Sandalwood: ಅವತ್ತು ಆ ಹೀರೋ ನನ್ನನ್ನು ಹೊರಗೆ ಕಳಿಸಿದ್ದರು: ಇವತ್ತು ಅವರಿಗೆ ನಾನೇ ನಿರ್ಮಾಪಕ-ವಿಲನ್ ಆಗಲು ರೆಡಿ

ಸಿನಿಮಾ ಒಂದರ ಚಿತ್ರೀಕರಣದ ವೇಳೆಯೇ ಆ ಚಿತ್ರದ ನಾಯಕ ಇವರನ್ನು ಪಾತ್ರದಿಂದ ತೆಗೆದು, ಸಿನಿಮಾದಿಂದ ಹೊರಗೆ ಕಳುಹಿಸಿ ಎಂದು ಶೂಟಿಂಗ್ ಸ್ಪಾಟ್‍ನಿಂದಲೇ ಹೊರಗೆ ಹಾಕಿದ್ದರಂತೆ. ಈಗ ಆ ನಟನ ಸಿನಿಮಾಗೆ ನಿರ್ಮಾಪಕ ಹಾಗೂ ವಿಲನ್ ಆಗಲು ರೆಡಿ ಎನ್ನುತ್ತಿದ್ದಾರೆ ಸೆವೆನ್ ರಾಜ್.

ಸೆವೆನ್ ರಾಜ್ ನಿರ್ಮಾಣದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ  ಸಿನಿಮಾ

ಸೆವೆನ್ ರಾಜ್ ನಿರ್ಮಾಣದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಸಿನಿಮಾ

  • Share this:
ಸಿನಿಮಾ ರಂಗವೇ ಹಾಗೆ. ಮಾಯಾಲೋಕ. ಇವತ್ತು ಹೀರೋ ಆಗಿರುವವರು ನಾಳೆ ಝೀರೋ ಆಗಿರುತ್ತಾರೆ. ಹಾಗೇ ಇವತ್ತು ಝೀರೋ ಆಗಿರುವವರು ನಾಳೆ ಹೀರೋ ಆಗಿರುತ್ತಾರೆ. ಅಂಥದ್ದೇ ಒಂದು ರೋಚಕ ಘಟನೆಯನ್ನು ರೆಡ್  ಆ್ಯಂಡ್​ ವೈಟ್ ಫ್ಯಾಮಿಲಿ ಎಂದೇ ಹೆಸರುವಾಸಿಯಾಗಿರುವ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ ಮಾಡಿರುವ ನಟ, ನಿರ್ಮಾಪಕ ಸೆವೆನ್ ರಾಜ್ ಬಿಚ್ಚಿಟ್ಟಿದ್ದಾರೆ. ಹೌದು, ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಏಜೆಂಟ್‍ಗಳಲ್ಲಿ ಒಬ್ಬರಾಗಿರುವ ಸೆವೆನ್ ರಾಜ್ ಇಂದು ಕೋಟ್ಯಧಿಪತಿ. ಆದರೆ ಹಿಂದೊಂದು ದಿನ ಏನೂ ಇಲ್ಲದೇ ಸಿನಿಮಾ ಆಸೆ ಹೊತ್ತು ಗಾಂಧಿನಗರಕ್ಕೆ ಬಂದಿದ್ದರಂತೆ.

`ಮೂವತ್ತು ವರ್ಷಗಳ ಹಿಂದೆ ಹತ್ತು ರೂಪಾಯಿಗೂ ಪರದಾಡುವ ಬಡ ಕುಟುಂಬದಿಂದ ಬಂದಿದ್ದ ನಾನು, ಸಿನಿಮಾದಲ್ಲಿ ದೊಡ್ಡ ವಿಲನ್ ಆಗಿ ಹೆಸರು ಮಾಡಬೇಕು ಅನ್ನೋ ಆಸೆಯಿಂದ ಚಿತ್ರರಂಗಕ್ಕೆ ಬಂದೆ. ಅನುಕೂಲಕ್ಕೊಬ್ಬ ಗಂಡ, ಮತ್ಸರ, ಹೊಸ ಕಾವ್ಯ, ರುದ್ರ ತಾಂಡವ, ಲೇಡಿಸ್ ಹಾಸ್ಟೆಲ್ ಹೀಗೆ ಏಳೆಂಟು ಸಿನಿಮಾಗಳಲ್ಲಿ ನಟಿಸಿದೆ ಕೂಡ. ಆದರೆ ಹಿಂದೆ ಒಬ್ಬ ಗುರು ಅಥವಾ ಗಾಡ್ ಫಾದರ್ ಇಲ್ಲದ ಕಾರಣ, ಸರಿಯಾದ ನಿರ್ದೇಶಕರು, ನಿರ್ಮಾಪಕರು ಸಿಗದೇ ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು' ಎಂದು ಮೂರು ದಶಕಗಳ ಹಿಂದೆ ತಮಗೆ ಕನ್ನಡ ಚಿತ್ರರಂಗದಲ್ಲಾದ ಅನುಭವಗಳ ಬುತ್ತಿಯನ್ನು ಬಿಚ್ಚಿಟ್ಟರು.








View this post on Instagram






A post shared by Seven Raj (@7raj_official)






ಮಾತ್ರವಲ್ಲ, ಸಿನಿಮಾ ಒಂದರ ಚಿತ್ರೀಕರಣದ ವೇಳೆಯೇ ಆ ಚಿತ್ರದ ನಾಯಕ ಇವರನ್ನು ಪಾತ್ರದಿಂದ ತೆಗೆದು, ಸಿನಿಮಾದಿಂದ ಹೊರಗೆ ಕಳುಹಿಸಿ ಎಂದು ಶೂಟಿಂಗ್ ಸ್ಪಾಟ್‍ನಿಂದಲೇ ಹೊರಗೆ ಹಾಕಿದ್ದರಂತೆ. ಆ ಕಹಿ ಅನುಭವವನ್ನೂ ಬೇಸರದಿಂದಲೇ ಹೇಳಿಕೊಂಡರು ಸೆವೆನ್ ರಾಜ್.

ಇದನ್ನೂ ಓದಿ: Salman Khan-Akshay Kumar ಸೇರಿದಂತೆ 30 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲು..!

'ಆಗ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದೆ. ಆಗಷ್ಟೇ ಶೂಟಿಂಗ್ ಶುರುವಾಗಿತ್ತು. ನಾಲ್ಕು ಜನ ವಿಲನ್‍ಗಳಲ್ಲಿ ನಾನೂ ಒಬ್ಬ. ಆದರೆ ಆ ಸಿನಿಮಾ ಹೀರೋ ಅಲ್ಲಿಗೆ ಬಂದು, ಇವನನ್ನು ಸಿನಿಮಾದಿಂದ ತೆಗೆಯಿರಿ ಎಂದು ಕಾರಣವೇ ಇಲ್ಲದೇ ನನ್ನನ್ನು ತೆಗೆದುಬಿಟ್ಟರು. ಆಗ ತುಂಬಾ ನೋವಾಗಿ ನಾನು ಕನ್ನಡ ಇಂಡಸ್ಟ್ರಿ ಬಿಟ್ಟುಬಿಟ್ಟೆ. ಆದರೆ ಅವತ್ತೇ ಈ ಹೀರೋ ಹೀಗೆ ಹೇಳಿದನಲ್ಲಾ ಅಂತ ಸವಾಲಾಗಿ ಸ್ವೀಕರಿಸಿ, ಸಣ್ಣ ಪುಟ್ಟ ಬ್ರೋಕರ್ ಕೆಲಸ ಮಾಡುತ್ತಿದ್ದವನು, ಇಂದು ಈ ಮಟ್ಟಕ್ಕೆ ಬೆಳೆದು ನಾನೇ ಸಿನಿಮಾ ನಿರ್ಮಿಸಿದ್ದೇನೆ ಜೊತೆಗೆ ಖಳನಟನಾಗಿಯೂ ನಟಿಸಿದ್ದೇನೆ. ಆ ಹೀರೋ ಹೆಸರು ಹೇಳಲು ನನಗಿಷ್ಟವಿಲ್ಲ. ಆದರೆ ಮುಂದೊಂದು ದಿನ ಅದೇ ಹೀರೋ ಜೊತೆ ಸಿನಿಮಾ ಮಾಡಬೇಕು ಅನ್ನೋ ಉದ್ದೇಶವಿದೆ. ಆ ಸಿನಿಮಾ ನಿರ್ಮಿಸುವುದರ ಜೊತೆಗೆ ಅವರ ಎದುರು ವಿಲನ್ ಆಗಿ ನಟಿಸಬೇಕು ಅನ್ನೋ ಆಸೆ ಕೂಡ ಇದೆ' ಎಂದು ಹೇಳಿಕೊಳ್ಳುತ್ತಾರೆ ಸೆವೆನ್ ರಾಜ್.

ಇದನ್ನೂ ಓದಿ: ದಿವ್ಯಾ ಸುರೇಶ್​ ಕುಟುಂಬವನ್ನು ಭೇಟಿ ಮಾಡಿದ Bigg Boss Kannada Season 8ರ ವಿನ್ನರ್​ ಮಂಜು ಪಾವಗಡ

ಅಂದಹಾಗೆ ಸೆವೆನ್ ರಾಜ್ ನಿರ್ಮಿಸಿರುವ ಸಿನಿಮಾ ಹೆಸರು ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ. ಆಸ್ಕರ್ ಕೃಷ್ಣ ಈ ಚಿತ್ರವನ್ನು ನಿರ್ದೇಶಿಸಿದ್ದು ನಾಯಕನಾಗಿಯೂ ನಟಿಸಿದ್ದಾರೆ. ಅವರ ಜೊತೆಗೆ ಎರಡನೇ ಹೀರೋ ಆಗಿ ಲೋಕೇಂದ್ರ ನಟಿಸಿದ್ದಾರೆ. ಕಾಮಿಡಿ ಜೊತೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಮೂಲಕ ಮಲಯಾಳಿ ಸುಂದರಿ ಗೌರಿ ಸ್ಯಾಂಡಲ್‍ವುಡ್ ಡೆಬ್ಯೂ ಮಾಡಿದ್ದಾರೆ. ಸಿನಿಮಾ ಇದೇ ತಿಂಗಳ 17ರಂದು ರಿಲೀಸ್ ಆಗಲಿದೆ.
Published by:Anitha E
First published: