Asa Butterfield| ಅನುಮತಿ ಇಲ್ಲದೆ ತನ್ನ ಫೋಟೋ ತೆಗೆದ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡ ನಟ ಅಸ ಬಟರ್‌ಫೀಲ್ಡ್..!

ನಟನ ಟ್ವೀಟ್‌ಗೆ ಹಲವಾರು ಬಳಕೆದಾರರು ಧನಾತ್ಮಕ ಚಿಂತನೆಗಳಿರುವ ಕಾಮೆಂಟ್‌ ಸೇರಿಸಿದ್ದು, ಈ ಅನುಭವದಿಂದ ಹೊರಬರಲು ನಟನಿಗೆ ನೆರವು ನೀಡಿದ್ದಾರೆ. ನಟನ ಬೇಸರ ಹೋಗಲಾಡಿಸಲು ಹೆಚ್ಚಿನ ಬಳಕೆದಾರರು ನಟನಿಗೆ ಕಾಳಜಿ ವ್ಯಕ್ತಪಡಿಸಿದ್ದು ಸುರಕ್ಷಿತವಾಗಿರಿ ಎಂಬ ಕಾಮೆಂಟ್‌ಗಳನ್ನು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.

ಅಸ ಬಟರ್‌ಫೀಲ್ಡ್..!.

ಅಸ ಬಟರ್‌ಫೀಲ್ಡ್..!.

  • Share this:
    ಸೆಕ್ಸ್ ಎಜ್ಯುಕೇಶನ್ (Sex Education) ಟಿವಿ ಸೀರೀಸ್ (TV Series) ನಟ ಅಸ ಬಟರ್‌ಫೀಲ್ಡ್ (Asa Butterfield) ಅನುಮತಿ ಇಲ್ಲದೆ ತನ್ನ ಫೋಟೋಗಳನ್ನು ಕ್ಲಿಕ್ಕಿಸಿರುವ ಅಭಿಮಾನಿಗಳ ವರ್ತನೆ ಕುರಿತು ಟ್ವೀಟ್ ಮಾಡಿದ್ದು ಅಭಿಮಾನಿಗಳು ನಡೆದುಕೊಂಡಿರುವ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆಕ್ಸ್ ಎಜ್ಯುಕೇಶನ್‌ ಮೂರನೇ ಸೀಸನ್‌ನಲ್ಲಿ ಕಾಣಿಸಿಕೊಂಡಿರುವ ಅಸ ಬಟರ್‌ಫೀಲ್ಡ್ ತನ್ನ ಕೆಲವೊಂದು ಅಭಿಮಾನಿಗಳ ನಡವಳಿಕೆಯು ಇರಿಸುಮುರಿಸನ್ನುಂಟು ಮಾಡಿದ್ದು ಅವರ ವರ್ತನೆಗೆ ಅಸಮಾಧಾನ ಪ್ರಕಟಿಸಿದ್ದಾರೆ. ತನ್ನ ಅನುಮತಿ ಇಲ್ಲದೆಯೇ ಕೆಲವೊಂದು ಜನರು ಫೋಟೋಗಳನ್ನು ಹೇಗೆ ಕ್ಲಿಕ್ಕಿಸಿದರು ಎಂಬುದಾಗಿ ಬಟರ್‌ಫೀಲ್ಡ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

    ನಾನು ರಾತ್ರಿ ವೇಳೆಯಲ್ಲಿ ಹೊರಗಡೆ ಇದ್ದಾಗ ಜನರು ನನ್ನ ಅನುಮತಿ ಇಲ್ಲದೆ ನನ್ನ ವಿಡಿಯೋ ಶೂಟಿಂಗ್ ಮಾಡುವುದು ಹಾಗೂ ಫೋಟೋಗಳನ್ನು ತೆಗೆಯುವುದನ್ನು ಮಾಡುತ್ತಾರೆ. ಇದರಿಂದ ನಾನು ಬೇಸತ್ತಿದ್ದೇನೆ. ಇದರಿಂದ ನನ್ನ ಸಂತೋಷ ಹಾಗೂ ರಾತ್ರಿಯ ನನ್ನ ಹೊರಗಡೆಯ ತಿರುಗಾಟಕ್ಕೆ ಅಡ್ಡಿಯುಂಟಾಗಿದೆ. ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ ಎಂದು ನಟ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.



    ಕ್ಯಾಬ್ ಹೋಮ್‌ನಿಂದ ನಾನು ಟ್ವೀಟ್ ಮಾಡುತ್ತಿದ್ದು ಫೋಟೋಗಳ ಕಾರಣಕ್ಕಾಗಿಯೇ ಇಂದು ರಾತ್ರಿ ಹಲವಾರು ಫೋನ್‌ಗಳನ್ನು ನಾನು ಮುರಿದು ಹಾಕಿದ್ದೇನೆ ಎಂದು ನಟ ಹೇಳಿದ್ದಾರೆ. ಅಭಿಮಾನಿಗಳ ಈ ವರ್ತನೆಯಿಂದ ಸೆಲೆಬ್ರಿಟಿಗಳು ತೊಂದರೆಗೆ ಸಿಲುಕಿ ಕೊಳ್ಳುವ ಅಪಾಯವಿರುತ್ತದೆ. ವಿಶೇಷವಾಗಿ ಅವರು ರಾತ್ರಿ ಹೊರಗೆ ಕಾಲಕಳೆಯುವಾಗ ಅವರ ಸಂತಸಕ್ಕೆ ಇದು ಅಡ್ಡಿಯನ್ನುಂಟು ಮಾಡುತ್ತದೆ ಎಂದು ಬಟರ್‌ಫೀಲ್ಡ್ ಟ್ವೀಟ್ ಮಾಡಿದ್ದಾರೆ.

    ನಟನ ಟ್ವೀಟ್‌ಗೆ ಹಲವಾರು ಬಳಕೆದಾರರು ಧನಾತ್ಮಕ ಚಿಂತನೆಗಳಿರುವ ಕಾಮೆಂಟ್‌ ಸೇರಿಸಿದ್ದು, ಈ ಅನುಭವದಿಂದ ಹೊರಬರಲು ನಟನಿಗೆ ನೆರವು ನೀಡಿದ್ದಾರೆ. ನಟನ ಬೇಸರ ಹೋಗಲಾಡಿಸಲು ಹೆಚ್ಚಿನ ಬಳಕೆದಾರರು ನಟನಿಗೆ ಕಾಳಜಿ ವ್ಯಕ್ತಪಡಿಸಿದ್ದು ಸುರಕ್ಷಿತವಾಗಿರಿ ಎಂಬ ಕಾಮೆಂಟ್‌ಗಳನ್ನು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಇನ್ನು ಕೆಲವು ಬಳಕೆದಾರರು ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಸೆಲೆಬ್ರಿಟಿಗಳ ವೈಯಕ್ತಿಕ ಜೀವನ ಗೌರವಿಸಿ ಎಂದು ವಿನಂತಿಸಿಕೊಂಡಿದ್ದಾರೆ.

    ಬಟರ್‌ಫೀಲ್ಡ್‌ಗೆ ಹೊರಗಡೆ ಸುತ್ತಾಡಲು ಹೋಗುವಾಗ ಹೂಡೀಸ್ ಹಾಗೂ ಮಾಸ್ಕ್ ಧರಿಸುವಂತೆ ಇನ್ನೊಂದಿಷ್ಟು ಬಳಕೆದಾರರು ಸಲಹೆ ನೀಡಿದ್ದಾರೆ. ಬಟರ್‌ಫೀಲ್ಡ್ ಈಗ ಖ್ಯಾತನಾಗಿರುವುದರಿಂದ ಅಭಿಮಾನಿಗಳು ಆತ ಹೋದೆಲ್ಲೆಲ್ಲಾ ಆತನನ್ನು ಸುತ್ತುವರಿಯುವುದು ಇಲ್ಲವೇ ಫೋಟೋ ತೆಗೆಯುವುದನ್ನು ಮಾಡಬಾರದು ಎಂದು ಇನ್ನೊಂದಿಷ್ಟು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

    ಬಟರ್‌ಫೀಲ್ಡ್ ನಟಿಸಿರುವ ಸೆಕ್ಸ್ ಎಜ್ಯುಕೇಶನ್ ತನ್ನ ಮೂರನೇ ಸೀಸನ್ ಅನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಿದ್ದು, ಬಟರ್‌ಫೀಲ್ಡ್ ಒಟಿಸ್ ಪಾತ್ರಕ್ಕೆ ಅಭಿನಂದನೆ ದೊರಕಿದ್ದರೆ ಇನ್ನೊಂದೆಡೆ ಇಬ್ಬರು ಮಹಿಳಾ ಪಾತ್ರಗಳೊಂದಿಗೆ ಆತನ ಗೊಂದಲಮ ಯವಾಗಿರುವ ಸಂಬಂಧಗಳಿಗೂ ಹೆಚ್ಚಿನ ವಿಮರ್ಶೆಗಳು ಲಭ್ಯವಾಗಿವೆ.

    ಇದನ್ನೂ ಓದಿ:Pornography Case: ಜೈಲಿನಿಂದ ಹೊರ ಬಂದ ಶಿಲ್ಪಾ ಶೆಟ್ಟಿ ಪತಿ Raj Kundra

    ರಾತ್ರಿಯ ತಿರುಗಾಟದ ಸಮಯದಲ್ಲೂ ತನ್ನ ವೈಯಕ್ತಿಕ ಸಮಯವನ್ನು ಆನಂದಿಸಲು ತನಗೂ ಸಮಯ ನೀಡಿ ಎಂದು ನಟ ತನ್ನ ಅಭಿಮಾನಿಗಳನ್ನು ವಿನಂತಿಸಿಕೊಂಡಿದ್ದಾರೆ. ಇದಕ್ಕಾಗಿಯೇ ನಟ ತನ್ನ ಅನುಮತಿ ಇಲ್ಲದೆ ಫೋಟೋಗಳನ್ನು ತೆಗೆದಿದ್ದಕ್ಕಾಗಿ ಖಾರವಾಗಿಯೇ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಸೆಲೆಬ್ರಿಟಿಗಳಿಗೂ ವೈಯಕ್ತಿಕ ಜೀವನವಿದ್ದು ಅಭಿಮಾನಿಗಳಿಂದ ತಪ್ಪಿಸಿಕೊಂಡು ಓಡಾಡುವ ಸ್ಥಿತಿ ಅವರಿಗೆ ಬರಬಾರದು ಎಂದು ಬಟರ್‌ಫೀಲ್ಡ್ ತಿಳಿಸಿದ್ದು ನಟ ನಟಿಯರ ಆನಂದಕ್ಕೆ ಅಡ್ಡಿಯನ್ನುಂಟು ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.
    Published by:MAshok Kumar
    First published: