ಬಿಗ್ಬಾಸ್ (Bigg Boss) ಮನೆಯಲ್ಲಿ ಸಖತ್ ಹ್ಯಾಂಡ್ಸಂ ಆಗಿರೋ ಸ್ಪರ್ಧಿ ಒಬ್ಬರಿದ್ದರು. ಆದರೆ ತುಂಬಾ ದಿನ ಮನೆಯೊಳಗೆ ಉಳಿಯಲಿಲ್ಲ. ನಟ, ಉದ್ಯಮಿ ದರ್ಶ್ ಚಂದ್ರಪ್ಪ (Darsh Chandrappa) ಬಿಗ್ಬಾಸ್ ಕನ್ನಡ ಸೀಸನ್ 9ರ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ಕೊಟ್ಟಿದ್ರು. ಸಖತ್ ಹ್ಯಾಂಡ್ಸಂ ಆಗಿದ್ದ ಈ ನಟ ಯುವತಿಯರ ಫೇವರಿಟ್ ಕೂಡಾ ಆಗಿದ್ದರು. ಮನೆಯೊಳಗೆ ಅಂಥಹ ಹೇಳಿಕೊಳ್ಳುವಂತಹ ಗೆಳತಿ ಅಥವಾ ಲವರ್ ಇರದಿದ್ದರೂ ಪ್ರೇಕ್ಷಕರು ಮಾತ್ರ ಫಿದಾ ಆಗಿದ್ದರು. ತಮಗೆ ಲವ್ ಬಗ್ಗೆ ಇಂಟ್ರೆಸ್ಟ್ ಇಲ್ಲ ಎಂದೂ ದರ್ಶ್ ಹೇಳಿದ್ದರು. ಆದರೆ ಈಗ ಹೊಸದೇನೋ ಶುರುವಾಗಿದೆ.
ಸಾಧಾರಣವಾಗಿ ಬಿಗ್ಬಾಸ್ ಮನೆಯೊಳಗೆ ಲವ್ಸ್ಟೋರಿ ಶುರುವಾಗುತ್ತದೆ. ಆದರೆ ಮಂಗಳ ಗೌರಿ ಖ್ಯಾತಿಯ ನಟಿ ಕಾವ್ಯಶ್ರೀ ಗೌಡ (Kavyashree Gowda) ಅವರ ಪಾಲಿಗೆ ಬಿಗ್ಬಾಸ್ ಮನೆಯೊಳಗಲ್ಲ, ಹೊರಗೆ ಹೊಸ ಲವ್ಸ್ಟೋರಿ ಶುರುವಾಗುವಂತಿದೆ.
ಮಂಗಳಗೌರಿ ಸೀರಿಯಲ್ ಮೂಲಕ ಕಣ್ಣೀರಿಟ್ಟುಕೊಂಡೇ ಪ್ರೇಕ್ಷರನ್ನು ರಂಜಿಸಿದ ನಟಿ ಬಿಗ್ಬಾಸ್ಗೆ ಎಂಟ್ರಿ ಕೊಡೋ ಹೊತ್ತಿಗೆ ಸೀರಿಯಲ್ ಕೂಡಾ ಮುಗಿದಿತ್ತು. ಅಂತೂ ಈಗ ಈ ನಟಿ ಫೋಟೋ, ವಿಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುತ್ತಾ ಜಾಲಿಯಾಗಿದ್ದಾರೆ.
ಇದೆಲ್ಲ ವಿಚಾರ ಬಿಟ್ಟು ಈ ಇಬ್ಬರ ವಿಚಾರ ಈಗ ಕೇಳಿ ಬಂದಿರುವುದು ಬೇರೆ ಏನಕ್ಕೂ ಅಲ್ಲ. ಬಿಗ್ಬಾಸ್ ಮನೆಯೊಳಗೆ ಅಷ್ಟೇನೂ ಕ್ಲೋಸ್ ಆಗಿರದಿದ್ದರೂ ಈಗ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಜೊತೆಯಾಗಿ ರೀಲ್ಸ್ ಮಾಡ್ತಾರೆ, ಡ್ಯಾನ್ಸ್ ಮಾಡ್ತಾರೆ, ವಿಡಿಯೋಗಳನ್ನು ಶೇರ್ ಕೂಡಾ ಮಾಡ್ತಿದ್ದಾರೆ.
ಜಗದಲ್ಲಿರೊ ಹುಚ್ಚರಲಿ ನಾನು ಒಬ್ಬ ಹಾಡಿಗೆ ರೀಲ್ಸ್
ಇದೀಗ ವೈರಲ್ ಆಗಿರೋ ವಿಡಿಯೋದಲ್ಲಿ ದರ್ಶ್ ಚಂದ್ರಪ್ಪ ಹಾಗೂ ಕಾವ್ಯಶ್ರೀ ಗೌಡ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಇದರಲ್ಲಿ ನಟಿ ಸುಂದರವಾದ ಲಂಗ-ದಾವಣಿ ಧರಿಸಿ ಕಾಣಿಸಿಕೊಂಡಿದ್ದಾರೆ. ಜಗದಲ್ಲಿರೋ ಹುಚ್ಚರಲ್ಲಿ ನಾನೂ ಒಬ್ಬ ಎಂಬ ಸಿನಿಮಾ ಹಾಡಿಗೆ ಇಬ್ಬರೂ ರೊಮ್ಯಾಂಟಿಕ್ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದಾರೆ. ನಿನಗಂತಲೇ ಹುಟ್ಟಿದವ ಎಂದು ಹಾಡಿನ ಸಾಲಿಗೆ ಇಬ್ಬರೂ ನಸುನಗುತ್ತಾ ರೀಲ್ಸ್ ಮಾಡಿದ್ದಾರೆ.
View this post on Instagram
ಇದನ್ನೂ ಓದಿ: Kavyashree Gowda: ಖ್ಯಾತ ಕಿರುತೆರೆ ನಟಿ ಈಕೆ, ಯಾರು ಹೇಳಿ ನೋಡೋಣ
ಇನ್ನೊಂದು ರೀಲ್ಸ್ನಲ್ಲಿ ದರ್ಶ್ ಚಂದ್ರಪ್ಪ ಅವರು ಫಾರ್ಮಲ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಗ್ರೇ ಕಲರ್ ಶರ್ಟ್ ಧರಿಸಿ ಕಾವ್ಯಶ್ರೀ ಗೌಡ ಜೊತೆ ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಕಾವ್ಯಶ್ರೀ ಗೌಡ ವೈಟ್ ಸ್ಕರ್ಟ್ ಹಾಗೂ ಕಲರ್ಫುಲ್ ದಾವಣಿ ಧರಿಸಿ ಕಾಣಿಸಿಕೊಂಡಿದ್ದಾರೆ.
View this post on Instagram
ಇವರಿಬ್ಬರ ರೀಲ್ಸ್ ಈಗ ವೈರಲ್ ಆಗಿದೆ. ದರ್ಶ್ ಒಳ್ಳೆ ಹುಡುಗ, ಗುಡ್ ಫ್ರೆಂಡ್ಸ್ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಸೂಪರ್ ಜೋಡಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಜೊತೆಯಾಗಿ ಯಾವ ಸೀರಿಯಲ್ ಮಾಡ್ತಿದ್ದೀರಿ ಎಂದು ಕೇಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ