• Home
  • »
  • News
  • »
  • entertainment
  • »
  • ಸುಖಾ ಸುಮ್ಮನೆ ಇಕ್ಕಟ್ಟಿಗೆ ಸಿಲುಕಿದ ಬಾಲಿವುಡ್ ನಟಿ: ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಡ್ತಾರಾ ಈಕೆ..?

ಸುಖಾ ಸುಮ್ಮನೆ ಇಕ್ಕಟ್ಟಿಗೆ ಸಿಲುಕಿದ ಬಾಲಿವುಡ್ ನಟಿ: ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಡ್ತಾರಾ ಈಕೆ..?

ನಟಿ ಶಬಾನಾ ಅಜ್ಮಿ

ನಟಿ ಶಬಾನಾ ಅಜ್ಮಿ

ಲೋಕಸಭೆ ಚುನಾವಣೆಯ ಕಾವು ಬಾಲಿವುಡನ್ನು ಬಿಟ್ಟಿಲ್ಲ. ಇಲ್ಲೂ ಸಹ ಪ್ರಧಾನಿ ಮೋದಿ ಅವರ ಪರ ಹಾಗೂ ವಿರೋಧ ಮಾಡುವವರು ಇದ್ದಾರೆ. ಲೋಕಸಭೆ ಚುನಾವಣೆ ಪ್ರಕಟವಾಗುತ್ತಿದ್ದಂತೆಯೇ ಬಿ-ಟೌನ್​ ಎರಡು ಭಾಗವಾಗಿದೆ. ಕೆಲ ಕಲಾವಿದರು ಮೋದಿ ಅವರ ಪರ ನಿಂತರೆ, ಮತ್ತೆ ಕೆಲವರು ವಿರೋಧವಾಗಿದ್ದಾರೆ. ಇದರ ನಡುವೆಯೇ ಮೋದಿಯನ್ನು ಸದಾ ಟೀಕಿಸುವ ಶಬಾನಾ ಅಜ್ಮಿ ಅವರು ಸುಖ ಸುಖಾಸುಮ್ಮನೆ ಸಂಕಷ್ಟಕ್ಕೆ ಸಿಲುಕಿದ್ದು, ಈಗ ಈ ಕುರಿತಂತೆ ಸ್ಪಷ್ಟನೆ ಸಹ ನೀಡಿದ್ದಾರೆ.

ಮುಂದೆ ಓದಿ ...
  • News18
  • Last Updated :
  • Share this:

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆದ್ದು ಪ್ರಧಾನಿ ಗದ್ದುಗೆ ಏರಿದರೆ ದೇಶ ಬಿಡ್ತೀವಿ ಅಂತ ಕೆಲವು ಹೇಳುವ ಮೂಲಕ ಸುದ್ದಿಯಾಗಿದ್ದರು. ನಂತರ ನರೇಂದ್ರ ಮೋದಿ ಗೆದ್ದು ಪ್ರಧಾನಿ ಕೂಡ ಆದರು. ಆದರೆ ಯಾರೂ ದೇಶ ಬಿಡಲಿಲ್ಲ. ಈಗ ಮತ್ತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ಮೋದಿ ಗೆದ್ದು, ಪ್ರಧಾನಿ ಆದರೆ ದೇಶ ಬಿಡ್ತೀನಿ ಅಂತಿದ್ದಾರೆ. ಹಾಗಾದರೆ ಯಾರು, ಏತಕ್ಕಾಗಿ ಹೇಳಿದ್ರು? ಮುಂದೇನಾಯ್ತು ಅಂತ ಇಲ್ಲಿದೆ ವರದಿ..


ಬಾಲಿವುಡ್‍ನ ಹಿರಿಯ ನಟಿ ಶಬಾನಾ ಅಜ್ಮಿ, ಹಾಗೂ ಅವರ ಗಂಡ ಸಂಭಾಷಣೆಕಾರ ಜಾವೆದ್ ಅಖ್ತರ್ ಮೊದಲಿಂದಲೂ ಪ್ರಧಾನಿ ಮೋದಿಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಹೀಗಿರುವಾಗ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾದರೆ ನಾನು ಭಾರತದಲ್ಲಿ ಇರೋದಿಲ್ಲ ಅಂತ ಶಬಾನಾ ಅಜ್ಮಿ ಹೇಳಿದ್ದರು ಅನ್ನೋ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು.


ಇದನ್ನೂ ಓದಿ: 'ನಿಖಿಲ್ ಎಲ್ಲಿದ್ದೀಯಪ್ಪಾ ಟೈಟಲ್' ವಿವಾದ ಮತ್ತೆ ಶುರು: ಸಿನಿಮಾದಲ್ಲಿ ರಾಜಕೀಯ ಬೆರೆಸಬೇಡಿ ಅಂದ್ರು ನಿರ್ಮಾಪಕರು !


ಆದರೆ ಈ ಕುರಿತು ಟ್ವೀಟ್ ಮಾಡಿರುವ ಶಬಾನಾ, 'ಇದು ಸುಳ್ಳು ಸುದ್ದಿ. ನಾನು ಹಾಗೆ ಹೇಳೇ ಇಲ್ಲ. ಹಾಗೇ ನನಗೆ ದೇಶ ಬಿಡುವ ಆಲೋಚೆನಯೂ ಇಲ್ಲ. ನಾನು ಹುಟ್ಟಿದ್ದು ಇಲ್ಲೇ ಹಾಗೂ ಅಂತ್ಯ ಕಾಣೋದೂ ಇಲ್ಲೇ' ಎಂದು ಸ್ಪಷ್ಟನೆ ನೀಡಿದ್ದಾರೆ.ಇದನ್ನೂ ಓದಿ: ಯೂಟ್ಯೂಬ್​ನಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಹಾಡಾಗಿ ಹೊರ ಹೊಮ್ಮಿದ 'ಚುಟು ಚುಟು...' ಗೀತೆ..!


ಒಟ್ಟಾರೆ ಮೋದಿ ಪರ ಹಾಗೂ ವಿರೋಧ ಅಂತ ಬಹಳ ಹಿಂದೆಯೇ ಬಾಲಿವುಡ್ ಸಹ ಎರಡು ಭಾಗವಾಗಿದೆ. ಕೆಲ ದಿನಗಳ ಹಿಂದೆ ಮೋದಿಗೆ ಮತ ಮಾಡಬೇಡಿ ಎಂದು 650 ಮಂದಿ ಕಲಾವಿದರು ಜನರಿಗೆ ಓಪನ್ ಲೆಟರ್ ಬರೆದಿದ್ದರು. ಅದರ ಬೆನ್ನ ಹಿಂದೆಯೇ 900ಕ್ಕೂ ಹೆಚ್ಚು ಮಂದಿ ಕಲಾವಿದರು, ಮೋದಿಯಂತಹ ಅತ್ಯುತ್ತಮ ನಾಯಕನನ್ನು ಗೆಲ್ಲಿಸಲೇಬೇಕು ಎಂದು ಮತ್ತೊಂದು ಪತ್ರ ಬರೆದಿದ್ದರು.

Published by:Anitha E
First published: