ಈಗಂತೂ ಈ ಚಲನಚಿತ್ರೋದ್ಯಮದ ನಟ-ನಟಿಯರು (Actors - Actress) ಮತ್ತು ಕ್ರಿಕೆಟ್ ಆಟಗಾರರು ತಮಗೆ ಮದುವೆಯಾಗಿ ಮಕ್ಕಳು ಹುಟ್ಟಿದರೆ ಸಾಕು ಆ ಮಕ್ಕಳನ್ನು ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಿನಿಂದ ತುಂಬಾನೇ ದೂರವಿಡಲು ನೋಡುತ್ತಾರೆ. ಅಲ್ಲದೆ ಆ ಮಕ್ಕಳ ಆಗಮನವನ್ನು ತುಂಬಾನೇ ಖುಷಿ ಖುಷಿಯಾಗಿ ಸಂಭ್ರಮಿಸುತ್ತಾರೆ. ಇಲ್ಲಿಯೂ ಸಹ ಟಿವಿ ಸೀರಿಯಲ್ ನಟಿಯೊಬ್ಬರು (Serial Actress) ತಮ್ಮ ಮಗುವಿನ ಆಗಮನದಿಂದ ತುಂಬಾನೇ ಖುಷಿ ಪಟ್ಟು ಕೊರಳಿನಲ್ಲಿ ಧರಿಸಲು ಪೆಂಡೆಂಟ್ (Pendant) ಒಂದನ್ನು ಮಾಡಿಸಿಕೊಂಡಿದ್ದಾರೆ.
ಟಿವಿ ಸೀರಿಯಲ್ ನಟಿ ವಿನ್ನಿ ಅರೋರಾ ಮತ್ತು ಅವರ ಪತಿ ಧೀರಜ್ ಧೂಪರ್ ಆಗಸ್ಟ್ 10, 2022 ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಇವರಿಬ್ಬರು ಪೋಷಕರ ಆ ಹೊಸ ಜವಾಬ್ದಾರಿಯನ್ನು ಪರಿಪೂರ್ಣವಾಗಿ ಆನಂದಿಸುತ್ತಿದ್ದಾರೆ.
ಅಭಿಮಾನಿಗಳಿಗೆ ತನ್ನ ಹೊಸ ಪೆಂಡೆಂಟ್ ಅನ್ನು ತೋರಿಸಿದ ನಟಿ ವಿನ್ನಿ
ಹೊಸದಾಗಿ ತಾಯಿಯಾದ ನಟಿ ವಿನ್ನಿ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ 'ಆಸ್ಕ್ ಮಿ ಎನಿಥಿಂಗ್' ಸೆಷನ್ ಅನ್ನು ಆಯೋಜಿಸಿದ್ದರು, ಅಲ್ಲಿ ಅವರು ಮಕ್ಕಳ ಆರೈಕೆ ಮತ್ತು ಪೋಷಕತ್ವದ ಬಗ್ಗೆ ಮಾತನಾಡಿದರು. ಅವರು ಇದೆಲ್ಲದರ ಬಗ್ಗೆ ಮಾತನಾಡುತ್ತಾ, ಅತ್ಯಂತ ವಿಶಿಷ್ಟವಾದದ್ದನ್ನು ಸಹ ಅಭಿಮಾನಿಗಳ ಮುಂದೆ ಬಹಿರಂಗಪಡಿಸಿದರು. ನಟಿ ತಾನು ಕೊರಳಲ್ಲಿ ಧರಿಸಿದ್ದ ಪೆಂಡೆಂಟ್ ನ ಒಂದು ಫೋಟೋಗಳನ್ನು ಸಹ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್‌ಗೆ ಟ್ವಿಟರ್ ಬ್ಲೂ ಟಿಕ್ ಹೇಗೆ ಬಂತು? ಎಲಾನ್ ಮಸ್ಕ್ ವಿರುದ್ಧ ಮಾಜಿ ಮುಖ್ಯಸ್ಥರ ವಾಗ್ದಾಳಿ
ಆ ಪೆಂಡೆಂಟ್ ಸಾಧಾರಣವಾದ ಪೆಂಡೆಂಟ್ ಅಂತ ನೀವು ಅಂದುಕೊಂಡರೆ, ಅದು ನಿಮ್ಮ ತಪ್ಪು ತಿಳುವಳಿಕೆ. ಏಕೆಂದರೆ ಆ ಪೆಂಡೆಂಟ್ ನಟಿ ತನ್ನ ಎದೆ ಹಾಲು ಮತ್ತು ಅವಳ ಮಗ ಜೈನ್ ನ ಹೊಕ್ಕುಳ ಬಳ್ಳಿಯಿಂದ ತುಂಬಿದೆಯಂತೆ.
ವಿನ್ನಿಯ ಹೊಸ ಪೆಂಡೆಂಟ್ ತುಂಬಾನೇ ಸುಂದರವಾಗಿದೆಯಂತೆ..
ವಿನ್ನಿ ಅರೋರಾ ಮತ್ತು ಧೀರಜ್ ಧೂಪರ್ ಅವರ ಪೋಷಕರಾದ ಬಗ್ಗೆ ನಿಯಮಿತವಾಗಿ ಅಪ್ಡೇಟ್ ಗಳನ್ನು ನೀಡುತ್ತಿದ್ದರು. ಅವರ ಅಪ್ಡೇಟ್ ಗಳು ತುಂಬಾನೇ ಸುಂದರವಾಗಿರುತ್ತವೆ.
ವಿನ್ನಿ ಇತ್ತೀಚೆಗೆ ಇನ್‌ಸ್ಟಾಗ್ರಾಮ್ ನಲ್ಲಿ ಎಎಂಎ ಸೆಷನ್ ಅನ್ನು ಆಯೋಜಿಸಿದ್ದರು. ಅಲ್ಲಿ ಸಹ ವಿನ್ನಿ ಧರಿಸಿದ್ದ ಪೆಂಡೆಂಟ್ ಬಗ್ಗೆ ಬಳಕೆದಾರರೊಬ್ಬರು ಕುತೂಹಲದಿಂದ ಕೇಳಿದಾಗ, ನಟಿ ಅದನ್ನು ತನ್ನ ಎದೆ ಹಾಲು ಮತ್ತು ತನ್ನ ಮಗ ಜೈನ್ ನ ಹೊಕ್ಕುಳ ಬಳ್ಳಿ ಸ್ಟಂಪ್ ನಿಂದ ತಯಾರಿಸಲಾಗಿದೆ ಎಂದು ಬಹಿರಂಗಪಡಿಸಿದರು. ಆಕೆ ಆ ವಿಶಿಷ್ಟವಾದ ಪೆಂಡೆಂಟ್ ನ ಫೋಟೋಗಳನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಮಗುವಿನ ಫೋಟೋವನ್ನು ಹುಟ್ಟಿದ ಕೆಲವೇ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ದಂಪತಿಗಳು..
ಧೀರಜ್ ಧೂಪರ್ ಮತ್ತು ವಿನ್ನಿ ಅರೋರಾ ಆಗಸ್ಟ್ 10 ರಂದು ಗಂಡು ಮಗುವಿಗೆ ಪೋಷಕರಾದರು. ಕೆಲವು ದಿನಗಳ ನಂತರ, ಅವರು ತಮ್ಮ ಪುಟ್ಟ ಮಗುವಿನ ಮೊದಲ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಧೀರಜ್ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಅವರ ಮಗು ತಂದೆಯ ಬೆರಳನ್ನು ಹಿಡಿದಿದ್ದರೆ, ವಿನ್ನಿ ಅವರು ಹಂಚಿಕೊಂಡ ಫೋಟೋದಲ್ಲಿ ಮಗನ ಎರಡು ಸಣ್ಣ ಪಾದಗಳಿರುವುದನ್ನು ನಾವು ನೋಡಬಹುದು.
ಆ ಫೋಟೋವನ್ನು ಹಂಚಿಕೊಂಡ ಧೀರಜ್, "ನಾನು ಇರಲು ಬಯಸುವ ಏಕೈಕ ಸ್ಥಳ" ಎಂದು ಬರೆದುಕೊಂಡಿದ್ದಾರೆ. ವಿನ್ನಿ ಅವರ ಪೋಸ್ಟ್ ಗೆ "ಈಗ ನಾನು ನಿಮ್ಮಿಬ್ಬರನ್ನು ಹೊಂದಿದ್ದೇನೆ" ಅಂತ ಅಪ್ಪ ಮಗನಿಗೆ ಉಲ್ಲೇಖಿಸಿ ಶೀರ್ಷಿಕೆಯನ್ನು ಬರೆದುಕೊಂಡಿದ್ದರು.
ಈ ಹಿಂದೆ ಸಹ ಧೀರಜ್ ತಂದೆಯಾಗಿದ್ದರ ಬಗ್ಗೆ ಮಾತನಾಡಿದ್ರು..
ಆಗಸ್ಟ್ ನಲ್ಲಿ ಧೀರಜ್ ಧೂಪರ್ ಮಾಧ್ಯಮದೊಂದಿಗೆ ಮಾತನಾಡುತ್ತಾ "ನಾನು ತಂದೆ ಆಗಲು ತುಂಬಾನೇ ಉತ್ಸುಕನಾಗಿದ್ದೇನೆ ಮತ್ತು ಸಂತೋಷವಾಗಿದ್ದೇನೆ. ಇದೀಗ, ಪ್ರತಿ ಕ್ಷಣವೂ ವಿಭಿನ್ನ ಮತ್ತು ಹೊಸದಾಗಿದೆ ಅಂತ ಅನ್ನಿಸುತ್ತಿದೆ ಮತ್ತು ಅದು ನಾವು ಮಗುವಿನಿಂದ ತುಂಬಾನೇ ಕಲಿಯುತ್ತೇವೆ. ಹೊಸ ಜೀವವೊಂದು ನಮ್ಮೊಂದಿಗೆ ಇರುತ್ತದೆ ಮತ್ತು ಅದು ಮನೆಯಲ್ಲಿ ಹೊಸ ಶಕ್ತಿಯಾಗಿರುತ್ತದೆ” ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ