ಧಾರಾವಾಹಿ (Serial) ಎನ್ನುವುದು ಒಂದು ಮನೋರಂಜನೆ ನೀಡುವುದಾಗಿದೆ. ಕೆಲವುದರಲ್ಲಿ ಕೇವಲ ಮನೋರಂಜನೆ ವಿಷಯವನ್ನು ಆಧರಿಸಿದ್ದರೆ, ಕೆಲ ಸೀರಿಯಲ್ ಗಳು ತನ್ನದೇ ಆದ ವಿಭಿನ್ನ ವಿಚಾರಗಳ ಮೂಲಕ ಕೆಲ ಸಾಮಾಜಿಕ ಪಿಡುಗುಗಳನ್ನೂ ತೆರೆದಿಡುತ್ತದೆ. ಆದರೂ ಕೆಲ ವರ್ಷಗಳಿಂದ ಧಾರಾವಾಹಿ ಎಂದಾಕ್ಷಣ ಕೆಲವರು ಮೂಗು ಮುರಿಯುತ್ತಾರೆ. ಸಾಮಾನ್ಯ ಜೀವನದಲ್ಲಿ ಏನೆಲ್ಲಾ ಸಂಭವಿಸಲು ಸಾಧ್ಯವಿಲ್ಲವೋ ಅವೆಲ್ಲವೂ ಸೀರಿಯಲ್ ಗಳಲ್ಲಿ ನಡೆಯುತ್ತದೆ. ಅದೆಲ್ಲದೇ ಅದೇ ರಾಗ ಅದೇ ಕಥೆಯನ್ನು (Story) ಹೊತ್ತು ತರುತ್ತಿರುವ ಧಾರಾವಾಹಿಗಳು ನೋಡುಗರಲ್ಲಿ ಬೇಸರವನ್ನು ಉಂಟುಮಾಡುತ್ತಿದೆ. ಇವೆಲ್ಲವನ್ನೂ ಬದಿಗಿಟ್ಟು ನೋಡುವುದಾದರೆ ಕೆಲ ಸೀರಿಯಲ್ ಗಳಲ್ಲಿ ಲಾಜಿಕ್ ಇಲ್ಲದೆ ಎಲ್ಲವೂ ಮ್ಯಾಜಿಕ್ ಎಂಬಂತಾಗಿದೆ. ಅಂತಹುದೇ ಒಂದು ಹಿಂದಿಯ ಧಾರಾವಾಹಿ ಸ್ವಲ್ಪವೂ ಲಾಜಿಕ್ ಇಲ್ಲದ, ನಂಬಲು ಅಸಾಧ್ಯವಾದ ದೃಶ್ಯವೊಂದು (Scene) ಪ್ರಸಾರ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral) ಆಗುವುದರ ಜೊತೆ ಟ್ರೋಲ್ ಸಹ ಆಗುತ್ತಿದೆ.
ಏನಿದೆ ವೈರಲ್ ಸೀರಿಯಲ್ ಸೀನ್?:
ಹೌದು, ಹಿಂದಿಯ ಒಂದು ಸೀರಿಯಲ್ ಸೀನ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೋಡುಗರು ಬಿದ್ದು ಬಿದ್ದು ನಗುವಂತೆ ಮಾಡಿದೆ. ಹಾಗಿದ್ದರೆ ಆ ದೃಶ್ಯ ಏನಂತಿರಾ, ಧಾರಾವಾಹಿಯೊಂದರಲ್ಲಿ ನಟಿಯು ಹಾಕಿಕೊಂಡಿದ್ದ ದುಪ್ಪಟ್ಟಾವು ನಟಿಯ ಹಿಂದುಗಡೆ ತಿರುಗುತ್ತಿದ್ದ ಫ್ಯಾನ್‌ಗೆ ಸಿಕ್ಕಿಹಾಕಿಕೊಳ್ಳುತ್ತದೆ. ಅದು ತಿರುಗುತ್ತಾ ನಟಿಯ ಕುತ್ತಿಗೆಗೆ ನೇಣು ಬಿಗಿದಂತೆ ಆಗುತ್ತದೆ.
View this post on Instagram
ಇದನ್ನೂ ಓದಿ: Gichi Giligili: ಗಿಚ್ಚಿ ಗಿಲಿಗಿಲಿ ಶೋನಿಂದ ಹೊರಬಂದ ಮಂಜು ಪಾವಗಡ, ಶೋ ಮುಗಿಯೋವರಗೂ ನಾನು ಸಿಂಗಲ್ ಎಂದ ನಿರಂಜನ್
‘ಸ್ವರ್ಣ ಘರ್‘ ಧಾರವಾಹಿಯ ದೃಶ್ಯ:
ಈ ದೃಶ್ಯವು ಹಿಂದಿಯ ಸ್ವರ್ಣ ಘರ್ (Swaran Ghar) ಎಂಬ ಧಾರಾವಾಹಿಯ ತುಣುಕಾಗಿದೆ. ಈ ಧಾರಾವಾಹಿಯಲ್ಲಿ ದುಪ್ಪಟ್ಟಾ ಧರಿಸಿದ್ದು ನಟಿ ಸಂಗೀತಾ ಘೋಷ್ ಇದೀಗ ಈ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನಟಿ ಸ್ಪಷ್ಟನೆ ನೀಡಿದ್ದಾರೆ. ಅಂದಹಾಗೆ ಹಿಂದಿ ಕಲರ್ಸ್ ವಾಹಿನಿಯಲ್ಲಿ ಈ ಸೀರಿಯಲ್ ಪ್ರಸಾರ ಆಗುತ್ತಿದೆ.
ವೈರಲ್ ದೃಶ್ಯದ ಕುರಿತು ನಟಿಯ ಸ್ಪಷ್ಟನೆ:
ಇನ್ನು, ಸೀರಿಯಲ್ ನ ಈ ದೃಶ್ಯವು ವೈರಲ್ ಆಗುತ್ತಿದ್ದಂತೆ ಧಾರಾವಹಿಯ ನಟಿ ಈ ಸಂಬಂಧ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಪ್ರೇಕ್ಷಕರು ನಮಗೆ ಪ್ರೀತಿ, ಅಭಿಮಾನಿ ತೋರಿಸುವಾಗ ಅವರಿಗೆ ವಿಮರ್ಶೆ ಮಾಡುವ ಹಕ್ಕು ಸಹ ಇರುತ್ತದೆ. ನಾವು ಕೂಡ ಕೆಲವೊಮ್ಮೆ ತಪ್ಪು ಮಾಡುತ್ತೇವೆ. ಆದರೆ ಅದನ್ನು ಬಿಟ್ಟು ಮುಂದೆ ಸಾಗಬೇಕು.
ಇದನ್ನೂ ಓದಿ: Kannadathi Serial: ಕೊನೆಗೂ ಭುವಿಗೆ ಮುತ್ತು ನೀಡಿದ ಹರ್ಷ, ಮದುವೆ ನಿಲ್ಲಿಸಲು ವರೂಧಿನಿ ಪ್ರಯತ್ನ!
ಇದಲ್ಲದೇ ವೈರಲ್ ಆದ ದೃಶ್ಯವು ನಮ್ಮ ಯೋಜನೆ ರೀತಿ ಬರಲಿಲ್ಲ. ಇದೀಗ ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಟೀಂ ಅರಿತುಕೊಂಡಿದೆ. ಕಲಾವಿದರಿಗೆ ಕೊನೆಯದಾಗಿ ಏನೂ ಹೇಳಲಾಗದು. ಆದರೆ ಪ್ರತಿಯೊಬ್ಬರೂ ಮುಂದಿನ ಬಾರಿ ತುಂಬ ಕಾಳಜಿಯಿಂದಿರಬೇಕು. ನಮ್ಮ ಒಂದು ತಪ್ಪು ಇದೀಗ ಈ ಕಂಟೆಂಟ್‌ನಿಂದಾಗಿ ನಗುವಂತೆ ಆಗಿದೆ. ಮುಂದೆ ಈ ರೀತಿ ತಪ್ಪಾಗದಂತೆ ನೋಡಿಕೊಲ್ಳುತ್ತೇವೆ. ನಾನೂ ಒಳ್ಳೆಯ ಕೆಲಸ ಮಾಡಿದ್ದೇನೆ ಎಂದು ಭಾವಿಸುತ್ತೇನೆ‘ ಎಂದು ಸಂಗೀತಾ ಘೋಷ್ ಹೇಳಿದ್ದಾರೆ.
ಈ ರೀತಿ ವೈರಲ್ ಆದ ಸೀನ್ಗಳು ಅದೆಷ್ಟೋ:
ಇನ್ನು, ಕೇವಲ ಇದೊಂದೆ ಸೀರಯಲ್ನ ದೃಶ್ಯ ಮಾತ್ರ ವೈರಲ್ ಆಗಿಲ್ಲ. ಇದಕ್ಕೂ ಮೊದಲು ಈ ರೀತಿಯ ಅನೇಕ ಧಾರಾವಾಹಿಯ ದೃಶ್ಯಗಳು ವೈರಲ್ ಆಗಿದ್ದವು. ಒಂದು ವೈರಲ್ ವಿಡಿಯೋವು ಈ ವಿಡಿಯೋಗೆ ಹತ್ತಿರವಿದ್ದಂತೆ ಕಾಣುತ್ತದೆ. ಅದೇನೆಂದರೆ, ನಟಿಗೆ ಅಜ್ಜಿ ಕೆನ್ನೆಗೆ ಹೊಡೆಯುತ್ತಾಳೆ. ಆಗ ನಟಿ ತಿರುಗಿ ಕಿಟಕಿಗೆ ಹಾಕಿದ್ದ ಕರ್ಟನ್ ಗೆ ಸಿಕ್ಕಿ ಹಾಕಿಕೊಳ್ಳುತ್ತಾಳೆ. ಅಲ್ಲದೇ ಅದು ಸಹ ನೇಣು ರೀತಿ ಆಗಿ ಸಾಯುವ ಸ್ಥಿತಿಗೆ ತಲುಪುತ್ತಾಳೆ. ಇದಲ್ಲದೇ ಚಂದ್ರನಿದ್ದಲ್ಲಿಗೆ ಕಾರ್ ತೆಗೆದುಕೊಂಡು ಹೋಗುವುದು, ಬಿಲ್ಡಿಂಗ್ ನಿಂದ ನಾಯಕಿ ಬೀಳುತ್ತಿದ್ದಾಗ ನಾಯಕ ಓಡಿ ಬಂದು ಕ್ಯಾಚ್ ಹಿಡಿಯುವುದು ಈ ರೀತಿಯ ಅನೇಕ ದೃಶ್ಯಗಳು ನಮಗೆ ಕೇವಲ ಸೀರಿಯಲ್ ಗಳಲ್ಲಿ ಮಾತ್ರ ನೋಡಲು ಸೀಗುತ್ತದೆ. ಇಂತಹ ಸೀನ್ ಗಳನ್ನು ನೋಡಿದ ಪ್ರೇಕ್ಷಕರು ನಕ್ಕು ನಕ್ಕು ಸತ್ತುಹೋಗುತ್ತಿದ್ದೇನೆ, ಈ ಗ್ರಹವನ್ನು ತ್ಯಜಿಸಬೇಕು ಎಂದೆಲ್ಲ ಕೆಲವರು ಟ್ವೀಟ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ