Kollywood: ಇದಪ್ಪಾ ವರಸೆ ಅಂದ್ರೆ, ಈ ಸ್ಟಾರ್ ನಟನನ್ನೇ ಮದ್ವೆಯಾಗ್ಬೇಕು ಅಂತ ಗಲಾಟೆ ಮಾಡಿದ ನಟಿ!

ನಾಯಕಿ ನಿಧಿ ಅಗರ್ವಾಲ್ (Nidhhi Agerwal)​, ಕಾಲಿವುಡ್​ ನಟ ಸಿಂಬು (Kollywood Hero Simbu) ಜೊತೆ ಲಿವ್​ ಇನ್​ ರೀಲೆಷನ್​ ಶಿಪ್​ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಶೀಘ್ರದಲ್ಲೇ ಈ ಜೋಡಿ ಮದುವೆಯಾಗುತ್ತಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ತಮಿಳು ನಟ ಸಿಂಬು ಮನೆ ಮುಂದೆ ದೊಡ್ಡ ಹೈಡ್ರಾಮವೇ ನಡೆದುಹೋಗಿದೆ.

ಸಿಂಬು, ಶ್ರೀನಿಧಿ

ಸಿಂಬು, ಶ್ರೀನಿಧಿ

  • Share this:
'ಇಸ್ಮಾರ್ಟ್ ಶಂಕರ್' (Ismart Shankar) , 'ಈಶ್ವರನ್' (Eshwaran) ಮತ್ತು 'ಭೂಮಿ' (Bhoomi) ಚಿತ್ರಗಳಲ್ಲಿ ನಟಿಸಿರುವ ನಾಯಕಿ ನಿಧಿ ಅಗರ್ವಾಲ್ (Nidhhi Agerwal)​, ಕಾಲಿವುಡ್​ ನಟ ಸಿಂಬು (Kollywood Hero Simbu) ಜೊತೆ ಲಿವ್​ ಇನ್​ ರೀಲೆಷನ್​ ಶಿಪ್​ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಶೀಘ್ರದಲ್ಲೇ ಈ ಜೋಡಿ ಮದುವೆಯಾಗುತ್ತಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ತಮಿಳು ನಟ ಸಿಂಬು ಮನೆ ಮುಂದೆ ದೊಡ್ಡ ಹೈಡ್ರಾಮವೇ ನಡೆದುಹೋಗಿದೆ. ಈ ಸ್ಟಾರ್​ ನಟ ನನಗೆ ಬೇಕೇ ಬೇಕು ಎಂದು ನಟಿಯೊಬ್ಬರು ಗಲಾಟೆ ಮಾಡಿದ್ದಾರೆ. ಮದುವೆ (Wedding) ಯಾದರೆ ಇವರನ್ನೇ ಮದುವೆಯಾಗುತ್ತೇನೆ ಎಂದು ಸಿಂಬು ಮನೆ ಮುಂದೆ ರಂಪಾಟ ಮಾಡಿದ್ದಾರೆ. ಈ ವಿಚಾರ ಇದೀಗ ಸೋಷಿಯಲ್​ ಮೀಡಿಯಾ  (Social Media) ದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ತಮಿಳು ಸೀರಿಯಲ್​​​ (Tamil Serial) ನಟಿಯೊಬ್ಬರು  ನನಗೆ ಸಿಂಬು ಬೇಕು ಅಂತ  ದೊಡ್ಡ ರಂಪಾಟ ಮಾಡಿದ್ದಾರೆ. ಮಧ್ಯರಾತ್ರಿ ಸಿಂಬು ಮನೆ ಬಳಿ ತೆರಳಿ ಗಲಾಟೆ ಮಾಡಿದ್ದಾರೆ.

ಸಿಂಬು ಬೇಕೇ ಬೇಕು ಎಂದ ತಮಿಳು ಸೀರಿಯಲ್​ ನಟಿ!

'ಈಶ್ವರ’ ಸಿನಿಮಾದ ಶೂಟಿಂಗ್ ವೇಳೆ ಸಿಂಬು ಹಾಗೂ ನಿಧಿ ಅಗರ್​ವಾಲ್​ ನಡುವೆ ಪ್ರೇಮಾಂಕುರವಾಗಿತ್ತು ಎಂದು ಹೇಳಲಾಗಿತ್ತು. ಇಬ್ಬರಿಗೂ ಪರಿಚಯವಾಗಿದೆ. ಅಷ್ಟೇ, ಬೇರೇನೂ ಇಲ್ಲ’ ಎಂದು ನಟಿ ಅಗರ್ವಾಲ್ ಕುಟುಂಬಸ್ಥರು ಹೇಳಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವೇ ದಿನಗಳಲ್ಲಿ ಇಬ್ಬರೂ ಮದುವೆಯಾಗೇ ಬಿಡುತ್ತಾರೆ ಎಂದು ಹೇಳಲಾಗಿತ್ತು. ಇದರ ಮಧ್ಯೆ ಜನಪ್ರಿಯ ಧಾರಾವಾಹಿ ನಟಿ ಶ್ರೀನಿಧಿ ಸಿಂಬು ಬೇಕು ಎಂದು ಹೇಳಿ ಸುದ್ದಿ ಆಗಿದ್ದಾರೆ.

ಅಷ್ಟೆಲ್ಲಾ ಡ್ರಾಮಾ ಮಾಡಿದ ನಟಿ ಯಾರು ಗೊತ್ತಾ?

ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬರು ಸಿಂಬು ಬಗ್ಗೆ ಕೇಳಿದಾಗ ಸಿಂಬು ಅವರನ್ನು ಮದುವೆಯಾಗಲು ಸಿದ್ಧ ಎಂದು ಹೇಳಿದ್ದರು. ಈ ಬಗ್ಗೆ ವಿಡಿಯೋ ಕೂಡ ಬಿಡುಗಡೆ ಮಾಡಿದ್ದರು. ಆಗಾಗ ನಟರ ಬಗ್ಗೆ ಟೀಕಿಸುವ ಮೂಲಕ ಶ್ರೀನಿಧಿ ಸುದ್ದಿ ಆಗುತ್ತಾರೆ. ಹಾಗಾಗಿ ಇದನ್ನು ಯಾರು ಗಂಭಿರವಾಗಿ ಪರಿಗಣಿಸಿದಂತೆ ಇಲ್ಲ. ತಮಿಳಿನ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಶ್ರೀನಿಧಿ. ಜೀ ಟಿವಿಯಲ್ಲಿ ಪ್ರಸಾರವಾಗುವ 'ಯಾರಡಿ ನೀ ಮೋಹಿನಿ' ಧಾರಾವಾಹಿಯಲ್ಲಿ ಶ್ರೀನಿಧಿ ಜನನಿ ಹೆಚ್ಚಿನ ಖ್ಯಾತಿ ಪಡೆದಿದ್ದಾರೆ.

ಇದನ್ನೂ ಓದಿ: Actor Simbhu ಜೊತೆ ಲಿವ್​ ಇನ್​ ರಿಲೇಷನ್​ ಶಿಪ್​ನಲ್ಲಿದ್ದಾರಂತೆ ಈ ಫೇಮಸ್​ ನಟಿ: ಯಾರ್​ ಅಂತ ನೀವೇ ನೋಡಿ...!

ಮಧ್ಯರಾತ್ರಿ ಸಿಂಬು ಮನೆ ಮುಂದೆ ಧರಣಿ ಕೂತ ಶ್ರೀನಿಧಿ!

ಸೀರಿಯಲ್​ ನಟಿ ಶ್ರೀನಿಧಿ ಇದ್ದಕ್ಕಿದ್ದ ಹಾಗೆ ಮಧ್ಯರಾತ್ರಿ ನಟ ಸಿಂಬು ಮನೆ ಮುಂದೆ ಹೋಗಿ ಗಲಾಟೆ ಮಾಡಿದ್ದಾರೆ. ಸಿಂಬು ನೋಡದೇ ಅಲ್ಲಿಂದ ಹೋಗುವುದಿಲ್ಲ. ನನಗೆ ಸಿಂಬು ಬೇಕು ಎಂದು ಕೂಗಾಡಿದ್ದಾರೆ. ಬಳಿಕ ಸಿಂಬು ಮನೆಯವರು ನಟಿಯನ್ನು ಸಮಾಧಾನ ಪಡಿಸಿ ಅಲ್ಲಿಂದ ಕಳುಹುಸಿದ್ದಾರಂತೆ. ನಟಿ ಶ್ರೀನಿಧಿಯ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಯಾಕಾಗಿ ನಟಿ ಶ್ರೀನಿಧಿ ಇಷ್ಟೊಂದು ಡ್ರಾಮಾ ಮಾಡಿದರು ಎಂದು ಯಾರಿಗೂ ತಿಳಿದಿಲ್ಲ. ನಟಿ ಶ್ರೀನಿಧಿಯ ಹೀಗೆ ಮಾಡಲು ಕಾರಣ ಏನು ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ.

ಇದನ್ನೂ ಓದಿ: ಪೆ ಪೆ ಪೆ - ಡುಂ ಡುಂ! ಶೀಘ್ರದಲ್ಲೇ ಹಸೆಮಣೆ ಏರ್ತಿದ್ದಾರೆ ಲೇಡಿ ಸೂಪರ್​ಸ್ಟಾರ್, ಮದುವೆ ದಿನಾಂಕ ಕೂಡ ಫಿಕ್ಸ್

ನಟಿ ಶ್ರೀನಿಧಿ ಹೈಡ್ರಾಮಕ್ಕೆ ಸಿಂಬು ಡೋಂಟ್​ ಕೇರ್​​!

ಇತ್ತ ಈ ಬಗ್ಗೆ ನಟ ಸಿಂಬು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶ್ರೀನಿಧಿ ಸಿಂಬು ಮೇಲಿನ ಅಭಿಮಾನಕ್ಕೆ ಹೀಗೆ ಮಾಡಿಲ್ಲ. ಯಾಕೆಂದರೆ ಶ್ರೀನಿಧಿ, ಈ ಹಿಂದೆಯೂ ಸಿಂಬುನಾ ಮದುವೆ ಆಗುವುದಾಗಿ ಹೇಳಿಕೊಂಡಿದ್ದರು.ಮ ಈಗಲೂ ಇದೇ ರೀತಿಯ ಹುಚ್ಚಾಟ ಮೆರೆದಿದ್ದಾರೆ. ಸಿಂಬು ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ನಟಿ ಶ್ರೀ ನಿಧಿಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ತಮ್ಮ ನೆಚ್ಚಿನ ನಟನ ತಂಟೆಗೆ ಬಾರದಂತೆ ತಾಕೀತು ಮಾಡಿದ್ದಾರೆ.
Published by:Vasudeva M
First published: