Actress Amrutha: ಗಂಡು ಮಗುವಿನ ತಾಯಿಯಾದ ಕಿರುತೆರೆ ನಟಿ ಅಮೃತಾ ನಾಯ್ಡು

serial Actress: ಈ ಸಂತೋಷದ ವಿಚಾರವನ್ನು ನಟಿ ಅಮೃತಾ ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.  ಅಮೃತಾ ದಂಪತಿಗಳು ಈಗಾಗಲೇ ಮುದ್ದಾದ ಮಗಳು ಸಮನ್ವಿ ಕಳೆದುಕೊಂಡ ನೋವಲ್ಲಿದ್ದರು ಆದರೆ ಈ ಸಂತಸದ ಸುದ್ದಿ ನೋವನ್ನು ಕಡಿಮೆ ಮಾಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.  

ಅಮೃತಾ ನಾಯ್ಡು

ಅಮೃತಾ ನಾಯ್ಡು

  • Share this:
ಕಿರುತೆರೆ ನಟಿ ಅಮೃತಾ ನಾಯ್ಡು (Amrutha Naidu)  ಮನೆಯಲ್ಲಿ ನೋವು ಮರೆಯಾಗಿ ಸಂತಸ ಮೂಡಿದೆ. ನಟಿಯ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೌದು, ನಟಿ ಅಮೃತಾ ಗಂಡು ಮಗುವಿಗೆ (Baby boy) ಜನ್ಮ ನೀಡಿದ್ದು, ದಂಪತಿಗಳು ಸಂತೋಷದಲ್ಲಿದ್ದಾರೆ.  ನಟಿ ಅಮೃತಾ ಜುಲೈ 2 ರಂದುಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಸಂತಸದಲ್ಲಿ ಅಮೃತಾ ದಂಪತಿ

ಇನ್ನು ಈ ಸಂತೋಷದ ವಿಚಾರವನ್ನು ನಟಿ ಅಮೃತಾ ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.  ಅಮೃತಾ ದಂಪತಿಗಳು ಈಗಾಗಲೇ ಮುದ್ದಾದ ಮಗಳು ಸಮನ್ವಿ ಕಳೆದುಕೊಂಡ ನೋವಲ್ಲಿದ್ದರು ಆದರೆ ಈ ಸಂತಸದ ಸುದ್ದಿ ನೋವನ್ನು ಕಡಿಮೆ ಮಾಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.




ಇದನ್ನೂ ಓದಿ: ನೂರು ದಿನ ಪೂರೈಸಿದ ಆರ್​ಆರ್​ಆರ್​, ರಾಜಮೌಳಿ ಸಿನಿಮಾಗೆ ಬಹುಪರಾಕ್ ಎಂದ ಫ್ಯಾನ್ಸ್

ಅಮೃತಾ 25ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಗಂಗೋತ್ರಿ' ಧಾರಾವಾಹಿ ಅವರಿಗೆ ಒಳ್ಳೆಯ ಖ್ಯಾತಿ ತಂದುಕೊಟ್ಟಿತ್ತು. 'ಪುಣ್ಯಕೋಟಿ', 'ಕುಸುಮಾಂಜಲಿ', 'ಮನೆಯೊಂದು ಮೂರು ಬಾಗಿಲು', 'ಅಮೃತ ವರ್ಷಿಣಿ', 'ನಾಗಿಣಿ', 'ಗೀತಾ' ಮುಂತಾದ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ಕನ್ನಡದ ಜೊತೆಗೆ ಪರಭಾಷೆಯಲ್ಲಿಯೂ ಅಮೃತಾ ಬಣ್ಣ ಹಚ್ಚಿದ್ದಾರೆ. ಸಮನ್ವಿ ಹಾಗೂ ಅಮೃತಾ 'ನನ್ನಮ್ಮ ಸೂಪರ್ ಸ್ಟಾರ್' ಶೋನಲ್ಲಿ ಭಾಗವಹಿಸಿದ್ದರು.




ಇದನ್ನೂ ಓದಿ: ಪೃಥ್ವಿ ಅಂಬರ್​ಗೆ ಜೊತೆಯಾದ ನಟಿ ಆಯಾನಾ, ದೂರದರ್ಶನ ಸಿನಿಮಾದ ಹೊಸ ಅಪ್​ಡೇಟ್​

ಮಗಳು ಸಮನ್ವಿ ಕಳೆದುಕೊಂಡಿದ್ದ ದಂಪತಿ

ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಕಳೆದ ಜನವರಿಯಲ್ಲಿ ರಸ್ತೆ ಅಪಘಾತದಲ್ಲಿ 6 ವರ್ಷದ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಈ ಹಿಂದೆ ಇವರ ಮೊದಲ ಮಗು ಕೂಡ ಎಷ್ಟೇ ಪ್ರಯತ್ನ ಪಟ್ಟರು ಬದುಕುಳಿದಿರಲಿಲ್ಲ. ತಾಯಿ ಅಮೃತಾ ಮಗುವನ್ನು ಉಳಿಸಿಕೊಳ್ಳಲು ಹರಸಾಹ ಪಟ್ಟಿದ್ದರು. ಆಸ್ಪತ್ರೆಯಲ್ಲಿ ಹಲವು ದಿನ ಚಿಕಿತ್ಸೆ ಕೊಡಿಸಿದರು ಮಗು ಉಳಿಯಲಿಲ್ಲ. ಆ ಮಗುವನ್ನು ಆಸ್ಪತ್ರೆ ಸಿಬ್ಬಂದಿ ಪೇಪರ್​ನಲ್ಲಿ ಸುತ್ತು ಕೊಟ್ಟಿದ್ದರಂತೆ. ಇದನ್ನು ಹೇಳಿಕೊಂಡು ಈ ಹಿಂದೆ ನನ್ನಮ್ಮ ಸೂಪರ್​ ಸ್ಟಾರ್​​ ವೇದಿಕೆಯಲ್ಲೇ ಅಮೃತಾ ಕಣ್ಣೀರು ಹಾಕಿದ್ದರು. 2ನೇ ಮಗು ಸಮನ್ವಿ ಬಂದ ಬಳಿಕ ಈ ನೋವನ್ನು ಕುಟುಂಬದವರು ಮರೆತಿದ್ದರು. ನಂತರ ಸಮನ್ವಿ ಸಾವಿ ಕೂಡ ಕುಟುಂಬವನ್ನು ನೋವಿನಲ್ಲಿ ಮುಳುಗಿಸಿತ್ತು. ಆದರೆ ಈ ಮಗುವಿನ ಆಗಮನ ಮುಖದಲ್ಲಿ ನಗು ಮೂಡಿಸಿದೆ.
Published by:Sandhya M
First published: