ಸಿನಿಮಾ(Cinema), ಕಿರುತೆರೆ(Television) ಕಲಾವಿದರು ಮದುವೆಯಾಗುತ್ತಾರೆ ಅಂದರೆ ಜನಸಾಮನ್ಯರಿಗೆ ಏನೋ ಒಂದು ಕುತೂಹಲ. ಅವರು ಯಾವ ರೀತಿ ಮದುವೆಯಾಗುತ್ತಾರೆ ಎಂದು ತಿಳಿದುಕೊಳ್ಳುವ ಆಸೆ. ಅದು ಸಹಜ, ಯಾಕೆಂದರೆ ಸಿನಿಮಾ, ಕಿರುತೆರೆ ನಟಿಯರು ಹಣ(Money) ವ್ಯಯಿಸಿ ಮದುವೆಯಾಗುತ್ತಾರೆ. ಆ ಗ್ರ್ಯಾಂಡ್ ವೆಡ್ಡಿಂಗ್(Grand Wedding) ನೋಡೋದೆ ಒಂದು ಖುಷಿ ಅಂತಾರೆ ಜನಸಾಮನ್ಯರು. ನಾವಂತೂ ಹಾಗೇ ಮದುವೆ ಮಾಡಿಕೊಳ್ಳಲು ಆಗಲ್ಲ. ಅವರ ಮದುವೆಯನ್ನು ನೋಡೋಣ ಅಂದುಕೊಂಡಿರುತ್ತಾರೆ. ಇದೀಗ ಮತ್ತೊಬ್ಬ ಕಿರುತೆರೆ ಸ್ಟಾರ್ ಮದುವೆಯಾಗಲಿದ್ದಾರೆ. ಕನ್ನಡ ಕಿರುತೆರೆ ಜನಪ್ರಿಯ ನಟಿ ಕಾವ್ಯಾ ಗೌಡ (Kavya Gowda) ಮತ್ತು ಉದ್ಯಮಿ ಸೋಮಶೇಖರ್ (Somashekar) ರವರು ಡಿಸೆಂಬರ್ 2ರಂದು ದಾಂಪತ್ಯ ಜೀವನಕ್ಕೆ (Marriage) ಕಾಲಿಡಲು ಸಜ್ಜಾಗಿದ್ದಾರೆ. ಮದುವೆ ತಯಾರಿಯಲ್ಲಿ ಬ್ಯುಸಿಯಾಗಿರುವ ನಟಿ ತಮ್ಮ ಮದುವೆ ಹೇಗಿರಬೇಕು ಎಂದು ಕನಸು ಕಂಡಿದ್ದರು, ಎಂಬುದನ್ನು ರಿವೀಲ್ ಮಾಡಿದ್ದಾರೆ. ಅಲ್ಲದೆ ಇತ್ತೀಚಿಗೆ ನಡೆದ ಬ್ಯಾಚುಲರ್ ಪಾರ್ಟಿ (Bachelor Party) ಹೇಗಿತ್ತು ಈ ಥೀಮ್ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂದು ತಿಳಿಸಿದ್ದಾರೆ. ಡಿಸೆಂಬರ್ 2ರಂದು ತಮಗಿಷ್ಟದ, ಕನಸು ಕಂಡಿದ್ದ ರೀತಿಯಲ್ಲಿ ಕಾವ್ಯ ಗೌಡ ಮದುವೆಯಾಗಲಿದ್ದಾರೆ.
ಬಿಗ್ ಫ್ಯಾಟ್ ಇಂಡಿಯನ್ ವೆಡ್ಡಿಂಗ್!
'ಈ ಹಿಂದೆಯೇ ಮದುವೆ ಆಗಬೇಕಿತ್ತು. ಆದರೆ ಕೊರೋನಾದಿಂದ (Covid19) ದಿನಾಂಕ ಮುಂದೂಡಲಾಗಿತ್ತು. ನನ್ನ ಕುಟುಂಬದಲ್ಲಿ ಮದುವೆ ಆಗುತ್ತಿರುವ ಕೊನೆ ಹುಡುಗಿ ನಾನೇ. ಹಾಗೇ ಸೋಮಶೇಖರ್ ಕುಟುಂಬದಲ್ಲಿ ಅವರೇ ಕಿರಿಯವರು. ಮದುವೆಯ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನೂ ನಾವು ಅದ್ಧೂರಿಯಾಗಿ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದೇವು. ಸಂಗೀತ್, ಮೆಹೆಂದಿ, ಆರತಕ್ಷತೆ , ಮುಹೂರ್ತ ಮತ್ತು ಕಾಕ್ಟೇಲ್ ಪಾರ್ಟಿ ಎಲ್ಲವೂ ಪ್ಲಾನ್ ಆಗಿದೆ. ಇದು ಒಂದು ಬಿಗ್ ಫ್ಯಾಟ್ ಇಂಡಿಯನ್ ಮದುವೆ ಆಗಬೇಕು, ಇದೇ ರೀತಿ ಮದುವೆಯಾಬೇಕೆಂಬ ಆಸೆ ಇತ್ತು. ಅದರಂತೆ ಎಲ್ಲವೂ ಸಿದ್ಧವಾಗಿದೆ. ಕೊನೆಗೂ ದಿನಾಂಕ ಫಿಕ್ಸ್ ಮಾಡಿದ್ದೀವಿ’ ಎಂದು ಕಾವ್ಯ ಗೌಡ ಹೇಳಿದ್ದಾರೆ.
ಇದನ್ನು ಓದಿ : 15 ನಿಮಿಷದ ಪಾತ್ರಕ್ಕೆ ಆಲಿಯಾ ಭಟ್ ಪಡೆದ ಸಂಭಾವನೆ ಎಷ್ಟು ಗೊತ್ತಾ? ತಲೆ ತಿರುಗೋದು ಗ್ಯಾರಂಟಿ!
Bachelorette Partyಯಲ್ಲಿ ಎಂಜಾಯ್ ಮಾಡಿದ ನಟಿ!
ಈ ಹಿಂದೆಯೇ ನಡೆಯಬೇಕಿದ್ದ ಇವರ ಮದುವೆ ಕೊರೋನಾ ಕಾರಣದಿಂದಾಗಿ ಮುಂದೂಡಲಾಗಿತ್ತು. ಈಗ ಮತ್ತೆ ಇವರ ಮದುವೆಗೆ ದಿನಾಂಕ ನಿಗದಿಯಾಗಿದೆ. ಇದರಿಂದಲೇ ಕಾವ್ಯಾ ಗೌಡ ತಮ್ಮ ಸ್ನೇಹಿತರ ಜೊತೆ ಬ್ಯಾಚುಲರ್ ಪಾರ್ಟಿ ಮಾಡಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಕ್ರಿಶ್ಚಿಯನ್ ರೀತಿಯಲ್ಲಿ ಬ್ಯಾಚುಲರ್ ಪಾರ್ಟಿ ಹಮ್ಮಿಕೊಂಡ ಕಾವ್ಯಾ ಗೌಡ ಮತ್ತು ಸ್ನೇಹಿತರು ಡಿಸೈನರ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದರು. ಕಾವ್ಯಾ ಗೌಡ ಹಾಗೂ ಸೋಮಶೇಖರ್ ಅವರು ದುಬೈನಲ್ಲಿ ಕೆಲ ತಿಂಗಳ ಹಿಂದಯೇ ದುಬೈನಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆರತಕ್ಷತೆ ಡಿಸೆಂಬರ್ 1ರಂದು ನಡೆಯಲಿವೆ. 2ರಂದು ಮುಹೂರ್ತ. ಇವೆಲ್ಲಾ ಆದ ನಂತರ ಪಾರ್ಟಿ ಹಮ್ಮಿಕೊಂಡಿದ್ದೀವಿ,' ಎಂದು ಕಾವ್ಯಾ ತಿಳಿಸಿದ್ದಾರೆ.
ಇದನ್ನು ಓದಿ : ಜಾಕಲಿನ್ ಕೆನ್ನೆಗೆ ಮುತ್ತುಕೊಟ್ಟ ಕರ್ನಾಟಕದ ಕಳ್ಳನ Photo Viral..!
ಕಿರುತೆರೆಯಲ್ಲಿ ಕಾವ್ಯಾ ಗೌಡ ಫೇಮಸ್!
ಕಾವ್ಯಾ ಗೌಡ ಅವರು ಕನ್ನಡ ಕಿರುತೆರೆಯಲ್ಲಿ 'ಮೀರಾ ಮಾಧವ', 'ಗಾಂಧಾರಿ', 'ರಾಧಾ ರಮಣ' ಧಾರಾವಾಹಿ ಮೂಲಕ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲದೆ 'ಬಕಾಸುರ' ಸಿನಿಮಾದಲ್ಲಿಯೂ ನಟಿಸಿದ್ದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು ಅಭಿಮಾನಿಗಳ ಜೊತೆ ಸಂವಹನ ಮಾಡುತ್ತಿರುತ್ತಾರೆ. ಕಳೆದ ಮೇ ತಿಂಗಳಿನಲ್ಲಿಯೇ ಕಾವ್ಯಾ ಮದುವೆ ನಡೆಯಬೇಕಿತ್ತು, ಕೊರೊನಾ ಎರಡನೇ ಅಲೆ ಇರೋದಕ್ಕೆ ಕಾವ್ಯಾ ಹಾಗೂ ಸೋಮಶೇಖರ್ ಮದುವೆ ಮುಂದೂಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ