• Home
  • »
  • News
  • »
  • entertainment
  • »
  • Sajid Khan: ಸಾಜಿದ್ ಖಾನ್​ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಜಿಯಾ ಖಾನ್​ ಸಹೋದರಿ ಕರಿಷ್ಮಾ-ನಟಿ ಶರ್ಲಿನ್​ ಚೋಪ್ರಾ 

Sajid Khan: ಸಾಜಿದ್ ಖಾನ್​ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಜಿಯಾ ಖಾನ್​ ಸಹೋದರಿ ಕರಿಷ್ಮಾ-ನಟಿ ಶರ್ಲಿನ್​ ಚೋಪ್ರಾ 

ಜಿಯಾ ಖಾನ್​, ಸಾಜಿದ್​ ಖಾನ್​ ಹಾಗೂ ಶರ್ಲಿನ್​ ಚೋಪ್ರಾ

ಜಿಯಾ ಖಾನ್​, ಸಾಜಿದ್​ ಖಾನ್​ ಹಾಗೂ ಶರ್ಲಿನ್​ ಚೋಪ್ರಾ

Sexual Harassment Allegation: ನಟ, ನಿರ್ದೇಶಕ ಹಾಗೂ ಖ್ಯಾತ ನಿರ್ದೇಶಕಿ ಫರಾ ಖಾನ್​ ಅವರ ಸಹೋದರ ಸಾಜಿದ್​ ಖಾನ್​ ಅವರ ವಿರುದ್ಧ ದಿವಂಗತ ನಟಿ ಜಿಯಾ ಖಾನ್​ ಅವರ ಸಹೋದರಿ ಕರಿಷ್ಮಾ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ಕರಿಷ್ಮಾ ಅವರ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ನಟಿ ಶರ್ಲಿನ್​ ಚೋಪ್ರಾ ಸಹ ತಮಗಾಗಿದ್ದ ಅನುಭವವನ್ನೂ ಟ್ವೀಟ್​ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. 

ಮುಂದೆ ಓದಿ ...
  • Share this:

ಬಾಲಿವುಡ್​ ಸೇರಿದಂತೆ ದಕ್ಷಿಣ ಸಿನಿ ರಂಗದಲ್ಲೂ ಸಹ ಆಗಾಗ ಪಾತ್ರಕ್ಕಾಗಿ ಪಲ್ಲಂಗದ ವಿಷಯ ಸದ್ದು ಮಾಡುತ್ತಿರುತ್ತದೆ. ಇದು ಹಾಲಿವುಡ್​ಗೂ ಹೊರತಾಗಿಲ್ಲ. ಅಲ್ಲೂ ಸಹ ಅವಕಾಶಕ್ಕಾಗಿ ಲೈಂಗಿಕ ಕಿರುಕುಳ ಕೊಡುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಈ ಹಿಂದೆ ಬಾಲಿವುಡ್​ನಲ್ಲಿ ಸಾಕಷ್ಟು ಸಲ, ನಟ-ನಟಿಯರು ತಮಗಾದ ಕಹಿ ಹಾಗೂ ಕೆಟ್ಟ ಅನುಭವಗಳ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಪೊಲೀಸ್​ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ಬಾಲಿವುಡ್​ ಬಾಬುಜಿ  ಎಂದೇ ಖ್ಯಾತರಾಗಿರುವ ಅಲೋಕ್​ ನಾಥ್​ ಅವರ ವಿರುದ್ಧ ಮೀಟೂ ಅಭಿಯಾನದಲ್ಲಿ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದಿದ್ದವು.  ನಟಿ ತನುಶ್ರೀ ದತ್ತ ಸಹ ಹಿರಿಯ ನಟ ನಾನಾ ಪಾಟೇಕರ್​ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿ, ನ್ಯಾಯಾಲಯದ ಮೆಟ್ಟಿಲೇರಿದ್ದರು. ಈಗ ಇಂತಹದ್ದೇ ಮತ್ತೊಂದು ಲೈಂಗಿಕ ಕಿರುಕುಳದ  ಆರೋಪ ಬಾಲಿವುಡ್​ ಅಂಗಳದಲ್ಲಿ ಕೇಳಿ ಬಂದಿದೆ. 


ನಟ, ನಿರ್ದೇಶಕ ಹಾಗೂ ಖ್ಯಾತ ನಿರ್ದೇಶಕಿ ಫರಾ ಖಾನ್​ ಅವರ ಸಹೋದರ ಸಾಜಿದ್​ ಖಾನ್​ ಅವರ ವಿರುದ್ಧ ದಿವಂಗತ ನಟಿ ಜಿಯಾ ಖಾನ್​ ಅವರ ಸಹೋದರಿ ಕರಿಷ್ಮಾ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ಕರಿಷ್ಮಾ ಅವರ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ನಟಿ ಶರ್ಲಿನ್​ ಚೋಪ್ರಾ ಸಹ ತಮಗಾಗಿದ್ದ ಅನುಭವವನ್ನೂ ಟ್ವೀಟ್​ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.ಬಿಬಿಸಿ ಮಾಡಿರುವ ಸಾಕ್ಷ್ಯಚಿತ್ರ ಡೆತ್​ ಇನ್​ ಬಾಲಿವುಡ್​ನಲ್ಲಿ ಜಿಯಾ ಖಾನ್ ಸಹೋದರಿ ಕರಿಷ್ಮಾ, ತನ್ನ ಅಕ್ಕನಿಗಾಗಿದ್ದ ಲೈಂಗಿಕ ಕುರಿಕುಳದ ಕುರಿತು ಮಾತನಾಡಿದ್ದಾರೆ. ಜಿಯಾ ಖಾನ್​ ಅವರ ಮೇಲೆ ಮಾಡಲಾಗಿರುವ ಮೂರು ಸಂಚಿಕೆಗಳ ಈ ಸಾಕ್ಷ್ಯ ಚಿತ್ರವನ್ನು ಯುಕೆಯಲ್ಲಿ ಮಾತ್ರ ರಿಲೀಸ್​ ಮಾಡಲಾಗಿದೆ. ಇದರಲ್ಲಿ ಎರಡನೇ ಸಂಚಿಕೆಯಲ್ಲಿ ಕರಿಷ್ಮಾ ಸಾಜಿದ್​ ಖಾನ್​ ವಿರುದ್ಧ ಆರೋಪ ಮಾಡಿದ್ದಾರೆ.ಈ ವಿಡಿಯೋದಲ್ಲಿ ಕರಿಷ್ಮಾ, ತನ್ನ ಸಹೋದರಿ ಜಿಯಾ ಅವರಿಗೆ ಆಡಿಷನ್​ ಮಾಡಿದ್ದ ಸಾಜಿದ್​ ಖಾನ್​ ಯಾವ ರೀತಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ವಿವರಿಸಿದ್ದಾರೆ. ಸ್ಕ್ರಿಪ್ಟ್​ ಓದಲು ಕೊಟ್ಟ ಸಾಜಿದ್​, ಜಿಯಾಗೆ ಅವರ ಟಾಪ್​ ಹಾಗೂ ಒಳ ಉಡುಪನ್ನು ತೆಗೆಯುವಂತೆ ಹೇಳಿದ್ದರಂತೆ. ಅದು ರಿಹರ್ಸಲ್ ಎಂದೂ ಹೇಳುತ್ತಾ ಒತ್ತಾಯ ಮಾಡಿದ್ದರಂತೆ. ಈ ಬಗ್ಗೆ ಮನೆಗೆ ಬಂದಾಗ ಜಿಯಾ ಖಾನ್​ ಕಣ್ಣೀರಿಡುತ್ತಾ ಸಹೋದರಿಯ ಬಳಿ ನಡೆದದ್ದನ್ನು ವಿವರಿಸಿದ್ದರಂತೆ. ಆಗ ಜಿಯಾ ಖಾನ್​ ಅವರು ಸಾಜಿದ್ ಜೊತೆ ಕಾಂಟ್ರ್ಯಾಕ್​ ಮಾಡಿಕೊಂಡಿದ್ದು, ನಡೆದ ಘಟನೆಯಿಂದಾಗಿ ತುಂಬಾ ಹೆದರಿಕೊಂಡಿದ್ದರಂತೆ.ಜಿಯಾ ಅವರ ಸಹೋದರಿ ಆರೋಪ ಮಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಅಲ್ಲದೆ ನಟಿ ಕಂಗನಾ ಸಹ ಈ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.ಜಿಯಾ ಖಾನ್​ 2013ರಲ್ಲಿ ಸಾವನ್ನಪ್ಪಿದ್ದು, ಅವರದ್ದು ಆತ್ಮಹತ್ಯೆ ಎನ್ನಲಾಗುತ್ತದೆ. ಆದರೆ, ಜಿಯಾ ಖಾನ್​ ತಾಯಿ ಮಾತ್ರ ಮಗಳದ್ದು ಕೊಲೆ ಎಂದು ಇಂದಿಗೂ ಹೇಳುತ್ತಾರೆ. ಅದಕ್ಕೆ ಕಾರಣ ಆದಿತ್ಯ ಪಾಂಚೋಲಿ ಅವರ ಮಗ ಸೂರಜ್​ ಎಂದೇ ಆರೋಪಿಸುತ್ತಾರೆ.


ಮೀಟೂ ಅಭಿಯಾನದಲ್ಲೂ ಸಾಜಿದ್​ ಖಾನ್​ ವಿರುದ್ಧ ಕೇಳಿ ಬಂದಿತ್ತು ಆರೋಪ 


ಸಹಾಯಕ ನಿರ್ದೇಶಕಿ ಸಲೋನಿ ಚೋಪ್ರಾ ಮತ್ತು ಪತ್ರಕರ್ತೆ ಕರಿಷ್ಮಾ ಉಪಾಧ್ಯಾಯ 2018ರಲ್ಲಿ ಸಾಜಿದ್​ ಖಾನ್​ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಕುರಿತಾಗಿ ಆಗ ಪ್ರತಿಕ್ರಿಯೆ ನೀಡಿದ್ದ ಸಹೋದರಿ ಫರಾ ಖಾನ್​, ಸಾಜಿದ್​ ನಡುವಳಿಕೆ ಸರಿಯಲ್ಲ ಅಂದರೆ, ಅದನ್ನು ಅವರು ಸರಿಪಡಿಸಿಕೊಳ್ಳಬೇಕು. ತಾನು ನೊಂದ ಮಹಿಳೆಯ ಪರ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದ್ದರು.

Published by:Anitha E
First published: