? ಆ ಕೆಲಸದಲ್ಲಿ ಅವರ ಕೈ ಜೋಡಿಸಿದ್ದು, ಮುಂಬೈನ ರೆಸ್ಟೋರೆಂಟ್ ಸಿಲ್ಲಸ್‍ನ ಕಾರ್ಯ ನಿರ್ವಾಹಕ ಬಾಣಸಿಗ ಗಣೇಶ್.

ಆ ಎಲ್ಲಾ ಖಾದ್ಯಗಳನ್ನು ತಯಾರಿಸುವ ಸಂದರ್ಭದಲ್ಲಿ ಅನಿಲ್ ತಾನು ಬೆಳಗ್ಗಿನ ಉಪಾಹಾರಕ್ಕೆ ಏನನ್ನು ತಿಂದೆ (ಮೊಟ್ಟೆಗಳು ಮತ್ತು ಟೋಸ್ಟ್) ಎಂಬುದನ್ನು ಕೂಡ ಹೇಳಿದ್ದಲ್ಲದೆ, ತನಗೆ ಯಾವತ್ತೂ ಡಯೆಟಿಂಗ್ ಬಗ್ಗೆ ಆಸಕ್ತಿ ಇರಲಿಲ್ಲ ಎಂಬುದನ್ನು ಬಹಿರಂಗಪಡಿಸಿದರು.
ಅದೇ ಎಪಿಸೋಡ್‍ನಲ್ಲಿ ವಿಶೇಷ ಅತಿಥಿ ಆಗಿದ್ದ, ಅವರ ಸಹೋದರನ ಹೆಂಡತಿ ಮಾಹಿಪ್ ಕಪೂರ್ , ಪತ್ನಿ ಸುನಿತಾ ಅನಿಲ್ ಕಪೂರ್‌ರನ್ನು ಆಹಾರದ ವಿಚಾರದಲ್ಲಿ ಬಹಳ ಕಟ್ಟುನಿಟ್ಟಿನಲ್ಲಿ ಇಟ್ಟಿದ್ದಾರೆ ಎಂದು ಹೇಳಿದರು “ಸುನೀತಾ ಅವರಿಗೆ ಯಾವತ್ತೂ ತಿನ್ನಲು ಬಿಟ್ಟಿಲ್ಲ. ಕಳೆದ 26 ವರ್ಷಗಳಿಂದ, ಅನಿಲ್ ಬೇರೆಯವರ ತಟ್ಟೆಯಿಂದಲೇ ತಿನ್ನುತ್ತಿದ್ದಾರೆ” ಎಂದು ನಗುತ್ತಾರೆ ಮಾಹಿಪ್.

ಇದನ್ನೂ ಓದಿ:DK Shivakumar: ವಿಚಾರಣೆಗೆ ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ವಾರೆಂಟ್ ಜಾರಿ ಮಾಡಿದ ಸುಳ್ಯ ನ್ಯಾಯಾಲಯ

ಈ ನಾಲ್ಕು ಮಂದಿ ಸ್ನೇಹಿತರು ಮಾತನಾಡುತ್ತಾ, ತಿನ್ನುತ್ತಾ ಇರುವಾಗ, ತನ್ನ ವ್ಯಕ್ತಿತ್ವದೊಂದಿಗೆ ಪರ್ಯಾಯದಂತೆ ಸೇರಿ ಹೋಗಿರುವ ‘ಜಖಾಸ್’ ಎಂಬ ಪದದ ಬಗ್ಗೆಯೂ ಮಾತನಾಡಿದರು. ಅದಕ್ಕೆ ಸಂಬಂಧಿಸಿದ ವಿಷಯವನ್ನು ನೆನಪಿಸಿಕೊಳ್ಳುತ್ತಾ, “ನಾನು ನಿರ್ದೇಶಕ ರಾಜೀವ್ ರೈ ಜೊತೆ ಯುದ್ಧ್ ಎಂಬ ಸಿನಿಮಾ ಮಾಡಿದ್ದೆ. ಅದರಲ್ಲಿ ಜಾಕಿ ಶ್ರಾಫ್ ಕೂಡ ಅಭಿನಯಿಸಿದ್ದರು. ಆ ಸಿನಿಮಾದಲ್ಲಿ ನನ್ನ ಪಾತ್ರ ಈ ಪದವನ್ನು ಹೆಚ್ಚಾಗಿ ಬಳಸುತ್ತಿತ್ತು ಮತ್ತು ಅದು ವೀಕ್ಷಕರ ಮಧ್ಯೆ ಜನಪ್ರಿಯ ಆಯಿತು ಕೂಡ. ಅದೇನೇ ಇದ್ದರೂ, ಮಧ್ಯೆ ಆ ಪದ ನಾನು ಬೇರೆ ಪ್ರಾಜೆಕ್ಟ್‌ಗಳನ್ನು ಮಾಡಲು ಆರಂಭಿಸಿದ ನಂತರ ಕಳೆದು ಹೋಗಿತ್ತು. ಮತ್ತು ದಿಢೀರನೆ ಒಂದು ದಿನ ಅದು ಪ್ರತ್ಯಕ್ಷವಾಗಿ, ಮತ್ತೆ ತಾನಾಗೆ ನನಗೆ ಅಂಟಿಕೊಂಡಿದೆ” ಎಂದು ಹೇಳಿದರು.

“ಈ ದಿನಗಳಲ್ಲಿ, ನಾನು ನಿಮ್ಮ ಸಿನಿಮಾಗಳಲ್ಲಿ ಜಕಾಸ್ ಎಂಬ ಪದ ಹೇಳ¨ಬೇಕೆಂದರೆ ನೀವು ನನಗೆ ನಾನು ದುಪ್ಪಟ್ಟು ಹಣ ಚಾರ್ಜ್ ಮಾಡುತ್ತೇನೆ ಎಂದು ನಿರ್ಮಾಪಕರಿಗೆ ಹೇಳುತ್ತಿದ್ದೇನೆ” ಎಂದು ಹಾಸ್ಯ ಚಟಾಕಿ ಹಾರಿಸಿದರು ಅನಿಲ್.

ಅತ್ಮೀಯ ಸ್ನೇಹಿತರಾದ, ಫರಾ ಖಾನ್ ಮತ್ತು ಅನಿಲ್ ಕಪೂರ್, ಬಾಲಿವುಡ್ ಸೂಪರ್ ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಆಹಾರ ಅಭ್ಯಾಸಗಳ ಬಗ್ಗೆಯೂ ಚರ್ಚಿಸಿದರು. ಶಾರುಖ್ ಖಾನ್ ಒಂದು ಬಾರಿ ಬಡಿಸಿದ ತಂದೂರಿ ಚಿಕನ್ ಮಾತ್ರ ತಿನ್ನುತ್ತಾರೆ. ಆದರೆ ಸಲ್ಮಾನ್ ಅದಕ್ಕೆ ವಿರುದ್ಧ ಎಂಬುದನ್ನು ಅವರಿಬ್ಬರು ಒಪ್ಪಿಕೊಂಡರು. ಸಲ್ಮಾನ್ ಖಾನ್ , ಬಿರಿಯಾನಿಯಿಂದ ಚೋಲೇ ಬಟುರೇವರೆಗೆ ಪ್ರತಿಯೊಂದನ್ನೂ ತಿನ್ನುತ್ತಾರೆ.

ಇದನ್ನೂ ಓದಿ:Sexual Harassment: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

ಈ ಅಡುಗೆ ಕಾರ್ಯಕ್ರಮದ ಅನುಭವ, ಅಡುಗೆಯನ್ನು ಬಡಿಸಿದ ನಂತರ ತಿಂದವರ ಹೊಗಳಿಕೆ ಕಾಯುತ್ತಿದ್ದ ತನ್ನ ತಾಯಿಯನ್ನು ನೆನಪಿಸಿತು ಎಂಬ ಭಾವುಕ ಮಾತಿನೊಂದಿಗೆ ಅನಿಲ್ ಕಪೂರ್ ಕಾರ್ಯಕ್ರಮವನ್ನು ಮುಗಿಸಿದರು.
Published by:Latha CG
First published: