ಕ್ರಿಸ್ಮಸ್ ಹಬ್ಬ (Christmas Festival) ಅಂತ ಹೇಳಿದರೆ ಸಾಕು ಚಿಕ್ಕಮಕ್ಕಳಿಂದ ಹಿಡಿದು ವಯೋ ವೃದ್ದರವರೆಗೆ ನೆನಪಾಗುವುದು ಸ್ವರ್ಗದಿಂದ ಜಿಂಕೆಗಳ ರಥದಲ್ಲಿ ಕೂತು ಬಿಳಿ ಗಡ್ಡದ ಕೆಂಪು ಬಟ್ಟೆಯನ್ನು ಧರಿಸಿರುವ ಸಾಂತಾಕ್ಲಾಸ್ (Santa Claus) ಅಂತ ಹೇಳಿದರೆ ತಪ್ಪಾಗುವುದಿಲ್ಲ. ಕ್ರೈಸ್ತ ಸಮುದಾಯದವರಲ್ಲಿ ಕ್ರಿಸ್ಮಸ್ ಹಬ್ಬವನ್ನು ತುಂಬಾನೇ ಸಡಗರದಿಂದ ಆಚರಿಸಲಾಗುತ್ತದೆ. ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಕ್ರಿಸ್ಮಸ್ ಟ್ರೀ ಅನ್ನು ಬಣ್ಣಬಣ್ಣದ ಬಾಲ್ ಗಳಿಂದ ಉಡುಗೊರೆಗಳಿಂದ (Gift) ಅಲಂಕರಿಸಿ, ಚರ್ಚ್ ಗೆ ಹೋಗಿ ಪ್ರಾರ್ಥನೆಯನ್ನು ಸಲ್ಲಿಸಿ ಬರುತ್ತಾರೆ.
ಕ್ರಿಸ್ಮಸ್ ಹಬ್ಬವನ್ನು ಬಾಲಿವುಡ್ ನಟ-ನಟಿಯರು ಹೇಗೆ ಆಚರಿಸಿದರು ಅಂತ ತಿಳಿದುಕೊಳ್ಳುವುದು ಎಂದರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ ಅಂತಾನೆ ಹೇಳಬಹುದು.
ಕ್ರಿಸ್ಮಸ್ ಹಬ್ಬದ ದಿನ ಶಾರುಖ್ ಏನ್ ಮಾಡಿದ್ರು ಗೊತ್ತೇ?
ಅದರಲ್ಲೂ ಬಾಲಿವುಡ್ ನಲ್ಲಿ ಬಾದ್ ಶಾ ಎಂಬ ಹೆಸರಿನಿಂದ ಖ್ಯಾತಿಯಾಗಿರುವ ಶಾರುಖ್ ಖಾನ್ ಅವರು ಕ್ರಿಸ್ಮಸ್ ಹಬ್ಬವನ್ನು ಹೇಗೆ ಆಚರಿಸಿದರು ಎಂದು ತಿಳಿದುಕೊಳ್ಳಲು ಅವರ ಅಭಿಮಾನಿಗಳು ತುಂಬಾನೇ ಕಾತುರರಾಗಿರುತ್ತಾರೆ ಅಂತ ಹೇಳಬಹುದು.
ಶಾರುಖ್ ಕ್ರಿಸ್ಮಸ್ ಹಬ್ಬದಂದು ಕೆಂಪು ಸೂಟ್ ಧರಿಸದೇ ಇರಬಹುದು, ಆದರೆ ಕ್ರಿಸ್ಮಸ್ ಹಬ್ಬದ ದಿನದಂದು 'ಆಸ್ಕ್ ಎಸ್ಆರ್ಕೆ' ಸೆಷನ್ ನಲ್ಲಿ ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಲು ನಿರ್ಧರಿಸಿದರು.
ಸಾಂತಾಕ್ಲಾಸ್ ಹೇಗೆ ತಮ್ಮ ಹೆಗಲಿಗೆ ಉಡುಗೊರೆಗಳನ್ನು ಹೊಂದಿದ್ದ ದೊಡ್ಡ ಬ್ಯಾಗ್ ಹೇಗೆ ಹಾಕಿಕೊಂಡು ಬರುತ್ತಾರೋ, ಹಾಗೆಯೇ ಶಾರುಖ್ ಸಹ ತಮ್ಮ ಅಭಿಮಾನಿಗಳು ಕೇಳುವ ಅನೇಕ ಪ್ರಶ್ನೆಗಳಿಗೆ ತಮಾಷೆಯ ಉತ್ತರಗಳನ್ನು ತಂದಿದ್ದರು ಅಂತ ಹೇಳಬಹುದು.
ಅವರು ಬೆಳಿಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ "ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಹೇಳಿ ಮಕ್ಕಳೊಂದಿಗೆ ಕ್ರಿಸ್ಮಸ್ ಹಬ್ಬದ ಅಲಂಕಾರ ಮಾಡುವಲ್ಲಿ ದಿನವನ್ನು ಕಳೆದೆ ಮತ್ತು ನನಗೆ ಸ್ವಲ್ಪ ವಿರಾಮ ಸಿಕ್ಕಿದ್ದಕ್ಕೆ ತ್ವರಿತವಾಗಿ ‘ಆಸ್ಕ್ ಎಸ್ಆರ್ಕೆ ಗೆ ಮರಳಿದೆ" ಎಂದು ಬರೆದಿದ್ದರು.
ಸಾಂತಾ ನಿಮ್ಮ ಮನೆಗೆ ಬಂದಿದ್ರಾ ಅಂತ ಕೇಳಿದ್ದಕ್ಕೆ ಏನ್ ಹೇಳಿದ್ರು ಶಾರುಖ್?
ಈ ‘ಆಸ್ಕ್ ಎಸ್ಆರ್ಕೆ’ ಸೆಷನ್ ನಲ್ಲಿ ಶಾರುಖ್ ಗೆ ಅಭಿಮಾನಿಯೊಬ್ಬರು ‘ನಿಮ್ಮ ಮನೆ ಎಂದರೆ ಮನ್ನತ್ ಗೆ ಸಾಂತಾ ಬಂದಿದ್ರಾ ಅಂತ ಕೇಳಿದ ಪ್ರಶ್ನೆಗೆ, ಶಾರುಖ್ ತಮಾಷೆಯಾಗಿ "ಇನ್ನೇನು ಸಾಂತಾ ನಮ್ಮ ಮನೆಯನ್ನ ತಲುಪಬಹುದೇನೋ, ಮನೆಯ ಹೊರಗೆ ಸಿಕ್ಕಾಪಟ್ಟೆ ಟ್ರಾಫಿಕ್ ಇದೆ ಅಂತ ಕೇಳ್ಪಟ್ಟೆ” ಅಂತ ಹೇಳಿದರು.
ಜನವರಿ 25 ರಂದು ಬಿಡುಗಡೆಯಾಗುತ್ತಿರುವ ಪಠಾನ್ ಚಿತ್ರದ ಟ್ರೈಲರ್ ಯಾಕೋ ತಡವಾಗ್ತಿದೆ ಅಂತ ಅವರ ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಕ್ಕೆ, ಶಾರುಖ್ ಅವರು ತಮಾಷೆ ಮಾಡಿ "ಹಾ ಹಾ ನನ್ನಿಷ್ಟ ಅದು!!! ಟ್ರೈಲರ್ ಬಿಡುಗಡೆಯಾಗುವ ಸಂದರ್ಭದಲ್ಲಿ ಅದು ಬರುತ್ತದೆ ಬಿಡಿ" ಎಂದರು.
ಇನ್ನೊಬ್ಬ ಅಭಿಮಾನಿ ಪಠಾಣ್ ಟೀಸರ್ ನಲ್ಲಿ ನಟ ಹೆಲಿಕಾಪ್ಟರ್ ಅನ್ನು ಹಾರಿಸುತ್ತಿರುವುದನ್ನು ಉಲ್ಲೇಖಿಸಿ "ಹೆಲಿಕಾಪ್ಟರ್ ಅನ್ನು ಚಲಾಯಿಸುವುದನ್ನು ಯಾವಾಗ ಕಲಿತುಕೊಂಡ್ರಿ ಅಂತ ಶಾರುಖ್ ಅವರನ್ನ ಕೇಳಿದರು. ಅದಕ್ಕೆ ನಟ ಅಭಿಮಾನಿಯ ಧಾಟಿಯಲ್ಲಿಯೇ ಪ್ರತಿಕ್ರಿಯಿಸಿ "ಸೈಕಲ್ ಕಲಿಯಲು ತರಬೇತಿ ಪಡೆಯುತ್ತಿರುವಾಗಲೇ” ಅಂತ ಹೇಳಿದರು.
ತಮ್ಮ 8 ಪ್ಯಾಕ್ ಆಬ್ಸ್ ಬಗ್ಗೆ ಶಾರುಖ್ ಹೇಳಿದ್ದೇನು?
57ನೇ ವಯಸ್ಸಿನಲ್ಲಿ 8-ಪ್ಯಾಕ್ ಆಬ್ಸ್ ಹೊಂದಿರುವ ಲುಕ್ ಈ ಚಿತ್ರದಲ್ಲಿ ತುಂಬಾನೇ ಸುದ್ದಿ ಮಾಡಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ರೀತಿಯ ಆಬ್ಸ್ ಬೆಳೆಸಲು ಎಷ್ಟು ಸಮಯ ತೆಗೆದುಕೊಂಡಿತು ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ, ನಟ ಶಾರುಖ್ ಚಿಕ್ಕದಾಗಿ ಮತ್ತು ಚೊಕ್ಕದಾಗಿ "57 ವರ್ಷಗಳು" ಎಂದು ಉತ್ತರಿಸಿದರು. ಪ್ರಸ್ತುತ ಅವರ ತೂಕವು ಕೇವಲ 70 ಕೆಜಿಗಿಂತ ಸ್ವಲ್ಪ ಕಡಿಮೆಯಿದೆ ಎಂದು ಸಹ ಅವರು ಹೇಳಿಕೊಂಡರು.
ಇದನ್ನೂ ಓದಿ: Alia Bhatt: ಮತ್ತೆ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗ್ತಿದ್ದಾರೆ ಆಲಿಯಾ ಭಟ್! ಯಾವ ಸಿನಿಮಾ?
ಇಷ್ಟೇ ಅಲ್ಲದೆ ಅವರು ತಮ್ಮ ಹಾಸ್ಯ ಪ್ರಜ್ಞೆಯ ರಹಸ್ಯವನ್ನು ಸಹ ಬಹಿರಂಗಪಡಿಸಿದರು. "ನೀವು ಮನಸ್ಸಿಂದ ತುಂಬಾನೇ ಮೃದು ಸ್ವಭಾವದವರಾಗಿ ಮತ್ತು ಎಲ್ಲರನ್ನೂ ನಿಮ್ಮ ಸ್ವಂತ ಸ್ನೇಹಿತರಂತೆ ಭಾವಿಸಿ... ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸಿ" ಎಂದು ಹೇಳಿದರು.
ಆನಂತರ ನಿಮಗೆಲ್ಲರಿಗೂ ಧನ್ಯವಾದಗಳು. ಹೊಸ ವರ್ಷ ಮತ್ತು ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಎಲ್ಲರೂ ಸಂತೋಷವಾಗಿರಿ ಮತ್ತು ಇನ್ನು ಮುಂದೆ ನಿಮ್ಮೆಲ್ಲರ ಜೀವನದಲ್ಲಿ ಇನ್ನೂ ಒಳ್ಳೆಯ ದಿನಗಳು ಬರಲಿ" ಎಂದು ಅಭಿಮಾನಿಗಳನ್ನ ಹಾರೈಸಿ ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ