Actress Sujatha: ಮೊದಲ ಮದುವೆಯ ನೋವಿನ ಕಥೆ ಬಿಚ್ಚಿಟ್ಟ ಸುಜಾತಾ, ನನಗೆ ಸೆಕೆಂಡ್​ ಚಾನ್ಸ್​ ಸಿಕ್ಕಿದೆ ಎಂದ ನಟಿ

Raja Rani season 2: ಸದ್ಯ ಪತಿ ಅಕ್ಷಯ್ ಜೊತೆ ರಾಜಾ ರಾಣಿ ಶೋದಲ್ಲಿ ಭಾಗವಹಿಸಿರುವ ಸುಜಾತಾ, ತಮ್ಮ ಮೊದಲ ಮದುವೆಯ ಬಗ್ಗೆ ಕೆಲ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈ ರಿಯಾಲಿಟಿ ಶೋ ರಿಯಲ್ ಜೋಡಿಗಳ ನಡುವಿನ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸುವ ಹಲವಾರು ಟಾಸ್ಕ್​ಗಳನ್ನು ನೀಡುತ್ತದೆ.

ನಟಿ ಸುಜಾತಾ ಅಕ್ಷಯ್

ನಟಿ ಸುಜಾತಾ ಅಕ್ಷಯ್

  • Share this:
ಕಿರುತೆರೆ ನಟಿ ಸುಜಾತಾ (Sujatha) ಯಾರಿಗೆ ತಾನೇ ಗೊತ್ತಿಲ್ಲ. ಬಹಳಷ್ಟು ವರ್ಷಗಳ ಕಾಲದಿಂದ ಈ ಹೆಸರು ಜನ ಜನಿತ. ನೆಗೆಟಿವ್ (Negative) ರೋಲ್ ಇರಲಿ, ಪಾಸಿಟಿವ್ (Positive) ರೋಲ್ ಇರಲಿ ಎಲ್ಲಾ ಪಾತ್ರಕ್ಕೂ ಜೀವ ತುಂಬುವ ಅದ್ಭುತ ನಟಿ ಇರುವ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ನಟನೆ ಮಾತ್ರವಲ್ಲದೇ ನಿರೂಪಣೆಯ ಮೂಲಕ ಸಹ ಜನರ ಮನಗೆದ್ದವರು ಈ ಸುಜಾತಾ. ಸದ್ಯ ಈ ನಟಿ ಕಲರ್ಸ್ ವಾಹಿನಿಯ (Colors Kannada) ರಾಜಾ ರಾಣಿ ಸೀಸನ್​ 2 ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದಾರೆ. ಗಂಡನ ಜೊತೆ ಈ ರಿಯಲ್ ಜೋಡಿಗಳ ಗೇಮ್​ ಶೋದಲ್ಲಿ ಭಾಗವಹಿಸಿರುವ ಸುಜಾತಾ ತಮ್ಮ ಜೀವನದ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಮೊದಲ ಮದುವೆಯ ಕಹಿ ಘಟನೆ ಬಿಚ್ಚಿಟ್ಟ ನಟಿ

ಸದ್ಯ ಪತಿ ಅಕ್ಷಯ್ ಜೊತೆ ರಾಜಾ ರಾಣಿ ಶೋದಲ್ಲಿ ಭಾಗವಹಿಸಿರುವ ಸುಜಾತಾ, ತಮ್ಮ ಮೊದಲ ಮದುವೆಯ ಬಗ್ಗೆ ಕೆಲ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈ ರಿಯಾಲಿಟಿ ಶೋ ರಿಯಲ್ ಜೋಡಿಗಳ ನಡುವಿನ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸುವ ಹಲವಾರು ಟಾಸ್ಕ್​ಗಳನ್ನು ನೀಡುತ್ತದೆ. ಈ ಬಾರಿ ಸುಜಾತಾ ತಮ್ಮ ಜೀವನದಲ್ಲಿ ನಡೆದ ಕಹಿ ವಿಚಾರವನ್ನು ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಂಡಿದ್ದಾರೆ.

ಹೌದು ಸುಜಾತಾ ಅವರಿಗೆ ಅಕ್ಷಯ್ ಜೊತೆ ಮದುವೆ ಎರಡನೆಯದು. ಈ ಮೊದಲು ಅವರಿಗೆ ಮತ್ತೊಂದು ಮದುವೆಯಾಗಿತ್ತು. ಆದರೆ ಬಹಳ ಕಷ್ಟ ಹಾಗೂ ನೋವನ್ನು ಆ ಮದುವೆಯಲ್ಲಿ ನಟಿ ಅನುಭವಿಸಿದ್ದರಂತೆ. ಹಾಗಾಗಿ ಅವರು ಮತ್ತೆ ಮದುವೆಯಾಗುವುದೇ ಬೇಡ ಎಂದು ನಿರ್ಧರಿಸಿದ್ದರಂತೆ. ಆದರೆ ವಿಧಿಯಾಟ ಬೇರೆ ಇತ್ತು, ಸುಜಾತಾ ಅಕ್ಷಯ್ ಅವರನ್ನು ಭೇಟಿಯಾಗಿ, ಅವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಈ ಇಬ್ಬರು ಈಗ ಸಂತೋಷದ ಜೀವನ ನಡೆಸುತ್ತಿದ್ದಾರೆ. ಅದಕ್ಕೆ ಸುಜಾತಾ ಎಲ್ಲರಿಗೂ ಎರಡನೇ ಅವಕಾಶ ಸಿಗುವುದಿಲ್ಲ. ನನಗೆ ಸಿಕ್ಕಿದೆ. ನಾನು ನಿಮಗೆ ಥ್ಯಾಂಕ್ಸ್ ಹೇಳಬೇಕು, ಹಳೆಯ ಕೆಟ್ಟ ಘಟನೆಗಳನ್ನು ಮರೆಸಿ ನನಗೆ ಸುಂದರವಾದ ಜೀವನ ಕೊಟ್ಟಿದ್ದೀರಿ ಎಂದು ಪತಿ ಅಕ್ಷಯ್​ಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಅಪ್ಪನಂತೆ ಪೋಸ್​ ಕೊಟ್ಟ ಮಗ, ಜೂನಿಯರ್ ರಾಕಿಭಾಯ್​ ಫೋಟೋ ವೈರಲ್

ಅಲ್ಲದೇ, ನನ್ನ ಜೀವನದಲ್ಲಿ ಅಕ್ಷಯ್ ಬಿಟ್ಟು ಬೇರೆ ಯಾರಿಗೂ ಅವಕಾಶವಿಲ್ಲ, ಅವರಿಲ್ಲದೇ ನನ್ನ ಬದುಕನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಐ ಲವ್ ಯೂ ಎಂದಿದ್ದಾರೆ ಸುಜಾತಾ. ಈ ಸಮಯದಲ್ಲಿ ಅಕ್ಷಯ್ ಮತ್ತು ಸುಜಾತಾ ಹೇಗೆ ಭೇಟಿಯಾದರು ಎಂಬುದನ್ನ ಸಹ ನೆನಪಿಸಿಕೊಂಡಿದ್ದಾರೆ. ಸುಜಾತಾ ಹೇಳಿದಂತೆ, ಅವರಿಬ್ಬರದ್ದು ಬ್ಯೂಟಿಫುಲ್ ಜರ್ನಿ, ಸುಜಾತಾ, ಅಕ್ಷಯ್ ಜೊತೆ ರೆಡಿಯೋವೊಂದರಲ್ಲಿ ಕೆಲಸ ಮಾಡುತ್ತಿದ್ದರಂತೆ. ಆಗ ಅವರಿಬ್ಬರ ಪರಿಚಯವಾಗಿ, ನಂತರ ಉತ್ತಮ ಸ್ನೇಹಿತರಾದರಂತೆ. ನಂತರ ಅದು ಪ್ರೀತಿಗೆ ತಿರುಗಿತ್ತು. ಇಬ್ಬರ ಮನೆಯಲ್ಲೂ ಇಷ್ಟಪಟ್ಟು ಒಪ್ಪಿಗೆ ನೀಡಿದ್ದರಂತೆ. ನಂತರ ಇಬ್ಬರು ಮದುವೆಯಾಗಿದ್ದೇವೆ, ನನಗೆ ಅಕ್ಷಯ್ ಬೆಸ್ಟ್​ಫ್ರೆಂಡ್​ ಎಂದಿದ್ದಾರೆ.

ಇದನ್ನೂ ಓದಿ: ನಾಗಚೈತನ್ಯ ಜೊತೆಗಿನ ಸಂಬಂಧದ ಬಗ್ಗೆ ಕ್ಲಾರಿಟಿ ಕೊಟ್ಟ ಶೋಭಿತಾ! ನಿಟ್ಟುಸಿರು ಬಿಟ್ಟ ಸ್ಯಾಮ್​ ಫ್ಯಾನ್ಸ್​

ನಾವಿಬ್ಬರು ಒಟ್ಟಿಗೆ ಬದುಕಲು ಹುಟ್ಟಿದ್ದೇವೆ ಎಂದ ಪತಿ

ಇನ್ನು ಸುಜಾತಾ ಅವರ ಈ ಮಾತಿಗೆ ಪ್ರತಿಕ್ರಿಯಿಸಿದ ಪತಿ ಅಕ್ಷಯ್ ನನಗೆ ನೀನು ಥ್ಯಾಂಕ್ಸ್ ಹೇಳುವ ಅವಶ್ಯಕತೆ ಇಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಹುಟ್ಟಿದ್ದೇವೆ. ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ, ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಮ್ಮ ಜೋಡಿ ಎಂದಿದ್ದಾರೆ. ಅಷ್ಟೇ ಅಲ್ಲದೇ, ನಾನು ನನ್ನ ಜೀವನದಲ್ಲಿ ಸರಿಯಾದ ವ್ಯಕ್ತಿಯನ್ನು ಮದುವೆಯಾಗಿದ್ದೇನೆ. ಸುಜಾತಾ ನನ್ನ ಅತಿ ಉತ್ತಮ ಸಂಗಾತಿ. ನನ್ನ ಜೀವನದ ಭಾಗವಾಗಿದ್ದಕ್ಕೆ ಥ್ಯಾಂಕ್ಯೂ ಎನ್ನುವ ಮೂಲಕ ಪತ್ನಿಗೆ ಅಕ್ಷಯ್ ಧನ್ಯವಾದ ತಿಳಿಸಿದ್ದಾರೆ.
Published by:Sandhya M
First published: