Geetha Bhat: ನಾಯಕಿ ನಟಿಯಾಗಿ ಮಿಂಚಲಿದ್ದಾರೆ ಗೀತಾ ಭಟ್, ತೂಕ ಇಳಿಸಲು ಭಾರೀ ಕಸರತ್ತು!

ಈಗ ಗೀತಾ ಭಟ್ ಅವರಿಗೆ ನಾಯಕಿ ಆಗಿ ಪಾತ್ರ ಮಾಡುವ ಅವಕಾಶ ಸಿಕ್ಕಿದೆ. ಇನ್ನು ಚಿತ್ರಕ್ಕೆ ಹೆಸರಿಟ್ಟಿಲ್ಲ. ಆದ್ರೆ ಸುಳ್ಯದ ಶ್ರೀಚೆನ್ನಕೇಶವ ದೇವಸ್ಥಾನದಲ್ಲಿ ಚಿತ್ರಕ್ಕಾಗಿ ಮುಹೂರ್ತ ಇಡಲಾಗಿದೆ.

ಗೀತಾ ಭಟ್

ಗೀತಾ ಭಟ್

  • Share this:
    ಗೀತಾ ಭಟ್ (Geetha Bhat) ಅಂದಾಕ್ಷಣ ನೆನಪಾಗೋದು ಬ್ರಹ್ಮಗಂಟು ಧಾರಾವಾಹಿ (Serial). ಹೌದು ಆ ಧಾರಾವಾಹಿಯಲ್ಲಿ ಗೀತಾ ಭಟ್ ಅದ್ಭುತವಾಗಿ ನಟಿಸಿದ್ದರು. ದಪ್ಪಗಿದ್ದವರ ಮನಸ್ಸಿನ ಮೇಲೆ ಬೀರುವ ಪರಿಣಾಮಗಳ ಬಗ್ಗೆ, ಅವರಿಗಾಗು ನೋವಿನ ಬಗ್ಗೆ ನೋಡಿದ್ದೇವು. ಅವನ್ನೆಲ್ಲಾ ಮೆಟ್ಟಿ ನಿಂತು ಹೇಗೆ ಸಂಸಾರ ನಡೆಸಬೇಕು. ಗಂಡನ ಜೊತೆ ಹೇಗಿರಬೇಕು. ಪತಿ ಕುಟುಂಬಕ್ಕೆ ಹೇಗೆ ಹೊಂದಿಕೊಳ್ಳಬೇಕು ಎಂದು ತೋರಿಕೊಟ್ಟಿದ್ದ ಸೀರಿಯಲ್. ಆ ಪಾತ್ರದ ಮೂಲಕ ಗೀತಾ ಅಭಿಮಾನಿಗಳ (Fans) ಮನ ಗೆದ್ದಿದ್ದರು. ಹಲವರು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಗೀತಾ ಭಟ್ ಕಾಣಿಸಿಕೊಂಡಿದ್ದರು. ಈಗ ಚಿತ್ರವೊಂದಕ್ಕೆ (Film) ನಾಯಕಿಯಾಗಿ (Heroine) ಅಭಿನಯಿಸುತ್ತಿದ್ದಾರೆ. ಅದಕ್ಕೆ ತಮ್ಮ ತೂಕವನ್ನು (Weight) ಇಳಿಸಿಕೊಂಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ಕಾಣಲು ತೂಕ ಕಡಿಮೆ ಮಾಡಿಕೊಂಡಿದ್ದಾರೆ.

    ಲವ್ ಮಾಕ್ಟೇಲ್ ಚಿತ್ರದಲ್ಲಿ ಚಿಕ್ಕ ಪಾತ್ರ
    ಗೀತಾ ಭಟ್ ಅವರು ಡಾರ್ಲಿಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದಿಯ ಫ್ರೆಂಡ್ ಪಾತ್ರ. ಹೋಟೆಲ್ ನಲ್ಲಿ ಸುಮ್ಮನೇ ಮಾತನಾಡಿಸಿಕೊಂಡು ಹೋಗುವ ಪಾತ್ರ. ಅದು ಸಹ ಜನರಿಗೆ ಖುಷಿ ನೀಡಿತ್ತು. ಅಲ್ಲದೇ ಅಂಬಿ ನಿಂಗೆ ವಯಸ್ಸಾಯ್ತು ಚಿತ್ರದಲ್ಲೂ ನಟಿಸಿದ್ದಾರೆ.

    ನಾಯಕಿ ನಟಿಯಾಗಿ ಗೀತಾ ಭಟ್
    ಈಗ ಗೀತಾ ಭಟ್ ಅವರಿಗೆ ನಾಯಕಿ ಆಗಿ ಪಾತ್ರ ಮಾಡುವ ಅವಕಾಶ ಸಿಕ್ಕಿದೆ. ಇನ್ನು ಚಿತ್ರಕ್ಕೆ ಹೆಸರಿಟ್ಟಿಲ್ಲ. ಆದ್ರೆ ಸುಳ್ಯದ ಶ್ರೀಚೆನ್ನಕೇಶವ ದೇವಸ್ಥಾನದಲ್ಲಿ ಚಿತ್ರಕ್ಕಾಗಿ ಮುಹೂರ್ತ ಇಡಲಾಗಿದೆ. ಬಂದರು, ಮೀನುಗಾರಿ, ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಾಲನೆ ನೀಡಿದ್ದಾರೆ.

    ಸಂತೋಷ್ ಕೊಡಂಕೇರಿ ನಿರ್ದೇಶನ
    ಗೀತಾ ಭಟ್ ನಾಯಕಿಯಾಗಿ ನಟಿಸಲಿರುವ ಚಿತ್ರವನ್ನು, ಈ ಹಿಂದೆ ಹೋಮ್ ಸ್ಟೇ ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಕೊಡಂಕೇರಿ ನಿರ್ದೇಶಿಸಲಿದ್ದಾರೆ. ಗೀತಾಗೆ ಮೊದಲ ಚಿತ್ರವಾಗಿದ್ದು ತುಂಬಾ ಕಾತುರರಾಗಿದ್ದಾರೆ. ದಕ್ಷಿಣ ಕನ್ನಡದ ಊರೊಂದರಲ್ಲಿ ನಡೆಯುವ ಕಥೆಯಾಗಿದೆ. ನಿರ್ದೇಶಕರ ಪತ್ನಿ ಪಾವನಾ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರಂತೆ.

    ಇದನ್ನೂ ಓದಿ: Jothe Jotheyali: ಜೊತೆ ಜೊತೆಯಲಿ ಮೆಗಾ ಟ್ವಿಸ್ಟ್! ಆರ್ಯವರ್ಧನ್ ಪಾತ್ರ ಬದಲಿಸಲು ಆ್ಯಕ್ಸಿಡೆಂಟ್ ಎಪಿಸೋಡ್?

    ಹಳ್ಳಿ ಹುಡುಗಿಯೊಬ್ಬಳಿಗೆ ಎನ್‍ಆರ್​ಐ ಹುಡುಗನ ಜೊತೆಗೆ ಮದುವೆ ಗೊತ್ತಾಗುತ್ತದೆ. ಮದುವೆ ಗೊತ್ತಾದ ನಂತರ ಏನಾಗುತ್ತೆ ಎನ್ನುವುದನ್ನು ತಮಾಷೆ ಮೂಲಕ ಚಿತ್ರದಲ್ಲಿ ತೋರಿಸಲಾಗುತ್ತಂತೆ. ಆ ಪಾತ್ರವನ್ನು ಗೀತಾ ಭಟ್ ಮಾಡಲಿದ್ದಾರೆ. ಗೀತಾ ಭಟ್ ಜೊತೆಯಾಗಿ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತ್ತಾರ್, ಸಂಪತ್ ಮೈತ್ರೇಯ, ರಘು ಪಾಂಡೇಶ್ವರ ಇನ್ನು ಇತರರು ಅಭಿನಯಿಸಲಿದ್ದಾರೆ.


    ದೃಷ್ಟಿ ಮಿಡಿಯಾ ಮತ್ತು ಪ್ರೊಡಕ್ಷನ್ ಸಂಸ್ಥೆ
    ದೃಷ್ಟಿ ಮಿಡಿಯಾ ಮತ್ತು ಪ್ರೊಡಕ್ಷನ್ ಸಂಸ್ಥೆಯ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಛಾಯಾಗ್ರಹಣವನ್ನು ಮುರುಳೀಧರ್ ಎಂ. ಮಾಡಲಿದ್ದಾರೆ. ವಿನಯ್ ಶರ್ಮಾ ಸಂಗೀತಾ ಇರಲಿದೆ. ದಕ್ಷಿಣ ಕನ್ನಡದ ಸೊಗಡು ಮತ್ತು ಸಂಸ್ಕೃತಿ ಹೊಂದಿದ್ದು, ಸುಳ್ಯ, ಸಂಪಾಜೆಯಲ್ಲಿ ಚಿತ್ರೀಕರಣ ನಡೆಯಲಿದೆ.

    ಇದನ್ನೂ ಓದಿ: Kannadathi: ಅಮ್ಮಮ್ಮನ ಪರೀಕ್ಷೆ ಮಾಡಿಸಲು ಹೋಗಿ ಸಾನಿಯಾ ಸಿಕ್ಕಿ ಹಾಕಿಕೊಳ್ತಾಳಾ? ಅತ್ತೆ V/s ಸೊಸೆ

    ತೂಕ ಇಳಿಸಿಕೊಂಡ ನಟಿ
    ತಮ್ಮ ಮೊದಲ ಚಿತ್ರದಲ್ಲಿ ನಟಿಸಲು, ಪಾತ್ರಕ್ಕೆ ತಕ್ಕಂತೆ ಗೀತಾ ಭಟ್ ಅವರು ತೂಕವನ್ನು ಇಳಿಸಿಕೊಂಡಿದ್ದಾರೆ. ನಿರಂತರವಾದ ಅಭ್ಯಾಸದಿಂದ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಅಂದುಕೊಂಡಂತೆ ಆದ್ರೆ, ಮುಂದಿನ ವರ್ಷದ ಕೊನೆಯಲ್ಲಿ ಚಿತ್ರ ತೆರೆ ಕಾಣುವ ಸಾಧ್ಯತೆ ಇದೆ.
    Published by:Savitha Savitha
    First published: