Willie Garson: ಹಾಲಿವುಡ್​ ನಟ Willie Garson ಅನಾರೋಗ್ಯದಿಂದ ನಿಧನ

Hollywood:  1964 ರಲ್ಲಿ ನ್ಯೂಜೆರ್ಸಿಯಲ್ಲಿ ಜನಿಸಿದ ವಿಲಿಯಂ ಗಾರ್ಸನ್ ಪಜಮಾಂಟ್, ಗಾರ್ಸನ್ ರಂಗಭೂಮಿಯಲ್ಲಿ ಅಧ್ಯಯನ ಮಾಡಿದರು ಮತ್ತು ಯೇಲ್ ಸ್ಕೂಲ್ ಆಫ್ ಡ್ರಾಮಾದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು

ವಿಲ್ಲಿ ಗಾರ್ಸನ್

ವಿಲ್ಲಿ ಗಾರ್ಸನ್

  • Share this:
ಸೆಕ್ಸ್ ಮತ್ತು ಸಿಟಿ ಸ್ಟಾರ್ (Sex and the City )ವಿಲ್ಲಿ ಗಾರ್ಸನ್(Willie Garson) ನಿಧನರಾಗಿದ್ದಾರೆ.  57 ವರ್ಷ ವಯಸ್ಸಿನ ಅವರು ಮಂಗಳವಾರ ಮಧ್ಯಾಹ್ನ ಅನಾರೋಗ್ಯದಿಂದ ನಿಧನರಾದರು ಎಂದು ಅವರ ಕುಟುಂಬದ ಸದಸ್ಯರು ದೃಢಪಡಿಸಿದರು. ಗಾರ್ಸನ್ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು, ಮತ್ತು ಅವರ ಸಾವಿನ ಸಮಯದಲ್ಲಿ ಕುಟುಂಬದ ಸದಸ್ಯರು ಅವರ ಜೊತೆ ಇದ್ದರು.  ಗಾರ್ಸನ್ HBO ನ ಸೆಕ್ಸ್ ಅಂಡ್ ದಿ ಸಿಟಿ ಮತ್ತು ಅದರ ಸ್ಪಿನ್‌ಆಫ್ ಚಲನಚಿತ್ರಗಳಲ್ಲಿ ಸಾರಾ ಜೆಸ್ಸಿಕಾ ಪಾರ್ಕರ್‌ನ ಕ್ಯಾರಿ ಬ್ರಾಡ್‌ಶಾ ಅವರ ಅತ್ಯುತ್ತಮ ಸ್ನೇಹಿತ ಸ್ಟ್ಯಾನ್‌ಫೋರ್ಡ್ ಬ್ಲಾಚ್ ಪಾತ್ರವನ್ನು ನಿರ್ವಹಿಸಿದ್ದಾರೆ. ಮುಂಬರುವ ರೀಬೂಟ್‌ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. 

ನಟ ಕ್ಯಾಂಟೋನ್ ಇನ್‌ಸ್ಟಾಗ್ರಾಮ್‌ನಲ್ಲಿ ಗಾರ್ಸನ್ ಅವರಿಗೆ ಗೌರವವನ್ನು ಸೂಚಿಸಿದ್ದು, ಅವರ  ಸ್ನೇಹಿತ ಮತ್ತು ಸಹ ನಟನ ನಿಧನ ಅವರನ್ನ ಕುಗ್ಗಿಸಿದೆ ಎಂದು ಬರೆದುಕೊಂಡಿದ್ದಾರೆ. "ನಾನು ಅವರಿಗಿಂತ  ಒಳ್ಲೆಯ ಸಹ ನಟನನ್ನ ಪಡೆಯಲು ಸಾಧ್ಯವಿಲ್ಲ. ನಾನು ದುಃಖಿತನಾಗಿದ್ದೇನೆ ಮತ್ತು  ಕುಗ್ಗಿ ಹೋಗಿದ್ದೇನೆ ಎಂದು ಕ್ಯಾಂWillie Garsoಟೋನ್ ಬರೆದಿದ್ದಾರೆ. ತುಂಬಾ ಬೇಗ ನಮ್ಮೆಲ್ಲರಿಂದ ನಿಮ್ಮನ್ನ ದೂರ ಮಾಡಲಾಗಿದೆ. ನೀವು ದೇವರಿಂದ ಬಣದ  ಉಡುಗೊರೆಯಾಗಿದ್ದೀರಿ. ಲವ್ ಯೂ ಎಂದು ಸಹ ಬರೆದು ನೋವನ್ನು ಹಂಚಿಕೊಂಡಿದ್ದಾರೆ.

2004 ರಲ್ಲಿ ಮೂಲ ಸರಣಿಯ ನಂತರ, ಗಾರ್ಸನ್ ತನ್ನ ವೃತ್ತಿಜೀವನವನ್ನು ಜಾನ್ ಫ್ರಮ್ ಸಿನ್ಸಿನಾಟಿ, ವೈಟ್ ಕಾಲರ್, ಹೋಲ್ ವೇ ಡೌನ್ ಮತ್ತು ಹವಾಯಿ ಫೈವ್-ಒ ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.  ಅವರು ಸೆಪ್ಟೆಂಬರ್ 4 ರಂದು ಸಾಮಾಜಿಕ ಮಾಧ್ಯಮದಲ್ಲಿ ಕೊನೆಯದಾಗಿ ಸಕ್ರಿಯರಾಗಿದ್ದರು, "BE KND TO EACH OTHER .... ಯಾವಾಗಲೂ ಪ್ರೀತಿಸಿ. ಎಲ್ಲರಿಗೂ ಹತ್ತಿರವಾಗು ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: Radhe Shyam ಸೆಟ್​ನಲ್ಲಿ ಪ್ರಭಾಸ್​ಗೆ ಕಿರಿಕಿರಿ ಉಂಟುಮಾಡಿದ್ದ Pooja Hegde: ಚಿತ್ರತಂಡ ಹೇಳಿದ್ದು ಹೀಗೆ..!

ಗಾರ್ಸನ್ ಅವರ ಮಗ ನಾಥೆನ್ ಮಂಗಳವಾರ ಇನ್ಸ್ಟಾಗ್ರಾಮ್ನಲ್ಲಿ ತನ್ನ ತಂದೆಗೆ ಹೃದಯ ವಿದ್ರಾವಕ ಗೌರವವನ್ನು  ಸೂಚಿಸಿದ್ದಾರೆ. ಅವರನ್ನು  ನನಗೆ ತಿಳಿದಿರುವ ತಮಾಷೆಯ ಮತ್ತು ಚುರುಕಾದ ವ್ಯಕ್ತಿ ಎಂದು  ಬಣ್ಣಿಸಿದ್ದಾರೆ.

ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಅಪ್ಪಾ ನನಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.  ನಾನು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ, ಆದರೆ ನೀವು ನಿಮ್ಮದೇ ಸಾಹಸಕ್ಕೆ ಹೋಗುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ನಾಥೆನ್ ಹೇಳಿದ್ದು, ನೀವು ಯಾವಾಗಲೂ ನನ್ನ ಜೊತೆಯಲ್ಲಿ ಇರುತ್ತೀರಿ. ನಿಮಗೆ ತಿಳಿದಿರುವುದಕ್ಕಿಂತ ಹೆಚ್ಚಾಗಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನೀವು ಈಗ ಶಾಂತಿಯಿಂದ ಇರುವುದಕ್ಕೆ ನನಗೆ ಸಂತೋಷವಾಗಿದೆ. ನೀವು ನನಗೆ ತಿಳಿದಿರುವ ಅತ್ಯಂತ ತಮಾಷೆಯ ಮತ್ತು ಚುರುಕಾದ ವ್ಯಕ್ತಿ.  ನಿಮ್ಮ ಪ್ರೀತಿ ನನಗೆ ಸಿಕ್ಕಿದ್ದು ಸಂತೋಷ ತಂದಿದೆ. ನಾನು ಅದನ್ನು ಎಂದಿಗೂ ಮರೆಯುವುದಿಲ್ಲ ಅಥವಾ ಕಳೆದುಕೊಳ್ಳುವುದಿಲ್ಲ ಎಂದು ಬೇಸರದ ನುಡಿಗಳನ್ನು ಬರೆದಿದ್ದಾರೆ.

ನಟಿ  ಸಿಂಥಿಯಾ ನಿಕ್ಸನ್ ಕೂಡ ಟ್ವಿಟ್ಟರ್ ನಲ್ಲಿ  ಅವರು ಬೆಳಕು, ಸ್ನೇಹದ ಮೂಲ" ಎಂದು ನೆನಪಿಸಿಕೊಂಡು ಗೌರವ ಸಲ್ಲಿಸಿದರು. ಬೆನ್ ಸ್ಟಿಲ್ಲರ್, ಜೇಸನ್ ಅಲೆಕ್ಸಾಂಡರ್ ಮತ್ತು ಇತರ ನಟರು  ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Samantha Naga Chaitanya Divorce: ಒಂದು ಕಡೆ ವಿಚ್ಛೇದನದ ಸುದ್ದಿ, ಮತ್ತೊಂದು ಕಡೆ ಪಾರ್ಟಿ ಮಾಡೋದ್ರಲ್ಲಿ ಬ್ಯುಸಿಯಾದ ಸಮಂತಾ

1964 ರಲ್ಲಿ ನ್ಯೂಜೆರ್ಸಿಯಲ್ಲಿ ಜನಿಸಿದ ವಿಲಿಯಂ ಗಾರ್ಸನ್ ಪಜಮಾಂಟ್, ಗಾರ್ಸನ್ ರಂಗಭೂಮಿಯಲ್ಲಿ ಅಧ್ಯಯನ ಮಾಡಿದರು ಮತ್ತು ಯೇಲ್ ಸ್ಕೂಲ್ ಆಫ್ ಡ್ರಾಮಾದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ನಂತರ 1980 ರಲ್ಲಿ ಚೀರ್ಸ್, ಫ್ಯಾಮಿಲಿ ಟೈಸ್  ಸೇರಿದಂತೆ ಹಲವಾರು ಜನಪ್ರಿಯ  ಟಿವಿ ಸರಣಿಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಿದ್ದಾರೆ.  1998 ರಲ್ಲಿ ತನ್ನ ಸೆಕ್ಸ್ ಮತ್ತು ಸಿಟಿ ಪಾದಾರ್ಪಣೆ ಮಾಡುವ ಮೊದಲು ಕಾಣಿಸಿಕೊಂಡರು.
Published by:Sandhya M
First published: