ವಠಾರ ಧಾರಾವಾಹಿ ಖ್ಯಾತಿಯ ವಠಾರ ಮಲ್ಲೇಶ್ ವಿಧಿವಶ

news18
Updated:July 6, 2018, 2:59 PM IST
ವಠಾರ ಧಾರಾವಾಹಿ ಖ್ಯಾತಿಯ ವಠಾರ ಮಲ್ಲೇಶ್ ವಿಧಿವಶ
news18
Updated: July 6, 2018, 2:59 PM IST
ನ್ಯೂಸ್​ 18 ಕನ್ನಡ 

ಎರಡು ಕಿಡ್ನಿ ವೈಫಲ್ಯ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಠಾರ ಖ್ಯಾತಿಯ ಕಲಾವಿದ ಮಲ್ಲೇಶ್ ಇಂದು ಕೊನೆಯುಸಿರೆಳೆದಿದ್ದಾರೆ.

ಬನ್ನೇರುಘಟ್ಟ ಮುಖ್ಯರಸ್ತೆ ಜಂಗಲ್ ಪಾಳ್ಯ ವಾಸಿಯಾಗಿದ್ದ ಮಲ್ಲೇಶ್, ಕಳೆದ ಆರು ತಿಂಗಳಿನಿಂದ ಮೂತ್ರಪಿಂಡ ವೈಫಲ್ಯ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

ಇತ್ತೀಚೆಗೆ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆ ನಿನ್ನೆ ರಾತ್ರಿ ಮಲ್ಲೇಶ್​ ಅವರನ್ನು ಮನೆಗೆ ಕರೆತರಲಾಗಿತ್ತು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಲ್ಲೇಶ್ ಇಂದು ಮುಂಜಾನೆ ವಿಧಿವಶರಾಗಿದ್ದಾರೆ.'ವಠಾರ', 'ಅಕ್ಕ'ಧಾರವಾಹಿ ಮತ್ತು ಸುಂಟರಗಾಳಿ', 'ಕಲಾಸಿಪಾಳ್ಯ',  'ಮಾದ ಮತ್ತು ಮಾನಸಿ',  'ಭುಜಂಗ',  'ಪಟಾಕಿ',  'ವಜ್ರಕಾಯ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ಅಭಿನಯಿಸಿದ್ದರು. ಮೃತ ಮಲ್ಲೇಶ್​ ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.

 
First published:July 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ