Aishwarya: ಹಸೆಮಣೆ ಏರಲು ಸಜ್ಜಾಗಿದ್ದಾರೆ ಕಿರುತೆರೆ ಲವ್ ಬರ್ಡ್ಸ್, ಎಂಗೇಜ್ ಆದ ‘ಅಗ್ನಿಸಾಕ್ಷಿ’ ನಟಿ ಐಶ್ವರ್ಯಾ

ಫೆಬ್ರವರಿ 14 ರಂದು ನಟಿ ಐಶ್ವರ್ಯ ಹಾಗೂ ನಟ ವಿನಯ್​, ಗುರು ಹಿರಿಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್​ ಮಾಡಿಕೊಂಡಿದ್ದಾರೆ.

ಐಶ್ವರ್ಯಾ, ವಿನಯ್​

ಐಶ್ವರ್ಯಾ, ವಿನಯ್​

  • Share this:
'ಅಗ್ನಿಸಾಕ್ಷಿ', 'ಸೇವಂತಿ' ಧಾರಾವಾಹಿ (Serial) ನಟಿ (Actress) ಐಶ್ವರ್ಯಾ ಸಾಲಿಮಠ ಎಂಗೇಜ್​ ಆಗಿದ್ದಾರೆ. ನಟಿ ಐಶ್ವರ್ಯಾ ಸಾಲಿಮಠ (Aishwarya Salimath)  ಅಗ್ನಿಸಾಕ್ಷಿ ಮೂಲಕ ಮನೆ ಮಾತಾಗಿದ್ರು. ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸೀರಿಯಲ್​ ಅಂದ್ರೆ ಅದು ಅಗ್ನಿಸಾಕ್ಷಿ ಈ ಸೀರಿಯಲ್​ನಲ್ಲಿ ಸನ್ನಿಧಿ ತಂಗಿಯಾಗಿ ಐಶ್ವರ್ಯಾ ಅಭಿನಯಿಸಿದ್ರು. ಇದೀಗ ಐಶ್ವರ್ಯ ಎಂಗೇಜ್​ ಆಗಿರೋ ಖುಷಿಯಲ್ಲಿದ್ದಾರೆ. ಕಿರುತೆರೆಯ ಲವ್​ ಬರ್ಡ್ಸ್​ಗಳು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಫೆಬ್ರವರಿ 14 ರಂದು ನಟಿ ಐಶ್ವರ್ಯ ಹಾಗೂ ನಟ ವಿನಯ್ (Vinay)​, ಗುರು ಹಿರಿಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್ (Engagement)​ ಮಾಡಿಕೊಂಡಿದ್ದಾರೆ. ಪ್ರೇಮಿಗಳ ದಿನದಂದು ಐಶ್ವರ್ಯ ಅವರ ರಿಯಲ್ ಲೈಫ್‌ನ ವ್ಯಾಲಂಟೈನ್‌ ಪರಿಚಯ ಮಾಡಿಕೊಟ್ಟಿದ್ದಾರೆ. ಐಶ್ವರ್ಯಾ ಮನಸ್ಸು ಕದ್ದ ಹುಡುಗ ವಿನಯ್​ ಸಹ ಕನ್ನಡದ ಹಲವು ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕಿರುತೆರೆಯಲ್ಲಿ ಒಟ್ಟಿಗೆ ನಟನೆ

ನಟಿ ಐಶ್ವರ್ಯಾ ಅಗ್ನಿಸಾಕ್ಷಿ ಹಾಗೂ ಸೇವಂತಿ ಸೀರಿಯಲ್​ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ. ಇನ್ನು ನಟ ವಿನಯ್​ ಸಹ ಹಲವು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮಹಾದೇವಿ, ಜೀವನದಿ, ಅಗ್ನಿಸಾಕ್ಷಿ, ಮಹಾಸತಿ ಹೀಗೆ ಹಲವು ಸೀರಿಯಲ್​ಗಳಲ್ಲಿ ವಿನಯ್ ಅಭಿನಯಿಸಿದ್ದಾರೆ. ಸದ್ಯ ಕನ್ನಡತಿ ಧಾರಾವಾಹಿಯಲ್ಲಿ ವಿನಯ್​ ಬ್ಯುಸಿ ಆಗಿದ್ದಾರೆ. ಇನ್ನು ಇವರಿಬ್ಬರು ಒಟ್ಟಿಗೆ ತಮ್ಮ ವೃತ್ತಿ ಜೀವನ ಶುರುಮಾಡಿದ್ರು. ಸಾಗರ್​ ಪುರಾಣಿಕ್​​ ಅವರ ನಿರ್ಮಾಣದ ಮಹಸತಿ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ರು.

ಇದನ್ನೂ ಓದಿ: Kannada serial: ಕನ್ನಡ ಕಿರುತೆರೆಯಲ್ಲಿ ‘ಪುಟ್ಟಕ್ಕ’ನ ಖದರ್​, ‘ಮಂಗಳಗೌರಿ’ಗೆ ‘ಸತ್ಯ’ನ ಸವಾಲ್​

ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​

ಇನ್ನು ಎಂಗೇಜ್​ ಆಗಿರೋ ಸುದ್ದಿ ಹಾಗೂ ಫೋಟೋಗಳನ್ನು ಐಶ್ವರ್ಯ ತನ್ನ ಇನ್ಟ್ಸಾಗ್ರಾಮ್​ ಪೇಜ್​ನಲ್ಲಿ ಹಂಚಿಕೊಂಡಿದ್ದಾರೆ. ನಾನು ಹಾಗೂ ನೀನು, ನನ್ನ ಗೆಳೆಯನ ಜೊತೆ ಎಂಗೇಜ್ ಆಗಿರೋದಕ್ಕೆ ಖುಷಿಯಾಗುತ್ತದೆ ಎಂದು ನಟಿ ಐಶ್ವರ್ಯಾ ಸಾಲಿಮಠ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ರಶ್ಮಿ ಪ್ರಭಾಕರ್, ಸುಕೃತಾ ನಾಗರಾಜ್, ದೀಪಾ ಜಗದೀಶ್ ಸೇರಿ ಇನ್ನೂ ಅನೇಕರು ಐಶ್ವರ್ಯಾಗೆ ಶುಭಾಶಯ ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಕಲಾವಿದರು

ಐಶ್ವರ್ಯಾರಂತೆ ವಿನಯ್ ಕೂಡ ಉತ್ತರ ಕರ್ನಾಟಕದವರು. 'ಮಹಾಸತಿ' ಧಾರಾವಾಹಿಯಲ್ಲಿ ಐಶ್ವರ್ಯಾ, ವಿನಯ್ ಒಟ್ಟಾಗಿ ನಟಿಸಿದ್ದಾರೆ. ಅವರಿಬ್ಬರು ಬಹುಕಾಲದ ಸ್ನೇಹಿತರು. 'ಮಹಾಸತಿ' ನಂತರ ಕೂಡ ವಿನಯ್, ಐಶ್ವರ್ಯಾ ಉತ್ತಮ ಸ್ನೇಹಿತರಾಗಿದ್ದರು. ಲಾಕ್‌ಡೌನ್ ಟೈಮ್‌ನಲ್ಲಿ ನಾಗರಾಜ್ ಪಾಟೀಲ್ ಅವರ ನಿರ್ದೇಶನದಲ್ಲಿ ಒಂದು ಕಿರುಚಿತ್ರದಲ್ಲಿ ಐಶ್ವರ್ಯಾ ನಟಿಸಿದ್ದು, ವಿನಯ್ ಆ ಚಿತ್ರದ ಹೀರೋ ಆಗಿದ್ದರು.

ಇಬ್ಬರೂ ಸೀರಿಯಲ್ ಶೂಟಿಂಗ್​ನಲ್ಲಿ ಬ್ಯುಸಿ

ತಮಿಳಿನಲ್ಲಿ ಒಂದು ಧಾರಾವಾಹಿಯಲ್ಲಿ 1 ವರ್ಷ ಐಶ್ವರ್ಯಾ ಸಾಲಿಮಠ ನಟಿಸಿದ್ದರು. ಚಂದು ಬಿ ಗೌಡ ನಟನೆಯ 'ತಮಟೆ' ಸಿನಿಮಾದಲ್ಲಿಯೂ ಅವರು ಬಣ್ಣ ಹಚ್ಚಿದ್ದರು. 'ಯಾರಿವಳು', 'ನಾಗಕನ್ನಿಕೆ' ಧಾರಾವಾಹಿಗೂ ಕೂಡ ಐಶ್ವರ್ಯಾ ಡಬ್ಬಿಂಗ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಐಶ್ವರ್ಯಾ ಚಿತ್ರರಂಗದಲ್ಲಿ ಬ್ಯುಸಿಯಿದ್ದಾರೆ.

ಸದ್ಯ ಅವರು 'ಸೇವಂತಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ವಿನಯ್ 'ಧಾರವಾಡ್‌ದಾಗ್ ಒಂದ್ ಲವ್ ಸ್ಟೋರಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ 'ಜೀವನದಿ', 'ಮಹಾದೇವಿ', 'ಲಕ್ಷ್ಮೀ ಸ್ಟೋರ್ಸ್' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹುಬ್ಬಳ್ಳಿಯ ವಿನಯ್ ಅವರು ಪುಣೆ, ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿ ಆಮೇಲೆ ನಟನೆ ಮೇಲೆ ಒಲವಿದ್ದರಿಂದ ಚಿತ್ರರಂಗಕ್ಕೆ ಕಾಲಿರಿಸಿದರು.

ಇದನ್ನೂ ಓದಿ: Zee Kannada New Serial: ದಶಕದ ನಂತರ ತೆರೆಮೇಲೆ ರಾಮ್ ಕುಮಾರ್- ಶೃತಿ ಜೋಡಿ, ಕಿರುತೆರೆಯ ಹೊಸ ಸೀರಿಯಲ್​ನಲ್ಲಿ ಮಸ್ತ್ ಎಂಟ್ರಿ!

'ಸರಯೂ' ಧಾರಾವಾಹಿಯಲ್ಲಿ ಕೂಡ ಐಶ್ವರ್ಯಾ ಬಣ್ಣ ಹಚ್ಚಿದ ನಂತರದಲ್ಲಿ ಮತ್ತೆ ಅವರಿಗೆ ಅವಕಾಶ ಸಿಗೋದು ಕಷ್ಟ ಆಗಿತ್ತು. ಮತ್ತೊಂದಿಷ್ಟು ಆಡಿಶನ್ ನೀಡಿದ ನಂತರದಲ್ಲಿ 'ಅಗ್ನಿಸಾಕ್ಷಿ' ಸೀರಿಯಲ್‌ನಲ್ಲಿ ನಟಿಸುವ ಆಫರ್ ಬಂತು. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಶೋಭಾ ಶೆಟ್ಟಿ ನಿರ್ವಹಿಸಿದ್ದ ತನು ಪಾತ್ರಕ್ಕೆ ಐಶ್ವರ್ಯಾರಿಗೆ ಕರೆ ಬಂದಿತ್ತು. ಕೆಲ ಕಾರಣಗಳಿಂದ ಶೋಭಾ ಅವರು ತನು ಪಾತ್ರಕ್ಕೆ ಗುಡ್‌ಬೈ ಹೇಳಿದ್ದರು. ಅಲ್ಲಿಂದ ಐಶ್ವರ್ಯಾ ಅವರು 'ಅಗ್ನಿಸಾಕ್ಷಿ' ಧಾರಾವಾಹಿಯ ನಟಿಯಾಗಿ ಗುರುತಿಸಿಕೊಂಡರು.
Published by:Pavana HS
First published: