• Home
  • »
  • News
  • »
  • entertainment
  • »
  • Syed Ashraf Death: ಖ್ಯಾತ ಸೀರಿಯಲ್ ನಿರ್ದೇಶಕ ಹೃದಯಾಘಾತದಿಂದ ನಿಧನ

Syed Ashraf Death: ಖ್ಯಾತ ಸೀರಿಯಲ್ ನಿರ್ದೇಶಕ ಹೃದಯಾಘಾತದಿಂದ ನಿಧನ

ನಿರ್ದೇಶಕ ಸಯ್ಯದ್ ಅಶ್ರಫ್ ನಿಧನ

ನಿರ್ದೇಶಕ ಸಯ್ಯದ್ ಅಶ್ರಫ್ ನಿಧನ

ಕನ್ನಡ ಕಿರುತೆರೆ ನಿರ್ದೇಶಕ, ನಟ ಸಯ್ಯದ್ ಅಶ್ರಫ್ ಬೆಳಗಿನ ಜಾವ 3 ಗಂಟೆಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಯ್ಯದ್ ಅವರಿಗೆ 42 ವಯಸ್ಸಾಗಿತ್ತು.

  • News18 Kannada
  • Last Updated :
  • Karnataka, India
  • Share this:

    ಸಿನಿಮಾಗಳಿಗಿಂತ (Film) ಧಾರಾವಾಹಿಗಳು (Serials) ಹೆಚ್ಚು ಜನರ ನೆನಪಿನಲ್ಲಿ ಉಳಿಯುತ್ತವೆ. ಏನ್ ಮಿಸ್ ಮಾಡಿದ್ರೂ ಧಾರಾವಾಹಿಗಳನ್ನು ಮನೆ ಹೆಂಗಸರು ಮಿಸ್ ಮಾಡಲ್ಲ. ಅದರಲ್ಲಿರುವ ಪಾತ್ರಗಳಲ್ಲಿ ತಮ್ಮನ್ನು ಕಾಣುತ್ತಾ ಮನರಂಜನೆ ಪಡೆಯುತ್ತಾರೆ. ಕನ್ನಡದ ಅದೆಷ್ಟೋ ಧಾರಾವಾಹಿಗಳನ್ನು ಜನ ಮರೆಯೋದೇ ಇಲ್ಲ. ಅದಕ್ಕೆ ಅದರಲ್ಲಿ ಮಾಡಿರುವ ಕಲಾವಿದರು ಕಾರಣರಾಗಿರುತ್ತಾರೆ. ಅಂತೆಯೇ ಆ ಕಥೆ ಚೆನ್ನಾಗಿ ಮೂಡಿ ಬರಲು ನಿರ್ದೇಶಕರೇ ಕಾರಣ. ಜನರಿಗೆ ಇಷ್ಟವಾಗುವಂತೆ ಕಥೆ ಬರೆದು ತಲುಪಿಸುತ್ತಾರೆ. ಅಂತಹ ಕನ್ನಡದ ಖ್ಯಾತ ನಿರ್ದೇಶಕರಾದ (Director) ಸಯ್ಯದ್ ಅಶ್ರಫ್ (Syed Ashraf) ಅವರು ಹೃದಯಾಘಾತದಿಂದ  (Heart Attack) ಬೆಳಗಿನ ಜಾವ ನಿಧನರಾಗಿದ್ದಾರೆ (Death). ಇವರ ಸಾವು ಕಿರುತೆರೆ ಲೋಕದಲ್ಲಿ ಬೇಸರ ಮೂಡಿಸಿದೆ.


    ಕಿರುತೆರೆ ನಿರ್ದೇಶಕ, ನಟ ಸಯ್ಯದ್ ಅಶ್ರಫ್ ನಿಧನ
    ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳು ತಮ್ಮದೇ ಆದ ಸಾಮ್ರಾಜ್ಯಸ್ಥಾಪಿಸಿವೆ. ಅಂತಹ ಒಳ್ಳೆ ಒಳ್ಳೆ ಧಾರಾವಾಹಿಗಳನ್ನು ಕಿರುತೆರೆಗೆ ನೀಡಿದ್ದ, ಕನ್ನಡ ಕಿರುತೆರೆ ನಿರ್ದೇಶಕ, ನಟ ಸಯ್ಯದ್ ಅಶ್ರಫ್ ಬೆಳಗಿನ ಜಾವ 3 ಗಂಟೆಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
    ಸಯ್ಯದ್ ಅವರಿಗೆ 42 ವಯಸ್ಸಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಅಪಾರ ಸಾಧನೆ ಮಾಡಿದ್ದರು. ಸಯ್ಯದ್ ಕನ್ನಡ ಕಿರುತೆರೆಯಲ್ಲಿ ನಟರಾಗಿ, ನಿರ್ದೇಶಕರಾಗಿ ತಮ್ಮದೇ ಛಾಪು ಮೂಡಿಸಿದ್ದರು.


    ಭಕ್ತಿ ಪ್ರಧಾನ ಧಾರಾವಾಹಿ ಕೊಟ್ಟ ಹೆಗ್ಗಳಿಕೆ
    ಕನ್ನಡದ ಖ್ಯಾತ ನಿರ್ದೇಶಕ ಸಯ್ಯದ್ ಅಶ್ರಫ್ ಅವರು ಕಿರುತೆರೆಗೆ ಭಕ್ತಿ ಪ್ರಧಾನ ಮತ್ತು ಫ್ಯಾಂಟಿಸಿ ಧಾರಾವಾಹಿಗಳನ್ನು ಕೊಟ್ಟ ಹೆಗ್ಗಳಿಕೆ ಇವರದ್ದು. ಜನ ಇವರ ಧಾರಾವಾಹಿಗಳನ್ನು ನೋಡಿ, ದೇವರ ಮೇಲೆ ಮತ್ತಷ್ಟು ಭಕ್ತಿ ಹೆಚ್ಚಿಸಿಕೊಂಡಿದ್ದರು. ಅಯ್ಯೋ ಎಷ್ಟೋ ಚೆನ್ನಾಗಿ ಮೂಡಿ ಬರುತ್ತವೆ ಈ ಸೀರಿಯಲ್ ಗಳು ಎಂದು ತಪ್ಪದೇ ನೋಡ್ತಾ ಇದ್ದರು.


    ಇದನ್ನೂ ಓದಿ: Bhagya Lakshmi: ಇಬ್ಬರ ಮನಸ್ಸು ಒಂದೇ ತರ, ಬೇರೆಯವರ ಕಷ್ಟಕ್ಕೆ ಮರುಗುವ ಜೀವಗಳು ಒಂದಾಗ್ತಾವಾ?


    ನಿರ್ದೇಶಕ ಸಯ್ಯದ್ ಅಶ್ರಫ್ ಅವರ ಧಾರಾವಾಹಿಗಳು
    ಅಮ್ಮ ನಾಗಮ್ಮ, ನಾಗಮಣಿ, ಪಾಂಡುರಂಗ, ಚಕ್ರವಾಕ, ತಕಧಿಮಿತಾ, ಅಳುಗುಳಿಮನೆ ಯಂತಹ ಹಿಟ್ ಧಾರಾವಾಹಿಗಳಿಗೆ ನಿರ್ದೇಶನ ಮಾಡಿದ್ದಾರೆ. ಇವರು ನಿರ್ದೇಶಿರುವ ಸೀರಿಯಲ್‍ಗಳು ಸಾವಿರಾರು ಕಂತುಗಳಲ್ಲಿ ಪ್ರಸಾರವಾಗಿವೆ.


    ಬಿ.ಸುರೇಶ ಅವರ ಸಾರಥ್ಯದಲ್ಲಿ ಮೂಡಿ ಬಂದ ಹಲವಾರು ಸೀರಿಯಲ್ ಗಳಿಗೆ ಇವರದ್ದೇ ನಿರ್ದೇಶನ ಮಾಡಿದ್ದಾರೆ. ಮೀಡಿಯಾ ಹೌಸ್ ಸ್ಟುಡಿಯೋ ನಿರ್ಮಾಣದಲ್ಲಿ ಹತ್ತು ವರ್ಷಗಳ ಕಾಲ ಧಾರಾವಾಹಿಗಾಗಿ ಕೆಲಸ ಮಾಡಿದ್ದಾರೆ.


    kannada serial director, director syed ashraf death, syed ashraf death by heart attack, ಕನ್ನಡದ ಖ್ಯಾತ ನಿರ್ದೇಶಕ ಸಯ್ಯದ್ ಅಶ್ರಫ್ ನಿಧನ, ಹೃದತಾಘಾತದಿಂದ ಸಯ್ಯದ್ ಅಶ್ರಫ್ ಸಾವು, kannada news, karnataka news,
    ಸಯ್ಯದ್ ಅಶ್ರಫ್ ನಿಧನ


    ಸಯ್ಯದ್ ಅಶ್ರಫ್ ನಿಧನಕ್ಕೆ ಕಂಬನಿ
    42 ವರ್ಷದ ಖ್ಯಾತ ನಿರ್ದೇಶಕ ಸಯ್ಯದ್ ಅಶ್ರಫ್ ನಿಧನಕ್ಕೆ, ಬಿ. ಸುರೇಶ್, ಶೈಲಜಾ ನಾಗ್ ಹಾಗೂ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಮಧ್ಯಾಹ್ನದವರೆಗೂ ಅಶ್ರಫ್ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.


    kannada serial director, director syed ashraf death, syed ashraf death by heart attack, ಕನ್ನಡದ ಖ್ಯಾತ ನಿರ್ದೇಶಕ ಸಯ್ಯದ್ ಅಶ್ರಫ್ ನಿಧನ, ಹೃದತಾಘಾತದಿಂದ ಸಯ್ಯದ್ ಅಶ್ರಫ್ ಸಾವು, kannada news, karnataka news,
    ಸಯ್ಯದ್ ಅಶ್ರಫ್ ನಿಧನ


    ಇದನ್ನೂ ಓದಿ: Jr NTR Wishes: ಕನ್ನಡಿಗರಿಗೆ 'ಕನ್ನಡ ರಾಜ್ಯೋತ್ಸವ'ದ ಶುಭಾಶಯ ತಿಳಿಸಿದ ಜೂನಿಯರ್ ಎನ್‍ಟಿಆರ್ 


    ಎಷ್ಟೋ ದಿನ ಆದ್ರೂ ಕೆಲವೊಂದು ಧಾರಾವಾಹಿಗಳು ಜನರ ಮನಸ್ಸಿನಲ್ಲಿ ಹಾಗೇ ಉಳಿದಿರುತ್ತವೆ. ಕನ್ನಡದ ಅದೆಷ್ಟೋ ಧಾರಾವಾಹಿಗಳನ್ನು ಜನ ಮರೆಯೋದೇ ಇಲ್ಲ. ಅಂತಹ ಧಾರಾವಾಹಿಗಳನ್ನು ಕೊಟ್ಟ ನಿರ್ದೇಶಕ ಸಯ್ಯದ್ ಅಶ್ರಫ್ ಇನ್ನಿಲ್ಲ. ಮನೆಯವರು ಮಗನನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ. ಕಿರುತೆರೆ ಲೋಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಂಡಿದ್ದಾರೆ.

    Published by:Savitha Savitha
    First published: