ಶ್ರೀನಿವಾಸ್ ಗೌಡ ಅಡ್ಡಾದಲ್ಲಿ ಹೊಸ ವಿಲನ್; ಸ್ಯಾಂಡಲ್​ವುಡ್​ಗೆ ಲಕ್ಕಿ ಎಂಟ್ರಿ

ಲಕ್ಕಿ ವಿಲನ್​ ಆಗುವುದಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಸ್ಯಾಂಡಲ್​ವುಡ್​ ನಟ-ನಟಿಯರಿಗೆ ಫಿಟ್​​ನೆಸ್​ ತರಬೇತಿ ನೀಡುವ ಶ್ರೀನಿವಾಸ್​ ಗೌಡ ಅಖಾಡದಲ್ಲಿ ಲಕ್ಕಿ ಸಿಕ್ಸ್​ ಪ್ಯಾಕ್​ ಮಾಡಿಕೊಂಡಿದ್ದಾರೆ.

Rajesh Duggumane | news18
Updated:May 28, 2019, 3:47 PM IST
ಶ್ರೀನಿವಾಸ್ ಗೌಡ ಅಡ್ಡಾದಲ್ಲಿ ಹೊಸ ವಿಲನ್; ಸ್ಯಾಂಡಲ್​ವುಡ್​ಗೆ ಲಕ್ಕಿ ಎಂಟ್ರಿ
ಸ್ಯಾಂಡಲ್​ವುಡ್​ 6 ಪ್ಯಾಕ್​ ಸೀನು ಗರಡಿಯಲ್ಲಿ ಲಕ್ಕಿ ಅನ್ನೋ ವಿಲನ್​
Rajesh Duggumane | news18
Updated: May 28, 2019, 3:47 PM IST
ಕಿರುತೆರೆಯಲ್ಲಿ ಗುರುತಿಸಿಕೊಂಡು ನಂತರ ಹಿರಿತೆರೆಗೆ ಕಾಲಿಡುವುದು ವಾಡಿಕೆ. ಕನ್ನಡ ಕಿರುತೆರೆಯಲ್ಲಿ ವಿಲನ್​ ಆಗಿ ಗುರುತಿಸಿಕೊಂಡಿರುವ ಲಕ್ಷ್ಮಣ್​ ಅಲಿಯಾಸ್​ ಲಕ್ಕಿ ಕೂಡ ಇದಕ್ಕೆ ಹೊರತಾಗಿಲ್ಲ. ಇವರು ಈಗ ಕನ್ನಡ ಖ್ಯಾತ ಹೀರೋ ಜೊತೆ ತೆರೆಮೇಲೆ ಕಾದಾಡಲು ಸಿದ್ಧರಾಗಿದ್ದಾರೆ. ಅಂದರೆ, ಅವರು ವಿಲನ್​ ಆಗಿ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿದ್ದಾರೆ.

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೀರೋಗಳು ಮಾತ್ರ ಸಿಕ್ಸ್​ಪ್ಯಾಕ್​ನಲ್ಲಿ ಮಿಂಚುತ್ತಾರೆ. ಆದರೆ, ಲಕ್ಕಿ ವಿಲನ್​ ಆಗುವುದಕ್ಕೂ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಸ್ಯಾಂಡಲ್​ವುಡ್​ ನಟ-ನಟಿಯರಿಗೆ ಫಿಟ್​​ನೆಸ್​ ತರಬೇತಿ ನೀಡುವ ಶ್ರೀನಿವಾಸ್​ ಗೌಡ ಅಖಾಡದಲ್ಲಿ ಕಸರತ್ತು ನಡೆಸಿ ಲಕ್ಕಿ ಸಿಕ್ಸ್​ ಪ್ಯಾಕ್​ ಮಾಡಿಕೊಂಡಿದ್ದಾರೆ.

ಈಗಾಗಲೇ ಕಲರ್ಸ್​ ವಾಹಿನಿಯ ಬಹುತೇಕ ಧಾರಾವಾಯಿಗಳಲ್ಲಿ ಲಕ್ಕಿ ವಿಲನ್​ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ಶ್ರೀನಿವಾಸ್​ ಅವರ ಜಿಮ್​ನಲ್ಲಿ ದೇಹವನ್ನು ಮತ್ತಷ್ಟು ಹುರಿಗೊಳಿಸಿಕೊಂಡು ಹಿರಿತೆರೆಗೆ ಬರಲು ಸಿದ್ಧರಾಗಿದ್ದಾರೆ. ಕನ್ನಡದ ಖ್ಯಾತ ನಟನೊಬ್ಬನ ಸಿನಿಮಾದಲ್ಲಿ ಇವುರ ಪ್ರಮುಖ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಅವರು ಹಿರಿತೆರೆಗೆ ಗ್ರ್ಯಾಂಡ್​ ಎಂಟ್ರಿ ಕೊಡುವ ಆಲೋಚನೆಯಲ್ಲಿದ್ದಾರೆ. ಎಲ್ಲವೂ ಅಂತಿಮಗೊಂಡಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆಯಂತೆ.

ಇದನ್ನೂ ಓದಿ: ಉಫ್...! ಬಜೆಟ್​ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ 'ರಾಬರ್ಟ್​'

ಸಿಕ್ಸ್​ ಪ್ಯಾಕ್​ ಮಾಡುವುದಕ್ಕೆ ತುಂಬಾನೇ ಕಷ್ಟಪಟ್ಟಿದ್ದೆ ಎನ್ನುವ ಲಕ್ಷ್ಮಣ್​, “ಮಾಸ್ಟರ್ ಹೇಳಿದ ಹಾಗೆ ಸ್ಟ್ರಿಕ್ಟ್ ಡಯಟ್, ವರ್ಕೌಟ್ ಆರಂಭಿಸಿದೆ. ನಾನು ಡಯಟ್ ಫುಡ್ ತಿಂದೆ ಎಂದು ಆಡಿಕೋಳ್ಳುವವರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅದರ ರಿಸಲ್ಟ್​ ನಿಮ್ಮ ಮುಂದಿದೆ,” ಎಂದಿದ್ದಾರೆ.

ಶ್ರೀನಿವಾಸ್​​ ಮಸಲ್​ 360 ಹೆಸರಿನ ಜಿಮ್​ ನಡೆಸುತ್ತಿದ್ದಾರೆ. ನಿರ್ದೇಶಕ ದುನಿಯಾ ಸೂರಿ, ಡಾಲಿ ಧನಂಜಯ್​, ರಕ್ಷಿತ್​ ಶೆಟ್ಟಿ ಸೇರಿ ಅನೇಕ ಹೀರೋಗಳಿಗೆ ಸಿಕ್ಸ್​ ಪ್ಯಾಕ್​ ಮಾಡಿಸಿದ್ದು ಇದೇ ಶ್ರೀನಿವಾಸ್​. ಇಂದಿಗೂ ಸ್ಯಾಂಡಲ್​ವುಡ್​ನ ಅನೇಕ ಕಲಾವಿದರು ಇವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
Loading...

ಇದನ್ನೂ ಓದಿ:  'ಭಾರತ್' ಪ್ರೊಮೊ ವಿಡಿಯೋದಲ್ಲಿ ಸಖತ್ ಜೋಶ್​ನಲ್ಲಿ ಸಲ್ಮಾನ್ ಖಾನ್
First published:May 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...