Rajkumar Hirani ಜೊತೆ ಹೊಸ ಸಿನಿಮಾಗಾಗಿ ಕೈ ಜೋಡಿಸಿದ Shah Rukh Khan

ಈಗ ರಾಜ್​ಕುಮಾರ್ ಹಿರಾನಿ ಅವರ ಮುಂಬರುವ ಚಿತ್ರದಲ್ಲಿ ಶಾರುಖ್ ಖಾನ್​ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ಕಥೆಯು ಸಾಮಾನ್ಯ ಬಾಲಿವುಡ್ ಚಿತ್ರಗಳಂತೆ ಅಲ್ಲದೆ, ವಿಭಿನ್ನವಾದ ಕಥೆ ಹೊಂದಿದೆಯಂತೆ.

ನಿರ್ದೇಶಕ ರಾಜ್​ಕುಮಾರ್ ಹಿರಾನಿ ಹಾಗೂ ಶಾರುಖ್​ ಖಾನ್​

ನಿರ್ದೇಶಕ ರಾಜ್​ಕುಮಾರ್ ಹಿರಾನಿ ಹಾಗೂ ಶಾರುಖ್​ ಖಾನ್​

  • Share this:
ಕೋವಿಡ್-19 ವೈರಸ್ ಹಾವಳಿಯಿಂದಾಗಿ ಹೇರಲಾಗಿದ್ದಂತಹ ಲಾಕ್‌ಡೌನ್‌ಗಳಿಂದಾಗಿ ಚಲನಚಿತ್ರಗಳ ಚಿತ್ರಿಕರಣದಲ್ಲಿ ಅನೇಕ ಅಡತಡೆಗಳನ್ನು ಅನುಭವಿಸಿ ಒಂದೂವರೆ ವರ್ಷದ ದೀರ್ಘವಾದ ವಿರಾಮದ ನಂತರ ನಟ ಶಾರೂಖ್ ಖಾನ್  (Shah Rukh Khan) ಮತ್ತೆ ತಮ್ಮ ಮುಂಬರುವ ಚಲನಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ನಟ ಶಾರುಖ್  ಕೊನೆಯದಾಗಿ 2018ರಲ್ಲಿ ಬಿಡುಗಡೆಯಾದಂತಹ ಆನಂದ್ ಎಲ್ ರೈ ಅವರ ‘ಝೀರೋ’ (Zero Movie)ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಗೂಢಚರ್ಯೆ ಕಥೆ ಆಧಾರಿತವಾಗಿದ್ದ ‘ಪಠಾಣ್’ ಮತ್ತು ಅಟ್ಲೀ ಅವರ ಮುಂದಿನ ಹೆಸರಿಡದ ಚಿತ್ರ ಸೇರಿದಂತೆ ಸೂಪರ್ ಸ್ಟಾರ್ ಪಟ್ಟಿಯಲ್ಲಿ ಅನೇಕ ಯೋಜನೆಗಳು ಇವೆ ಎಂದರೆ ತಪ್ಪಾಗುವುದಿಲ್ಲ. ‘ಝೀರೋ’  ಸಿನಿಮಾದ ನಂತರ ಶಾರುಖ್ ಖಾನ್​ ಯಾವುದೇ ಸಿನಿಮಾ ಪ್ರಕಟಿಸಿರಲಿಲ್ಲ. ಅದಕ್ಕಾಗಿ ನೆಟ್ಟಿಗರು ಸಾಕಷ್ಟು ಸಲ ಶಾರುಖ್​ ಖಾನ್​ ಅವರನ್ನು ಟ್ರೋಲ್ ಮಾಡಿದ್ದರು. ಆದರೆ ಈಗ ಶಾರುಖ್ ಅವರ ಸಾಲು ಸಾಲು ಸಿನಿಮಾಗಳ ಅಪ್ಟೇಟ್​ ಹೊರ ಬೀಳುತ್ತಿದೆ. 

'3 ಇಡಿಯಟ್ಸ್​', 'ಸಂಜು' ಅಂತಹ ಮೆಗಾ ಹಿಟ್ ಚಿತ್ರ ನೀಡಿರುವಂತಹ ರಾಜ್​ಕುಮಾರ್ ಹಿರಾನಿ ಬಾಲಿವುಡ್‌ನಲ್ಲಿರುವ ಉತ್ತಮ ನಿರ್ದೇಶಕರಲ್ಲಿ ಒಬ್ಬರು ಎಂದರೆ ಅತಿಶಯೋಕ್ತಿಯಲ್ಲ. ಇಂತಹ ಜನಪ್ರಿಯ ನಿರ್ದೇಶಕ ಮತ್ತು ಸೂಪರ್ ಸ್ಟಾರ್ ಶಾರುಖ್ ಖಾನ್​ ತಮ್ಮ ಮುಂಬರುವ ಚಿತ್ರಕ್ಕಾಗಿ ಜೊತೆಯಾಗಿದ್ದಾರೆ ಎಂದರೆ ಅಭಿಮಾನಿಗಳಿಗೆ ಖಂಡಿತವಾಗಿಯೂ ಒಂದು ವಿಭಿನ್ನ ಚಿತ್ರಕಥೆ ಮನರಂಜಿಸಲು ಕಾದಿದೆ ಎಂದರ್ಥವಾಗುತ್ತದೆ.

ಶಾರುಖ್ ಖಾನ್


ಈಗ ರಾಜ್​ಕುಮಾರ್ ಹಿರಾನಿ ಅವರ ಮುಂಬರುವ ಚಿತ್ರದಲ್ಲಿ ಶಾರುಖ್ ಖಾನ್​ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ಕಥೆಯು ಸಾಮಾನ್ಯ ಬಾಲಿವುಡ್ ಚಿತ್ರಗಳಂತೆ ಅಲ್ಲದೆ, ವಿಭಿನ್ನವಾದ ಕಥೆ ಹೊಂದಿದೆಯಂತೆ. ಈ ಕುರಿತಾಗಿ ಒಂದು ವೆಬ್ ಪೋರ್ಟಲ್ ವರದಿ ಮಾಡಿದೆ.

ಇದನ್ನೂ ಓದಿ: ಕಂಗನಾ ರನೌತ್ ಅಭಿನಯದ Thalaivii ಮಾಡಿದ ವಾರಾಂತ್ಯದ ಕಲೆಕ್ಷನ್ ಎಷ್ಟು ಗೊತ್ತಾ..?

ಹೆಸರಿಡದ ಈ ಚಿತ್ರದ ಕಥೆಯು ವಿಭಿನ್ನವಾಗಿದ್ದು, ಅಮೆರಿಕ ಮತ್ತು ಕೆನಡಾಕ್ಕೆ ವಲಸೆ ಹೋಗಲು ಬಯಸುವ ಬಹುತೇಕರು ಅಕ್ರಮ ಮಾರ್ಗ ಬಳಸಿಕೊಂಡು ಹೋಗುವುದನ್ನು ಈ ಚಿತ್ರದಲ್ಲಿ ತೋರಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕ್ರಿಯೆಯಲ್ಲಿ ಕೆಲ ವ್ಯಕ್ತಿಗಳು ಇತರ ದೇಶಗಳಿಗೆ ಹೋಗಲು ನೇರವಾಗಿ ಹೋಗದೆ, ಅನೇಕ ವಿಮಾನ ನಿಲ್ದಾಣಗಳ ಮೂಲಕ ವಿದೇಶ ಪ್ರವೇಶಿಸುವುದನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

ಕಾನೂನು ಬದ್ಧವಾಗಿರುವ ನಿಯಮಗಳನ್ನು ಪಾಲಿಸುವುದರ ಮೂಲಕ ತಾವು ಹೋಗಬೇಕಾದಂತಹ ದೇಶಕ್ಕೆ ಪ್ರವೇಶಿಸಲು ಅನುಮೋದನೆ ಪಡೆಯದ ಅನೇಕ ಯುವಕರು ಪ್ರತಿ ವರ್ಷ ಹೇಗೆ ಬೇರೆ ರೀತಿಯ ವಿಧಾನಗಳನ್ನು ಅನುಸರಿಸಿಕೊಂಡು ವಿದೇಶಕ್ಕೆ ತೆರಳುತ್ತಾರೆ ಎನ್ನುವುದು ಚಿತ್ರದ ಕಥೆ ಆಗಿರುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  ಅಪರಿಚಿತುಡು ಸಿನಿಮಾ ಖ್ಯಾತಿಯ ನಟಿ Sadha ಈಗ ಹೇಗಿದ್ದಾರೆ ಗೊತ್ತಾ..?

ಚಿತ್ರದ ನಿರೂಪಣೆಯು ತುಂಬಾ ಭಾವನಾತ್ಮಕ ಮತ್ತು ಹಾಸ್ಯಾದ ಕ್ಷಣಗಳನ್ನು ಒಳಗೊಂಡಿರುತ್ತದೆ. ಈ ಕಥೆಯು ಪಂಜಾಬ್ ಮೂಲದ ವ್ಯಕ್ತಿಯ ಕಥೆಯಾಗಿದ್ದು ಮತ್ತು ಕೆನಡಾಕ್ಕೆ ಹೋಗಲು ಎಷ್ಟು ಕಷ್ಟಪಡುತ್ತಾರೆ ಮತ್ತು ಪ್ರಯಾಣದ ಕಥೆಯನ್ನು ಆಧರಿಸಿರುತ್ತದೆ.

ಒಂದು ಸುದ್ದಿ ಮಾಧ್ಯಮದ ಪ್ರಕಾರ, ರಾಜ್ ಕುಮಾರ್ ಹಿರಾನಿ ಈ ಚಿತ್ರದ ಚಿತ್ರೀಕರಣವನ್ನು ಇದೇ ತಿಂಗಳಿನಿಂದ ಶುರು ಮಾಡಲಿದ್ದು. ಜನವರಿ 2022ರವರೆಗೆ ಮುಂದುವರಿಯಲಿದೆಯಂತೆ. ಈ ಚಿತ್ರದಲ್ಲಿ ನಟಿ ತಾಪ್ಸಿ ಪನ್ನು ಲೀಡ್​ ಪಾತ್ರದಲ್ಲಿ ಅಭಿನಯಿಸುವರು ಎಂದು ವರದಿಗಳು ತಿಳಿಸಿವೆ. ವಲಸೆಯ ಹಿನ್ನೆಲೆಯ ಕಥೆಯನ್ನು ರಾಜ್ ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಬರೆದಿದ್ದಾರೆ.
Published by:Anitha E
First published: